ದೇಶಭಕ್ತಿಗೆ ಮತ್ತೊಂದು ಹೆಸರು ಭಗತ್ ಸಿಂಗ್. On Feb 5, 2016 11:00 AM, "Mallikarjunagouda Patil" <mdfpa...@gmail.com> wrote:
> ಭಗತ್ ಸಿಂಗ್ ನಾಟಕ (No Copyrights! You have Right to copy!) > > ಪೊಲೀಸ್ ಅಧಿಕಾರಿ - ಭಗತ್ ಸಿಂಗ್ ಸಮಯ ಬಂತು > > ಭಗತ್ - ಒಂದ್ ನಿಮಿಷ ಜೈಲರ್ ಸಾಬ್, ಪುಸ್ತಕ ಒದ್ತಾ ಇದ್ದೀನಿ. ಒಬ್ಬ ಕ್ರಾಂತಿಕಾರಿ > ಇನ್ನೊಬ್ಬ ಕ್ರಾಂತಿಕಾರಿ ಬಗ್ಗೆ. > > ರಾಜಗುರು - ಓ ಭಗತ್ > > ಭಗತ್ - ರಾಜಗುರು > > ರಾಜಗುರು - ಭಗತ್ ನಾಳೆ ಕೊಡಬೇಕಾಗಿರೋ ಗಲ್ಲು ಶಿಕ್ಷೆನಾ ಇವತ್ತೇ ಕೊಡ್ತಾ ಇದ್ದಾರೆ! > > ಸುಖದೇವ್ - ನಮ್ಮನ್ನ ಇನ್ನು ಒಂದು ದಿನ ಇಟ್ಟುಕೊಳ್ಳೋ ತಾಕತ್ತು ಈ ಬ್ರಿಟೀಷರಿಗೆ ಇಲ್ಲಾ > ಅಂತ ಕಾಣತ್ತೆ ಭಗತ್! > > ರಾಜಗುರು, ಸುಖದೇವ್ ಮತ್ತು ಭಗತ್ - ಹ ಹ ಹ. > > ಭಗತ್ - ಹುತಾತ್ಮರಾಗೋದಿಕ್ಕೆ ಅಂತಾ ಹೊರಟೋರಿಗೆ ನಾಳೆ ಆದ್ರೇನು ಇವತ್ತಾದ್ರೇನು? ಎರಡೂ > ಒಂದೇ. ನಡೀರಿ ನಡೀರಿ. ಚಿನ್ನದ ಕುಣಿಕೆಗಳು ನಮಗೋಸ್ಕರ ಕಾಯ್ತಾ ಇದ್ದಾವೆ. > > ಸುಖದೇವ್ ರಾಜಗುರು - ನಡೀ ಭಗತ್. > > ಪೊಲೀಸ್ ಆಧಿಕಾರಿ - ಒಂದು ನಿಮಿಷ.... ಕೈಕೋಳ ಹಾಕಿ. > > ರಾಜಗುರು ಸುಖದೇವ್ - ಏನು ಕೈಕೋಳನಾ? ಇವತ್ ಕೈಕೋಳ ಹಾಕ್ಕೊಳಲ್ಲ. ಇವತ್ ನಾವು ಸಂಪೂರ್ಣ > ಸ್ವತಂತ್ರವಾಗಿರಬೇಕು. > > ಭಗತ್ - ರಾಜಗುರು ಸುಖದೇವ್ ಇನ್ನು ಹತ್ತು ನಿಮಿಷ ಕಳೆದರೆ ನಮ್ ದೇಹದಿಂದ ಆತ್ಮಾನೇ ಬೇರೆ > ಆಗಿಬಿಡತ್ತಂತೆ ಅಂಥಾದ್ರಲ್ಲಿ ಇದ್ರಲ್ಲೆಲ್ಲಾ ಏನಿದೆ? ಹಾಕಿಸ್ಕೊಳ್ಳಿ ಹಾಕಿಸ್ಕೊಳ್ಳಿ. > > ರಾಜಗುರು ಸುಖದೇವ್ - ಹೂಂ ಹಾಕಿ ಹಾಕಿ.. > > ಪೊಲಿಸ್ ಅಧಿಕಾರಿ - ಹೂಂ. ಹೋಗ್ಲಿ ಬಿಡಿ. 