ಒಳ್ಳೆಯ ಮಾಹಿತಿ, ಧನ್ಯವಾದಗಳು

On 14-Jun-2017 10:47 pm, "Sameera samee" <mehak.sa...@gmail.com> wrote:

> ವೆಂಕಟೇಶ ಅಯ್ಯಂಗಾರ್
>
> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನಿಸಿದ್ದು ೧೮೯೧ರ ಜೂನ್ ೬ ರಂದು. ಹುಟ್ಟೂರು ಕೋಲಾರ
> ಜಿಲ್ಲೆಯ ಮಾಲೂರು ತಾಲೂಕಿನ ಹೊಂಗೇನಹಳ್ಳಿ. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ
> ತಿರುಮಲಮ್ಮ. ಸಂಪ್ರದಾಯಸ್ಥ ಬಡ ಬ್ರಾಹ್ಮಣಕುಟುಂಬದಲ್ಲಿ ಜನಿಸಿದ ಮಾಸ್ತಿ,ಹೊಂಗೇನಳ್ಳಿ
> ಶಿವಾರಪಟ್ಟಣದ ಪುಟ್ಟ ಶಾಲೆಯಿಂದ ಸಿವಿಲ್ ಸರ್ವೀಸ್ ಪರೀಕ್ಷೆಯ ಪಾಸು ಮಾಡುವ ಎತ್ತರಕ್ಕೆ
> ಬಳೆದರು.
>
> ಸಣ್ಣ ಕತೆಗಳ ಜನಕ ಎಂದೇ ಖ್ಯಾತರಾದ ಮಾಸ್ತಿ, ಕನ್ನಡ ಸಾಹಿತ್ಯದಲ್ಲಿ ಕಥಾ ಪ್ರಕಾರಕ್ಕೆ ಹೊಸ
> ಆಯಾಮ ನೀಡಿದ ಮಾನವ ಅಂತಸ್ಥ ಜಗತ್ತಿನ ಶೋಧಕ, ಇಂದು ಮಾಸ್ತಿ ಬದುಕಿದ್ದಿದ್ದರೆ ಅವರಿಗೆ ೧೧೧
> ವರ್ಷ ತುಂಬುತ್ತಿತ್ತು. ಇಂದು ಮಾಸ್ತಿ ನಮ್ಮ ಮುಂದಿಲ್ಲ ಆದರೆ, ಅವರ ಬದುಕು- ಬರಹ
> ಚಿರಸ್ಥಾಯಿಯಾಗಿದೆ.
>
> ಮಾಸ್ತಿ ಅವರು ಕೇವಲ ಕವಿಯಲ್ಲ, ಸಂಸ್ಕೃತಿಯ ಪ್ರತಿಪಾದಕರೂ ಹೌದು. ಶಿಸ್ತುಬದ್ಧ ಜೀವನ
> ಎಂದರೇನು ಎಂಬುದನ್ನು ಮಾಸ್ತಿ ಅವರನ್ನು ನೋಡಿ ಕಲಿಯಬೇಕು ಎಂದು ಅವರನ್ನು ಹತ್ತಿರದಿಂದ
> ಬಲ್ಲವರು ಹೇಳುತ್ತಿದ್ದರು. ನಿತ್ಯ ಮನೆಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ವಿಷ್ಣು
> ಸಹಸ್ರನಾಮ ಹೇಳದೆ, ಮನೆ ಮಂದಿಯಿಂದ ಹೇಳಿಸದೇ ಅವರು ಹೊರ ಹೋಗುತ್ತಿರಲಿಲ್ಲ. ಹಾಗೆಂದ
> ಮಾತ್ರಕ್ಕೆ ಅವರು ಧರ್ಮಾಚರಣೆಯ ಮೂಲಕ ಸಂಸ್ಕೃತಿಯ ಪ್ರತಿಪಾದಕರಾಗಿ ನಿಲ್ಲಲಿಲ್ಲ.
> ಬದುಕಿನಲ್ಲಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಪರಿಪಕ್ವವಾಗುವುದು ಹೇಗೆ ಎಂಬುದನ್ನು
> ಮಾಸ್ತಿ ಅವರು ತಮ್ಮ ಕೃತಿಗಳ ಮೂಲಕ ಸಾರಿದರವರು. ತಮ್ಮ ಕಥೆ ಹಾಗು ಕಾದಂಬರಿಗಳ ಮೂಲಕ ತಮ್ಮ
> ಅನ್ವೇಷಣೆಗಳನ್ನು ಓದುಗರಿಗೆ ತಿಳಿಯ ಹೇಳಿದವರು.
>
> ಮಾಸ್ತಿ ಅವರು ಮಾನವನ ಅಂತರಂಗದ ಅತೀತ ಮೂಲಗಳಲ್ಲಿ ಸಂಚರಿಸಿದ್ದರಿಂದಲೇ ಅವರ ಸಾಹಿತ್ಯ ಕಾಲದ
> ಪರಿಕಲ್ಪನೆಯಿಂದ ವೈಶಿಷ್ಟ್ಯಪೂರ್ಣವಾಗಿವೆ. ಮಾಸ್ತಿಯವರ ಸಾಹಿತ್ಯದಲ್ಲಿ ಅತ್ಯಂತ ರಹಸ್ಯವಾದ
> ಮುಷ್ಟಿಗ್ರಾಹ್ಯವಲ್ಲದ ನೆಲೆಯೆಂದರೆ ಮಾನವನೇ. ಮಾನವನ ಧಾರಣಾಶಕ್ತಿ, ಅತೀಂದ್ರಿಯಾತ್ಮಕ
> ವಿಷಯಗಳನ್ನು ಅನಾಯಾಸವಾಗಿ ಬಣ್ಣಿಸಿರುವ ಮಾಸ್ತಿ ಅವರು, ಮನುಷ್ಯನಲ್ಲಿ ಅಂತಸ್ಥವಾಗಿರುವ
> ಶಕ್ತಿಯನ್ನು ಶೋಧಿಸಿದವರು.
>
> ಅವರ ವೆಂಕಟರಾಯನ ಪಿಶಾಚ, ವೆಂಕಶಾಮಿಯ ಪ್ರಣಯ, ಸುಬ್ಬಣ್ಣ, ಮಾತುಗಾರ ರಾಮಣ್ಣ, ಗೌತಮಿ
> ಹೇಳಿದ ಕತೆ, ಕಾಮನಹಬ್ಬದ ಕತೆಗಳೆಲ್ಲ ಈ ಪರಿಕಲ್ಪನೆಯನ್ನು ಅತ್ಯಂತ ನಾಜೂಕಿನಿಂದ
> ಬಣ್ಣಿಸುತ್ತವೆ.
>
> ಕನ್ನಡ ಸಾರಸ್ವತ ಮಕುಟಕ್ಕೆ ಜ್ಞಾನಪೀಠದ ಮತ್ತೊಂದು ಗರಿತೊಡಿಸಿದ ಮಾಸ್ತಿ ಅವರನ್ನು ಇಂದಿನ
> ಪೀಳಿಗೆಯವರು ಪ್ರಾಸಮಯವಾಗಿ "ಮಾಸ್ತಿ ಕನ್ನಡದ ಆಸ್ತಿ" ಎಂದು ಸುಮ್ಮನಾಗುವುದುಂಟು. ಆದರೆ,
> ಮಾಸ್ತಿ ಕನ್ನಡದ ಆಸ್ತಿ ಎನಿಸಿಕೊಂಡಿದ್ದು, ಕೇವಲ ಅವರ ಸಾಹಿತ್ಯ ಕೃಷಿಯಿಂದಲ್ಲ. ಕನ್ನಡ
> ಮನಸ್ಸುಗಳನ್ನು ಪೋಷಿಸಿ, ಬದುಕಿನ ಮಹತ್ವವನ್ನೂ ಕನ್ನಡದ ಅಸ್ತಿತ್ವದ ಹಿರಿಮೆಯನ್ನೂ
> ಸಾರಿದ್ದರಿಂದ.
