On 15 Sep 2017 10:12 am, "SOMASHEKHAR BENAKANAL" <
benakanalsomashek...@gmail.com> wrote:

> ಲೇಖನ ತುಂಬಾ ಚನ್ನಾಗಿದೆ.  ಮೆಡಮ್.
>
> On 15 Sep 2017 10:07 am, "Revananaik B B Bhogi" <
> revananaikbbbhogi25...@gmail.com> wrote:
>
>> ಲೇಖನ ತುಂಬಾ ಚನ್ನಾಗಿದೆ ಮೇಡಮ್
>>
>> On Sep 15, 2017 8:49 AM, "Sameera samee" <mehak.sa...@gmail.com> wrote:
>>
>>> ✍🙏🙏 *ಮಹಾ ಮೇಧಾವಿ,ಭಾರತ ರತ್ನ,  ಸರ್ ಎಂವಿ*
>>> (Mallikarjun Hulasur)
>>>
>>> 🌹 *ಇಂದು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಹುಟ್ಟು ಹಬ್ಬ ಪ್ರಯುಕ್ತ
>>>  ಇಂಜನೀಯರರ ದಿನದ ಲೇಖನ*
>>>
>>> Vijaya Karnataka
>>>  Sep 15, 2017,
>>> - ಜಿ ಬಿ ಹರೀಶ್
>>>
>>> ಕೆಲವು ಮಹಾನುಭಾವರು ತೀರಿಕೊಂಡು ಹತ್ತಾರು ವರ್ಷಗಳು ಕಳೆದರೂ ಸಮಾಜದ ಮೇಲೆ ಅಗಾಧವಾದ
>>> ಪ್ರಭಾವ ಬೀರುತ್ತಾರೆ. ಇದಕ್ಕೆ ಕಾರಣ ಹಣ, ಜಾತಿ ಅಥವಾ ತೋಳ್ಬಲವಾಗಿರುವುದಿಲ್ಲ. ಬದಲಾಗಿ
>>> ಅವರು ತಮ್ಮ ಜೀವನದಲ್ಲಿ ಮಾಡಿದ ಸಮಾಜಮುಖೀ ಕೆಲಸಗಳು ಕಾರಣ. ಅಂಥ ಒಂದು ಚೇತನ ಸರ್‌.
>>> ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಬಡತನದ ಮಧ್ಯೆ ಬೆಳೆದ ಅವರು ಜೀವನದಲ್ಲಿ ಓದಿ ಮುಂದೆ
>>> ಬಂದರು. ಇಂಜಿನಿಯರ್‌ ಪದವಿ ಪೂರೈಸಿ, 1885ರಲ್ಲಿ ಮುಂಬೈ ಪ್ರಾಂತದ ಲೋಕೋಪಯೋಗಿ ಇಲಾಖೆ
>>> ಇಂಜಿನಿಯರ್‌ ಆದರು. ಈಗ ನಾವು ಯಾವುದನ್ನು ಇನೋವೇಶನ್‌/ ಹೊಸತನದ ಆವಿಷ್ಕಾರ ಎನ್ನುವೆವೋ
>>> ಅದನ್ನು ಮಾಡಿದವರು ಅವರು. ಅಲ್ಲಿಂದ ಅವರು 1909ರಲ್ಲಿ ಸರ್ಕಾರಿ ಸೇವೆಯಿಂದ ಸ್ವಯಂ
>>> ನಿವೃತ್ತಿ ಪಡೆಯುವ ತನಕ ನಾನಾ ಮುಖಗಳಲ್ಲಿ ಸಾಧನೆ ಮಾಡಿದರು. ನಾಸಿಕ್‌ ಮತ್ತು ಪುಣೆಯಲ್ಲಿ
>>> ಸೇವೆ, ಸಿಂಧ್‌ ಪ್ರಾಂತದಲ್ಲಿ ನೀರು ಸರಬರಾಜಿನ ವಿನ್ಯಾಸ, ಸೂರತ್‌ನಲ್ಲಿ ಎಕ್ಸಿಕ್ಯುಟಿವ್‌
>>> ಇಂಜಿಯರ್‌ ಆಗಿ ಸೇವೆ, ನಂತರ ಪುಣೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್‌ ಆಗಿ
>>> ಪ್ರಾಮಾಣಿಕವಾಗಿ ದುಡಿದರು. 1898ರಲ್ಲಿ ಅವರು ಜಪಾನ್‌ ಮತ್ತು ಚೀನಾ ದೇಶಗಳಿಗೆ ನೀಡಿದ ಭೇಟಿ
>>> ಅವರ ಒಳನೋಟ ವಿಸ್ತರಿಸಿತು. ಭಾರತಕ್ಕೆ ಬಂದ ಮೇಲೆ ವ್ಯವಸಾಯ ಮತ್ತು ಒಳಚರಂಡಿ ವ್ಯವಸ್ಥೆಗೆ
>>> ಸೇವೆ ಸಲ್ಲಿಸಿದರು. ನಗರಗಳ ಬಡಾವಣೆಯ ವಿನ್ಯಾಸ ಅವರ ಶಕ್ತಿಶಾಲಿ ಏರಿಯಾಗಳಲ್ಲಿ ಒಂದು.
