ಪ್ರಬಂಧ ರಚನೆ
ಪ್ರಬಂಧ ರಚನೆ - ಅರ್ಥಪೂರ್ಣ ಖಚಿತ ವಾಕ್ಯಗಳ ಮೂಲಕ ವ್ಯಕ್ತಿಯ ಆಲೋಚನೆಗಳನ್ನು ಲಿಖಿತವಾಗಿ 
ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ನಿರೂಪಿಸುವ 
ಪರಿ. ಇದು ವ್ಯಾಕರಣದ ಒಂದು ಅಂಗ.

ಪ್ರಬಂಧಗಳು       ಸಂಪಾದಿಸಿ

ಪ್ರಬಂಧ ರಚನೆಯು ಸಾಮಾನ್ಯವಾಗಿ ಲೇಖಕನ ವ್ಯಕ್ತಿತ್ವ ವೈಶಿಷ್ಟ್ಯದಿಂದ ಕೂಡಿದ ಸ್ವತಂತ್ರ 
ನಿರ್ದಿಷ್ಟ ಲಘು ಬರೆವಣಿಗೆ. ವ್ಯಕ್ತಿಯ ವೈಚಾರಿಕ ಆಲೋಚನೆಗಳನ್ನು ಸಹೃದಯರಿಗೆ ಗದ್ಯಾತ್ಮಕ ಕಾವ್ಯ 
ಶೈಲಿಯಲ್ಲಿ ವಿಷಯ ಪ್ರಸ್ತಾಪ ಮಾಡುವ ಬಗೆಯಿದು. ಸರಳ ಭಾವ ಪ್ರಧಾನ ಶೈಲಿಯಲ್ಲಿ ಗಾಢ ಆಲೋಚನಾ 
ಲಹರಿಯನ್ನು ಸ್ವತಂತ್ರ ವಿವೇಚನಾ ಪ್ರಕ್ರಿಯೆಯಲ್ಲಿ ಸೃಜನಶೀಲತೆಗೆ ಎಡೆಮಾಡಿ ಕೊಡುವ ಭಾಷಾ 
ಸಾಹಿತ್ಯಿಕ ಕ್ರಿಯೆ. ಸೃಜನಶೀಲ ಬರೆವಣಿಗೆಯ ಸಿದ್ಧಿಕೂಡ.

ಸಾಮಾನ್ಯವಾಗಿ ಪ್ರಬಂಧದಲ್ಲಿ ವಿಚಾರದ ಏಕತೆ, ವಿಷಯ ಸಂಗ್ರಹ, ಕ್ರಮಬದ್ಧತೆ, ವಿಷಯ ವಿಸ್ತಾರ, 
ವೈವಿಧ್ಯತೆ, ಸರಳ ಶೈಲಿ, ಸಂಕ್ಷಿಪ್ತತೆ, ವೈಯಕ್ತಿಕತೆ, ಸೂಕ್ತ ವಿಷಯ ನಿರೂಪಣೆ, ಸುಸಂಬದ್ಧತೆ, 
ಸಮತೋಲನದ ವಿಷಯದ ತಾರ್ಕಿಕ ಜೋಡಣೆ ಹಾಗೂ ಪರಿಣಾಮಕಾರಿಯಾದ ಶುದ್ಧಸುಲಭ ಸಂವಹನ ಭಾಷೆಯ ಶೈಲಿ 
ಇರಬೇಕು. ಇವೇ ಉತ್ತಮ ಪ್ರಬಂಧದ ಲಕ್ಷಣಗಳು. ಪ್ರಬಂಧ ಎನ್ನುವುದು ಕೇವಲ ಶಭ್ಧಗಳ ಶ್ರೀಮಂತಿಕೆಯಿಂದ 
ಕೂಡಿದ ಸಾಲುಗಳಷ್ಟೆ ಅಲ್ಲದೆ ಒದುಗರ ಭಾವನಾಂತರಂಗಗಳನ್ನು ಆವರಿಸುವ ಕಲೆ.

ಪ್ರಬಂಧಗಳ ವರ್ಗೀಕರಣ       ಸಂಪಾದಿಸಿ

ಪ್ರಬಂಧಗಳ ರಚನೆ, ವಸ್ತು, ಉದ್ದೇಶ ಹಾಗೂ ತಾರ್ಕಿಕ ಸಂಯೋಜನೆಯನ್ನು ವಸ್ತುನಿಷ್ಠವಾಗಿ ಆಧರಿಸಿ 
ಪ್ರಬಂಧಗಳನ್ನು ಈ ಕೆಳಗಿನಂತೆ ವರ್ಗೀಕರಿಸಿದೆ.

