ಗೋಪಿತ ಇಲ್ವ On 29 Jun 2017 1:15 p.m., "Aparna Appu" <appuswee...@gmail.com> wrote:
> ಕಲಗಚ್ಚೆಂದು ಅಂದು ನೀ ಕಸಮುಸುರೆಯನ್ನೆಲ್ಲಾ > ತಂದು ನನ್ನ ಮುಂದೆ ಸುರಿದೆ. > ಅದ ಕಣ್ಣುಮುಚ್ಚಿಯೇ ನಾ ಕುಡಿದೆ. > ಹುಲ್ಲನು ಹಾಕಲೂ ನೀನಂದು ಕಂಜೂಸು ಮಾಡಿದೆ, > ಇರಲಿ,ಇಷ್ಟಾದರೂ ಸಿಕ್ಕಿತ್ತಲ್ಲವೆಂದು > ನಾ ಅದರಲ್ಲಿಯೇ ತೃಪ್ತಿಪಟ್ಟೆ. > ಬೇಲಿಯೊಳಗೆ ಹುಲುಸಾಗಿ ಬೆಳೆದಿದ್ದ ಹಸಿರು ಹುಲ್ಲನು > ಆಸೆಯಲಿ ನಾನಂದು ಒಮ್ಮೆ ಇಣುಕಿ ನೋಡಿದೆ, > ಅದ ಕಂಡು ಕೋಪದಿ ನೀ ನನಗೆ ಬಾಸುಂಡೆ ಬರುವಂತೆ ಹೊಡೆದೆ. > ಎನ್ನ ಕರುವು ಅಂದು ಹಾಲಕುಡಿಯುವಾಗ > ನಿನಗೆಲ್ಲಿ ಅದು ಉಳಿಸದೆ ಪೂರ್ತಿ ಬರಿದು ಮಾಡಿಬಿಡುವುದೋ > ಎಂಬ ಸಿಟ್ಟಿನಲಿ ನೀನದ ದರದರನೆ > ಎಳೆದುಕೊಂಡು ಹೋಗಿ ಬಹುದೂರದಲಿ ಕಟ್ಟಿದೆ, > ನೀನೂ ನನ್ನ ಮಗುವೇ,ನಿನಗೂ ಹಾಲಿನಲಿ > ಪಾಲನೀಡುವುದು ಎನ್ನ ಕರ್ತವ್ಯವೆಂದೇ ನಾನಂದು ಬಗೆದೆ. > ಎನ್ನ ಹಾಲಿನಲಿ ಅದೇನೋ ಬೆಣ್ಣೆ,ಮೊಸರು,ತುಪ್ಪ > ಮುಂತಾದವುಗಳನೆಲ್ಲಾ ತಯಾರಿಸಿ,ಅವುಗಳ ಮಾರಿ > ನಿನ್ನ ಸಾಲವನೆಲ್ಲಾ ತೀರಿಸಿಕೊಂಡೆಯೆಂದು > ಅಂದು ನೀ ಅದ್ಯಾರ ಬಳಿಯೋ ಹೇಳುತ್ತಿದ್ದೆ, > ಅದ ಕೇಳಿಸಿಕೊಂಡ ನಾನು,ಎನಗೆ ಸೂರು ಕೊಟ್ಟ ನಿನ್ನ > ಮನೆಯೊಳಗೆ ಸದಾ ಸಮೃದ್ಧಿ ನೆಲಸಿರಲೆಂದು ಮನದಲ್ಲಿಯೇ ಹರಸಿದೆ. > ನಿನ್ನ ತೋಟದಲಿ ಈ ಬಾರಿ ಬಂದ > ನಿಬ್ಬೆರಗಾಗಿಸುವ ಫಸಲನ್ನು ಕಂಡು ಹರುಷದಿ > ಎಲ್ಲಾ ನಿನ್ನ ಗೊಬ್ಬರದ ಮಹಿಮೆಯೆಂದು ನೀನಂದು > ನನ್ನ ಹೊಗಳಿದ್ದು ನನಗಿನ್ನೂ ನೆನಪಿದೆ. > ಕೆಲ ಹಬ್ಬ ಹರಿದಿನಗಳಲ್ಲಿ ನೀ ನನಗೆ ತೋರುತ್ತಿದ್ದ > ಭಕ್ತಿ ಭಾವವ ಕಂಡು ನಾ ಭಾರೀ ಸಂಭ್ರಮ ಪಟ್ಟಿದ್ದಿದೆ, > ದೀಪಾವಳಿಯ ಗೋಪೂಜೆಯ ಆ ದಿನಕ್ಕಾಗಿಯಂತೂ ವರ್ಷಪೂರ್ತಿ ಕಾದಿರುತ್ತಿದ್ದೆ. > ಮುದಿಯಾಗಿ ಹಾಲುಕೊಡಲಾಗದೆ ಹೋಗಿದ್ದ ನನ್ನನ್ನಿಂದು, > ಮೊನ್ನೆದಿನ ನೀ ಕೊಟ್ಟಿಗೆಯ ಒಂದು ಮೂಲೆಗೆ ತಂದು > ಕಟ್ಟುತ್ತಾ,ಇನ್ಮುಂದೆ ಇದೇ ನಿನ್ನ ಜಾಗವೆಂದೆ, > ಅದ್ಯಾವ ಘಳಿಗೆಯಲಿ ಹಾಗೆ ಹೇಳಿದೆಯೋ, > ನಾ ಅದ ಕೇಳಿ ಬಹಳ ನೊಂದು ಕೊಂಡೆ. > ನಾ ನಿನಗೆ,ನೀ ನನಗೆ ಆಸರೆಯಾಗಿ ಬದುಕುತ್ತಾ ಎಷ್ಟು > ವರ್ಷಗಳಾದವೆಂದು ಅಂದು ನಾ ಲೆಕ್ಕಹಾಕಲು ಶುರುಮಾಡಿದೆ. > ಅದೇ ನೋವಿನಲ್ಲಿದ್ದ ನನ್ನ ಮುಂದೆ,ನಿನ್ನ ಮಡದಿ > ತಂದು ಹುಲ್ಲು ನೀರನು ಇಟ್ಟಾಗಲೂ ನಾ ಬೇಸರದಿ ಮುಟ್ಟದೆ ಹೋದೆ. > ನಿನ್ನೆಯ ದಿನ ನೀ ನನ್ನ ಒಂದು ಲಾರಿಯಲಿ > ತುಂಬಿಸಿಕೊಂಡು ಅದ್ಯಾವುದೋ ಕಟ್ಟಡದ ಮುಂದೆ ತಂದು ನಿಲ್ಲಿಸಿದೆ, > ನಾ ಹುಲ್ಲುನೀರನು ಮುಟ್ಟುತ್ತಿಲ್ಲವೆಂದು > ಕಂಗೆಟ್ಟ ನೀನು, ಬಹುಶಃ > ಆರೋಗ್ಯ ತಪಾಸಣೆಗೆಂದು ಪಶುವೈದ್ಯರಬಳಿ > ಎನ್ನ ಕರೆದುಕೊಂಡು ಬಂದಿರಬಹುದೆಂದು ಒಳಗೊಳಗೇ ಖುಷಿಪಟ್ಟೆ. > ಆದರೆ,ಕಟ್ಟಡದ ಗೇಟನ್ನು ದಾಟಿ ಬಂದ > ವ್ಯಕ್ತಿಯೊಬ್ಬನ ಕೈಯಲ್ಲಿ ನೆತ್ತರು ಸವರಿದ್ದ > ಕತ್ತಿಯಿದ್ದುದ ಕಂಡು,ಭಯದಿಂದಲಿ ನಾ ನಡುಗಿದೆ. > ಆ ವ್ಯಕ್ತಿ ನನ್ನನೊಮ್ಮೆ ದಿಟ್ಟಿಸಿ ನೋಡಿ,ಈ ಮುದಿ ದನಕ್ಕೆ > ಇಷ್ಟೇ ಕೊಡಲಾಗುವುದೆಂದು,ನಿನ್ನ ಕೈಗೆ ಒಂದಿಷ್ಟು ಕಾಸನ್ನು > ನೀಡಿದಾಗಲೇ ತಿಳಿದದ್ದು,ನೀ ನನ್ನನು > ಆ ಕಟುಕನಿಗೆ ಮಾರಲೆಂದೇ ಕರೆತಂದಿದ್ದೆ. > ನಾ ಆ ಕ್ಷಣವೇ ಜೀವಂತ ಶವವಾದೆ. > ಇಲ್ಲಿಯವರೆಗೂ ಹಾಲಿನ ಹೊಳೆಯ ಹರಿಸುವುದನು ಮಾತ್ರ > ಅರಿತಿದ್ದ ನಾನು,ಈಗ ಮೊದಲ ಬಾರಿ,ಕೊನೆಯ ಬಾರಿ > ಕಣ್ಣೀರಿನ ಹೊಳೆಯನ್ನೇ ಹರಿಸಿದೆ. > ಆದರೆ ನೀ...ನನಗೂ ನಿನಗೂ ಇರುವ ಸಂಬಂಧ ಇಂದಿಲ್ಲಿಗೇ > ಕಡಿದುಬಿತ್ತು ಎನ್ನುವ ತೆರದಿ,ಆ ಕಟುಕ ಕೊಟ್ಟ ಹಣವನು ಎಣಿಸುತ್ತಾ ಒಮ್ಮೆಯೂ ಹಿಂದಿರುಗಿ > ಎನ್ನ ನೋಡದೆ ಮುಂದೆ ಮುಂದೆ ಸಾಗಿದೆ. > 🙏🏼 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.