ಆತ್ಮೀಯ ಶಿಕ್ಷಕ ಬಂಧುಗಳೇ ಮಕ್ಕಳನ್ನು ಎಲ್ಲ ರೀತಿಯಿಂದಲೂ ಸಬಲಗೊಳಿಸುವರು ಈ ನಮ್ಮ ಕನ್ನಡ
ವಿಷಯದವರೆ.  ಕನ್ನಡ ವಿಷಯದವರು ಉದಾರಿಗಳು.ಎಲ್ಲವನ್ನು ಸಹನಶೀಲರಾಗಿ ಅನುಭವಿಸಿಕೋಳ್ಳುವವರು
ನಾವುಗಳೇ.  ಅಲ್ಲದೆ ಅನ್ನಾಯವಾಗುವುದು ಕನ್ನಡ ವಿಷಯಕ್ಕೆ ಮಾತ್ರ ಅದು ಯಾಕೆ?  ಉದಾಹರಣೆಗೆ
ಕನ್ನಡ ಓದುವುದಕ್ಕೆ ಬಾರದ ಒಂದು ಮಗುವಿಗೆ ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣ ಆದರೆ
English .Hindi. ಇತರೆ ವಿಷಯಗಳಲ್ಲಿ  ಉತ್ತೀರ್ಣ ಅದು ಹೇಗೆ ಸಾದ್ಯ?

ರಾಜ್ಯಮಟ್ಟದ ಫಲಿತಾಂಶದಲ್ಲೂ  ನಾವುಗಳು ಹಿಂದೆ ಯಾಕೆ? 10 ವರ್ಷಗಳವರೆಗೆ ಕನ್ನಡ
ಮಾದ್ಯಮದಲ್ಲಿ ಓದಿದಾಗಲೂ ಅನುತೀರ್ಣ. ಮೊದಲ ದಿನ ಮಕ್ಕಳು ಭಯಗೊಂಡಿರುತ್ತಾರೆ
ಅಲ್ಲದೆ             ಗೊಂದಲಗೊಳಗಾಗಿರುತ್ತಾರೆ  ಗಡಿಬಿಡಿಯಲ್ಲಿ ಉತ್ತರ ಬರೆಯಲು ಹೋಗಿ ಅಂಕ
ಕಳೆದುಕೊಳ್ಳುತ್ತಾರೆ ಎಂಬುದು ತಜ್ಞರ ವಾದ .

ಪ್ರತಿ ವರ್ಷವೂ ಮೊದಲ ದಿನ ವಿಷಯಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವುದಿಲ್ಲ ಯಾಕೆ?  ಪ್ರತಿ
ವರ್ಷವು ಕೇವಲ ಪ್ರಥಮ ಭಾಷೆ ಕನ್ನಡ ವಿಷಯವನ್ನೇ ಯಾಕೆ ನಿಗದಿಗೊಳಿಸಲಾಗಿದೆ?  ಕನ್ನಡ
ಮಾತೃಭಾಷೆ . ಬರೆಯುತ್ತಾರೆˌ  ಕ್ಲಿಷ್ಷದಾಯಕವಾಗಲ್ಲ ಎನ್ನುವ ಅಭಿಪ್ರಾಯನಾ?

ಆತ್ಮೀಯ ಶಿಕ್ಷಕ ಬಂಧುಗಳೇ ಒಮ್ಮೆಯಾದರೂ Result Sheet ಅನ್ನು ತೆಗೆದು ನೋಡಿ ಕನ್ನಡ
ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ಮಗು ಇತರೆ ವಿಷಯಗಳಲ್ಲಿ  ಕಡಿಮೆ ಅಂಕ ಪಡೆದು
ಒಟ್ಟು ಎಲ್ಲ ವಿಷಯಗಳಿಂದ 219 ಅಂಕ ಪಡೆಯಲು ಪರೋಕ್ಷವಾಗಿ ಕನ್ನಡ ವಿಷಯದ ಅಂಕಗಳು
ಕೊಡುಗೆಯಾಗಿ ನೀಡಿರುವುದನ್ನು ಗಮನಿಸಿ. ಗುಣಾತ್ಮಕ ಫಲಿತಾಂಶ ಕನ್ನಡ ವಿಷಯದಲ್ಲಿ ಆದರೂ
ಕನ್ನಡವಿಷಯದಲ್ಲಿ  100%ರಷ್ಪು ಫಲಿತಾಂಶದಲ್ಲಿ ಹಿಂದೆ ಯಾಕೆ ?

ಈ ಹಿಂದೆ ನಾನು ವೃತ್ತಿ ಭಾಂದವರಿಗೆ  ಸರಳ ಪ್ರಶ್ನೆ ಕೇಳಿದ್ದೆ ...ಇತರ ವಿಷಯಗಳಲ್ಲಿ
ಸಂಭಾವನೀಯ ಪ್ರಶ್ನೆ ಗಳ ಅಭ್ಯಾಸ ಮಾಡಿಸಲಾಗುತ್ತದೆ ಆದರೆ ಕನ್ನಡದಲ್ಲಿ ಮಾತ್ರ ಅದು ಅಸಾದ್ಯ
ಯಾಕೆ ಎಂದು? ಕೆಲವು ಶಿಕ್ಷಕರ ಅಭಿಪ್ರಾಯದಂತೆ  ಆ ರೀತಿ ಮಾಡುವುದರಿಂದ ಅಂಕಗಳಿಗಾಗಿ
ಪರೀಕ್ಷೆ ಎಂದೂˌ ಸ್ವಂತಿಕೆ ಇರಲ್ಲ ಎಂದೂ ಅಭಿಪ್ರಾಯ ತಿಳಿಸಿದ್ದರು. ಇದೇ ಅಭಿಪ್ರಾಯ ಇತರೇ
ವಿಷಯ ಬೋಧಕ ಶಿಕ್ಷಕರಿಗೆ ಯಾಕೆ ಅನ್ವಯವಾಗುವುದಿಲ್ಲ?

ಇದು ಕಷ್ಪಪಟ್ಟು ಕೆಲಸ ಮಾಡುವ ಶಿಕ್ಷಕರಿಗೆ ನೋವುಂಟು ಮಾಡುತ್ತದೆ. ಮಹಾಭಾರತದಲ್ಲಿ ಕಷ್ಷಕಾಲ
ದ್ರೌಪದಿಗೆ ಸುಖಕಾಲ ಸುಭದ್ರೆಗೆ  ಎನ್ನುವ ಪಾಡು ನಮ್ಮ ಕನ್ನಡ ವಿಷಯ ಪಾಡಗಲ್ಲಿಲ್ಲವೇ ?

ಸಮೀರ
ಕನ್ನಡ ಸಹಶಿಕ್ಷಕಿ
ಸರ್ಕಾರಿ  ಪ್ರೌಢಶಾಲೆ
ನಾರಾಯಣಪುರ
ದೇವನಹಳ್ಳಿ ತಾಲ್ಲೂಕು

ಸಮೀರ
ಸಹಶಿಕ್ಷಕಿ
ಸರ್ಕಾರಿ  ಪ್ರೌಢಶಾಲೆ
ನಾರಾಯಣಪುರ
ದೇವನಹಳ್ಳಿ ತಾಲ್ಲೂಕು

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAP9VewoBrrJ5BAESp4Krv3YpfFP8D7v6YOZ_kCgHRBttnEbwdg%40mail.gmail.com.
For more options, visit https://groups.google.com/d/optout.

Reply via email to