ತುಂಬಾ ಚೆನ್ನಾಗಿದೆ ಸರ್ On Aug 3, 2017 6:50 AM, "chandregowda m d" <mdchandrego...@gmail.com> wrote:
> ಜಯಗೀತ > > ಯಾರು ಕೊಟ್ಟರು? ಯಾರು ತಂದರು ? > ಸ್ವತಂತ್ರವನು ದೇಶಕೆ ! > ಯಾರು ಹಚ್ಚಿದ ನಂದಾ ದೀಪವು ? > ಬೆಳಗುತಿಹುದೀ ನಾಡನು? !//೧// > > ಭರತ ಮಾತೆಯ ಕಣ್ಣ ನೀರನು > ಒರೆಸಿದವರು ಯಾರು? > ಕಬಂಧ-ದಾಸ್ಯದ ಹಿಡಿತ ಸಡಿಲಿಸಿ > ಬಿಡುಗಡೆ ಯಾರು ತಂದರು ?//೨// > > ಯಾರ ತ್ಯಾಗದ ಫಲಸ್ವರೂಪವೋ > ಹೆಗಲಿನ ನೊಗ ಕಳಚಿತು > ಯಾರು ಪಡೆದ ಕರಿ-ನೀರ ಶಿಕ್ಷೆಯೋ > ನಮ್ಮೆಲ್ಲರ ಸೆರೆ ತಪ್ಪಿತು //೩// > > ಯಾರ ಬಂಧನಕೆ ಸಂದ ಬೆಲೆಯಿದೊ > ನಮ್ಮ ಬಾಳುವೆ ಸುಂದರ > ಯಾವ ಮಹಿಮರ ಬಲಿದಾನವೋ ಇದು > ಆ ಮಹಾತ್ಮರ ನೆನೆಯುವಾ//೪// > > ಮಸಾಲೆವಸ್ತುಗೆ ಮನವ ಸೋತು > ಕಡಲು ದಾಟಿ ಬಂದರು > ಅರಿವೆ ಮಾರುತ,ಸುಳಿವು ಅರಿಯುತಾ > ದಾಳ ಉರುಳಿಸಿ ಗೆದ್ದರು // ೫// > > > 'ನೆರವು ಸೈನ್ಯ'ದ ನೆಪವ ಒಡ್ಡುತಾ > ನುಂಗಿಬಿಟ್ಟರು ದೇಶವ > ' ದತ್ತುಮಕ್ಕಳಹಕ್ಕು' ಕೀಳುತಾ > ಕಬಳಿಸಿದರು ಖಂಡವ //೬// > > ತಾತ್ಯಾ,ನಾನಾ,ಪಾಂಡೆ,ಲಕ್ಷ್ಮಿಬಾಯಿ > ಹಚ್ಚಿದಂತ ಕಿಡಿಯಿದು ! > ಭರತ ಖಂಡವೇ ಹೊತ್ತಿ ಉರಿಯಿತು > ಜಲಿಯನ್,ದಂಡಿ,ಅಸಹಕಾರದಿ.....//೭// > > ಗಾಂಧಿ,ನೆಹರು,ಪಟೇಲ್,ಸುಭಾಸರು > ಧುಮುಕಿದರು ಮುಂಚೂಣಿಗೆ > ಬಿಪಿನ ,ಲಜಪತ, ಸಾವರ್ಕರ್,ತಿಲಕರು > ಮಾಡಿಮಡಿದ ಮಹಾತ್ಮರು //೮// > > ಮದನ,ಆಜಾದ,ಸುಖದೇವ,ಭಗತರು > ಹರಣ ತೊರೆದ ಧೀರರು > ಪರಂಗಿ ಜನರ ಫಿರಂಗಿ ಗುಂಡಿಗೆ > ಎದೆಯನೊಡ್ಡಿದ ವೀರರು//೯// > > ಅಹಿಂಸೆಯೆ ಹೋರಾಟ ಮಂತ್ರವು, > ಸತ್ಯಾಗ್ರಹವೇ ತಂತ್ರವು > ತ್ಯಜಿಸಿ ಶಸ್ತ್ರವ ,ಮಣಿಸೆ ಶತ್ರುವ > ರಾಷ್ಟ್ರ ಜಿಗಿಯಿತು ಸಂಗ್ರಾಮಕೆ //೧೦// > > ನಾಡೇ ಕೂಗಿತು ;ಮುಗಿಲು ಮುಟ್ಟಿತು > ಸ್ವಾಯತ್ತತೆಯ ಬೇಡಿಕೆ .! > ದಿಗಿಲು ಹುಟ್ಟಿತು, ಓಟ ಕಿತ್ತಿತು > ಕಂಪನಿ ಜನ ಸ್ವದೇಶಕೆ ! //೧೧// > > ನಾಲ್ವತ್ತೇಳರ ಆಗಸ್ಟ್ ಮಾಸದಿ > ಗಗನಗಾಮಿ ತಿರಂಗವು > ಹದಿನಾಲ್ಕರ ನಡು ರಾತ್ರಿಯಲ್ಲಿ > ಧರೆಗಿಳಿದ ಒಕ್ಕೂಟಪತಾಕೆಯು //೧೨// > > ಉರಿಯಲಿ ನಿತ್ಯ ಸ್ವತಂತ್ರ ಹಣತೆಯು > ಹುತಾತ್ಮರನೆನಪೇ ಬತ್ತಿಯು > ಮೆರೆಸಲು ಎಲ್ಲೆಡೆ ನಾಡ ಘನತೆಯಾ > ನಮ್ಮ ದುಡಿಮೆಯೇ ತೈಲವು //೧೩// > > # ಚಂದ್ರೇಗೌಡನಾರಮ್ನಳ್ಳಿ , 8722199344 > ಸ/ಶಿ,ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ/ ತಾ/ > Chandregowda m.d. pin 573119. mo 8722199344 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.