>
> ವೆಂಕಟೇಶ ಅಯ್ಯಂಗಾರ್ ‘ಶ್ರೀನಿವಾಸ’ ಎಂಬ ಕಾವ್ಯನಾಮದಿಂದ ಬರೆಯುತ್ತರಿದ್ದರಾದರೂ ಅವರಿಗೆ
> ಮಾಸ್ತಿ ಎಂಬ ಹೆಸರೇ ಸ್ಥಿರವಾಯ್ತು. ಅಪ್ರತಿಮ ವಾಗ್ಮಿಗಳೂ ಆಗಿದ್ದ ಮಾಸ್ತಿ ಮಾತಿನಲ್ಲಿ ಬಲು
> ಚತುರರು.
>
> ವಾಕ್ಚತುರ : ಒಮ್ಮೆ ಯುವಕವಿಗೋಷ್ಠಿಯಲ್ಲಿ ಮಾಸ್ತಿ ಭಾಗವಹಿಸಿದ್ದರು. ಬಿಸಿರಕ್ತದ ತರುಣ
> ಕವಿಯೊಬ್ಬ ತನ್ನ ವೀರಾವೇಶದ ಭಾಷಣದಲ್ಲಿ ಈ ಮುದಿಕವಿಗಳು ಸಾಯುವ ತನಕ ಯುವಕವಿಗಳ ಬದುಕು
> ಹಸನಾಗದು ಎಂದನಂತೆ.
>
> ಈ ಮಾತಿನಿಂದ ಮಾಸ್ತಿ ಸಿಟ್ಟಿಗೆದ್ದರೂ, ಅದನ್ನು ತೋರ್‍ಪಡಿಸದೇ ತಮ್ಮ ಮಾತಿನಿಂದಲೇ ಛಡಿ
> ಏಟು ಕೊಟ್ಟರಂತೆ. ಆಗ ಅವರು ಹೇಳಿದ್ದು ಇಷ್ಟು: ಜಾಣ ಜಾಣ ಕಚ್ಚಾಡಿದ್ರೆ ಲೋಕಕ್ಕೆ ಒಳಿತಂತೆ
> (ಆಗ ವಿಚಾರ ವಿನಿಮಯವಾಗತ್ತೆ), ಕೋಣ ಕೋಣ ಕಚ್ಚಾಡಿದ್ರೆ ಲೋಕಕ್ಕೆ ಮೋಜಂತೆ (ಖರ್ಚಿಲ್ಲದೆ
> ಹೋಡೆದಾಟ ನೋಡಬಹುದು) ಆದರೆ, ಜಾಣ - ಕೋಣ ಕಚ್ಚಾಡಿದ್ರೆ ಜನ ಜಾಣಂಗೆ ಉಗೀತಾರೆ, ಅವನ ಹತ್ರ
> ಜಗಳ ಕಾಯ್ತೀಯಲ್ಲ ನಿನಗೆ ಬುದ್ಧಿ ಇಲ್ವ ಅಂತ.. ಹೀಗಾಗೇ ನಾನು ಆ ಬಿಸಿರಕ್ತದ ತರುಣನೊಂದಿಗೆ
> ಜಗಳ ಮಾಡಲ್ಲ ಅಂತ.ಕಾರ್ಯಕ್ರಮದ ಕೊನೆಯಲ್ಲಿ ಆ ಯುವಕ ತನ್ನ ತಪ್ಪನ್ನು ಮನ್ನಿಸುವಂತೆ ಮಾಸ್ತಿ
> ಅವರ ಕಾಲಿಗೆ ಬಿದ್ದನಂತೆ.
