On 03-Sep-2017 11:41, "Anasuya M R" <anasuy...@gmail.com> wrote:

> ಒಮ್ಮೆತಪ್ಪದೇ ಓದಿರಿ. ನಿಮಗೂ ಉಪಯೋಗ ಆಗಬಹುದು.
>
> ಡಾಕ್ಟರ ಅಂದರೆ ಹೇಗಿರಬೇಕು ಗೊತ್ತಾ !!!
>
> ಕಳೆದ ಶತಮಾನದಲ್ಲಿ ಶಿವಮೊಗ್ಗ ನಗರದಲ್ಲಿದ್ದ ಡಾ॥ಕೃಷ್ಣಮೂರ್ತಿ ಎಂಬ ಜನಪ್ರಿಯ ವೈದ್ಯರನ್ನು
> ಕಾಣಲು ದೂರದ ಮದರಾಸಿನಿಂದ ರಾಮನಾಥ ಚೆಟ್ಟಿಯಾರ್ ಮತ್ತು ಅವರ ಮಗಳು ಮುತ್ತುಲಕ್ಷ್ಮಿ
> ಎಂಬುವವರು ಬಂದರು. ಚೆಟ್ಟಿಯಾರರು ತಮ್ಮ ಮಗಳು ಒಪ್ಪಿದ ಹುಡುಗನೊಡನೆ ಒಂದು ವರ್ಷದ ಹಿಂದೆ
> ಆಕೆಯ ಮದುವೆ ಮಾಡಿದ್ದರು. ಮದುವೆಯಾದ ಸ್ವಲ್ಪ ದಿವಸಕ್ಕೆ ಅವಳಿಗೆ ವಿಪರೀತ ತಲೆನೋವು
> ಶುರುವಾಯಿತು. ಅದರಿಂದ ಅವಳ ಜೀವನವು ದುರ್ಭರವಾಯಿತು. ತಂದೆ ಅವಳನ್ನು ಮದರಾಸಿನ ಅನೇಕ
> ಪ್ರಸಿದ್ಧ ವೈದ್ಯರುಗಳಿಗೂ, ವೆಲ್ಲೂರಿನ ಜಗತ್ಪ್ರಸಿದ್ಧ ಆಸ್ಪತ್ರೆಗೂ ಕರೆದುಕೊಂಡು ಹೋಗಿ
> ತೋರಿಸಿದ್ದರು. ಎಲ್ಲೂ ಪ್ರಯೋಜನವಾಗಲಿಲ್ಲ. ಅವಳನ್ನು ಪರೀಕ್ಷಿಸಿದ ವೈದ್ಯರುಗಳು ಅವಳಿಗೆ
> ಯಾವ ಖಾಯಿಲೆಯೂ ಇಲ್ಲವೆನ್ನುತ್ತಿದುದೂ ನಿಜ!
>
> ಆದರೆ ಆಕೆಗೆ ಸಹಿಸಲಾಗದಷ್ಟು ತಲೆನೋವು ಇರುತ್ತಿದುದೂ ನಿಜ! ಚೆಟ್ಟಿಯಾರರು ಹತಾಶರಾಗಿದ್ದಾಗ
> ಸ್ನೇಹಿತರೊಬ್ಬರು ಈ ವೈದ್ಯರ ಬಗ್ಗೆ ಹೇಳಿ, ಅವರು ಎಂತೆಂತಹುದೋ ಖಾಯಿಲೆಗಳನ್ನು
> ವಾಸಿಮಾಡಿದ್ದಾರಂತೆ. ಒಮ್ಮೆ ಅವರಿಗೂ ತೋರಿಸಿ ನೋಡಿ ಎಂದಿದ್ದರು. ತಕ್ಷಣ ಚೆಟ್ಟಿಯಾರ್‌ರವರು
> ಮಗಳನ್ನು ಕರೆದುಕೊಂಡು ಕಾರಿನಲ್ಲಿ ಶಿವಮೊಗ್ಗಕ್ಕೆ ಧಾವಿಸಿದ್ದರು. ಚೆಟ್ಟಿಯಾರರು ಹೇಳಿದ
> ವಿವರಗಳನ್ನೆಲ್ಲಾ ಡಾ॥ಕೃಷ್ಣಮೂರ್ತಿಯವರು ಶಾಂತವಾಗಿ ಕೇಳಿಸಿಕೊಂಡರು. ಆನಂತರ
> ಮುತ್ತುಲಕ್ಷ್ಮಿಯ ಮದುವೆಗೆ ಮುಂಚಿನ ಆರೋಗ್ಯದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.