ಚಿಂತನಾತ್ಮಕ / ವೈಚಾರಿಕ
ಕಥನಾತ್ಮಕ
ಆತ್ಮಕಥನಾತ್ಮಕ
ಸಂಶೋಧನಾತ್ಮಕ
ವಿಮರ್ಶಾತ್ಮಕ
ಚರ್ಚಾತ್ಮಕ
ವರ್ಣನಾತ್ಮಕ
ಚಿತ್ರಾತ್ಮಕ
ಜ್ಞಾನಾತ್ಮಕ
ಹಾಸ್ಯಾತ್ಮಕ
ಆತ್ಮೀಯ
ಕಾಲ್ಪನಿಕ
ವ್ಯಕ್ತಿಚಿತ್ರ
ಹರಟೆ
ಪತ್ರಪ್ರಬಂಧ
ಪ್ರಬಂಧದ ಮೌಲ್ಯವರ್ಧಿಸುವ ಮಾರ್ಗೋಪಾಯಗಳು      ಸಂಪಾದಿಸಿ

ಪ್ರಬಂಧದ ಮೌಲ್ಯವನ್ನು ಹೆಚ್ಚಿಸುವ, ಪ್ರಬಂಧ ರಚನಾ ನಿರೂಪಣೆಯಲ್ಲಿ ಅನುಸರಿಸಬೇಕಾದ, ಕೆಲವು 
ಮಾರ್ಗೋಪಾಯಗಳು ಈ ಕೆಳಗಿನಂತಿವೆ.

ವಿಷಯದ ಆಯ್ಕೆ
ವಿಷಯದ ವಿಶ್ಲೇಷಣೆ
ಕ್ರೋಢೀಕರಣ
ಕರಡುರಚನೆ
ಪುನರಾವರ್ತನೆ
ವಿನ್ಯಾಸ
ತೀರ್ಮಾನ
ಅಂತಿಮ ಪ್ರತಿ ರಚನೆ
= ಬಾಲೂ

ಪ್ರಬಂಧ ರಚನೆಯ ಮೂರು ಹಂತಗಳು ಸಂಪಾದಿಸಿ

ಪ್ರಬಂಧದ ಭೌತಿಕ ಸ್ವರೂಪ ಸಾಮಾನ್ಯವಾಗಿ ಪ್ರಸ್ತಾವನೆ/ಪೀಠಿಕೆ, ವಿಷಯ ನಿರೂಪಣೆ, ಮತ್ತು ವಿಷಯದ 
ಸಮಾಪ್ತಿ / ಉಪಸಂಹಾರ ಎಂಬ ಮೂರು ಪ್ರಧಾನ ಹಂತಗಳಿರುತ್ತವೆ.

ಪ್ರಸ್ತಾವನೆ - ಪ್ರಸ್ತಾವನೆ ಆಕರ್ಷಕವಾಗಿ ಸಂಕ್ಷಿಪ್ತವಾಗಿರಬೇಕು. ಗುರಿ ಮತ್ತು ವಿಷಯ 
ಖಚಿತತೆಯನ್ನು ಸ್ಪಷ್ಟಪಡಿಸಬೇಕು.
ವಿಷಯ ನಿರೂಪಣೆ - ವಿಷಯ ನಿರೂಪಣೆ ಭಾಗವೇ ಪ್ರಬಂಧದ ಜೀವಾಳ. ನಿರ್ದಿಷ್ಟ ವಿಷಯದ ಬಗ್ಗೆ ಮೊದಲೇ 
ನಿಶ್ಚಯಿಸಿದ ವಿಷಯದ ಪ್ರತಿಪಾದನೆಯ ಸಾರವತ್ತಾದ ಭಾಗವಿದು. ವಿಷಯ ವ್ಯಾಪ್ತಿಗನುಗುಣವಾಗಿ 
ಚಿಕ್ಕಚಿಕ್ಕ ವಾಕ್ಯಖಂಡಿಕೆಯಲ್ಲಿ ವಿಷಯ ಪ್ರಸ್ತಾಪವೇ ಪ್ರಬಂಧ ಶರೀರ.
ಉಪಸಂಹಾರ - ವಿಷಯ ಪ್ರತಿಪಾದನೆ ಹಾಗೂ ಒಟ್ಟಾರೆ ತೀರ್ಮಾನವೇ ಪ್ರಬಂಧದ ಉಪಸಂಹಾರ. ತಾರ್ಕಿಕ ಚರ್ಚಾ 
ಪುನಾವಿಮರ್ಶಿತ ವಿಚಾರ ಭಾಗವಿದು.
ನಿರೂಪಣೆಯ ಅನುಕೂಲ, ಗ್ರಹಿಕೆಯ ಹಿನ್ನೆಲೆಯಿಂದ ಪ್ರಬಂಧದ ಉಪವಿಚಾರಾಂಶಗಳನ್ನು ಕ್ರಮಬದ್ಧವಾಗಿ 
ಸಂಯೋಜನೆ ಮಾಡಿ ಪ್ರಬಂಧ ರಚಿಸುವುದೇ ಮಾದರಿ ರಚನೆಯಾಗುವುದು.



Sent from Samsung Mobile

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/gfas8hl5g601p8sk6p0e1hwm.1453133654018%40email.android.com.
For more options, visit https://groups.google.com/d/optout.

Reply via email to