310 320 ನಡಿರಿ... > > ಪೊಲೀಸರು - ಎಸ್ ಸಾರ್. > > ಭಗತ್ ರಾಜಗುರು ಸುಖದೇವ್ ಮೂವರೂ - ತುಂಬಾ ಸಂತೋಷ ಆಯ್ತು ಜೈಲರ್ ಸಾಬ್. > > ಭಗತ್ - ರಾಜಗುರು ಸುಖದೇವ್. ಇವತ್ತು ನಾವು ಮೂವರು ನಮ್ಮ ದೇಶಕ್ಕೆ ರಂಗು ಕೊಡ್ಲಿಕ್ಕೆ > ಹೋಗ್ತಿದ್ದೀವಿ. ನಮ್ಮ ಭೂಮಿ ತಾಯಿಗೆ ಬಣ್ಣ ಕೊಡೋದಿಕ್ಕೆ ಹೋಗ್ತಾ ಇದ್ದೀವಿ. ಕ್ರಾಂತಿಕಾರಿ > ರಾಂ ಪ್ರಸಾದ್ ಬಿಸ್ಮಿಲ್ ಬರೆದಿರೋ ಕ್ರಾಂತಿಗೀತೆ ನಿಮಗೆ ಜ್ಞಾಪಕ ಇದೆ ಅಲ್ವಾ? ಮೇರಾ ರಂಗ್ > ದೇ ಬಸಂತಿ ಚೋಲಾ. > > ಭಗತ್ ರಾಜಗುರು ಸುಖದೇವ್ ಮೂವರೂ - ಮೇರಾ ರಂಗ್ ದೇ ಬಸಂತಿ ಚೋಲಾ. > ( ಹಾಡು - ಮೇರಾ ರಂಗ್ ದೇ ಬಸಂತಿ ಚೋಲಾ.) > > ಭಗತ್ - ಜೈಲರ್ ಸಾಬ್ ನೀವು ತುಂಬಾ ಅದೃಷ್ಟವಂತರು! > > ಸುಖದೇವ್ - ಲಕ್ಕಿ! > > ರಾಜಗುರು - ವೆರಿ ಲಕ್ಕಿ!! > > ಪೊಲೀಸ್ ಅಧಿಕಾರಿ - ಯಾಕೆ? ನಾವ್ ಯಾಕೆ ಅದೃಷ್ಟವಂತರು? > > ಭಗತ್ ಸಿಂಗ್ - ಜೈಲರ್ ಸಾಬ್ ಜೈಲಿನ ಹೊರಗಡೆ ಸಾವಿರಾರು ಜನ, ದೇಶದಾದ್ಯಂತ ಲಕ್ಷಾಂತರ ಜನ > ನಾವು ಮೂರು ಜನ ದೇಶಕ್ಕೋಸ್ಕರ ಹೇಗೆ ನಗುನಗುತ್ತಾ ಪ್ರಾಣ ಕೊಡ್ತೀವಿ ಅಂತಾ ನೋಡೋದಕ್ಕೆ > ಕಾತರದಿಂದ ಕಾಯ್ತಾ ಇದ್ದಾರೆ. ಆದ್ರೆ ಅವರ್ಯಾರಿಗೂ ಆ ಭಾಗ್ಯ ಇಲ್ಲ. ನಿಮಗೆ ಮಾತ್ರ ನಾವು > ಮೂರು ಜನ ಕ್ರಾಂತಿಕಾರಿಗಳು ದೇಶಕ್ಕೋಸ್ಕರ ನಗು ನಗುತ್ತಾ ಉರುಳನ್ನ ಚುಂಬಿಸಿ ಕೊರಳಿಗೆ > ಹಾಕಿಕೊಳ್ಳೊದನ್ನ ಕಣ್ತುಂಬಾ ನೋಡೋ ಭಾಗ್ಯ ಸಿಕ್ಕಿದೆ. ಹೀಗಾಗಿ ನೀವು