>>> ಅದರೊಳಗೆ ನೀರು ಸರಬರಾಜು, ಒಳಚರಂಡಿ, ರಸ್ತೆ, ವಿದ್ಯುತ್‌ ಎಲ್ಲವೂ ಸೇರುತ್ತದೆ ಎಂಬುದು
>>> ಗಮನಿಸಬೇಕಾದ ಅಂಶ. ಅಣೆಕಟ್ಟುಗಳಿಗೆ ಸ್ವಯಂಚಾಲಿತ ಅಣೆಕಟ್ಟು ದ್ವಾರ ರೂಪಿಸಿ ಅದರ ಬೌದ್ಧಿಕ
>>> ಹಕ್ಕು ಪಡೆದುಕೊಂಡ ಹೆಗ್ಗಳಿಕೆ ಸರ್‌ ಎಂವಿ ಅವರದ್ದು. ಈ ಹಿನ್ನೆಲೆ ಇದ್ದ ಅವರು ಸ್ವಯಂ
>>> ನಿವೃತ್ತರಾದ ಮೇಲೆ ಮೈಸೂರಿನ ಮಹಾರಾಜರ ಆಹ್ವಾನದಂತೆ ಅಂದಿನ ಕನ್ನಡ ನಾಡಿಗೆ ಬಂದು
>>> ನೆಲೆಸಿದರು. ಭಾರತದ ರಾಜಕೀಯ, ಕಾಂಗ್ರೆಸ್‌ನ ಹೋರಾಟ, ಗೋಖಲೆ ಮುಂದೆ ಗಾಂಧೀಜಿ ಅವರ
>>> ಕಾರ್ಯಶೈಲಿ ಯಾವುದೂ ಅವರಿಗೆ ಅಪರಿಚಿತವಾಗಿ ಉಳಿಯಲಿಲ್ಲ.
>>>
>>> ನಿನ್ನ ಏಳ್ಗೆಗೆ ನೀನೆ ಶಿಲ್ಪಿ ಎಂಬ ಮಾದರಿಯನ್ನು ಮಹಾರಾಷ್ಟ್ರದ ಬಾಬಾ ಸಾಹೇಬ್‌
>>> ಅಂಬೇಡ್ಕರ್‌ ಕಾನೂನು ಅರ್ಥಶಾಸ್ತ್ರ ವಿಷಯದಲ್ಲಿ ಮಾಡಿ ತೋರಿಸಿದರೆ, ವಾಸ್ತುಶಿಲ್ಪ, ಕಟ್ಟಡ
>>> ನಿರ್ಮಾಣ, ಹೊಸರಾಜ್ಯದ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯನವರು ಮಾಡಿ ತೋರಿಸಿದರು. ನೆಹರೂ,
>>> ಗಾಂಧಿ ಮತ್ತು ದೀನದಯಾಳ್‌ ಉಪಾಧ್ಯಾಯ ಹೀಗೆ ಮೂರು ಭಿನ್ನ ವೈಚಾರಿಕತೆಯ ಚಿಂತಕರಿಂದ
>>> ಏಕಕಾಲಕ್ಕೆ ಮಾನ್ಯತೆ ಪಡೆದ ಕ್ರಿಯಾಶೀಲ ವ್ಯಕ್ತಿತ್ವ ಇವರದ್ದು. ಗಾಂಧಿಯವರ ಬಗೆಗೆ ಸರ್‌
>>> ಎಂವಿ ಅವರಿಗೆ ಅಪಾರ ಗೌರವ, ಹಾಗೆ ಅವರ ಹಠಮಾರಿತನದ ಬಗೆಗೆ ಅರಿವು ಕೂಡ ಇತ್ತು. ಜೋಗದ ಜಲಪಾತ
>>> ತೋರಿಸಿ ಯಾರೋ ಎಷ್ಟು ಸುಂದರ ಅಂದರೆ ಈ ಪುಣ್ಯಾತ್ಮ ಎಷ್ಟೊಂದು ನೀರು ಹರಿದು
>>> ಪೋಲಾಗುತ್ತಿದೆಯಲ್ಲಾ ಎಂದು ಉದ್ಗರಿಸಿದ್ದರು ಎಂಬ ಕಥೆ ಇದೆ. ಯಂತ್ರಗಳನ್ನು ವಿವೇಕಯುತವಾಗಿ
>>> ಬಳಸುವುದರಲ್ಲಿ ಎಂವಿಯವರಿಗೆ ಅಪಾರ ನಂಬಿಕೆ. ಕುವೆಂಪು ತಮ್ಮ ಒಂದು ಕವನದಲ್ಲಿ ಇವರನ್ನು
>>> 'ಯಂತ್ರರ್ಷಿ' ಎಂದು ಕರೆದಿದ್ದಾರೆ. ವೈಜ್ಞಾನಿಕ ಮನೋಭಾವ, ಕೃಷಿಗೆ ಪೂರಕವಾದ ತಂತ್ರಜ್ಞಾನ,
>>> ನೀರಾವರಿ ವ್ಯವಸ್ಥೆ, ಕಾರ್ಖಾನೆಗಳು ಇದು ಅವರ ಕಲ್ಪನೆ. ಗಾಂಧೀಜಿ ಹೆಚ್ಚಾಗಿ ಗ್ರಾಮ
>>> ಭಾರತಕ್ಕೆ ಒತ್ತುಕೊಟ್ಟರು, ನೆಹರು ಉದ್ಯೋಗಾಧಾರಿತ ಆರ್ಥಿಕತೆಗೆ ಇಂಬು ನೀಡಿದರು. ಸರ್‌
>>> ಎಂವಿ ಭಾರತ ಸ್ವಾತಂತ್ರ್ಯ ಪಡೆಯುವ ಮೊದಲೇ ಮೊದಲು ಪೂನಾದಲ್ಲಿ ನಂತರ ಮೈಸೂರು ಸಂಸ್ಥಾನದಲ್ಲಿ
>>> ತಮ್ಮ ಕನಸುಗಳಿಗೆ ರೂಪ ನೀಡಿದರು. ಕೈಗಾರೀಕರಣದ ಅನಿವಾರ್ಯತೆಯನ್ನು ಮನಗಂಡ ಮೊದಮೊದಲ
>>> ದಾರ್ಶನಿಕರಲ್ಲಿ ಅವರೊಬ್ಬರು. ಕೈಗಾರೀಕರಣ ಅಥವಾ ನಾಶ (ಇಂಡಸ್ರ್ಟಿಯಲೈಸ್‌ ಆರ್‌ ಪೆರಿಷ್‌)
>>> ಎಂಬುದು ಅವರ ಘೋಷಣೆ. ಒಂದು ದೊಡ್ಡ ಹರಹು, ದರ್ಶನ ಇದ್ದವರನ್ನು ಸಮಾಜ ಅವರ ಜೀವಿತ ಕಾಲದಲ್ಲಿ
>>> ಅರ್ಥಮಾಡಿಕೊಳ್ಳುವುದು ಕಷ್ಟ. ಅಧ್ಯಾತ್ಮ, ಪರಲೋಕದ ಪ್ರೀತಿ, ಆದರ್ಶಮಯ ತತ್ತ್ವಶಾಸ್ತ್ರ,
>>> ಗಾಂಧಿ ಹವಾ ಇದ್ದ ಕಾಲದಲ್ಲಿ ಬ್ರಿಟಿಷರ ನಿಯಂತ್ರಣ ಇರುವ ಒಂದು ರಾಜಸಂಸ್ಥಾನದ ದಿವಾನರಾಗಿ
>>> ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು
>>> ಸರ್‌ ಎಂವಿ ಜೋಡಿ ಇಡೀ ಬಾರತದಲ್ಲೇ ಹೇಳಿ ಮಾಡಿಸಿದ್ದ ಮಹಾರಾಜ-ದಿವಾನರ ಜೋಡಿ ಎಂದರೆ
>>> ಸರಿಯಾಗುತ್ತದೆ. ಮೂಮೂಲಿ ಇಂಜಿನಿಯರ್‌ ಕೆಲಸ ಬಿಟ್ಟು ಛಾಲೆಂಜಿಂಗ್‌ ಆದ ಏನಾದರೂ ಕೆಲಸ
>>> ಇದ್ದರೆ ತಾವು ಮೈಸೂರಿಗೆ ಬರುವುದಾಗಿ ಸರ್‌ ಎಂವಿ ಮಹಾರಾಜರಿಗೆ ತಿಳಿಸಿದ್ದರು. ಅದೇ ರೀತಿ
>>> ಈಗಾಗಲೇ ಆರಂಭಗೊಂಡು ಅನೇಕ ತಾಂತ್ರಿಕ ಮತ್ತು ರಾಜಕೀಯ ಅಡೆತಡೆಗಳನ್ನು ಅನುಭವಿಸುತ್ತಿದ್ದ
>>> ಕೃಷ್ಣರಾಜಸಾಗರ ಜಲಾಶಯ ಪೂರೈಕೆ, ಮೇಲಸ್ತುವಾರಿ ಕೆಲಸ ಅವರ ಪಾಲಿಗೆ ಬಂದಿತು. ಅದನ್ನು
>>> ಸರ್‌ಎಂವಿ ಅತ್ಯಂತ ಚಾಣಾಕ್ಷತನದಿಂದ ಪೂರೈಸಿದರು. ಇದಕ್ಕಾಗಿ ಅವರು ಬ್ರಿಟಿಷ್‌ ಅಧಿಕಾರಿ
>>> ವರ್ಗ ಮತ್ತು ಮದ್ರಾಸ್‌ ಪ್ರಾಂತದ ಮುಖಂಡರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂದಿತು.
>>>
>>> ಭಾಷೆ, ಸಾಹಿತ್ಯ, ನೃತ್ಯ, ಶಿಲ್ಪ ಎಲ್ಲಾ ಅರಳಬೇಕಾದರೆ ನಾಡಿನಲ್ಲಿ ಮೊದಲು ಭೌತಿಕ,
>>> ಆರ್ಥಿಕ ಪ್ರಗತಿಯಾಗಬೇಕು. ನಾಡಿನ ಜನರ ಅನ್ನಸಂಪಾದನೆ, ಉದ್ಯೋಗದ ಪ್ರಶ್ನೆಯ ವಾಸ್ತವವನ್ನು
>>> ಮೊದಲು ಸರ್‌ ಎಂವಿ ಮನಗಂಡರು. ಈ ನಿಟ್ಟಿನಲ್ಲಿ ಮಹಾರಾಜರ ಸಂಪೂರ್ಣ ಬೆಂಬಲದಿಂದ ಅವರು
>>> ಭದ್ರಾವತಿಯ ಕಬ್ಬಿಣ ಉಕ್ಕಿನ ಕಾರ್ಖಾನೆ, ಪೇಪರ್‌ ಮಿಲ್‌, ಕೋಲಾರದ ಚಿನ್ನದ ಗಣಿ,
>>> ಜಲವಿದ್ಯುತ್‌ ಉತ್ಪಾದನೆ, ಮೈಸೂರು ಬ್ಯಾಂಕಿನ ಸ್ಥಾಪನೆಗೆ ಕಾರಣರಾದರು. ಭಾರತವನ್ನು ಸುಜಲಾಂ
>>> ಸುಫಲಾಂ ಆಗಿಸುವ ಬಂಕಿಮ ಚಂದ್ರರ ಕನಸನ್ನು ಭೂಮಿಗೆ ಇಳಿಸುವ ಕೆಲಸವನ್ನು ದೂರದರ್ಶಿತ್ವ
>>> ಇಟ್ಟುಕೊಂಡು ಅಚ್ಚುಕಟ್ಟಾಗಿ ಸಾಧಿಸಿದವರು ಸರ್‌ಎಂವಿ.