>
> ಮತ್ತೊಂದು ಸಂದರ್ಭ: ಮಾಸ್ತಿಯವರಿಗಿಂತ ಕಿರಿಯರಿಗೆಲ್ಲಾ ಜ್ಞಾನಪೀಠ ಬಂದ ಬಳಿಕ ಮಾಸ್ತಿ
> ಅವರಿಗೆ ಆ ಗೌರವ ದೊರಕಿತು. ಪತ್ರಕರ್ತರೊಬ್ಬರು ಮಾಸ್ತಿ ಅವರನ್ನು ಕೇಳಿದರಂತೆ ‘ನಿಮಗಿಂತ
> ಕಿರಿಯರಿಗೆಲ್ಲಾ ಪ್ರಶಸ್ತಿ ಬಂದ ಬಳಿಕ ನಿಮಗೆ ಜ್ಞಾನಪೀಠ ದೊರೆತಿದೆ ಇದರಿಂದ ನಿಮಗೆ ಬೇಸರ
> ಆಗಿಲ್ಲವೇ’? ಮಾಸ್ತಿ ಅಷ್ಟೇ ನಾಜೂಕಾಗಿ ಉತ್ತರಿಸಿದರಂತೆ.
>
> ಮನೆಯಲ್ಲಿ ಏನಾದರೂ ಸಿಹಿತಿಂಡಿ ಮಾಡಿದ್ರೆ ಮೊದಲು ಕೊಡೋದೇ ಚಿಕ್ಕೋರಿಗೆ, ಅವರೆಲ್ಲಾ ಸಂತೋಷ
> ಪಟ್ಟಮೇಲೆ ಉಳಿದ್ರೆ ಹಿರಿಯರು ತಿಂತಾರೆ... ಇಲ್ಲೂ ಅಷ್ಟೇ ಎಂದು ಸುಮ್ಮನಾದರಂತೆ.
>
> ಒಮ್ಮೆ ಗಾಂಧಿ ಬಜಾರ್‌ನಲ್ಲಿ ಮಾಸ್ತಿ ಸಂಜೆ ಕೊಡೆ ಹಿಡಿದು ವಾಕಿಂಗ್ ಹೊರಟಿದ್ರು.. ಕೆಲವು
> ಹುಡುಗರು .. ಮಳೆಯೂ ಇಲ್ಲ ಬಿಸಿಲು ಮೊದ್ಲೇ ಇಲ್ಲ. ಅಲ್ಪನಿಗೆ ಐಶ್ವರ್‍ಯ ಬಂದ್ರೆ
> ಅರ್ಧರಾತ್ರೀಲಿ ಕೊಡೆ ಹಿಡಿದ ಅನ್ನೋಹಾಗೆ ಮಾಸ್ತಿ ಕೊಡೆ ಹಿಡಿದು ನಡೀತಿದ್ದಾರೆ ಎಂದು
> ಛೇಡಿಸಿದರಂತೆ. ಇದನ್ನು ಕೇಳಿಸಿಕೊಂಡ ಮಾಸ್ತಿ ಎಳ್ಳಷ್ಟೂ ಕೋಪಗೊಳ್ಳದೆ. ಆ ಹುಡುಗರನ್ನು
> ಕರೆದು ತಮ್ಮೊಂದಿಗೆ ವಾಕಿಂಗ್‌ಗೆ ಕರೆದುಕೊಂಡು ಹೋದರಂತೆ.
>
> ಇಕ್ಕೆಲೆಗಳಲ್ಲೂ ದೊಡ್ಡ ದೊಡ್ಡ ಮರಗಳಿದ್ದ ಗಾಂಧಿ ಬಜಾರ್‌ನಲ್ಲಿ ಆ ಹುಡಗರ ಮೇಲೆ ಹಕ್ಕಿ
> ಪಕ್ಷಿಗಳ ಹಿಕ್ಕೆ ಬಿತ್ತಂತೆ. ಆಗ ಮಾಸ್ತಿ ಹೇಳಿದ್ರು... ಈಗ ಗೊತ್ತಾಯ್ತಾ ಈ ಅಲ್ಪ ಯಾಕೆ
> ಕೊಡೆ ಹಿಡಿದು ನಡೀತಿದ್ದ ಅಂತ...