ಅದೃಷ್ಟವಂತರು! > > ಬ್ರಿಟೀಷ್ ಅಧಿಕಾರಿ - ಯು ಆಸ್ಕ್ ದೆಮ್. ವಾಟ್ ಈಸ್ ದೇಯರ್ ಅಲ್ಟಿಮೆಟ್ ಡಿಸೈರ್. > > ಪೊಲಿಸ್ ಅಧಿಕಾರಿ - ಭಗತ್ ಸಿಂಗ್ ರಾಜಗುರು ಸುಖದೇವ್ ನಿಮ್ ಕೊನೇ ಆಸೆ ಏನು ಅಂತಾ > ಕೇಳ್ಕೊಳ್ಳಿ. > > ಭಗತ್ ಸಿಂಗ್ - ಜೈಲರ್ ಸಾಬ್ ನಮ್ಮ ಮೊದಲ ಮತ್ತು ಕೊನೇ ಆಸೆ ಎರಡೂ ಒಂದೇ! > > ಸುಖದೇವ್ - ಅದು ನಮ್ ದೇಶಕ್ಕೆ ಸ್ವಾತಂತ್ರ್ಯ ಕೊಡಿಸೋದು. > > ರಾಜಗುರು - ಈ ಕೆಂಪು ಮೂತಿಯ ಕೋತಿಗಳನ್ನ ನಮ್ ದೇಶ ಬಿಟ್ಟು ಓಡಿಸೋದು! > > ಬ್ರಿಟೀಷ್ ಅಧಿಕಾರಿ - ವಾಟ್? ವಾಟ್ ದೆ ಟೆಲ್ಲಿಂಗ್? > > ಪೊಲೀಸ್ ಅಧಿಕಾರಿ - ನಥಿಂಗ್ ಸಾರ್ ನಥಿಂಗ್. ಭಗತ್ ಸಿಂಗ್ ಈ ರೀತಿಯ ಆಸೆಗಳನ್ನೆಲ್ಲಾ > ಈಡೇರಿಸೋಕಾಗಲ್ಲ. ಇದನ್ನ ಬಿಟ್ಟು ಬೇರೆ ಏನಾದ್ರೂ ಇದ್ರೆ ಕೇಳ್ಕೊಳ್ಳಿ! > > ಭಗತ್ - ಜೈಲರ್ ಸಾಬ್. ನೀವಿಷ್ಟೋಂದ್ ಪ್ರೀತಿಯಿಂದ ಕೊನೇ ಆಸೆ ಕೇಳ್ಕೊಳ್ಳಿ ಕೊನೇ ಆಸೆ > ಕೇಳ್ಕೊಳ್ಳಿ ಅಂತಾ ಕೇಳೋದ್ ನೋಡಿದ್ರೆ ನಂಗೆ ಕೊನೇ ಆಸೆ ಕೇಳ್ಕೊಳ್ಳಲೇ ಬೇಕು ಅನ್ನಿಸ್ತಿದೆ! > ಜೈಲರ್ ಸಾಬ್ ನಿಮ್ಮ ಬ್ರಿಟೀಷ್ ನ್ಯಾಯಾಲಯದ ಪ್ರಕಾರ ನಮ್ಮ ಮೂವರ ಮೇಲಿರೋದು ರಾಜದ್ರೋಹದ > ಆರೋಪ. ರಾಜದ್ರೋಹದ ಅಪರಾಧಕ್ಕೆ ಬ್ರಿಟನ್ ನಲ್ಲಿ ಕೊಡೋ ಶಿಕ್ಷೆ ಏನು? > > ರಾಜಗುರು - ಗುಂಡಿಟ್ಟು ಕೊಲ್ಲೋದು. > > ಭಗತ್ - ನಿಮಗೆ ತಾಕತ್ ಇದ್ರೆ ನಮಗೆ ಗುಂಡಿಟ್ಟು ಸಾಯಿಸಿ!! > > ಪೊಲೀಸ್ ಅಧಿಕಾರಿ - ಅಬ್ಭಾ! ಎಂಥಾ ದೇಶಭಕ್ತರು. ನಾನೂ ಬಾರತೀಯ ಇವರೂ ಭಾರತೀಯರು. ಆದ್ರೆ > ಎಂಥಾ ವ್ಯತ್ಯಾಸ? ದೇಶಕ್ಕೋಸ್ಕರ ಇವ್ರು ಗುಂಡು ಹೊಡೆಸಿಕೊಳ್ಳೋಕೂ ಸಿಧ್ಧರಾಗಿದ್ದಾರೆ. > ಆದ್ರೆ ನಾನು ಈ ಬ್ರಿಟೀಷರು ಕೊಡೋ ಸಂಬಳಕ್ಕೆ ಆಸೆ ಪಟ್ಟು ಇವರ ಗುಲಾಮಗಿರಿ ಮಾಡ್ತಾ ಇದೀನಿ. > ಛೇ ಛೇ. > > ಸುಖದೇವ್ - ಯೋಚನೆ ಮಾಡಬೇಡಿ ಜೈಲರ್ ಸಾಬ್. ನೀವು ನಿಮ್ಮ ಉಪ್ಪಿನ ಋಣ ತೀರ್ಸಿ. ನಾವ್ ನಮ್ಮ > ಮಣ್ಣಿನ ಋಣ ತೀರಿಸ್ತೀವಿ. > > ಪೊಲೀಸ್ ಅಧಿಕಾರಿ - ಭಗತ್ ಸಿಂಗ್ ರಾಜಗುರು ಸುಖದೇವ್. ದಯವಿಟ್ಟು ಈ ಆಸೆ ಒಂದು ಬಿಟ್ಟು > ಬೇರೆ ಏನಾದ್ರೂ ಕೇಳ್ಕೊಳ್ಳಿ. ಅದನ್ನಾದ್ರೂ ಈಡೇರಿಸಿ ನನ್ ಪಾಪ ನಾನ್ ಕಡಿಮೆ ಮಾಡ್ಕೋತೀನಿ. > > ರಾಜಗುರು - ಭಗತ್. ನಾವ್ ಮೂವರು ಒಟ್ಟಿಗೆ ಒಂದೇ ತಟ್ಟೆಲಿ ಊಟ ಮಾಡ್ತಾ ಇದ್ವಿ. ಒಟ್ಟಿಗೆ > ದೇಶದ್ ಕೆಲಸ ಮಾಡಿದ್ವಿ. ಈವತ್ತು ಸಾಯೋವಾಗ್ಲೂ ಒಟ್ಟಿಗೆ ಇದ್ದೀವಿ. ಆದ್ರೆ ಭಗತ್ ಸಾಯೋ > ಮೊದ್ಲು ನಿನ್ನ ಒಂದೇ ಒಂದ್ ಸಾರಿ ತಬ್ಬಿಕೊಳ್ಳಬೇಕು ಅನ್ನಿಸ್ತಿದೆ ಕಣೋ. > > ಸುಖದೇವ್ - ಜೈಲರ್ ಸಾಬ್. ನಾವು ಮೂವರೂ ಒಬ್ಬರನ್ನೊಬ್ಬರು ಅಪ್ಪಿಕೊಳ್ಳಬೇಕು. > > ಪೊಲೀಸ್ ಅಧಿಕಾರಿ - ಹೂಂ > > (ಮೂವರೂ ತಬ್ಬಿಕೊಳ್ಳುತ್ತಾರೆ) > > ಭಗತ್ - ರಾಜಗುರು ನಿನ್ ಕಣ್ಣಲ್ಲಿ ನೀರು? > > ಸುಖದೇವ್ - ಸಾವಿಗೆ ಇಷ್ಟೋಂದ್ ಹೆದ್ರುಕೊಳ್ಳೋನು ದೇಶದ ಕೆಲಸಕ್ಕೆ ಯಾಕೋ ಬರಬೇಕಿತ್ತು? > > ರಾಜಗುರು - ಸುಖದೇವ್ ದುಡುಕಬೇಡ. ಇದು ಸಾವಿಗೆ ಹೆದರಿಕೊಂಡು ಬರ್ತಾ ಇರೋ ಕಣ್ಣೀರಲ್ಲಾ. > ದೇಶಕ್ಕೋಸ್ಕರ ಪ್ರಾಣ ಕೊಡ್ತಾ ಇದ್ದೀನಲ್ಲಾ ಅಂತಾ ಆನಂದಕ್ಕೆ ಬರ್ತಾ ಇರೋ ಕಣ್ಣೀರು. > ನಿನ್ನಂತಾ ಸ್ನೇಹಿತನ ಭಗತ್ ಸಿಂಗ್ ನಂಥಾ ದೇಶಭಕ್ತನ ಜೊತೆ ಒಟ್ಟಿಗೆ ಸಾಯೋ ಭಾಗ್ಯ > ಸಿಕ್ಕಿದಿಯಲ್ಲಾ ಆ ಸಂತೋಷಕ್ಕೆ ಬರ್ತಾ ಇರೋ ಕಣ್ಣೀರು. > > ಸುಖದೇವ್ - ರಾಜಗುರು! ನಂಗೊತ್ತು. ನೀನು ಸಾವಿಗೆ ಯಾವತ್ತೂ ಭಯ ಪಡಲ್ಲ ಅಂತ. ನೀನು ಸಿಂಹ > ಕಣೋ ನೀ ಸಿಂಹ. ಆದ್ರೆ ಗೆಳೆಯ ಸಾಯೋ ಕೊನೇ ಕ್ಷಣದಲ್ಲಿ ನಿನ್ ಕಣ್ಣಲ್ಲಿ ಕಣ್ಣೀರು ನೋಡಿ > ತಪ್ಪು ತಿಳಿದುಕೊಂಡು ಬಿಟ್ಟೆ. ನನ್ನ ಕ್ಷಮಿಸು ಗೆಳೆಯಾ. > > ಭಗತ್ - ಸುಖದೇವ್ ರಾಜಗುರು. ದೇಶಕ್ಕೋಸ್ಕರ ಪ್ರಾಣ ಕೊಡ್ಲಿಕ್ಕೆ ಅಂತ ಹೊರಟಿರೋ > ಕ್ರಾಂತಿಕಾರಿಗಳು ಯಾವತ್ತೂ ಕಣ್ಣೀರು ಹಾಕಬಾರದು. ಕಣ್ಣೀರ್ ಹಾಕಕೂಡದು. > > ರಾಜಗುರು - ಭಗತ್ ನಾವೇನೋ ಸತ್ ಹೋಗಿಬಿಡ್ತೀವಿ. ಸರಿ. ಆದ್ರೆ ನೀ ಸತ್ ಹೋದ್ರೆ, ನಮ್ > ದೇಶಕ್ಕೆ ಸ್ವಾತಂತ್ರ್ಯ ಕೊಡಿಸೋದು ಯಾರು? > > ಭಗತ್ - ಹ್ಹ ಹ್ಹ ಹ್ಹ. ರಾಜಗುರು. ನಾನೊಬ್ಬ ಸತ್ತ ಮಾತ್ರಕ್ಕೆ ಈ ದೇಶಕ್ಕೆ ಸ್ವಾತಂತ್ರ್ಯ > ಸಿಕ್ಕೋದಿಲ್ಲ ಅಂತ ತಿಳಿದುಕೊಂಡಿದ್ದೀಯೇನು? ಇಲ್ಲ. ನಮ್ಮ ಮೂವರನ್ನ ನೇಣಿಗೇರಿಸಿ ಈ > ಬ್ರಿಟೀಷ್ ಸಕರ್ಾರ ಸಾಧಿಸೋದೇನು ಇಲ್ಲ. ಬದಲಾಗಿ ನಾವು ಮೂರು ಜನ ನಗುನಗುತ್ತಾ ಉರುಳನ್ನು > ಚುಂಬಿಸಿ ಕೊರಳಿಗೆ ಹಾಕಿಕೊಳ್ಳೋದನ್ನ ನೋಡಿದ ಈ ದೇಶದ ತಾಯಂದಿರು ಅವರ ಹೊಟ್ಟೆಯಲ್ಲಿ ಭಗತ್ > ಸಿಂಗ್ ನಂಥಾ ಮಕ್ಕಳು ಹುಟ್ಟಲಿ, ರಾಜಗುರು ನಂಥಾ ಮಕ್ಕಳು ಹುಟ್ಟಲಿ, ಸುಖದೇವ್ ನಂಥಾ ಮಕ್ಕಳು > ಹುಟ್ಟಲಿ, ಅಂತಾ ಬಯಸುತ್ತಾರೆ. ಆನಂತರ ಅವರ ಹೊಟೇಲಿ ಹುಟ್ಟೋ ಪ್ರತಿಯೊಂದು ಮಗು ಕೂಡಾ ಈ > ಬ್ರಿಟೀಷರ ವಿರುದ್ಧ ಸಿಂಹದ ಥರಾ ಹೋರಾಡಿ ನಮ್ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುತ್ತೆ. > ಸುಖದೇವ್, ಇವತ್ತು