>>>
>>> ದೇವರು ಧರ್ಮದ ವಿಷಯದಲ್ಲಿ ಅವರು ಒಂದು ರೀತಿ ತಟಸ್ಥರಾಗಿದ್ದರು. ಆದರೆ ನಾಡು, ಭಾಷೆ,
>>> ಕೃಷಿ, ಕೈಗಾರಿಕೆ ವಿಷಯದಲ್ಲಿ ಬೇರೆಯವರಿಗೆ ಸಾಧಿಸಲು ಅಸಾಧ್ಯವೆನಿಸುವಷ್ಟು ಮಟ್ಟಿಗೆ
>>> ಎದೆಗಾರಿಕೆ ಹೊಂದಿದ್ದರು. ಒಂದು ಆಧುನಿಕ ಕಂಪನಿಯ ಸಿಇಓ ಅಥವಾ ಮಾಲೀಕ ಯೋಚಿಸುವ ಮಾದರಿಯಲ್ಲಿ
>>> ಯೋಚಿಸಿದ ಅವರು ಬಡವರನ್ನು ಮರೆಯದೆ ರಾಜ್ಯದ ಸಂಪತ್ತು ಹೆಚ್ಚಿಸುವ ಕೆಲಸ ಮಾಡಿದ್ದು ಈಗಲೂ
>>> ಎಲ್ಲರಿಗೂ ಆದರ್ಶ. ಬಸವಣ್ಣ ಸಮಾನತೆಯ ಆಧಾರದ ಮೇಲೆ ನಾಡನ್ನು ಕಟ್ಟುವ ಕನಸು ಕಂಡರೆ,
>>> ಸರ್‌ಎಂವಿ ಅವಕಾಶಗಳ ವಿಸ್ತರಣೆ ಆಧಾರದ ಮೇಲೆ ಈ ಕನಸಿಗೆ ಪೂರಕರಾದರು. ಕನ್ನಡಿಗರು ಓದಲು
>>> ಮದ್ರಾಸಿಗೆ ಹೋಗಬೇಕಿದ್ದ ಅನಿವಾರ್ಯತೆ ಇದ್ದಾಗ ಬ್ರಿಟಿಷ್‌ ಸರ್ಕಾರದ ಜತೆ ಸಂಧಾನ ಮಾಡಿ
>>> ಕನ್ನಡ ನಾಡಿಗೆ ಮೊತ್ತಮೊದಲ ಸ್ವತಂತ್ರ ವಿಶ್ವದ್ಯಾನಿಲಯ ತಂದು, ಮೈಸೂರು ವಿವಿ ಸ್ಥಾಪನೆಗೆ
>>> ಕಾರಣರಾದರು. ಒಂದು ರಾಜಸಂಸ್ಥಾನ ಇಷ್ಟೊಂದು ಮುಖಗಳಲ್ಲಿ ಕೆಲವೇ ವರ್ಷಗಳಲ್ಲಿ ಬೆಳೆದದ್ದು
>>> ಕಳೆದ ಶತಮಾನದ ಚರಿತ್ರೆಯಲ್ಲಿ ತೀರಾ ಅಪರೂಪ. ಮಾದರಿ ಮೈಸೂರು ರಾಜ್ಯದ ನಿರ್ಮಾಣದಲ್ಲಿ ಈ
>>> ಶಿಸ್ತುಗಾರ ಇಂಜಿನಿಯರ್‌ ಪಾತ್ರ ಬಹಳ. ಇದೇ ಕೆಲಸವನ್ನು ಮುಂದೆ ಬಂದ ಮಿರ್ಜಾ ಇಸ್ಮಾಯಿಲ್‌
>>> ಮುಂದುವರೆಸಿದ್ದೂ ಕೂಡ ಮುಖ್ಯ.
>>>
>>> ಗಾಂಧೀಜಿಯವರು ಸಪ್ತಸಾಮಾಜಿಕ ಪಾತಕಗಳನ್ನು ಹೇಳಿದರು. ಸರ್‌ ಎಂವಿ ಏಳು 'ಎಂ'ಗಳ
>>> ಪರಿಕಲ್ಪನೆ ನೀಡಿದರು. ಮನುಷ್ಯ (ಮೆನ್‌), ಸಂಪನ್ಮೂಲ (ಮೆಟಿರಿಯಲ್‌), ಹಣ (ಮನಿ),
>>> ನಿರ್ವಹಣೆ (ಮ್ಯಾನೇಜ್‌ಮೆಂಟ್‌), ಪ್ರೇರಕ ಶಕ್ತಿ(ಮೋಟಿವ್‌ ಪವರ್‌), ಮಾರುಕಟ್ಟೆ
>>> (ಮಾರ್ಕೆಟ್‌) ಮತ್ತು ಯಂತ್ರ(ಮಷಿನ್‌). ಮನುಷ್ಯನಿಗೆ ಮೊದಲ ಸ್ಥಾನ, ಯಂತ್ರಕ್ಕೆ ಕೊನೆಯ
>>> ಸ್ಥಾನ ನೀಡಿರುವುದು ಅವರ ಅಂತಃಕರಣದ ನೈಜ ಪರಿಚಯ ಮಾಡಿಸುತ್ತದೆ. ಡಿವಿಜಿ, ವಿ.ಸೀತಾರಾಮಯ್ಯ,
>>> ತೀನಂಶ್ರೀ, ಮಾಸ್ತಿ ಮುಂತಾದವರು ಸರ್‌ ಎಂವಿಯವರ ಬಹುಮುಖೀ ಚೈತನ್ಯವನ್ನು
>>> ಪರಿಚಯಿಸಿದ್ದಾರೆ. ಅವರ 'ನನ್ನ ವೃತ್ತಿ ಜೀವನದ ನೆನಪುಗಳು' ಇಂದಿಗೂ ಕೆಎಎಸ್‌, ಐಎಎಸ್‌
>>> ಮಾಡುವವರು ಓದಬೇಕಾದ ಗ್ರಂಥ. ರಾಜಕೀಯ ದಾರ್ಶನಿಕರ ಕನಸುಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ
>>> ಪರಿಶೀಲಿಸಿ ಅದಕ್ಕೆ ಮೂರ್ತರೂಪ ಕೊಟ್ಟ ವಿಶ್ವೇಶ್ವರಯ್ಯನವರು ಕಟ್ಟಿದ ಜಯನಗರವಿರುವ
>>> ಬೆಂಗಳೂರು, ಪ್ರತಿಮಳೆ ಬಂದಾಗಲೂ ಅಸ್ತವ್ಯಸ್ತವಾಗುವುದನ್ನು ನೋಡಿದಾಗ ಈಗಿರುವ
>>> ಇಂಜಿನಿಯರ್‌ಗಳು, ಶಾಸಕರು ಸರ್‌ಎಂವಿಯವರನ್ನು ಅವರ ಜನ್ಮದಿನ (ಸೆ.15)ರಂದು ಮಾತ್ರ ನೆನೆಯದೆ
>>> ಅವರ ಅನುಭವದ ಜೀವಂತ ಮಾದರಿಗಳಿಂದ ಯಾಕೆ ಪ್ರೇರಣೆ ಪಡೆಯಬಾರದು ಎಂದು ಚಿಂತೆಯಾಗುತ್ತದೆ.
>>> ಸುಸಜ್ಜಿತವಾದ ಹಳ್ಳಿ, ನಗರಗಳ ನಿರ್ಮಾಣ, ಪ್ರಾಮಾಣಿಕ ಹಣಕಾಸಿನ ನಿರ್ವಹಣೆ ಇವೇ ಈ ನಾಡು
>>> ಸರ್‌ಎಂವಿಯವರಿಗೆ ತೋರಿಸಬಹುದಾದ ನಿಜವಾದ ನಮಸ್ಕಾರ ಅಲ್ಲವೆ?
>>> (Mallikarjun Hulasur)
>>>
>>> 🌹 *ಸರಳತೆಯ ಸಂಕೇತವಾಗಿದ್ದರು*
>>>
>>> ಒಮ್ಮೆ ವಿಶ್ವೇಶ್ವರಯ್ಯನವರು ಅಂದಿನ ಸಿಎಂ ಕಡಿದಾಳ್‌ ಮಂಜಪ್ಪರನ್ನು ನೋಡಲು ಹೋದರು.
>>> ಸಿಎಂ ನೋಡಲು ಜನ ಸಾಲಿನಲ್ಲಿ ಕುಳಿತಿದ್ದರು. ಇವರೂ ಅವರೊಂದಿಗೆ ಸಾಲಿನಲ್ಲಿ ಕುಳಿತುಕೊಂಡರು.
>>> ಅಲ್ಲಿದ್ದವರು ಅವರಿಗೆ ನೇರವಾಗಿ ಸಿಎಂ ನೋಡುವಂತೆÜ ಸೂಚಿಸಿದರು. ಆದರೆ ಎಂವಿ ಅವರು ಕೇಳದೇ,
>>> ಸಾಲಿನಲ್ಲಿ ಕುಳಿತು ತಮ್ಮ ಸರದಿ ಬಂದಾಗ ಸಿಎಂರನ್ನು ಭೇಟಿಯಾದರು.
