🌹❤ಸಮಾಗಮ💚💔

ಸಡಗರವು ಟಿಸಿಲೊಡೆದಿದೆ
ಬಡಿವಾರವು ಬಯಲಾಗಿ
ನಸುನಗೆಯು ಹೂವಾಗಿದೆ
ಹುಸಿಮುನಿಸು ಮರೆಯಾಗಿ //೧//

        ಭಾವಗಳು ನವಿರಾಗಿವೆ
        ಗರಿ ಬಿಚ್ಚಿ ಹಾರಾಡುತ
        ಬಯಸಿ ಹೊಸ ಅನುಭವ
        ಅಭಿಸಾರದ ರಸನಿಮಿಷ //೨//

ಕಾರ್ಮೋಡವು ದಟ್ಟೈಸಿದೆ
ಧರೆಗಿಳಿಯೆ ಆರ್ಭಟಿಸಿ
ಬಿರುಸಾಗಿದೆ ಬಿಸಿಯೇರಿದೆ
ಸುಳಿಸುಳಿ ಸುಂಟರಗಾಳಿ //೩//

           ಹೂವರಳಿದೆ ಆವರಿಸಿದೆ
           ಪರಿಮಳದ ಒಸಗೆ
           ಬಯಲೆಲ್ಲಬಿಸುಸುಯ್ದು
          ತಹತಹಿಸಿದೆ  ಬೆಸುಗೆ //೪//

ನಿಸ್ವಾಸದ ಬಿಸಿಯು
ಮರನಪ್ಪಿದ ಲತೆಯು
ಉರು ಕಂಪನ ಅಧರಿಂಪನ
ವಪುವೆಲ್ಲ ರೋಮಾಂಚನ! ! //೫//

            ಪುಟಿಯುತ್ತಿದೆ ಜಿನುಗುತಾ
             ಹೊಸ ಹಾಡಿನ ಫಲುಕು
             ಕೆರಳುತ್ತಿದೆ ಬಯಸುತಾ
             ಆರೋಹಣ ಕುಲುಕು?  //೬//

ಮೆದುವೆಲ್ಲವು ಸೆಡವು
ಮೃದುವೆಲ್ಲವು ಬಿರುಸು
ಬಾಗುತಲಿದೆ ಬಡನಡುವು
ಭಾರಕೆ ನಿಮಿರೆ ಕಾಲ್ಬೆರಳು //  ೭//

            ಮಲ್ಲಿಗೆ ಮುಂಗುರುಳು ಚೆಲ್ಲಾಟ
           ನಖಕ್ಷತಕೆ  ಆಪ್ಯಾಯ ಸುಖಸ್ಪರ್ಶ
          ಕಂಪಡರಿತು ಹಿತ ತನು ವಿವಸ್ತ್ರ
         ಮಧುರ ಸೀತ್ಕಾರ ದುಂಬಿಝೇಂಕಾರ //೮//

ಉತ್ಕರ್ಷದ ಆಲಿಂಗನ
ಅಧರಾಮೃತ ಪಾನ
ಅರೆಬಿರಿದ ನಯನ
ನಿಶೆಯೇರಿದ ಮನ //೯//

           ಕೋಲ್ಮಿಂಚು ಕೋರೈಸಿದೆ
          ತೆರೆತೆರೆಯ ಬೆಳಕಾಗಿ
          ಹರೆಯದ ಹಯದ ಕೆನೆತ
          ಭರಿಸುವುದೇ ಭರತ ? //೧೦//

ಇಳೆ ತಣಿಯಿತು ಹಸಿರಾಯಿತು
ಮುಂಗಾರಿನ ಮಳೆಗೆ !!
  ತನು ಮಣಿಯಿತು ಉಸಿರಾಯಿತು
ಮಾರನ ಒಂದು ಕರೆಗೆ !! //೧೧//

©ಚಂದ್ರೇಗೌಡ ನಾರಮ್ನಳ್ಳಿ  8722199344
ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119.
ಮೊ 8722199344

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAE6PbrmtP%2B3X%2B03SpEMNazbnMxYMPqdZFaLjVhu-dLDNofBctQ%40mail.gmail.com.
For more options, visit https://groups.google.com/d/optout.

Reply via email to