Nice On May 3, 2017 2:28 PM, "Ranapratap rao" <[email protected]> wrote:
> ಸುಂದರ > ಸುಲಲಿತ > ಸುಯೋಗ > ಸಂಪೂರ್ಣ > ಮಾಹಿತಿಯನ್ನು > ನೀಡಿದ ಸಮೀರ > ಶಿಕ್ಷಕಿರವರಿಗೆ ಅಭಿನಂದನೆಗಳು. > On 03-May-2017 11:02 am, "Sameera samee" <[email protected]> wrote: > >> >> *🌻ಮಹರ್ಷಿ ಭಗೀರಥ ಚರಿತ್ರೆ🌻* >> >> *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ >> ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು >> ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ >> ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ >> ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು. >> ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ >> ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ >> ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ >> ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ >> ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ >> ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ >> ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ >> ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು. >> ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ >> ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ >> ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ >> ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ >> ಪಡೆಯುವವರೂ ಆದ 60 ಸಹಸ್ರ ಮಕ್ಕಳು ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು >> ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು ಯಾರಿಗೆ ಯಾವ ಮಗು? ಎಂದು ಮಹರ್ಷಿಗಳನ್ನು ಕೇಳಿದರು. >> ಅವರು ನೀವೆ ಆರಿಸಿಕೊಂಡು ಹೇಳಿ ಎಂದರು ಹಿರಿಯಳಾದ ಕೇಶಿನಿ ವಂಶೋದ್ದಾರನಾದ ಒಬ್ಬ ಮಗ ನನಗೆ >> ಸಾಕು ಎಂದಳು ಕಿರಿಯ ಹೆಂಡತಿ ಸುಮತಿ ವೀರರು ಕೀರ್ತಿವಂತರು ಆದ ಬಹುಮಂದಿ ಮಕ್ಕಳ >> ತಾಯಿಯಾಗುವುದೇ ನನ್ನ ಆಸೆ ಎಂದಳು. ಮಹರ್ಷಿಗಳು ನಗು ನಗುತ್ತಾ “ತಥಾಸ್ತು” ಎಂದು ಹೇಳಿ >> ಅಲ್ಲಿಂದ ತೆರಳಿದರು ಸಗರನು ಆನಂದದಿಂದ ರಾಜಧಾನಿಗೆ ಹಿಂದುರಿಗಿದನು.* >> >> “ *ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರು ಗರ್ಭವತಿಯರಾದರು. 9 ತಿಂಗಳಾದೊಡನೆ >> ಕೇಶನಿಗೊಂದು ಗಂಡು ಮಗು ಆಯಿತು*. *ರಾಜನಿಗೆ ಅಷ್ಟೇ ಅಲ್ಲ ರಾಜ್ಯಕ್ಕೆಲ್ಲಾ ಆನಂದವಾಯಿತು. >> ರಾಜ ಕುಮಾರನ ಜನನ ಆಯಿತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ >> ಅಸಮಂಜನೆಂದು ಹೆಸರಿಟ್ಟರು. ಅಸಮಂಜನಿಗೆ ಒಬ್ಬ ಮಗನಾದನು ಅವನ ಹೆಸರು ಅಂಶುಮಂತ* >> *ನಗರ ಮಹಾರಾಜರಿಗೆ ಮತ್ತೊಂದು ಯೋಜನೆ ಬಂತು. ತೊಂಬತ್ತೋಂಭತ್ತು ಅಶ್ವಮೇದಯಾಗ >> ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರ ಪದವಿ >> ದೊರಕುವುದು. ಅದಕ್ಕಾಗಿ 100 ನೇಯ ಅಶ್ವಮೇದಯಾನ ಮಾಡಲು ನಿಶ್ಚಿಸಿದ್ದರು ಅದರ ಪ್ರಕಾರ >> ಕುದುರೆಯನ್ನು (ಅಶ್ವ) ಪೂಜಿಸಿ ಓಡಾಡಲು ಬಿಟ್ಟರು ಅಶ್ವರಕ್ಷಣೆಗೆ ಮೊಮ್ಮಗ ಅಂಶುಮಂತ ಮತ್ತು >> 60 ಸಾವಿರ ಮಕ್ಕಳ ಮತ್ತು ಸೈನ್ಯವನ್ನು ಕಳುಹಿಸಿದನು. ಇತ್ತ ಸ್ವರ್ಗದಲ್ಲಿ ದೇವೆಂದ್ರನಿಗೆ >> (ಇಂದ್ರ) ತನ್ನ ಪದವಿ ಹೋಗುವುದೆಂದು ಭಯ ಹುಟ್ಟಿ ಕಳವಳಿಸಿ ಅದನ್ನು ತಡೆಯಲು ಇಂದ್ರನು ಒಂದು >> ಉಪಾಯ ಮಾಡಿದನು. ಯಾಗದ ಅಶ್ವ (ಕುದುರೆ)ಯನ್ನು ಪಾತಾಳಲೋಕಕ್ಕೆ ಹೋಗಿ ಕಪಿಲ ಮಹರ್ಷಿಗಳ >> ಆಶ್ರಮದಲ್ಲಿ ಕಟ್ಟಿ ಹಾಕಿದ. ನಂತರ ಅಂಶುಮಂಥ ಮತ್ತು ಸೈನಿಕರು ಗಾಬರಿಯಾಗಿ ಹುಡುಕಲು >> ಪ್ರಾರಂಭಿಸಿ ಕೊನೆಗೆ ಸಿಗದ ಕಾರಣ ರಾಜ್ಯಕ್ಕೆ ಬಂದರು. ನಂತರ ಸಗರನು ತನ್ನ ಆರವತ್ತು ಸಾವಿರ >> ಮಕ್ಕಳಿಗೆ ಆದೇಶವಿತ್ತು* *ಎಲ್ಲದರೂ ಕುದುರೆಯನ್ನು ಹುಡುಕಿ ಕುದುರೆ ಕದ್ದವನನ್ನು ಶಿಕ್ಷಿಸಿ >> ಕುದುರೆಯನ್ನು ಮರಳಿ ತನ್ನಿ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಇವರು ಎಲ್ಲ ಕಡೆಗೆ >> ಹುಡುಕಿ ನಂತರ ಒಂದು ಚೀಲ ತೆಗೆದು ಪಾತಾಳ ಲೋಕಕ್ಕೆ ಬಂದರು. ಅಲ್ಲಿ ಕಪಿಲ ಋಷಿಮುನಿಗಳು >> ತಪಸ್ಸನ್ನು ಮಾಡುತ್ತಿದ್ದರು. ಕುದುರೆಯು ಅಲ್ಲಿಯೇ ಮೇಯುತ್ತಿತ್ತು. ಅದನ್ನು ಕಂಡು ಇವನೆ >> ಕದ್ದಿದ್ದಾನೆ ಎಂದು ಅವರನ್ನು ಶಿಕ್ಷಿಸಲು ಸೈನ್ಯ ಮತ್ತು ಅರವತ್ತು ಸಾವಿರ ಮಕ್ಕಳು ಹೊರಟರು. >> ಆಗ ಋಷಿಮುನಿಗಳು ತಮ್ಮ ಉಗ್ರವಾದ ಕಣ್ಣುಗಳನ್ನು ಬಿಡಲು ಎಲ್ಲರೂ ಸುಟ್ಟು ಬೂದಿಯಾದರು.* >> >> *ಅನೇಕ ದಿನಗಳು ಕಳೆದರೂ ಮಕ್ಕಳು ಮತ್ತು ಸೈನ್ಯವು ಮರಳಿ ಬರಲಿಲ್ಲ. ಎಂಬ ಚಿಂತೆ ಸಗರ >> ಮಹಾರಾಜನಿಗೆ ಕಾಡಲು ಆಗ ಮೊಮ್ಮಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪರು ಇಲ್ಲ. >> ಕುದುರೆಯನ್ನು ಹುಡುಕಿಕೊಂಡು ಬಾ ಎಂದು ಹೇಳಿ ಕಳಿಸಿದನು. ಆಗ ಎಲ್ಲ ಕಡೆಗೆ ಹೋಗಿ >> ಹುಡುಕಾಡಿದರು ಯಾರು ಸಿಗಲಿಲ್ಲ. ಕೊನೆಗೆ ಒಂದು ಚೀಲ ಕಾಣಿಸಿತು.* *ಅದರ ಒಳಗೆ ಹೋಗಿ >> ನೋಡಿದಾಗ ಅಲ್ಲಿ ಗುಡ್ಡದಷ್ಟು ಎತ್ತರದ ಬೂದಿಯೇ ಬಿದ್ದಿತ್ತು. ಮತ್ತು ಕುದುರೆಯು >> ಮೇಯುತ್ತಿತ್ತು. ಬಹಳಷ್ಟು ವಿಚಾರ ಮಾಡುತ್ತಿರುವಾಗ ಅಶರೀರ ವಾಣಿಯೊಂದು “ಮಗೂ ಇದು ನಿನ್ನ >> ಚಿಕ್ಕಪ್ಪಂದಿರ ಬೂದಿಯ ರಾಶಿ ಅವರು ಕಪೀಲ ಋಷಿಗಳ ಕೋಪದಿಂದ ನಾಶವಾಗಿದ್ದಾರೆ” ಎಂದು >> ಹೇಳಿತು*. *ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ದುಃಖವಾಯಿತು. ಸತ್ತವರ ಆತ್ಮಗಳಿಗೆ >> ಒಳ್ಳೆಯದಾಗಲಿ ಎನ್ನುವುದಕ್ಕಾಗಿ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ >> ನೀರು ಸಿಕ್ಕಲಿಲ್ಲಮುಂದೇನು ಎಂದು ಯೋಚಿಸುತ್ತಿರುವಾಗ ಆಕಾಶದಲ್ಲಿ ಗರುಡ ಕಾಣಿಸಿ “ರಾಜಪುತ್ರ >> ಚಿಂತಿಸಬೇಡ ನಿನ್ನ ಚಿಕ್ಕಪ್ಪಂದಿರು ಮೃತರಾದರು* *ಲೋಕಹಿತಾರ್ಥವಾಗಿಯೇ, ಋಷಿ ಶಾಪದಿಂದ ಈಗತೀ >> ಬಂದಿದೆ ಸಾಮಾನ್ಯ ಜಲ ಕ್ರಿಯೆಯಿಂದ ಅವರಿಗೆ ಸದ್ಗತಿ ದೊರಕದು ದೇವಲೋಕದ ಗಂಗೆಯನ್ನು ತಂದು ಈ >> ಬೂದಿಯು ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸುವುದು” ಎಂದು ಹೇಳಿತು. ಆಗ >> ಆಂಶುಮಂತನು ಮೊದಲು ಕುದುರೆಯೊಂದಿಗೆ ಅಯೋಧ್ಯಗೆ ಹಿಂದಿರುಗಿ ತಾತನಿಗೆ ಕುದುರೆ ಒಪ್ಪಿಸಿದನು. >> *ಸಗರನಿಗೆ ಕುದುರೆ ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೆ >> ಮೃತರಾದುದ್ದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ ತನ್ನ ದುಃಖ ತಡೆಹಿಡಿದು ಅಶ್ವಯಾಗ >> ಪೂರೈಸಿದನು* *ಕೊನೆಗೆ ಹತಾಶನಾಗಿ* *ರಾಜ್ಯವನ್ನು ಮೊಮ್ಮಗ" ಅಂಶುಮಂತನಿಗೆ ಒಪ್ಪಿಸಿ “ನಿನ್ನ >> ಚಿಕ್ಕಪ್ಪಂದರಿಗೆ ನೀನೇ ಸದ್ಗತಿ ಒದಗಿಸುವ ಕೆಲಸವನ್ನು ಮಾಡು” ಎಂದು ಹೇಳಿ ತಪಸ್ಸಿಗಾಗಿ >> ಕಾಡಿಗೆ ತೆರಳಿದನು* >> *ಅಂಶುಮಂತ ದೇವಗಂಗೆ ತರುವುದು ಹೇಗೆ ಎಂದು ತಿಳಿಯಲಿಲ್ಲ. ಕೆಲ ಸಮಯದ ನಂತರ ತನ್ನ ಮಗನಾದ >> ದಿಲೀಪನಿಗೆ ರಾಜ್ಯವನ್ನು ತರುವುದು ಹೇಗೆ ಹೊಣೆಯನ್ನು ಒಪ್ಪಿಸಿದನು. ದಿಲೀಪನು ಸಹ >> ಗಂಗೆಯನ್ನು ತರುವುದು ಹೇಗೆ ಎಂದು ಯೋಚಿಸುತ್ತಿದ್ದನು. ಅವನೂ ಗಂಗೆಯನ್ನು ತರಲಾಗಲಿಲ್ಲವಲ್ಲ. >> ತಾತಂದಿರಿಗೆ ಸದ್ಗತಿ ಕಾಣಿಸಲಿಲ್ಲವಲ್ಲ ಎಂಬ ಚಿಂತೆಯಿಂದಲೇ ಸ್ವರ್ಗಸ್ಥನಾದನು. ಈ >> ವಿಷಯವನ್ನು ದಿಲೀಪನ ಮಗ ಭಗೀರಥ ತನ್ನ ತಾಯಿಯಿಂದ ಕೆಳಿ ತಿಳಿದು ತನ್ನ ಪೂರ್ವಜರಿಗೆ ಸದ್ಗತಿ >> ಕೊಡಿಸುವ ಕೆಲಸವನ್ನು ತಾನು ಸಾಧಿಸಬೇಕೆಂದು ಛಲತೊಟ್ಟು ತನ್ನ ತಾಯಿಗೆ ನಮಸ್ಕರಿಸಿ >> ತಪಸ್ಸಿಗೆಂದು ಹಿಮಾಲಯ ಪರ್ವತಕ್ಕೆ ಬಂದು ಪದ್ಮಾಸನದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. >> ಅವರು ಬಿಡುವ ಪ್ರತಿ ಉಸಿರು ಗಂಗೆ ಧರೆಗೆ ಬರಲಿ ಎನ್ನುತ್ತಿತ್ತು. ನಂತರ ಚಳಿಗಾಲದಲ್ಲಿ ಎದೆ >> ಎತ್ತರದ ನೀರಿನಲ್ಲಿ ಏಕಾಗ್ರತೆಯಿಂದ ತಪಸ್ಸು ಮಾಡಲಾರಂಭಿಸಿದರು. ಬೇಸಿಗೆ ಕಾಲದಲ್ಲಿ >> ಪಂಚಾಗ್ನಿ ಪ್ರಾರಂಭಿಸಿದರು. ಪಂಚಾಗ್ನಿ ತಪಸ್ಸೆಂದರೆ(ಸುತ್ತಲೂ ಧಗಧಗಿಸುವ ಬೆಂಕಿ ಮೇಲೆ >> ಉರಿಯುವ ಸೂರ್ಯ ಬೆಂಕಿಯ ಮಧ್ಯನಿಂತು ಕಣ್ಣು ಬಿಟ್ಟು ಸೂರ್ಯನನ್ನು ನೋಡುವುದು). ಇದಕ್ಕೆ >> ತಪೋಜ್ವಾಲೆ ಎನ್ನುತ್ತಾರೆ. ಇದು ಅತೀ ಉಗ್ರವಾಯಿತು. ಇದನ್ನು ನೋಡುವವರ ಕಣ್ಣಿಗೆ ಸೂರ್ಯನಂತೆ >> ತೇಜಸ್ವಿಯಾಗಿ ಕಾಣುತ್ತಿದ್ದರೂ ಭಗೀರಥನ ತಪೋಜ್ವಾಲೆಯನ್ನು ತಡೆಯಲಾರದೆ ದೇವತೆಗಳು >> ಬ್ರಹ್ಮದೇವನಲ್ಲಿಗೆ ಬಂದು “ದೇವಾ ಭಗೀರಥನ ತಪಸ್ವಿನ ಜ್ವಾಲೆ ಸಹಿಸಲು ಸಾಧ್ಯವಾಗುತ್ತಿಲ್ಲ. >> ಅದರಿಂದ ನಮ್ಮನ್ನು ರಕ್ಷಿಸಿಬೇಕು.” ಎಂದು ಕೇಳಿಕೊಂಡರು ಬ್ರಹ್ಮನು ಎಲ್ಲರಿಗೂ ಸಮಾಧಾನ ಮಾಡಿ >> ಕಳುಹಿಸಿದನು.* >> >> *ಭಗೀರಥನು ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ “ ನಿನಗೇನು ಬೇಕು” ಎಂದು >> ಕೇಳಿದನು. ಆಗ ಭಗೀರಥ ತನ್ನ ಪೂರ್ವರಿಗೆ ಸದ್ಗತಿ ದೊರೆಯಬೇಕೆಂದರೆ “ಅವರೆಲ್ಲರನ್ನು >> ಉದ್ದರಿಸಲು ದೇವಗಂಗೆಯನ್ನು ಕಳುಸಿಕೊಡಬೇಕು” ಎಂದು ಬೇಡಿಕೊಂಡನು. ಆಗ ಬ್ರಹ್ಮ “ ನಾನಂತು >> ಗಂಗೆಯನ್ನು ಕಳಿಸಿಕೊಡುತ್ತೇನೆ ಆದರೆ ಸ್ವರ್ಗದಿಂದ ಅವಳು ಭೂಮಿಗೆ ಇಳಿಯುವಾಗ ಅವಳ ಪ್ರವಾಹದ >> ರಬಸಕ್ಕೆ ಭೂಮಂಡಲವೇ ನಾಶವಾಗುತ್ತದೆ. ಅವಳ ರಭಸವನ್ನು ತಡೆಯಲು ಈಶ್ವರನಿಗೆ ಮಾತ್ರ ಸಾಧ್ಯ” >> ಎಂದಾಗ ಈಶ್ವರನನ್ನು ಕುರಿತು ಭಗೀರಥನು ಉಗ್ರ ತಪಸ್ಸು