>>>
>>> 🍀 *ನೆರವಿನ ಹಸ್ತ*
>>>
>>> ತಮ್ಮ ನೆಂಟರಲ್ಲಿ ಬಡತನದಲ್ಲಿರುವವರ ಒಂದು ಪಟ್ಟಿ ತಯಾರಿಸಿ ಪ್ರತಿ ತಿಂಗಳೂ ಅವರಿಗೆ
>>> ಮನಿಯಾರ್ಡರ್‌ ಮೂಲಕ ಹಣ ಕಳುಹಿಸುತ್ತಿದ್ದರು. ಅವರ ಸಂಬಂಧಿಗಳಲ್ಲಿ ಯಾರಾದರೂ ನಿಧನರಾದರೆ
>>> ಕಾರ್ಯಗಳನ್ನು ಮಾಡಲು ಹಣದ ಅವಶ್ಯಕತೆ ಇದೆಯೇ? ಎಂದು ಕೇಳಿ ಸಹಾಯ ಮಾಡುತ್ತಿದ್ದರು. ತಮ್ಮ
>>> ನೆಂಟರಲ್ಲಿ ಯಾರಾದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಥಮ ದರ್ಜೆಯಲ್ಲಿ ಪಾಸಾದರೆ ಅವರನ್ನು
>>> ಮನೆಗೆ ಕರೆದು, ಅವರೊಂದಿಗೆ ಊಟ ಮಾಡಿ, ನೂರು ರೂ. ಬಹುಮಾನ ಕೊಡುತ್ತಿದ್ದರು.
>>>
>>> 🌹 *ಶವಸಂಸ್ಕಾರಕ್ಕೆ ಹಣ*
>>>
>>> ಬೆಂಗಳೂರಿನಲ್ಲಿ ನಿಧನರಾದರೆ ಸರಳವಾಗಿ ತಮ್ಮ ಹುಟ್ಟೂರಾದ ಮುದ್ದೇನಹಳ್ಳಿಯಲ್ಲಿ
>>> ಶವಸಂಸ್ಕಾರ ಮಾಡಲು ತಿಳಿಸಿ, ಅದಕ್ಕಾಗಿ ಹಣವನ್ನು ಮೀಸಲಿಟ್ಟಿದ್ದರು. ತಮ್ಮ ನಿಧನದ ನಂತರ
>>> ತಮ್ಮ ಉಳಿತಾಯದ ಹಣವನ್ನು ತಮ್ಮ ಬಳಿ ನಿಷ್ಠೆಯಿಂದ ದುಡಿದಿದ್ದ ಆಪ್ತ ಕಾರ್ಯದರ್ಶಿ,
>>> ಅಡಿಗೆಯವರು, ಮನೆ ಕೆಲಸದವರು ಹಾಗೂ ಡ್ರೈವರ್‌ಗೆ ಹಂಚಲು ವಿಲ್‌ ಬರೆದಿದ್ದರು
>>>
>>> 🌹 *ಹೈದ್ರಾಬಾದ್‌ ನೆರೆ ಹೊರೆ ಇಳಿಸಿದರು*
>>>
>>> 1900 ದಶಕದಲ್ಲಿ ಹೈದ್ರಾಬಾದ್‌ ನಗರ ಮೂಸಾ ನದಿಯ ಪ್ರವಾಹಕ್ಕೆ ಪದೇ ಪದೇ
>>> ತುತ್ತಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸರಕಾರ ಮೂಸಾ ನದಿಯ ಮಹಾಪೂರವನ್ನು
>>> ತಡೆಗಟ್ಟುವ ಪ್ರಯತ್ನಕ್ಕೆ ಕರೆತಂದಿದ್ದೇ ಈ ವಿಶ್ವೇಶ್ವರಯ್ಯ ಅವರನ್ನು. ತಮ್ಮ ತಮ್ಮ
>>> ಎಂಜಿನಿಯರಿಂಗ್‌ ಕೌಶಲಗಳನ್ನು ಬಳಸಿಕೊಂಡು ಪ್ರವಾಸ ಸವಾಲನ್ನು ನಿವಾರಿಸಿದರು.
