ಗಾರ್ಗಿ : ಮುಂದಿನ ಮಹಿಳೆಯರಿಗೆ ಆದರ್ಶಪ್ರಾಯವಾದವಳು. ಇವಳು ಬ್ರಹ್ಮಜಿಜ್ಞಾಸೆಯಲ್ಲಿ
ಆಸಕ್ತಳಾಗಿದ್ದಳು. ವಿದ್ಯಾವಂತ ಮಹಿಳೆ ಪ್ರಶ್ನಿಸುವ ಹಕ್ಕನ್ನ ಪಡೆದಿರುತ್ತಾಳೆ ಎಂಬುದಕ್ಕೆ
ಈಕೆ ಜ್ವಲಂತ ನಿದರ್ಶನ.
ಮಿಥಿಲೆಯ ಜನಕ ಮಹಾರಾಜ ತಾನು ಕೈಕೊಂಡ ಯಜ್ಞ ಪುರ್ತಿಯಾದ ಅನಂತರ ಸಂತುಷ್ಟ
ಬ್ರಹ್ಮಸಭೆಯನ್ನುದ್ದೇಶಿಸಿ ಬ್ರಹ್ಮಿಷ್ಠಿನಾದವನು ಸುವರ್ಣಾಲಂಕೃತವಾದ ಸಾವಿರ ಆಕಳುಗಳನ್ನು
ಕೊಂಡೊಯ್ಯಲಿ ಎಂದಾಗ ಯಾಜ್ಞವಲ್ಕ್ಯ ಋಷಿ ಮುಂದೆ ಬಂದನಷ್ಟೆ. ಆಗ ಯಾಜ್ಞವಲ್ಕ್ಯನ
ಬ್ರಹ್ಮಜ್ಞಾನವನ್ನು ಕುರಿತು ಪ್ರಶ್ನಿಸ ಹೊರಟವರಲ್ಲಿ 6ನೆಯವಳಾಗಿ ಗಾರ್ಗಿ ಬರುತ್ತಾಳೆ.
ಎಲ್ಲವನ್ನೂ ಆವರಿಸಿದ್ದು ಎನ್ನಲಾದ ನೀರು ಯಾವುದರಿಂದ ಆವೃತವಾಗಿದೆ-ಎಂದು ಮುಂತಾಗಿ ಅವಳು
ಪ್ರಶ್ನಿಸುತ್ತಾಳೆ.ಕೊನೆಗೆ ಬ್ರಹ್ಮನನ್ನು ತರ್ಕದಿಂದ ಅರಿಯಲಸಾಧ್ಯ, ವಿಪರೀತ ಪ್ರಶ್ನಿಸಿದರೆ
ತಲೆ ಸಿಡಿದೀತು ಎಂದು ಯಾಜ್ಞವಲ್ಕ್ಯ ಹೇಳಿದಾಗ ಸುಮ್ಮನಾಗುತ್ತಾಳೆ. ಏಳನೆಯವನಾಗಿ
ಪ್ರಶ್ನಿಸಿದ ಉದ್ದಾಲಕನೂ ಸೋತಮೇಲೆ, ತಡೆಯಲಾರದೆ, ಬ್ರಹ್ಮಸಭೆಯ ಅಪ್ಪಣೆಯೊಂದಿಗೆ ಗಾರ್ಗಿ
ಮತ್ತೆರಡು ಪ್ರಶ್ನೆಗಳನ್ನು ಕೇಳುತ್ತಾಳೆ. ಸ್ವರ್ಗಮರ್ತ್ಯಗಳನ್ನು ಸದಾಕಾಲವೂ ಆವರಿಸಿದ್ದು
ಯಾವುದು-ಎಂಬ ಪ್ರಶ್ನೆಗೆ ಯಾಜ್ಞವಲ್ಕ್ಯನಿಂದ ಆಕಾಶವೆಂಬ ಉತ್ತರ ಸಿಗುತ್ತದೆ.ಆಕಾಶವನ್ನು
ಆವರಿಸಿದ್ದು ಯಾವುದು-ಎಂಬ ಪ್ರಶ್ನೆಗೆ ಆಕಾಶವನ್ನು ಯಾವುದು ತಾನೇ ಆವರಿಸಬಲ್ಲದು-ಎಂಬ
ಪ್ರಶ್ನೆಯಿಂದಲೇ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ. ಆಕಾಶ ಎಲ್ಲದರಲ್ಲಿದ್ದು ಎಲ್ಲವನ್ನೂ
ಮೀರಿದ್ದು, ಬ್ರಹ್ಮನನ್ನು ಸಂಪೂರ್ಣವಾಗಿ ಅರಿಯುವುದು ಯಾರಿಂದಲೂ ಎಂದಿಗೂ ಸಾಧ್ಯವಿಲ್ಲ ಎಂದು
ಮುಂತಾದ ಯಾಜ್ಞ ವಲ್ಕ್ಯನ ನುಡಿಗಳಿಂದ ಗಾರ್ಗಿ ಸಮಾಧಾನ ಹೊಂದಿ ಯಾಜ್ಞವಲ್ಕ್ಯನನ್ನು
ಬ್ರಹ್ಮಿಷ್ಠನೆಂದು ಮನ್ನಿಸಲು ಸಭೆಯನ್ನು ಕೇಳಿಕೊಳ್ಳುತ್ತಾಳೆ.

On Dec 1, 2017 1:51 PM, "Ramesh Sunagad" <rameshsuna...@gmail.com> wrote:

QPD-BP-MQP-RF2017-18

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL
8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್
ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an
email to kannadastf+unsubscr...@googlegroups.com.
To post to this group, send email to kannadastf@googlegroups.com.
For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to