ಪ್ರಾರಂಭಿಸಿದನು. ಎರಡು ಕೈಗಳನ್ನು >> ಮೇಲಕ್ಕೆತ್ತಿ ಒಂದೇ ಕಾಲಿನಲ್ಲಿ ನಿಂತು ಏಕಾಗ್ರ ಚಿತ್ತನಾಗಿ ಸಾವಿರ ವರ್ಷ ತಪಸ್ಸನು >> ಮಾಡಿದನು. ಆಗ ಈಶ್ವರನು ಪ್ರತ್ಯಕ್ಷನಾಗಿ “ಭಕ್ತನೇ ನಿನಗೇನಾಗಬೇಕಾಗಿದೆ ಏಕೆ ನನ್ನನ್ನು >> ಧ್ಯಾನಿಸಿದೆ”. ಎಂದಾಗ ಭಗೀರಥನು, “ಬ್ರಹ್ಮನು ದೇವಗಂಗೆಯನ್ನು ಕಳುಹಿಸಲು ಒಪ್ಪದ್ದಾನೆ. >> ಆದರೆ ಗಂಗೆಯ ರಭಸವನ್ನು ನೀನು ಭರಿಸಬೇಕು” ಎಂದು ಬೇಡಿಕೊಂಡನು. ಆಗ ಈಶ್ವರನು “ ಆಗಲಿ ಗಂಗೆಯ >> ಪ್ರವಾಹವನ್ನು ನಾನು ತಲೆಯಲ್ಲಿ ಭರಿಸುವೆ” ಎಂದು ಹೇಳಿ ಮಹಾಶಿಖರವೂಂದು ಏರಿ ನಿಂತನು. ನಂತರ >> ಬ್ರಹ್ಮ ದೇವನ ಆಜ್ಞೆಯಂತೆ ಗಂಗೆಯು ಈಶ್ವರ (ಶಿವ) ನ ಜೊತೆಯಲ್ಲಿ ಧುಮಕಿದಳು. ಆರ್ಭಟದಿಂದ >> ಬೀಳುತ್ತಿದ್ದ ಗಂಗೆಯನ್ನು ಬಿರುಗೂದಲು ನಡುವೆ ಜಾರಿ ಹೋಗದಂತೆ ಬಲವಾಗಿ ಈಶ್ವರನು >> ಕಟ್ಟಿಹಾಕಿದನು. ನಂತರ ವಿನಯವಾಗಿ ಈಶ್ವರನ್ನು ಬೇಡಿಕೊಳ್ಳಲು “ ಇದೂ ಗಂಗೆಯನ್ನು ನನ್ನ >> ಜಟೆಯಿಂದ ಬಿಡುಗಡೆ ಮಾಡುತ್ತೇನೆ. ಆದರೆ ಪ್ರವಾಹದಲ್ಲಿ ಬಿಡಲಾರೆ ಅದರಿಂದ ನಿನಗೆ ತೊಂದರೆ >> ಅದಕ್ಕಾಗಿ 7 ಭಾಗಗಳಲ್ಲಿ ಬಿಡುಗಡೆ ಮಾಡುವೆ 3 ಭಾಗ ಪಶ್ಚಿಮಕ್ಕೆ 3 ಭಾಗ ಪೂರ್ವಕ್ಕೆ ಹೋಗಲಿ >> ಒಂದು ಭಾಗ ಮಾತ್ರ ನಿನ್ನ ಹಿಂದೆ ಬರಲಿ” ಎಂದು ಹೇಳಿ ಬಿಡುಗಡೆ ಮಾಡಿದನು ಭಗೀರಥನು >> ಪರಮೇಶ್ವರನಿಗೆ ನಮಸ್ಕರಿಸಿ ಗಂಗೆಯನ್ನು ಶ್ರೀ.ಭಗೀರಥನು ಹಿಮಾಲಯದಿಂದ ಕೆಳಗಿಳಿದು ವಿಶಾಲವಾದ >> ಬಯಲು ಪ್ರದೇಶಕ್ಕೆ ಬಂದನು ಅವನ ಹಿಂದೆ ಗಂಗೆಯು ನವವಧುವಿನಂತೆ ನಾಚುತ್ತಾ ನಲಿಯುತ್ತಾ >> ನಿಧಾನವಾಗಿ ಸಾಗಿದಳು. ದಾರಿಯಲ್ಲಿ ಜಹ್ನು ಋಷಿಗಳ ಆಶ್ರಯ ಸಿಕ್ಕಿತು. ಅದು ಬಹಳ >> ಸುಂದರವಾಗಿತ್ತು. ಶ್ರೀ ಭಗೀರಥನಿಗೆ ಈ ಮಹರ್ಷಿಗಳ ಪರಿಚಯ ಅವರಿಗಿತ್ತು ಅದಕ್ಕೆ ಅವರಿಗೆ >> ನಮಸ್ಕರಿಸಿ ಹೋಗೊಣವೆಂದು ಒಳಗೆ ಹೋದರು. ಅವರ ಹಿಂದೆಯೇ ದೇವಗಂಗೆಯೂ ಕೊಡಾ ಚೇಷ್ಠ >> ಮಾಡೋಣವೆಂದು ಆಶ್ರಮದ ತುಂಬೆಲ್ಲ *ಓಡಾಡಿದಳು. ಆಶ್ರಮದ ತುಂಬಾ ನೀರೆ ನೀರು, ಅದನ್ನು ಅರಿತ >> ಮಹರ್ಷಿಗಳು ಅವಳಿಗೆ ಬುದ್ಧಿ ಕಲಿಸಬೇಕೆಂದುಕೊಂಡು ತಮ್ಮ ಕೈಯೊಳಗೆ ಆಕರ್ಷಿಸಿ* *ಒಂದೇ >> ಬಾರಿಗೆ ಅಪೋಶನದಂತೆ ಕುಡಿದು ಬಿಟ್ಟರು* >> >> *ಶ್ರೀ ಭಗೀರಥನು ಗಂಗೆಯನ್ನು ನೋಡುತ್ತಾನೆ.ಅವಳು ಎಲ್ಲಿಯೂ ಕಾಣುತ್ತಿಲ್ಲ.ಆಗ >> ಋಷಿಮುನಿಗಳನ್ನು ಕೇಳುತ್ತಾನೆ* >> >> *ಆಗ ಗಂಗೆಯು ಚೇಷ್ಠಗೆ ತಕ್ಕ ಶಿಕ್ಷೆ* *ವಿಧಿಸಬೇಕೆಂದು ನಾನೇ ಅವಳನ್ನು ಅಪೋಶನವಾಗಿ >> ಸ್ವೀಕರಿಸಿದ್ದೆನೆ* *ಎಂದು ನನ್ನ ಜೊತೆಗೆ ಕಳುಹಿಸಿಕೊಡಬೇಕೆಂದು ಕಳಕಳಿಯಿಂದ ಬೇಡಿಕೊಂಡಾಗ >> ಋಷಿಗಳು ಗಂಗೆಯನ್ನು ತಮ್ಮ ಕಿವಿಯಿಂದ ಹೊರಬಿಟ್ಟರು*. >> *ಶ್ರೀ ಭಗೀರಥನು ಪಾತಾಳವನ್ನು ಸೇರಿ ಅಲ್ಲಿದ್ದ ಬೂದಿಯ ರಾಶಿಯ ಬಳಿ ನಿಂತು “ತಾಯೇ ನನ್ನ >> ಪೂರ್ವಿಕರ ಬೂದಿಯ ರಾಶಿ ಇಲ್ಲದೆ ದಯಮಾಡಿ ಇದರ ಮೇಲೆ ಪ್ರವಹಿಸಿ ಇವರ ಆತ್ಮಗಳಿಗೆ >> ಮೋಕ್ಷಕೊಡು” ಎಂದು ಬೇಡಿಕೊಂಡಾಗ ಗಂಗೆಯು ನೇರವಾಗಿ ಬೂದಿಯರಾಶಿಯ ಮೇಲೆ ನುಗ್ಗದಳು ಆಗ ಸಗರನ >> ಆರವತ್ತು ಸಹಸ್ರ ಆತ್ಮಗಳು ಶುದ್ಧರಾಗಿ ಪಾಪಮುಕ್ತರಾಗಿ ಸ್ವರ್ಗ ಸೇರಿದರು.* >> >> *ಗಂಗೆಯು ಶ್ರೀ ಭಗೀರಥನ ಹಿಂದೆ ಮಗಳಂತೆ ಬಂದುದರಿಂದ ಅವಳನ್ನು ಭಾಗಿರಥೀ ಎಂದರು. ಸ್ವರ್ಗ >> ಭೂಮಿ ಪಾತಾಳ ಹೀಗೆ ಮೂರು ಲೋಕಗಳೆಲ್ಲ ಹರಿದುದರಿಂದ ತ್ರಿಪಥಕೆ ಎಂದರು. ಜಾಹ್ನು ಋಷಿಯು >> ಕಿವಿಯಿಂದ ಹೊರಬಂದು ಅವರ ಮಗಳಾದುದರಿಂದ ಜಾಹ್ನವಿ ಎಂದು ನಾನಾ ಹೆಸರುಗಳಿಂದ ಕರೆಯಲ್ಪಟ್ಟಳು >> ನಂತರ ಗಂಗೆಗೆ ಭಗೀರಥನು ನಮಸ್ಕರಿಸಿ ತನ್ನ ರಾಜಧಾನಿಗೆ ಹಿಂತಿರುಗಿ ತಾಯಿಗೆ ತಪಸ್ಸು ಮಾಡಿ >> ತನ್ನ ಪೂರ್ವಜರಿಗೆ ಮೊಕ್ಷ ನೀಡಿತನ್ನ ಕುಟುಂಬಕ್ಕೆ ಮತ್ತು ದೇಶಕ್ಕೆ ಕೀರ್ತಿ ತಂದನು . >> ಅದಕ್ಕಾಗಿ ಪ್ರಯತ್ನಕ್ಕೆ ಇನ್ನೊಂದು ಹೆಸರೇ ಭಗೀರಥ ಪ್ರಯತ್ನ ಎಂಬುದು ಪ್ರಚಲಿತವಾಯಿತು.* >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
