Madam super

On 25-Dec-2017 6:18 pm, "Anasuya M R" <anasuy...@gmail.com> wrote:

> ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ 'ಮೂಕಜ್ಜಿಯ ಕನಸುಗಳು':
> ಶಿವರಾಮ ಕಾರಂತರ ಕಾದಂಬರಿಗಳನ್ನು ವಿಮರ್ಶೆ ಮಾಡುವವವರಿಗೆ ಕೇವಲ ಸಾಹಿತ್ಯ ಜ್ಞಾನ ಇದ್ದರೆ
> ಸಾಲದು, ಅದಕ್ಕೆ ಅಪಾರ ಜೀವನಾನುಭವ ಜೊತೆಗೆ ಸಂಸ್ಕಾರ ಬಲ ಅತ್ಯಗತ್ಯ. ವಿಮರ್ಶೆಯ ಎಟುಕಿಗೆ
> ಮೀರಿದ ಕೃತಿ ರಚನೆಯಲ್ಲಿ ಕಾರಂತರು ಸಿದ್ಧಹಸ್ತರು. ಮೂಕಜ್ಜಿಯ ಕನಸುಗಳು ಅಂತದ್ದರಲ್ಲಿ
> ಒಂದು. ಭಾರತೀಯ ಪರಂಪರೆಯಲ್ಲಿ ಸಾವಿರಾರು ವರ್ಷಗಳಿಂದ ತಳವೂರಿದ್ದ  ನಂಬಿಕೆಗಳನ್ನು,
> ಸಂಪ್ರದಾಯವಾದಿ ಆಚರಣೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ವಿಮರ್ಶಿಸುವ ಈ ಕಾದಂಬರಿ, ಕಾರಂತರ
> ಕಾದಂಬರಿಗಳಲ್ಲೇ ಅತ್ಯಂತ ವಿಶಿಷ್ಟವಾದದ್ದು. ಹಾಗಾದರೆ ಯಾರು ಈ ಮೂಕಜ್ಜಿ? ಕಾರಂತರೇ
> ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ‘ಸಾಂಪ್ರದಾಯಿಕತೆಯಿಂದ ಹೆಪ್ಪುಗಟ್ಟಿದ ಮನಸ್ಸುಗಳನ್ನು
> ತುಸುತುಸುವಾಗಿ ಕಾಯಿಸಿ ಕರಗಿಸುವ ಕೆಲಸ ಅವಳದ್ದು. ಅಂತ ಅಜ್ಜಿಯೊಬ್ಬಳು ಇದ್ದಳೇ ಎನ್ನುವ
> ಸಂಶಯ ಬಂದರೆ, ನಮ್ಮ ಸಂಸ್ಕೃತಿಯ, ನಂಬುಗೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು
> ತಿಳಿದರಾಯಿತು. ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ. ಪ್ರಾಮಾಣಿಕ ಸಂದೇಹದ ರೂಪದಲ್ಲಿ
> ಬದುಕಿಕೊಂಡೆ ಇದ್ದಾಳೆ’. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿಯ ಬಗ್ಗೆ ಹೆಚ್ಚೇನು
> ಬರೆಯುವುದಕ್ಕಿಂತ ನಮ್ಮಲ್ಲಿನ ವಿಚಾರ-ವಿವೇಕ ಬೆಳೆಸುವಂತಹ ಮೂಕಜ್ಜಿ ಹೇಳುವ ಒಂದಷ್ಟು
> ಮಾತುಗಳನ್ನು ನೆನೆಯೋಣ.
>
> “ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು ಓಡಾಡಿಕೊಂಡಿರುವ
> ಕಟ್ಟೆ ಬಾಳಿನ ಕಟ್ಟೆಯಲ್ಲವೇ?”
>
> “ಗುಡಿಯೂ ಶಾಶ್ವತವಲ್ಲ; ಅಲ್ಲಿನ ದೇವರೂ ಶಾಶ್ವತವಲ್ಲ. ಒಬ್ಬ ಶಾಶ್ವತವಾದ ದೇವರು
> ಇದ್ದನೆಂದರೂ, ಅವನು ಎಂಥವನೆಂದು ನಮ್ಮ ಎಟುಕಿಗೆ ಸಿಕ್ಕಿದ್ದಿಲ್ಲ. ನಾವು ನಮ್ಮ ನಮ್ಮ
> ಬುದ್ಧಿಗೆ ಸಮನಾಗಿ, ನೂರು, ಸಾವಿರಗಟ್ಟಲೆ ದೇವರನ್ನು ಮಾಡಿಕೊಂಡು ‘ಇದೇ ನಿಜ’ ‘ಅದೇ ನಿಜ’
> ಎಂತ ಮರುಳು ಮಾತನಾಡಿದವರು. ಸಂಕಟ ಬಂದಾಗೆಲ್ಲ ಅಂತ ದೇವರ ಹತ್ತಿರ ಹೋಗಿ ‘ಅದನ್ನು ಕೊಡು,
> ಇದನ್ನು ಕೊಡು’ ಎಂದು ಬೇಡಿದವರು.”
