ಆತ್ಮೀಯ ಸಮೀರ ರವರೆ, ನಿಮ್ಮ ಅನಿಸಿಕೆಗಳಲ್ಲಿ ವಾಸ್ತವವಿದೆ. ಬೇರೆ ವಿಷಯಗಳಿಗೆ ಹೋಲಿಕೆ ಮಾಡಿದಾಗ ಕನ್ನಡ ಭಾಷೆ ಕಷ್ಟವೇನಲ್ಲ. ಕನ್ನಡವೇ ಓದುವುದಕ್ಕೆ ಬರುವುದಿಲ್ಲ, ಕನ್ನಡದಲ್ಲೇ 'ಫೇಲ್', 10 ವರ್ಷ ಕನ್ನಡ ಕಲಿತಿದ್ದಾರೆ ಈ ತರಹದ ಮೊಂಡು ವಿಚಾರಗಗಳನ್ನು ಎಲ್ಲರೂ ಕೇಳಿರುತ್ತೀರಿ. ಗಣಿತ-ವಿಜ್ಞಾನ-ಸಮಾಜ ಈ ವಿಷಯಗಳೂ ಕನ್ನಡದಲ್ಲೇ ಬೋಧನೆ ಮಾಡಿರುವುದು ಎಂಬ ಸತ್ಯ ಈ ಶಿಕ್ಷಕರಿಗೆ ಇರುವುದಿಲ್ಲ. 100 ರಷ್ಟು ಅಂಕ ಗಳಿಸುವ 10 ಮಂದಿ ನನ್ನ ವಿದ್ಯಾರ್ಥಿಗಳಿರುವಾಗ 35+ ಗಳಿಸದ ವಿದ್ಯಾರ್ಥಿಗಳೂ ಇರುತ್ತಾರೆ ಎಂಬುದೂ ವಾಸ್ತವ. * ಶಾಲಾ ಹಂತದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮಂಡಳಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. * ಬೇರೆ ವಿಷಯಗಳಲ್ಲಿ ಉತ್ತೀರ್ಣ, ಕನ್ನಡದಲ್ಲಿ..........? * ನಾವು ನಿರೀಕ್ಷೆ ಮಾಡದ ವಿದ್ಯಾರ್ಥಿಯೂ ಸಹ ಅಚ್ಚರಿ ತಂದಿರುವ ಉದಾಹರಣೆಗಳಿವೆ. * ಇತರೆ ವಿಷಯಗಳಲ್ಲಿ ಒಂದು ಕ್ಷೇತ್ರ ಅಥವಾ ಸಾಮರ್ಥ್ಯಕ್ಕೆ ಸೀಮಿತ- ಕನ್ನಡ ಇಡೀ ಪಠ್ಯ ಪುಸ್ತಕಕ್ಕೆ ಸೀಮಿತ. ಈ ರೀತಿಯ ಸಾಕಷ್ಟು ಪ್ರಶ್ನೆಗಳು ನಿಮ್ಮ ಮುಂದೆ ಇವೆ. ಪ್ರಶ್ನೆಗೂ ಮೊದಲೇ ಉತ್ತರವೂ ಗೊತ್ತಿದೆ. ಎಲ್ಲರೂ ಒಂದು ವ್ಯವಸ್ಥೆಯಲ್ಲಿ ಸಾಗೋಣ. ಗುಣಾತ್ಮಕ ಶಿಕ್ಷಣದತ್ತ ಹೆಜ್ಜೆಯಿಡೋಣ. ಧನ್ಯವಾದಗಳು : ಆನಂದ್ ಗುರು, ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬೇತಮಂಗಲ ಬಂಗಾರಪೇಟೆ ತಾಲ್ಲೂಕು, ಕೋಲಾರ ಜಿಲ್ಲೆ.
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAH%2BFLVEb5xKrmvenzdXHEJuSbhidTars1zvsa%2BR0XVT3mABX%2BQ%40mail.gmail.com. For more options, visit https://groups.google.com/d/optout.