>
> ಚೆಟ್ಟಿಯಾರರು ಮದುವೆಗೆ ಮುಂಚೆ ಅವಳ ಆರೋಗ್ಯ ಬಹಳ ಚೆನ್ನಾಗಿತ್ತು ಎಂದರು. ನಂತರ ವೈದ್ಯರು
> ಮುತ್ತುಲಕ್ಷ್ಮಿಯ ಕಡೆ ತಿರುಗಿ ಮಗೂ, ನಿನ್ನ ಮೂಗುಬೊಟ್ಟನ್ನು ತೆಗೆದು ನನಗೆ ಕೊಡುತ್ತೀಯಾ?
> ಎಂದರು. ಈ ವಿಚಿತ್ರ ಬೇಡಿಕೆಗೆ ಆಕೆ ಅವಾಕ್ಕಾದಳು. ಆದರೂ ತಂದೆಯವರು ಕೊಡಲು ಸೂಚಿಸಿದಾಗ
> ಅವಳು ಮೂಗುತಿಯನ್ನು ತೆಗೆದು ಕೊಟ್ಟಳು.  ಆನಂತರ ವೈದ್ಯರು ಹೊರಗೆ ಹೋಗಿ ಸ್ವಲ್ಪ ಹೊತ್ತು
> ಸುತ್ತಾಡಿ ಬಾರಮ್ಮಾ ಎಂದರು. ಆಕೆ ಮರುಮಾತನಾಡದೆ ಹೊರನಡೆದಳು. ಹೊರಗಡೆ ಬಂದ ಮುತ್ತುಲಕ್ಷ್ಮಿ
> ಹಸಿರು ಗಿಡ-ಮರ, ಅಂದದ ಹೂವು-ಹಕ್ಕಿಗಳನ್ನು ನೋಡುತ್ತಾ ಅಡ್ಡಾಡಿದಳು. ಅಲ್ಲಿಯ ಬಿಸಿಲು
> ಮತ್ತು ಗಾಳಿ ಮುಖಕ್ಕೆ ಸೋಕಿದಂತೆ, ಒಂದು ಹೊಸ ಚೈತನ್ಯ, ಹುಮ್ಮಸ್ಸು, ಆನಂದ ಅವಳಿಗೆ
> ಉಂಟಾಯಿತು. ಸುಮಾರು ಅರ್ಧ ಘಂಟೆ ಸುತ್ತಾಡಿ ಒಳ ಬಂದಳು.
>
> ಅವಳು ಬಿಸಿಲಿಗೆ ಬೆವರಿದ್ದಳು. ಆದರೆ ಮುಖದಲ್ಲಿ ಸಂತಸದ ಕಳೆ ಮೂಡಿತ್ತು. ತಲೆನೋವು
> ಮಾಯವಾಗಿತ್ತು. ವೈದ್ಯರು ಈಗ ಹೇಗನಿಸುತ್ತೇ? ಪ್ರಶ್ನಿಸಿದರು. ಮುತ್ತುಲಕ್ಷ್ಮಿಯು ಈಗ ನನಗೆ
> ತಲೆನೋವೇ ಇಲ್ಲ ಉತ್ತರಿಸಿದಳು. ಡಾ॥ಕೃಷ್ಣಮೂರ್ತಿ ಹೇಳಿದರು ಚೆಟ್ಟಿಯಾರ್‌ರವರೇ, ನಿಮ್ಮ ಮಗಳ
> ತಲೆನೋವಿಗೆ ಕಾರಣ ಅವಳ ಮೂಗುತಿ! ಅದರ ವಜ್ರ ಪ್ರತಿಫಲಿಸಿ ಅವಳ ಕಣ್ಣಿಗೆ ಆಯಾಸ
> ಮಾಡುತ್ತಿತ್ತು. ಅದರಿಂದ ತಲೆನೋವು ಬರುತ್ತಿತ್ತು. ಅದನ್ನು ತೆಗೆಯುತ್ತಲೆ ತಲೆನೋವು
> ಮಾಯವಾಯಿತು ಎಂದು ಹೇಳಿ ಅವಳ ಮೂಗುತಿಯನ್ನು ವಾಪಸ್ಸು ಕೊಟ್ಟರು. ಚೆಟ್ಟಿಯಾರ್ ಮತ್ತು ಅವರ
> ಮಗಳ ಆನಂದಕ್ಕೆ ಪಾರವೇ ಇರಲಿಲ್ಲ. ಚೆಟ್ಟಿಯಾರರು ವೈದ್ಯರಿಗೆ ಅಪಾರ ವಂದನೆಗಳನ್ನು
> ಸಲ್ಲಿಸಿದರು ಮತ್ತು ನೋಟುಗಳ ಒಂದು ಕಂತೆಯನ್ನು ತೆಗೆದು ಡಾಕ್ಟರ ಮೇಜಿನ ಮೇಲಿಟ್ಟರು.