>
> “ಹೆರುವುದು ಅಸಹ್ಯವಲ್ಲ; ಇರುವುದು ಅಸಹ್ಯವಲ್ಲ; ಸಾಯುವುದೂ ಅಲ್ಲ, ಹುಟ್ಟಿಸುವುದು
> ಅಸಹ್ಯವೇ? ಗಂಡು ಹೆಣ್ಣುಗಳನ್ನು ಒಟ್ಟಿಗೆ ಬೆಸೆದು, ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ
> ಸುಖಕ್ಕೋ, ದು:ಖಕ್ಕೋ ಒಂದುಗೂಡಿಸುವ ಶಕ್ತಿ ಅಸಹ್ಯವೇ?”
>
> “ದೇವರು(?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಉಳಿದ ಮಕ್ಕಳ ಜೊತೆ ಬಾಳಿ ಬದುಕುವುದೇ
> ಪೂಜೆ ಎಂಬ ಬುದ್ದಿ ಯಾಕೆ ಬರಬಾರದು ನಮಗೆ?”
>
> “ಹುಟ್ಟಿ ಬಂದಿದ್ದೇವೆ, ಕೈ, ಮೂಗು, ಬಾಯಿ, ಪಡೆದು. ಅವೆಲ್ಲ ಇರುವುದು ಯಾತಕ್ಕೆ?
> ಕಚ್ಚಲಿಕ್ಕೆ ಹುಲಿಯ ‘ಬಾಯಿ ಕೊಡು’, ಹೊರಲಿಕ್ಕೆ ಆನೆಯ ‘ಮೈ ಕೊಡು’, ನುಸುಳಲಿಕ್ಕೆ ನುಸಿಯ
> ‘ಶರೀರ ಕೊಡು’ ಅಂದರೆ ಹೇಗಾದೀತು? ಎಲ್ಲರಿಗೆ ಎಲ್ಲವೂ ಬೇಕಾದರೆ ಅವನು ಕೊಡುವುದಾವುದು
> ಎಲ್ಲಿಂದ? ಅವನೇ ನಮ್ಮನ್ನು ಹುಟ್ಟಿಸಿದ್ದಾನೆ ಎಂತ ತಿಳಿಯುವುದಾದರೆ, ಕೊಡುವಷ್ಟನ್ನು
> ಕೊಟ್ಟೀ ಹುಟ್ಟಿಸಿದ್ದಾನೆ – ಎಂತ ತಿಳಿಯಬೇಕು.”
>
> “ಹೆಂಡತಿ ಮಕ್ಕಳನ್ನು ಬಿಟ್ಟರು ದಾಸರು. ವಿಠಲನನ್ನು, ನಾರಾಯಣನನ್ನು ನಂಬಿ ಹಾಡಿದರು.
> ನಂಬಿದ್ದೆ ನಂಬಿದ್ದು ಹಾಡಿದ್ದೆ ಹಾಡಿದ್ದು .ಅವರು ತಮ್ಮ ಹೆಂಡಿರನ್ನು ದಾರಿ ಮೇಲೆ ಕೆಡೆದು
> ಹೋದದ್ದು ನಿಜ. ಹಾಗೆ ಮಾಡಿ ಬೇಡಿದ್ದು ಯಾರನ್ನು?ತಂತಮ್ಮ ಹೆಂಡಿರೊಡನೆ ಸುಖವಾಗಿ
> ವೈಕುಂಠದಲ್ಲೋ, ಕೈಲಾಸದಲ್ಲೋ ಇರುವಂಥ ವಿಷ್ಣುವನ್ನು ,ಶಿವನನ್ನು. ಅವರೇನು ಕೊಟ್ಟಾರು?
> ಅವರಿಗೂ ಅವರ ಹೆಂಡಂದಿರಿಂದ ಮುಕ್ತಿ ಸಿಗದೇ ಇರುವಾಗ ?”
>
> “ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು
> ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು
> ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ
> ಇರಿಸಿದ್ದಾನಲ್ಲ. ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು
> ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ
> ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ
> . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ. ದೇವರು (?) ಕೊಟ್ಟ ಆಯುಷ್ಯವನ್ನು
> ಇದ್ದಷ್ಟು ಕಾಲ ಉಳಿದ ಮಕ್ಕಳ ಜೊತೆ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು
> ನಮಗೆ?”
