ಅಪ್ಪನ ಮಹತ್ವ ಅಪ್ಪ ಆದ ಮೇಲೆ ಗೊತ್ತಾಗುತ್ತದೆ. (ಗೊತ್ತಾಗಿದೆ) On Feb 2, 2017 8:48 PM, "Sameera samee" <mehak.sa...@gmail.com> wrote:
> *ಅಪ್ಪನ ಬಗ್ಗೆಯೂ ನಾಲ್ಕು ಮಾತುಗಳು.* > ----------------------- > > ನಿತ್ಯವೂ ನಮಗಾಗಿ ಅಡಿಗೆ ಮಾಡುವ ಅಮ್ಮನ ನೆನಪು ನಮಗೆ ಸದಾ ಇರುತ್ತದೆ. > > ಆದರೆ, > _ಜೀವನದುದ್ದಕ್ಕೂ ನಮ್ಮ ಊಟಕ್ಕಾಗಿ ವ್ಯವಸ್ಥೆ ಮಾಡುತ್ತಿರುವ ಅಪ್ಪನನ್ನು ಮರೆಯುತ್ತೇವೆ!_😞 > > ಅಮ್ಮ ಅಳಬಹುದು. ಆದರೆ ಅಪ್ಪನಿಗೆ ಅಳಲು ಸಾಧ್ಯವಾಗುವದಿಲ್ಲ. ಸ್ವಯಂ ಅವನ ಅಪ್ಪನೇ > ಕಾಲವಾದರೂ ಸಹ ಅವನಿಗೆ ಅಳುವುದು ಸಾಧ್ಯ ಆಗುವದಿಲ್ಲ. ಏಕೆಂದರೆ, ಅವನು ತನ್ನ ಚಿಕ್ಕ ಚಿಕ್ಕ > ತಮ್ಮಂದಿರ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. > > ಅಪ್ಪ ತನ್ನ ತಾಯಿಯನ್ನು ಕಳದುಕೊಂಡಾಗಲೂ ಅಳುವದಿಲ್ಲ. ಏಕೆಂದರೆ, ಅವನ ಅವಿವಾಹಿತ > ತಂಗಿಯರಿಗೆ ಆಸರೆಯಾಗಬೇಕಾದ ಹೊಣೆಗಾರಿಕೆ ಅವನಿಗಿದೆ. > > ತನ್ನ ಹೆಂಡತಿಯೇ ಅವನನ್ನು ಬಿಟ್ಟು ಹಿಂದಿರುಗದ ದಾರಿಗೆ ಹೋದರೂ ಅಪ್ಪ ಅಳುವದಿಲ್ಲ. > > ಏಕೆಂದರೆ, > > ಮಕ್ಕಳನ್ನು ಸಂತೈಸಬೇಕಾಗಿರುತ್ತದೆ. > > ದೇವಕಿ ಮತ್ತು ಯಶೋದೆಯರ ಗುಣಗಾನ ಮಾಡಲೇಬೇಕು. > > ಆದರೆ, > > ನದಿಯಲ್ಲಿ ತುಂಬಿದ ನೆರೆಯ ಅಬ್ಬರದಲ್ಲಿ, ತಲೆಯ ಮೇಲೆ ಬುಟ್ಟಿ ಹೊತ್ತುಕೊಂಡು ನಡೆದ > ವಸುದೇವನನ್ನು ಮರೆಯಬಾರದಲ್ಲವೇ? > > ಶ್ರೀರಾಮನು ನಿಶ್ಚಯವಾಗಿಯೂ ಮಾತೆ ಕೌಸಲ್ಯೆಯ ಪುತ್ರನೇ ಆದರೂ, ರಾಮನ ಅಗಲುವಿಕೆಯ ಕಾರಣ, > ಮಿಡುಕಾಡಿ ಪ್ರಾಣತ್ಯಾಗ ಮಾಡಿದವನು ದಶರಥನೇ ತಾನೇ? > > ಅಪ್ಪನ ಚಪ್ಪಲಿಯ ಉಂಗುಷ್ಟ ಕಿತ್ತು ಹೋಗಿದ್ದು ಕಂಡಾಗ ಅವನ ಪ್ರೀತಿಯ ಆಳದ ಅರಿವಾಗುತ್ತದೆ. > > ಅಪ್ಪನ ತೂತಾದ, ಹರಕು ಒಳ-ಅಂಗಿಯನ್ನು ಗಮನಿಸಿದಾಗ, ಅವನು ನಮ್ಮ ಭಾಗ್ಯದಲ್ಲಿನ ದೋಷಗಳನ್ನು > ತಾನೇ ತೆಗೆದುಕೊಂಡಿದ್ದಾನೆಂದೇ ಅನಿಸುತ್ತದೆ. > > ಮಗಳಿಗೆ ಸುಂದರ ಉಡುಗೆ ತಂದುಕೊಡುತ್ತಾನೆ, ಮಗನಿಗೆ ಉತ್ತಮ ದರ್ಜೆಯ ಟ್ರ್ಯಾಕ್ ಸೂಟ್ > ಕೊಡಿಸುತ್ತಾನೆ, ಆದರೆ, ತಾನು ಮಾತ್ರ ಹಳೆಯ ಇಜಾರ ಧರಿಸುತ್ತಾನೆ. > > ಮಗನು ಕೇಶಕರ್ತನಕ್ಕೆ ೫೦ ರೂ. ಖರ್ಚು ಮಾಡುವುದನ್ನು, ಹಾಗೂ ಮಗಳು ಕೇಶ-ವದನ ಶೃಂಗಾರ > ಗೃಹಕ್ಕೆ ಭೇಟಿ ನೀಡುವದನ್ನು, ಅಂತೆಯೇ ಮುಖಕ್ಷೌರ ಮಾಡಲು ಕ್ಷೌರಸಾಬೂನು ಇಲ್ಲದೇ ಹೋದಾಗ > ಸ್ನಾನದ ಸಾಬೂನನ್ನೇ ಬಳಸುವ ಅಪ್ಪಂದಿರನ್ನೂ ನೀವು ಕಂಡಿರಬಹುದು! > > ಅಪ್ಪನ ಆರೋಗ್ಯ ಕೆಡುವದೇ ಇಲ್ಲ. > ಅಕಸ್ಮಾತ್ತಾಗಿ ಅನಾರೋಗ್ಯ ಆದರೂ ಸಹ, ಅವನು ತಕ್ಷಣಕ್ಕೆ ಆಸ್ಪತ್ರೆಗೆ ಹೋಗುವುದೇ ಇಲ್ಲ. > ವೈದ್ಯರು ಒಂದರ್ಧ ತಿಂಗಳ ವಿಶ್ರಾಂತಿ ಪಡೆಯಲು ಸಲಹೆ ನೀಡಿದರೆ, ಅವನ ಹಣೆಯ ಮೇಲಿನ > ನಿರಿಗೆಗಳು ಆಳವಾಗುತ್ತವೆ. > > ಏಕೆಂದರೆ, > > ಅವನಿಗೆ ಮಗಳ ಮದುವೆ ಮಾಡಬೇಕಿದೆ. > > ಮಗನ ವಿದ್ಯಾಭ್ಯಾಸ ಇನ್ನೂ ಅಪೂರ್ಣವಾಗಿದೆ. > > ಸಾಕಷ್ಟು ವರಮಾನವಿಲ್ಲದಿದ್ದರೂ, ಮಗ/ಮಗಳ ವೈದ್ಯಕೀಯ/ತಾಂತ್ರಿಕ ಶಿಕ್ಷಣಕ್ಕೆ ಪ್ರವೇಶ > ಮಾಡಿಸಬೇಕಿದೆ. > > ಹೇಗಾದರೂ ಮಾಡಿ ಹಣವನ್ನು ಹೊಂದಿಸಿಕೊಂಡು ಮಗನಿಗೆ ಪ್ರತಿ ತಿಂಗಳೂ ಮಗನಿಗೆ ಕಳಿಸಬೇಕು. > (ಅದೇ ಮಗನು ಕೈಗೆ ಹಣ ಸಿಕ್ಕಿದ ಕೂಡಲೇ ತನ್ನ ಗೆಳೆಯರ ಗುಂಪಿಗೆ ಔತಣ ನೀಡುತ್ತಾನೆ!) > > ಯಾವುದೇ ಒಂದು ಪರೀಕ್ಷೆಯ ಪರಿಣಾಮ ಬಂದಾಗ ನಮಗೆಲ್ಲ ಅಮ್ಮ ಪ್ರೀತಿಪಾತ್ರಳಾಗಿ ತೋರುತ್ತಾಳೆ. > ಏಕೆಂದರೆ, ಅವಳು ನಮ್ಮನ್ನು ಹೊಗಳುತ್ತಾಳೆ, ಮುದ್ದು ಮಾಡುತ್ತಾಳೆ ಹಾಗೂ ನಮ್ಮ ಗುಣವನ್ನು > ಕೊಂಡಾಡುತ್ತಾಳೆ. > > ಆದರೆ, > > > ಸದ್ದಿಲ್ಲದಂತೆ ಹೋಗಿ ಸಿಹಿತಿನಿಸಿನ ಪೊಟ್ಟಣವನ್ನು ತೆಗೆದುಕೊಂಡು ಬರುವ ಅಪ್ಪ ಮಾತ್ರ > ಕೆಲವೊಮ್ಮೆ ಹಿನ್ನೆಲೆಯಲ್ಲಿಯೇ ಉಳಿದು ಬಿಡುತ್ತಾನೆ. > > ಮೊದಲಬಾರಿಗೆ ತಾಯಿಯಾದ ಮೇಲೆ ಅಮ್ಮನಿಗೆ ಬಹಳೇ ಸನ್ಮಾನ-ಸತ್ಕಾರ ದೊರಕುತ್ತದೆ. > > ಕಾಳಜಿಪೂರ್ವಕವಾಗಿ ನೋಡಿಕೊಳ್ಳಲಾಗುತ್ತದೆ. (ಇದು ಯೋಗ್ಯ ಹಾಗೂ ಸ್ವಾಭಾವಿಕವೂ ಹೌದು. > ಏಕೆಂದರೆ, ಅದಕ್ಕಾಗಿ ಅವಳು ಬಹಳಷ್ಟು ಕಷ್ಟಗಳನ್ನು ಸಹಿಸಿರುತ್ತಾಳೆ.) > > ಆದರೆ, > > *ಆಸ್ಪತ್ರೆಯ ಹಜಾರದಲ್ಲಿ, ಆತಂಕದಿಂದ ಆಚೆ-ಈಚೆ ಸುತ್ತಾಡುವ,* > > *ಹೊಂದಾಣಿಕೆ ಆಗುವ ಗುಂಪಿನ ರಕ್ತದ ಬಗ್ಗೆ ಚಿಂತಿಸುವ,* > > *ಔಷಧಿಗಳ ಸಲುವಾಗಿ ಅತ್ತಿತ್ತ ಓಡಾಡುವ ಅಸಹಾಯಕ ಅಪ್ಪನನ್ನು ಎಲ್ಲರೂ ಉಪೇಕ್ಷೆ > ಮಾಡುತ್ತಾರೆ.* > > ಪೆಟ್ಟು ತಗಲಿದಾಗ ಅಥವಾ ಸ್ವಲ್ಪ > ಪ್ರಮಾಣದ ಬೆಂಕಿಯ ಉರಿ ತಗಲಿದರೂ, ಓ ಅಮ್ಮಾ ಎಂಬ ಉದ್ಗಾರ ಬಾಯಿಂದ ಹೊರಬೀಳುತ್ತದೆ. > > ಆದರೆ, > > ನಮ್ಮ ಪಕ್ಕದಲ್ಲಿ ಅತೀ ಸನಿಹದಲ್ಲೇ ಒಂದು ಭಾರೀವಾಹನ ಸವರಿಕೊಂಡು ಹೋದರೆ ಅರೇ ಬಾಪ್ ರೇ > (ಅಯ್ಯಯ್ಯಪ್ಪಾ) ಎಂದು ನಮ್ಮ ಬಾಯಿಂದ ಹೊರಡುತ್ತದೆ.* > > ವಿಶ್ವದ ಸಕಲ ಅಪ್ಪಂದಿರಿಗೆ ಸಮರ್ಪಿತ. > > 👨👧👦👨👦👦👨👧👧👨👧👨👦?🙏🏻🙏🏻🙏🏻🙏🏻 > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/formsd1Iv5fotalJsERorsuN5v5yHG > uKrmpFXStxBwQSYXNbzI/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.