>>>
>>> 🌹 *ನೈಟ್‌ಹುಡ್‌ ಪ್ರಶಸ್ತಿ*
>>>
>>> ದೇಶದ ಉನ್ನತಿಗೆ ನೀಡಿದ ಗಣನೀಯ ಕೊಡುಗೆ ಪರಿಗಣಿಸಿ ಬ್ರಿಟಿಷ್‌ ಸರಕಾರ 1915ರಲ್ಲಿ
>>> ಕಮಾಂಡರ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಇಂಡಿಯನ್‌ ಎಂಪೈರ್‌(ನೈಟ್‌ಹುಡ್‌) ಗೌರವ
>>> ದಯಪಾಲಿಸಿತು. ವಿಶ್ವೇಶ್ವರಯ್ಯ ಅವರು ಮೌಲ್ಯಗಳ ವ್ಯಕ್ತಿಯಾಗಿದ್ದರು. ಅತ್ಯಂತ
>>> ಪ್ರಾಮಾಣಿಕರಾಗಿದ್ದ ಅವರು, ದೇಶ ಮತ್ತು ತಮ್ಮ ವೃತ್ತಿಗಾಗಿ ತಮ್ಮಲ್ಲಿರುವ ಅತ್ಯುತ್ತಮವಾದ
>>> ಎಲ್ಲವನ್ನೂ ನೀಡಿದರು. ತಮ್ಮ 90ನೇ ವಯಸ್ಸಿನಲ್ಲೂ ಅವರು ಶಿಸ್ತುಬದ್ಧ ಜೀವನ ನಡೆಸಿದರು.
>>>
>>> 🌹 *ಅದ್ಭುತ ನೆನಪಿನ ಶಕ್ತಿ*
>>> (Mallikarjun Hulasur)
>>>
>>> ವಿಶ್ವೇಶ್ವರಯ್ಯ ಅವರಿಗೆ ಅದ್ಭುತವಾದ ನೆನಪಿನ ಶಕ್ತಿ ಇತ್ತು. 1908ರಲ್ಲಿ ಅವರು ಮೂಸಾ
>>> ನದಿಯ ಮಹಾಪೂರ ತಡೆಯುವ ಯೋಜನೆಯನ್ನು ಯಶಸ್ವಿಗೊಳಿಸಿದ್ದರು. ಇದಾದ 50 ವರ್ಷಗಳ ಬಳಿಕ
>>> ನದಿಯೊಂದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಅವರಿಗೆ ಒಂದಿಷ್ಟು ಮಾಹಿತಿ ಬೇಕಿತ್ತು.
>>> ಕೂಡಲೇ ತಮ್ಮ ಸೇವಕನನ್ನು ಕರೆದ ವಿಶ್ವೇಶ್ವರಯ್ಯ ಅವರು, ಬುಕ್‌ಶೆಲ್ಫ್‌ನತ್ತ ಕೈ ತೋರಿಸಿ,
>>> ''ಶೆಲ್ಫ್‌ನ ಮಧ್ಯದ ಮೂರನೇ ಸಾಲಿನಲ್ಲಿರುವ ನಾಲ್ಕು ಬುಕ್‌ಗಳ ಪೈಕಿ ಮೂರನ್ನು ತೆಗೆದುಕೊಂಡ
>>> ಬಾ,'' ಎಂದು ಸೂಚಿಸಿದರು. ಆ ಬುಕ್‌ಗಳ ಪೈಕಿ ಒಂದನ್ನು ತೆರೆದ ಅವರು, ಚರ್ಚೆಗೆ
>>> ಸಂಬಂಧಿಸಿದಂತೆ ಒಂದಿಷ್ಟು ವಿವರಗಳು ಅದರಲ್ಲಿರುವುದನ್ನು ತೋರಿಸಿದರು!
>>>
>>> 🌹 *ಭಾರತ ರತ್ನ*
>>>
>>> ಸ್ವತಂತ್ರ ಭಾರತದ ಅತಿದೊಡ್ಡ ಗೌರವವಾಗಿರುವ ಭಾರತ ರತ್ನ ಪ್ರಶಸ್ತಿಯು 1955ರಲ್ಲಿ
>>> ವಿಶ್ವೇಶ್ವರಯ್ಯ ಅವರಿಗೆ ದೊರೆಯಿತು. ಎಂಜಿನಿಯರಿಂಗ್‌ ಮತ್ತು ಶೈಕ್ಷ ಣಿಕ ಕ್ಷೇತ್ರಕ್ಕೆ
>>> ಅವರು ನೀಡಿದ ಅನನ್ಯ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿಯನ್ನು ಸರಕಾರ ಘೋಷಿಸಿತ್ತು. ಭಾರತದ
>>> ಎಂಟು ವಿಶ್ವವಿದ್ಯಾಲಯಗಳು ವಿಶ್ವೇಶ್ವರಯ್ಯ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದ್ದವು
>>> ಎಂಬುದು ನಿಮಗೆ ಗೊತ್ತಾ?
>>>
>>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to