>
> “ಅರ್ಜುನನಿಗೆ ಕೃಷ್ಣ ಪರಮಾತ್ಮ ಅಷ್ಟು ದೊಡ್ಡ ಭಗವದ್ಗೀತೆ ಹೇಳಿದ ಅನ್ನುತ್ತಾರೆ;
> ಹೇಳಿದ್ದೆಲ್ಲಿ? ಕುರುಕ್ಷೇತ್ರದಲ್ಲಿ; ಧರ್ಮರಾಜ, ಕೌರವ, ಯುಯುಧಾನ, ಸಾತ್ಯಕಿಗಳು ಅವರವರ
> ಶಂಖಗಳನ್ನು ಅವರವರು ಊದಿದ ಮೇಲೆ ಇನ್ನೇನು? ಯುಧ್ಧ ತೊಡಗಿತು ಅನ್ನುವಾಗ ಅಲ್ಲಿ ಕೃಷ್ಣ ಮೂರು
> ದಿನಗಳ ಹರಿಕಥೆಯನ್ನು ಒಬ್ಬ ಅರ್ಜುನನ ಮುಂದೆ ನಡೆಸಿದ ಅಂದರೆ ಆಗ ಉಳಿದವರೆಲ್ಲರೂ ಏನು
> ಮಾಡಿದರೋ? ಯುಧ್ಧವನ್ನು ಬಿಟ್ಟು ಮನೆಗೆ ಹೋಗಿ, ತಿರುಗಿ ಅಲ್ಲೆಗೆ ಬಂದರೋ?”
>
> “ನಮ್ಮ ಹಾಗೆಯೇ ಸಾವಿರ, ಸಾವಿರ ಅಲ್ಲ, ಕೋಟಿ, ಕೋಟಿ ಪ್ರಾಣಿಗಳಿವೆ. ಅವು ಯಾವುದಾದರೂ,
> ಯಾರನ್ನಾದರೂ ಬೇಡುವುದನ್ನು ಕಂಡಿದ್ದೀಯಾ? ಮತ್ತೆಲ್ಲ ಬಿಡು- ಅವು ತಮ್ಮ ಅನ್ನವನ್ನು
> ಬೇಡುವುದಿಲ್ಲ; ಮಲಗಲು ತಾವನ್ನೂ ಬೇಡುವುದಿಲ್ಲ; ಹುಲ್ಲೆಯೆದುರಿಗೆ ಹುಲಿ ಬಂದರೆ ‘ಸಹಾಯ
> ಮಾಡು’ ಎಂತಲೂ ಬೇಡುವುದಿಲ್ಲ. ಬುದ್ಧಿ ಬಂದ ಮನುಷ್ಯ ಅದಕ್ಕಿಂತಲೂ ಕಳಪೆಯಾದರೆ ಹೇಗೆ?”
>
> ಸಾವನ್ನು ವಾಸ್ತವಿಕ ನೆಲೆಯಲ್ಲಿಯೇ ಕಾಣುವ ದಿಟ್ಟೆ. ಸುಬ್ರಾಯನ ತಂದೆ ಸತ್ತ ಸಂದರ್ಭದಲ್ಲಿ
> ಅಳುತ್ತಿದ್ದ ಸುಬ್ರಾಯನಿಗೆ ಅವರು ಹೇಳುವ ಮಾತುಗಳು, “ಇದೇ ಏನು ನಿನ್ನ ಗಂಡಸುತನ ? ನೀನೇನು
> ನಾನೇನು, ಯಾರೇನು? ಯಾರು ಶಾಶ್ವತ? ಹೋಗಿ ಕೊಳ್ಳಿ ಇಟ್ಟು ಉರಿಸಿ ಬಾ. ಇದೆಲ್ಲ ಒಂದು ಆಟ.
> ಕನಸು ಅಂದರೆ ಕನಸು. ನಾವು ಕಟ್ಟಿಕೊಂಡ ಹಾಗಿರುತ್ತದೆ ಕನಸು. ಒಳ್ಳೆಯದು ಎ0ದರೆ ಒಳ್ಳೆಯದು.
> ಕೆಟ್ಟದು ಅಂದರೆ ಕೆಟ್ಟದು. ಇದು ಭ್ರಮೆ ಎಂದರೆ ಭ್ರಮೆ. ನಿಜ ಅಂದರೆ ನಿಜ. .. ನಿನಗೆ
> ಹೇಳುತ್ತೇನೆ. ನಮಗೆ ಕನಸು ಗಿನಸು ಎಂಬುದಿರುವಾತನಕವೂ ಅದು ಅಷ್ಟೇ ನಿಜ. ಸಂಸಾರವೂ ಹಾಗೆಯೇ.
> ಸುಖ ದುಖಃಗಳೂ ಹಾಗೆಯೇ. ದೇವರೂ ಹಾಗೆಯೇ ದಿಂಡರೂ ಹಾಗೆಯೇ. ಅವು ಎಲ್ಲವೂ ನಾವು ಕಟ್ಟಿಕೊಂಡ
> ಹಾಗೆ. ಗಟ್ಟಿ ಮಾಡಿಕೋ ಮನಸ್ಸು”
>
> ಈ ರೀತಿಯಾಗಿ ಅಜ್ಜಿಯಾಡುವ ಮಾರ್ಮಿಕ, ಅರ್ಥಪೂರ್ಣ ಮಾತುಗಳನ್ನು ಹೇಳುತ್ತ ಹೋದರೆ ಅದಕ್ಕೆ
> ಕೊನೆ ಮೊದಲಿಲ್ಲ. ಅದಕ್ಕೆ ನೀವು ಕಾದಂಬರಿಯನ್ನೇ ಓದಬೇಕು. ಪ್ರತಿ ಮಾತು, ಹೇಳಿಕೆಗಳೂ
> ಓದುವವನ ಮನದಲ್ಲಿ ಅಚ್ಚೊತ್ತುವಂತವೇ. ಕಾದಂಬರಿ ಓದಿ ಮುಗಿಸುವಷ್ಟರಲ್ಲಿ ಒಂದು ಮಾತಂತೂ
> ಸ್ಪಷ್ಟವಾಗುತ್ತದೆ. ಜಿ. ಶಿವರುದ್ರಪ್ಪರವರು ಹೇಳಿರುವಂತೆ; ಕಾರಂತರು, ಯಾರೋ ಸಿದ್ಧಪಡಿಸಿ
> ಇರಿಸಿದ ತೀರ್ಮಾನಗಳಿಂದ ಬದುಕನ್ನು ಒಪ್ಪಿಕೊಳ್ಳುವವರೋ ಅಥವಾ ಯಾವುದೋ ಸಾಮಾಜಿಕ
> ಕಟ್ಟುಪಾಡುಗಳಿಗೆ ಒಳಗಾದವೊರೊ ಅಲ್ಲ. ಅವರೊಬ್ಬ ವಿಚಾರವಾದಿ, ದಾರ್ಶನಿಕ. ಕಾರಂತರು ಬದುಕಿನ
> ಸಮಸ್ತ ಅನುಭವಗಳಿಗೆ ತಮ್ಮನ್ನು ಒಡ್ಡಿಕೊಂಡವರು. ಅದರ ಸಂಘರ್ಷಗಳಿಂದ ಬೆಳೆದವರು. ಅದರ
> ವಾಸ್ತವಿಕ ಅನುಭವವೇ ಅವರ ಪಾಲಿಗೆ ಒಂದು ಪುಸ್ತಕ. ಅತ್ಯಂತ ಪ್ರಾಮಾಣಿಕತೆಯಿಂದ,
> ತೀವ್ರತೆಯಿಂದ ಬದುಕಿನೊಂದಿಗೆ ತಮ್ಮನ್ನು ತೊಡಗಿಸಿಕೊಂಡವರು ಅವರು. ಈ ವಾಸ್ತವದ ನೆಲೆಯಮೇಲೆ
> ಗಟ್ಟಿಯಾಗಿ ನಿಂತು, ಅದರೊಳಗಿನ ಹಾಗೂ ಅದರಾಚೆಯ ಗೂಢವನ್ನು ಅತ್ಯಂತ ಆಳವಾಗಿ
> ಅನ್ವೇಷಿಸಿದವರು. ಸರ್ವಕಾಲಕ್ಕೂ ಸಲ್ಲುವ ಸದ್ವಿಚಾರ ತುಂಬಿರುವ ಈ ಕಾದಂಬರಿ ಪ್ರತಿಯೊಬ್ಬರೂ
> ಓದಲೇ ಬೇಕಾದ ಕೃತಿ.
>
> – ಆದರ್ಶ ಕೃಷ್ಣಭಟ್
>
> ೩. ಮೂಕಜ್ಜಿಯ ಕನಸುಗಳು (೧೯೬೮)
> Mookajjiya Kanasugalu – Dr. K. Shivarama Karantha
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to