ನಮ್ ದೇಶದ ಜನರಿಗೆ ದೇಸಕ್ಕೋಸ್ಕರ ಹೇಗೆ ಬದುಕಬೇಕು ಅಂತಾ ಗೊತ್ತಿಲ್ಲ. > ದೇಶಕ್ಕೋಸ್ಕರ ಹೇಗೆ ಕೆಲಸ ಮಾಡಬೇಕು ಅಂತಾ ಗೊತ್ತಿಲ್ಲ. ದೇಶಕ್ಕೋಸ್ಕರ ಹೇಗೆ ಪ್ರಾಣ ತ್ಯಾಗ > ಮಾಡಬೇಕು ಅಂತ ಗೊತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಸ್ವಾರ್ಥದಲ್ಲಿ ಮುಳುಗಿ ಈ ಬ್ರಿಟೀಷರ > ಪಾದಸೇವಕರಾಗಿ ಕೆಲಸ ಮಾಡ್ತಾ ಇದಾರೆ. ಸುಖದೇವ್ ಇವತ್ತು ಇವತ್ತು ನಾವು ಆ ಜನರಿಗೆ > ದೇಶಕ್ಕೋಸ್ಕರ ಹೇಗೆ ನಗುನಗುತ್ತಾ ಪ್ರಾಣತ್ಯಾಗ ಮಾಡೋದು ಆಂತ ತೋರಿಸಿಕೊಡೋಣ. ಒಂದ್ ಸಾರಿ ಈ > ದೇಶದ ಜನ ಸಾವಿನ ಭಯವನ್ನು ಗೆದ್ರು ಅಂತ ಹೇಳಿದ್ರೆ ಆನಂತರ ಈ ಬ್ರಿಟೀಷರನ್ನ ಎರಡು ನಿಮಿಷ > ಕೂಡಾ ಈ ದೇಶದಲ್ಲಿ ಉಳಿಸಲ್ಲ. ಈ ಉದಾತ್ತ ಉದ್ದೇಶಕ್ಕೋಸ್ಕರ ನಾವ್ ಪ್ರಾಣತ್ಯಾಗ ಮಾಡ್ಲೇಬೇಕು > ಸುಖದೇವ್. ಮಾಡಲೇಬೇಕು ರಾಜಗುರು. > > ಸುಖದೇವ್ - ಭಗತ್ ನೀ ಹೇಳಿದ್ದು ನಿಜ. ಈವತ್ತು ನಾವು ದೇಶಕ್ಕೋಸ್ಕರ ಪ್ರಾನ ಕೊಡ್ತಾ ಒಂದು > ಒಳ್ಳೇ ಕೆಲಸ ಮಾಡ್ತಾ ಇದ್ದೀವಿ ನಿಜ. ಆದ್ರೆ ಮುಂದಿನ ಜನ್ಮ ಅಂತ ಒಂದಿದ್ರೆ ಮತ್ತೆ ಇದೇ > ಮಣ್ಣಲ್ಲಿ ಹುಟ್ಟಿ ಈ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ನಮ್ ದೇಶಕ್ಕೆ ಸ್ವಾತಂತ್ರ್ಯ > ಕೊಡಿಸೋಣ. > > ಬ್ರಿಟೀಷ್ ಅಧಿಕಾರಿ - ಓಕೆ ಓಕೆ ಟೈಮ್ ಅಪ್ ಟೈಮ್ ಅಪ್. > > ಪೊಲೀಸ್ ಅಧಿಕಾರಿ - 310 320. > > ಬ್ರಿಟೀಷ್ ಅಧಿಕಾರಿ - ಟೂ ಮಿನಿಟ್ಸ್ ಮೋರ್ > > ಸುಖದೇವ್ - ಭಗತ್ ನೆನ್ನೆ ನಿಮ್ ತಾಯಿ ಹೇಳಿದ್ ಮಾತು ಜ್ಞಾಪಕದಲ್ಲಿದಿಯಾ? > > ಭಗತ್ - ಅದ್ ಹ್ಯಾಗ್ ಮರಿಯಕಾಗತ್ತೆ ಸುಖದೇವ್. ನೆನ್ನೆ ನಮ್ ತಾಯಿ ನನ್ನ ನೋಡೋಕೆ ಅಂತ > ಜೈಲಿಗೆ ಬಂದಿದ್ದರು. ಆಕೆ ನನ್ನನ್ನ ನೋಡಿದ್ ತಕ್ಷಣ ಕಣ್ಣಲ್ಲಿ ನೀರ್ ತುಂಬಿಕೊಂಡು > ಹೇಳಿದ್ಲು. "ಮಗೂ ಭಗತ್. ಇಷ್ಟು ಚಿಕ್ಕ ವಯಸ್ಸಿಗೇ ದೇಶ ದೇಶ ಅಂತ ಹೇಳ್ತಾ ಪ್ರಾನ ಕೊಡೋ > ಸ್ಥಿತಿಗೆ ಬಂದ್ ಬಿಟ್ಯಲ್ಲೋ. ನಿನ್ನನ್ನ ನಾನು ಮದುವೆ ಮಾಡಿ ಮದುವೆ ದಿಬ್ಬಣದಲ್ಲಿ ನೋಡಬೇಕು > ಅಂತ ಅಸೆಪಟ್ಟಿದ್ದೆ ಆದ್ರೆ ಇವತ್ತು ನೀನು ಸಾಯೋದನ್ನ ನೋಡಬೇಕಾದ ಪರಿಸ್ಥಿತಿ > ಬಂದುಬಿಡ್ತಲ್ಲೋ" ಅಂತ ಕಣ್ಣಿರು ಹಾಕಿದ್ಲು. ಆಗ ನಾನು ನನ್ ತಾಯಿಗೆ ಹೇಳಿದೆ. " ಅಮ್ಮಾ. > ನಿನ್ ಮಗ ಭಗತ್ ಸಿಂಗ್ ಯಾವ್ದೋ ಕಳ್ಳತನ ಮಾಡಿ ಯಾವ್ದೋ ದರೋಡೆ ಮಾಡಿ ನೇಣು ಶಿಕ್ಷೆಗೆ ಗುರು > ಆಗಿಲ್ಲ. ನಿನ್ ಮಗ ಭಗತ್ ಸಿಂಗ್ ದೇಶದ ಸ್ವಾತಂತ್ರ್ಯಕ್ಕೋಸ್ಕರ ಬ್ರಿಟೀಷರನ್ನ ಈ ದೇಶದಿಂದ > ಹೊರಗೆ ಓಡಿಸಬೇಕು ಅನ್ನೋ ಉದಾತ್ತ ಉದ್ದೇಶಕ್ಕೋಸ್ಕರ ಪ್ರಾಣ ಕೊಡ್ತಾ ಇದ್ದಾನೆ. ಸತ್ತ ನಂತರ > ನಿನ್ನ ಮಗ ಜನರ ಕಣ್ಣಲ್ಲಿ ಹುತಾತ್ಮ. ಅಮ್ಮಾನಾನ್ ನಿಧರ್ಾರ ಮಾಡಿಕೊಂಡಿದ್ದೀನಿ ಸಾಯೋ ಕೊನೇ > ಕ್ಷಣದಲ್ಲೂ ನನ್ನ ಕಣ್ಣಲ್ಲಿ ಕಿಂಚಿತ್ತೂ ಭಯವನ್ನು ಈ ಆಂಗ್ಲರು ನೋಡಲಾರರು. ಆದ್ರೆ ಅಮ್ಮಾ > ನೀನು ಹೀಗೆ ಕಣ್ಣಿರು ಹಾಕ್ತಾ ಇರೋದನ್ನ ನೋಡಿ ಈವಾಗ್ಲೇನೋ ನಾ ತಡೆದುಕೊಂಡುಬಿಡಬಲ್ಲೆ. > ಆದ್ರೆ ನಾಳೆ ಗಲ್ಲಿಗೇರೋ ಕೊನೇ ಕ್ಷಣದಲ್ಲಿ ಕಣ್ಣಿರು ತುಂಬಿದ ನಿನ್ನ ಮುಖ ನನ್ನ > ನೆನಪಿಗೇನಾದ್ರೂ ಬಂದುಬಿಟ್ರೆ ಆಗ ನನ್ನ ಕೈಲಿ ತಡೆದುಕೊಳ್ಳೋಕಾಗಲ್ಲ ಅಮ್ಮಾ. ಒಂದ್ ವೇಳೆ ನಾ > ಆಗ ಕಣ್ಣಿರ್ ಹಾಕಿಬಿಟ್ರೆ ಈ ಪಾಫಿ ಬ್ರಿಟೀಷರು ಹೇಳ್ತಾರೆ. ನೋಡ್ರೀ. ಭಗತ್ ಸಿಂಗ್ ಸಾವಿಗೆ > ಭಯಪಟ್ಟು ಕಣ್ಣಿರು ಹಾಕ್ತಾ ಇದ್ದಾನೆ. ಸಾಯೋ ಕಾಲಕ್ಕೆ ಈ ಕ್ರಾಂತಿಕಾರಿ ಹೇಡಿ ಆಗ್ಬಿಟ್ಟ > ಅಂತ. ಅಮ್ಮಾ ಹುತಾತ್ಮನಾಗಲಿಕ್ಕೆ ಅಂತ ಹೊರಟಿರೋ ನಿನ್ನ ಮಗ ಹೇಡಿ ಅನ್ನಿಸಿಕೊಳ್ಳೊದು ನಿಂಗೆ > ಇಷ್ಟ ಏನಮ್ಮಾ ?" ಅಂತ. ನನ್ ತಾಯಿ ಹೇಳಿದ್ಲು " ಮಗೂ ಭಗತ್ ನಾ ನಿನ್ನ ತುಂಬಾ ಚಿಕ್ ಹುಡುಗ > ಅನ್ಕೊಂಬಿಟ್ಟಿದ್ದೆ. ಆದ್ರೆ ನೀ ಚಿಕ್ ಹುಡುಗ ಅಲ್ಲ ದೇಶಕ್ಕೋಸ್ಕರ ಪ್ರಾನತ್ಯಾಗ > ಮಾಡೋದಿಕ್ಕೆ ಅಂತ ಹೊರಟಿರೋ ಹುತಾತ್ಮ. ನಾನು ಕಣ್ಣಿರು ಹಾಕಿ ನಿನ್ನ ಹುತಾತ್ಮ ಪಟ್ಟಕ್ಕೆ > ಅಡ್ಡಿಬರಲ್ಲ. ನಾನು ನಿನಗೆ ಮಾತು ಕೊಡ್ತೀನಿ ನೀನು ಸತ್ತ ನಂತರವೂ ನನ್ನ ಕಣ್ಣಲ್ಲಿ ಒಂದು > ತೊಟ್ಟು ನೀರು ಬರಲ್ಲ. ಆದ್ರೆ ನೀ ನಂಗೊಂದು ಮಾತು ಕೊಡಬೇಕು. ನಾಳೆ ಸಾಯೊ ಕೊನೇ ಕ್ಷಣದಲ್ಲಿ > ನೀವು ಮೂವರ ಬಾಯಲ್ಲಿ ಬರಬೇಕಾದ ಕಡೆಯ ಶಬ್ದ .. ವಂದೇ ಮಾತರಂ ಆಗಿರಬೇಕು. > > ರಾಜಗುರು - ಇನ್ಕಿಲಾಬ್ ಜಿಂದಾಬಾದ್ > > ಸುಖದೇವ್ - ಭಾರತ್ ಮಾತಾ ಕೀ ಜೈ > > ಭಗತ್ - ವಂದೇ ಮಾತರಂ. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CAOM04w%2BpnwLpYD%3D_UkmP5vw%2BWenADYVhWN5%3Dif3fE% > 3DERqf9K_A%40mail.gmail.com > <https://groups.google.com/d/msgid/kannadastf/CAOM04w%2BpnwLpYD%3D_UkmP5vw%2BWenADYVhWN5%3Dif3fE%3DERqf9K_A%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.