>
> ಮಾಸ್ತಿ ಅವರ ಬದುಕಲ್ಲಿ ಇಂತ ಘಟನೆಗಳು ಹಲವು. ಇಂಗ್ಲಿಷ್ ಉಪನ್ಯಾಸಕರಾಗಿ, ಅಸಿಸ್ಟೆಂಟ್
> ಕಮಿಷನರ್ ಆಗಿ ಸೇವೆ ಸಲ್ಲಿಸಿ ‘ರಾಜಸೇವಾ ಪ್ರಸಕ್ತ ’ಎಂಬ ಬಿರುದನ್ನೂ ಪಡೆದ ಮಾಸ್ತಿ
> ಜನಸಾಮಾನ್ಯರಿಗೂ ಸರಕಾರದ ಕಾನೂನು-ಕಟ್ಟಳೆಗಳ ಬಗ್ಗೆ ಅರಿವಿರಬೇಕು. ಆ ಎಲ್ಲ ನಿಯಮಗಳೂ
> ಕನ್ನಡದಲ್ಲಿರಬೇಕು ಎಂದು ಪ್ರತಿಪಾದಿಸಿದವರು. ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಮಾಸ್ತಿ
> ಅಂದೇ ಶ್ರಮಿಸಿ ಕನ್ನಡದ ಆಸ್ತಿಯಾದವರು.
>
> ಹಲವು ಕಥೆ, ನಾಟಕ, ಆತ್ಮಕಥನ, ಭಾಷಾಂತರ, ಖಂಡಕಾವ್ಯ, ಕವನ ಸಂಕಲನಗಳನ್ನು ಸಾಹಿತ್ಯ
> ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವ ಮಾಸ್ತಿ ಅವರಿಗೆ ಜ್ಞಾನಪೀಠದ ಗರಿದೊರೆತದ್ದು
> ೧೯೮೩ರಲ್ಲಿ (ಚಿಕವೀರರಾಜೇಂದ್ರ). ಮಾಸ್ತಿ ಅವರದು ವಿಮರ್ಶೆಯಲ್ಲೂ ಪಳಗಿದ ಕೈ. ಅವರ
> ವಿಮರ್ಶೆಗಳು ಸುಂದರಶೈಲಿ, ಗಾಂಭೀರ್‍ಯಪೂರ್ಣ ನವಚೈತನ್ಯದಿಂದ ವಿಶಿಷ್ಟವಾಗಿವೆ.
> ‘ಭಾರತತೀರ್ಥ’, ‘ಆದಿಕವಿ ವಾಲ್ಮೀಕಿ’ಗಳಲ್ಲಿ ಅವರ ವಿದ್ವತ್ತು ಮತ್ತು ವಿಚಾರಲಹರಿಯ
> ಪರಿಚಯವಾಗುತ್ತದೆ.
>
> ಮಾಸ್ತಿಯವರ ಕೆಲವು ಕೃತಿಗಳು: ನಾಟಕ : ಯಶೋಧರ, ಕಾಳಿದಾಸ, ಕಾಕನಕೋಟೆ, ಶಿವಾಜಿ,
> ತಿರುಪಾಣಿ, ತಾಳಿಕೋಟೆ, ಪುರಂದರದಾಸ, ಭಟ್ಟರ ಮಗಳು. (ಇದಲ್ಲದೆ ಶೇಕ್ಸ್‌ಪಿಯರ್, ಠಾಕೂರರ
> ಹಲವು ನಾಟಕಗಳನ್ನೂ ಮಾಸ್ತಿ ಕನ್ನಡಕ್ಕೆ ತಂದಿದ್ದಾರೆ)
>
> ಕಾದಂಬರಿಗಳು: ಚೆನ್ನಬಸವನಾಯಕ, ಚಿಕ್ಕವೀರರಾಜೇಂದ್ರ, ಸುಬ್ಬಣ್ಣ ಖಂಡಕಾವ್ಯ:
> ಶ್ರೀರಾಮಪಟ್ಟಾಭಿಷೇಕ ಆತ್ಮಚರಿತ್ರೆ: ಭಾವ ಜೀನವಚರಿತ್ರೆ: ರಾಮಕೃಷ್ಣ ಪರಮಹಂಸ, ಠಾಕೂರರ
> ಜೀವನ ಚರಿತ್ರೆ.
>
> ಮಾಹಿತಿ ಕೃಪೆ: ವಿಕಿಪೀಡಿಯಾ
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to