Super madam On Nov 29, 2017 10:04 PM, "Sameera samee" <[email protected]> wrote:
> *ಒಂದು ನಿರ್ಲಕ್ಷ್ಯದ ಪ್ರಮಾದ* > > ಮಹಾಭಾರತ ಯುದ್ಧದ ನಂತರ ಎಲ್ಲಾ ಕಾರ್ಯಗಳೂ ಮುಗಿದು ಶ್ರೀಕೃಷ್ಣ ತನ್ನರಮನೆಗೆ ಬಂದಾಗ > ರುಕ್ಮಿಣಿದೇವಿ ಪತಿಯನ್ನು ಎದುರ್ಗೊಂಡು ಈ ರೀತಿ ಪ್ರಶ್ನಿಸುತ್ತಾಳೆ. > " *ಪಿತಾಮಹ ಭೀಷ್ಮರು ಮತ್ತು ಗುರು ದ್ರೋಣರು* ಅಷ್ಟು ಪ್ರಾಮಾಣಿಕರೂ ಸಜ್ಜನರೂ ಆಗಿದ್ದರೂ > ಸಹ ಅವರು ಕೊಲ್ಲಲ್ಪಟ್ಟರು, ಮತ್ತು ನೀನೂ ಅದರ ಭಾಗವಾಗಿದ್ದೆ. > ಯಾಕೆ ಹೀಗೆ ? " > > ಕೇಶವ - ತನ್ನ ಎಂದಿನ ಮುಗುಳ್ನಗೆಯೊಂದಿಗೆ ಪತ್ನಿಯ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು > ಪ್ರಯತ್ನಿಸುತ್ತಾನೆ. ಆದರೆ ರುಕ್ಮಿಣೀದೇವಿ ಒತ್ತಾಯಿಸಿದಾಗ ಗಂಭೀರವಾಗಿ ಉತ್ತರಿಸುತ್ತಾನೆ. > " ಸಂಶಯವೇ ಇಲ್ಲ, ಅವರಿಬ್ಬರೂ ಜೀವನದುದ್ದಕ್ಕೂ ಸಜ್ಜನಿಕೆ, ಪ್ರಾಮಾಣಿಕತೆಯ ಪರಮಾವಧಿಯನ್ನು > ತಲುಪಿದವರು. ಆದರೆ ಅವರು ಮಾಡಿದ ಒಂದು ತಪ್ಪು ಅವರ ಎಲ್ಲಾ ಪುಣ್ಯ, ಪ್ರಾಮಾಣಿಕತೆಯನ್ನು > ನಾಶಮಾಡಿತು. " > > *ರುಕ್ಮಿಣೀದೇವಿ* :- ಏನದು ? ಯಾವ ತಪ್ಪು ? > > *ಶ್ರೀಕೃಷ್ಣ* :- " ಒಬ್ಬ ಸ್ತ್ರೀ ಅಸಹಾಯಕಳಾಗಿ ಮಾನಭಂಗಕ್ಕೆ ಒಳಗಾಗುತ್ತಿದ್ದ > ಸಂದರ್ಭದಲ್ಲಿ ಆ ಸಭೆಯಲ್ಲಿ ಆ ಇಬ್ಬರೂ ಹಿರಿಯರೆನಿಸಿಕೊಂಡವರು ಉಪಸ್ಥಿತರಿದ್ದರು. ಆ > ಹೀನಕೃತ್ಯವನ್ನು ನಡೆಯದಂತೆ ತಡೆಯುವ ಎಲ್ಲಾ ಅಧಿಕಾರವೂ ಸಾಮರ್ಥವೂ ಅವರಿಗಿತ್ತು. ಆದರೂ > ಅವರು ತಡೆಯಲಿಲ್ಲ, ಬದಲಿಗೆ ನಿಸ್ಸಹಾಯಕರಂತೆ ಕುಳಿತರು. ಇದೊಂದೇ ಅಪರಾಧ ಅವರ ಎಲ್ಲ > ಪುಣ್ಯವನ್ನೂ ಪ್ರಾಮಾಣಿಕತೆಯನ್ನೂ ನಾಶ ಮಾಡಿತು. " > > *ರುಕ್ಮಿಣೀದೇವಿ*:- " ಸರಿ, ಮತ್ತೆ ಕರ್ಣ? " ಕರ್ಣನ ದಾನಶೂರತೆ ಎಲ್ಲರಿಗೂ > ಗೊತ್ತಿರುವಂಥದ್ದೇ. ಅವನ ಮನೆಬಾಗಿಲಿಗೆ ಯಾರೇ ಬಂದರೂ ಬರಿಕೈಯಲ್ಲಿ ಹಿಂದಿರುಗುತ್ತಿರಲಿಲ್ಲ. > ಇಂಥವನು ಏಕೆ ಕೊಲ್ಲಿಸಿದೆ ? " > > *ಕೇಶವ* :- " ಹೌದು, ಕರ್ಣನ ಮನೆಯಿಂದ ಯಾರೊಬ್ಬರೂ ಬರಿಕೈಯಿಂದ ಹಿಂತಿರುಗಿಲ್ಲ. ಆದರೆ > ಬಾಲಕ ಅಭಿಮನ್ಯು ಇಂಥಾ ಅತಿರಥ ಮಹಾರಥರಿರುವ ಸೇನೆಯ ವಿರುದ್ಧ ಏಕಾಂಗಿಯಾಗಿ ಯಶಸ್ವೀ ಹೋರಾಟ > ನಡೆಸಿ, ಕೊನೆಗೆ ಸಾಯುವ ಸ್ಥಿತಿ ತಲುಪಿದಾಗ ಹತ್ತಿರದಲ್ಲೇ ಇದ್ದ ಕರ್ಣನಲ್ಲಿ ನೀರು ಕೇಳಿದ. > ಕರ್ಣನ ಬಳಿಯಲ್ಲೇ ಒಂದು ಹಳ್ಳದಲ್ಲಿ ಸ್ವಚ್ಛವಾದ ಕುಡಿಯುವ ನೀರಿತ್ತು. ದುರ್ಯೋಧನನ > ಸ್ನೇಹಬಂಧಕ್ಕೆ ಸಿಲುಕಿದ ಕರ್ಣ ಸಾಯುತ್ತಿರುವ ವ್ಯಕ್ತಿಗೆ ನೀರು ಕೊಡಲಿಲ್ಲ. > ದಾನಶೂರತೆಯಿಂದ ಜೀವನಪರ್ಯಂತ ತಾನು ಗಳಿಸಿದ ಪುಣ್ಯವನ್ನು ತನ್ನ ಕೈಯಾರೆ ನಾಶಮಾಡಿಕೊಂಡ. > ಕೊನೆಗೆ ಅದೇ ಹಳ್ಳದಲ್ಲಿ ರಥದ ಚಕ್ರ ಸಿಲುಕಿ ಕರ್ಣ ಕೊಲ್ಲಲ್ಪಟ್ಟ. " > ನಮ್ಮ ಒಂದೇ ಒಂದು ನಿರ್ಲಕ್ಷ್ಯದ ಪ್ರಮಾದ ನಮ್ಮ ಎಲ್ಲಾ ಪುಣ್ಯಗಳನ್ನೂ ನಾಶ ಮಾಡಬಲ್ಲುದು. > ಜೀವನಪರ್ಯಂತ ನಾವು ಗಳಿಸಿದ ಎಲ್ಲಾ ಗೌರವವನ್ನು ಮಣ್ಣುಮುಕ್ಕಿಸಬಹುದು. > > ಅಭಿವೃದ್ಧಿಯ ಪಥದಲ್ಲಿ ಕರ್ಮಯೋಗದ ಒಂದು ಸಣ್ಣ ಉದಾಹರಣೆಯಿದು. ಆದ್ದರಿಂದ ಪಾಪ ಪುಣ್ಯಗಳ > ಸರಿಯಾದ ಅರಿವಿನೊಂದಿಗೆ ಕರ್ಮಗಳನ್ನು ಆಚರಿಸೋಣ ಮತ್ತು ಅದನ್ನು ಪರಮಪುರುಷನ ಪದತಲದಲ್ಲಿ > ಅರ್ಪಿಸೋಣ. ಆ ಮೂಲಕ ಭಗವಂತನ ಕಾರುಣ್ಯ ಪಡೆಯೋಣ. > > -- *ಶ್ರೀ ವಿಶ್ವೇಶ ತೀರ್ಥರು* > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