> ವೈದ್ಯರು ಇಷ್ಟೆಲ್ಲ ದುಡ್ಡು ನನಗೆ ಬೇಡ. ನನ್ನ ಫೀಸು ಹತ್ತು ರುಪಾಯಿ ಮಾತ್ರ. ಅಷ್ಟು
> ಕೊಟ್ಟರೆ ಸಾಕು ಎಂದರು. ಚೆಟ್ಟಿಯಾರರು ಎಷ್ಟು ಒತ್ತಾಯ ಮಾಡಿದರೂ ಅದಕ್ಕಿಂತ ಜಾಸ್ತಿ
> ತೆಗೆದುಕೊಳ್ಳಲು ವೈದ್ಯರು ಒಪ್ಪಲಿಲ್ಲ. ವಿಸ್ಮಯಗೊಂಡ ಚೆಟ್ಟಿಯಾರ್‌ರವರು ಭಗವಂತ!
> ಜಗತ್ತಿನಲ್ಲಿ ಇಂತಹ ಅದ್ಭುತ ವ್ಯಕ್ತಿಗಳು ಇದ್ದಾರೆಯೇ? ಎಂದುಕೊಳ್ಳುತ್ತಾ ಹೊರಟರು.
>
> ಡಾ॥ಕೃಷ್ಣಮೂರ್ತಿಯವರ ಪುಣ್ಯಸ್ಮರಣೆಗೆ ಪ್ರಣಾಮಗಳು. ಹಾಗೂ ಭಾರತೀಯ ವಿದ್ಯಾಭವನದ ಭವ್ಸ್
> ಜರ್ನಲ್ ಮಾಸಪತ್ರಿಕೆಯಲ್ಲಿ 1995ರಲ್ಲಿ ಪ್ರಕಟವಾಗಿದ್ದ ಈ ಘಟನೆಯನ್ನು ಮನ್ನಾರ್ ಕೃಷ್ಣರಾವ್
> ಮಾಸ್ತರರು ತಮ್ಮ ಬದುಕು-ಬೆಳಕು ಭಾಗ-1ರಲ್ಲಿ ಉಲ್ಲೇಖಿಸಿದ್ದಾರೆ. ಅವರಿಗೂ ಧನ್ಯವಾದಗಳು. ಈ
> ಶತಮಾನದ ಹೈಟೆಕ್ ಆಸ್ಪತ್ರೆಗಳನ್ನೂ, ಅದರ ವೈದ್ಯರುಗಳ ದುಬಾರಿ ಚಿಕಿತ್ಸೆಗಳನ್ನೂ ಕಂಡಿರುವ
> ನಮ್ಮೆಲ್ಲರಿಗೂ ಈ ಘಟನೆ ವಿಸ್ಮಯಕಾರಿ ಅಲ್ಲವೆ?
> -----------
> ಸ್ನೇಹಿತರೊಬ್ಬರು ಕಳಿಸಿದ್ದು.. ನಿಮ್ಮೊಂದಿಗೆ ಹಂಚಿಕೊಂಡೆ.
>  😊
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to