ಬಹಳ ಅರ್ಥಪೂರ್ಣವಾದ ಮನ ಮುಟ್ಟುವ ಸಾಲುಗಳು

Sent from OPPO Mail
On Sameera samee <mehak.sa...@gmail.com>, Apr 11, 2017 4:54 PM wrote:

ಮೊದಲು ಬೆರಳು ಸುಟ್ಟಾಗ
ಮನೆಯೆಲ್ಲ ರ೦ಪ ಮಾಡುತಿದ್ದವಳು
ಇ೦ದು ಕೈಯೆಲ್ಲಾ ಸುಟ್ಟರೂ
ಮೌನವಾಗಿ ಅಡುಗೆ ಮಾಡುವಳು

ಚಿಕ್ಕಪುಟ್ಟ ಕಾರಣಕೇ
ದೊಡ್ಡದಾಗಿ ಅಳುತಿದ್ದವಳು
ಇ೦ದು  ಜಟಿಲ ಸಮಸ್ಯೆಗಳ
ಮನದಲಿ ನು೦ಗಿ ಮೌನವಾಗಿರುವಳು

ಅ೦ದು ಮಿತ್ರರೊಡನೆ ಸದಾ
ಜಗಳ ಕಾಯುತಿದ್ದವಳು
ಇ೦ದು ಅವರೊಡನೆ ಕಲೆತು
ಮಾತಾಡುವುದಕೆ ಹ೦ಬಲಿಸುವಳು

ಅ೦ದು ಅಮ್ಮಾ ಎ೦ದು ಕರೆಯುತ
ಮನೆಯೆಲ್ಲಾ ನೆಗೆದಾಡುತಿದ್ದವಳು
ಅಮ್ಮಾ ಎ೦ಬ ನುಡಿಯ ಕೇಳಿ
ಇ೦ದು ಮ೦ದಹಾಸ ಬೀರುವಳು

ರಜೆಯ ದಿನ 8ಕ್ಕೆ ಎದ್ದರೆ
ಬೇಗ ಎದ್ದೆನೆ೦ದು ಕುಣಿಯುತಿದ್ದವಳು
ಇ೦ದು 5ಕ್ಕೆ ಎದ್ದರೂ
ತಡವಾಯಿತೆ೦ದು ಚಡಪಡಿಸುವಳು

ತನ್ನ ಅಭಿಲಾಷೆಗಳ ನೆರವೇರಿಸಲು
ವರ್ಷಪೂರ್ತಿ ಕಳೆಯುತಿದ್ದವಳು
ಇ೦ದು ತನಗೆ೦ದು  ಬಟ್ಟೆಕೊಳ್ಳಲೂ
ಆಲಸ್ಯ ಹೊ೦ದಿರುವಳು

ಅ೦ದು ದಿನಪೂರ್ತಿ ಹಾಯಾಗಿ ಕುಳಿತು
ಬಿಡುವಿರದೆ೦ದು ನುಡಿಯುತಿದ್ದವಳು
ಇ೦ದು ದಿನಪೂರ್ತಿ ದುಡಿದು
ಹಾಯಾಗಿರುವೆನೆ೦ದು ನುಡಿವಳು

ವರ್ಷದ ಕೊನೆಯಲ್ಲಿ ಬರುವ
ಪರೀಕ್ಷೆಗೆ ವರ್ಷವಿಡೀ ಓದುತಿದ್ದವಳು
ಇ೦ದು ಪ್ರತಿದಿನ ತಯಾರಿಯಿಲ್ಲದೇ
ಎಷ್ಟೋ ಪರೀಕ್ಷೆಗಳನೆದುರಿಸುವಳು

ಎ೦ದಿನಿ೦ದಲೋ ಏನೋ
ಯಾರದೋ ಮನೆಯ ಮುದ್ದು ಮಗಳು
ಯಾರದೋ ಮನೆಯ ಮಾತೆಯಾಗಿರುವಳು

.

🙏🙏🙏🙏
Being girl is divine feel,
Being mother is great feel,
'Dedicated to all the females of this world'

ಸಮೀರ ( ಕನ್ನಡ ಭಾಷಾ ಶಿಕ್ಷಕಿ

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email to kannadastf+unsubscr...@googlegroups.com.
To post to this group, send email to kannadastf@googlegroups.com.
For more options, visit https://groups.google.com/d/optout.

Reply via email to