ಆಕೆ ಆಗ ತಾನೇ ಕಾನ್ವೆಂಟ್ ಹೈ ಸ್ಕೂಲಿಗೆ ಹೊರಟಿದ್ದ ತನ್ನ ಮಗಳ ಊಟದ ಡಬ್ಬಿಗೆ ಮೂರು ಬ್ರೆಡ್
ತುಂಡುಗಳ ಜೊತೆಗೆ ಒಂದು ಜಾಮ್ ಪ್ಯಾಕೆಟ್ ಹಾಕಿ ಡಬ್ಬಿಯ ಮುಚ್ಚಳ ಬಿಗಿಯಾಗಿದೆಯೇ ಎಂದು
ಒಮ್ಮೆ ಎಳೆದು ನೋಡಿ ಅದನ್ನು ಆಕೆಯ ಸ್ಕೂಲ್ ಬ್ಯಾಗ್ ಒಳಗಿಟ್ಟು ತನ್ನ ಗಂಡನಿಗೆ ತಿನ್ನಲು
ದೋಸೆ ಮಾಡಲು ಅಡುಗೆ ಮನೆ ಕಡೆಗೆ ಮುಖ ಮಾಡಿದಳು.

ಸೋಫಾ ಮೇಲೆ ಕುಳಿತು ಪೇಪರ್ ಓದುತ್ತಿದ್ದ ಯಜಮಾನರು ಗೂಢಾಚಾರಿಕೆಯ ಆರೋಪ ಹೊತ್ತು
ಪಾಕೀಸ್ತಾನದ ಜೈಲಿನಲ್ಲಿ ಕೊಳೆಯುತ್ತಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಅವರ
ಪತ್ನಿ ಅಲ್ಲಿಗೆ ಹೋಗಿದ್ದಾಗ ಅವರು ತೊಟ್ಟಿದ್ದ ಬಟ್ಟೆಯನ್ನು ಬದಲಾಯಿಸುವಂತೆ ಮಾಡಿದ
ಬಗ್ಗೆ,ಆಕೆ ತೊಟ್ಟಿದ್ದ ಷೂ ಬಿಚ್ಚಿಸಿದ ಬಗ್ಗೆ,ಆಕೆ ತೊಟ್ಟಿದ್ದ ಬಳೆಗಳನ್ನು ತೆಗೆಸಿದ
ಬಗ್ಗೆ,ಆಕೆ ಅಲ್ಲಿ ತನ್ನ ಮಾತೃ ಭಾಷೆಯಲ್ಲಿ ಮಾತಾಡಲು ಆಕ್ಷೇಪವೆತ್ತಿದ ಬಗ್ಗೆ,ಆಕೆಯ ಹಣೆಯ
ಮೇಲಿನ ಕುಂಕುಮವನ್ನು ಅಳಿಸುವಂತೆ ಒತ್ತಾಯಿಸಿದ ಬಗ್ಗೆ,ಕೊನೆಗೆ ಆಕೆ ತೊಟ್ಟಿದ್ದ ತಾಳಿಯನ್ನೂ
ಕೂಡಾ ಬಿಚ್ಚಿಸಿದ ಬಗ್ಗೆ ಓದುತ್ತಾ ಓದುತ್ತಾ ಬೆಳ್ಳಂಬೆಳಿಗ್ಗೆಯೇ ಆಕ್ರೋಶದಿಂದ
ಕುದಿಯತೊಡಗಿದರು.ಅವರ ಕೈ ಕಾಲುಗಳು ಸಣ್ಣಗೆ ನಡುಗತೊಡಗಿದವು. ಗಂಟಲು ಉಬ್ಬಿ ಬರತೊಡಗಿತು.

ಅಲ್ಲೇ ಪಕ್ಕದಲ್ಲಿ ಬಗ್ಗಿ ಷೂ ಕಟ್ಟಿಕೊಳ್ಳುತ್ತಿದ್ದ ಮಗಳನ್ನು ಕರೆದು ಆ ಸುದ್ದಿಯನ್ನು
ತೋರಿಸುತ್ತಾ "ನೋಡಿದೆಯಾ ಮಗಳೇ,ಪಾಕೀಸ್ತಾನ ನಮ್ಮವರ ಮೇಲೆ ಹೇಗೆ ದೌರ್ಜನ್ಯವೆಸಗುತ್ತಿದೆ
ಅಂತ?ಇದರ ವಿರುದ್ಧ ಪ್ರತಿಯೊಬ್ಬ ದೇಶಭಕ್ತನೂ ಸಿಡಿದೇಳಬೇಕು.ಪಾಕೀಸ್ತಾನದ ವಸ್ತುಗಳನ್ನು
ಇನ್ನುಮುಂದೆ ಬಹಿಷ್ಕರಿಸಬೇಕು.ಅದರ ಜೊತೆ ಎಲ್ಲಾ ಸಂಬಂಧಗಳನ್ನೂ ಕಡಿದುಕೊಳ್ಳುವಂತೆ ನಮ್ಮ
ವಿದೇಶಾಂಗ ಸಚಿವರಿಗೆ ಟ್ವೀಟ್ ಮಾಡಬೇಕು, ಪಾಕೀಸ್ತಾನಕ್ಕೆ ಸರಿಯಾಗಿ ಬುದ್ದಿ
ಕಲಿಸಬೇಕು....". ಹೀಗೆ ಇನ್ನೂ ಏನೇನೋ ಹೇಳುತ್ತಲೇ ಹೋದರು.ಅವರ ಆಕ್ರೋಶವಿನ್ನೂ
ಕಡಿಮೆಯಾಗಿರಲಿಲ್ಲ.

ಮಗಳು ತನ್ನ ಬೆಲ್ಟ್ ಸರಿ ಮಾಡಿಕೊಳ್ಳುತ್ತಲೇ "ಅವರ ದೇಶದಲ್ಲಿ ಅವರು ಏನು ಬೇಕಾದರೂ
ಮಾಡಿಕೊಳ್ತಾರೆ,ನಮಗ್ಯಾಕೆ?" ಅಂತ ಯಾವ ಭಾವನೆಯೂ ಇಲ್ಲದವರಂತೆ ತಣ್ಣಗೆ ಉಸುರಿ ಆ ಕಡೆಗೆ
ತಿರುಗಿದಳು.

ಇಂಥಾ ಘನಘೋರ ವಿಷಯ ಕೇಳಿದ ನಂತರವೂ ಮಗಳು ಅಷ್ಟೊಂದು ತಣ್ಣಗೆ ಮಾತಾಡಿದ್ದು ಕಂಡು ಯಜಮಾನರಿಗೆ
ಗಾಬರಿಯಾಯಿತು."ಇದೇನು ಹೀಗೆ ಹೇಳ್ತಿದ್ದೀಯಾ ಮಗಳೇ,ಅವರು ಮಾಡಿದ್ದು ಅದೆಂಥಾ ಅನ್ಯಾಯ
ಗೊತ್ತಿದೆಯಾ,ಕುಂಕುಮವನ್ನೇ ಅಳಿಸಿದ್ದಾರೆ ಅಂದ್ರೆ ಅದೇನು ಸಾಮಾನ್ಯ ವಿಷಯವೇನೇ..."
ಎನ್ನುತ್ತಾ ತನ್ನ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ಮನಸ್ಸಿನಲ್ಲಿಯೇ ಅಂಗಲಾಚತೊಡಗಿದರು.

ಮಗಳು ಮತ್ತೆ ಅಷ್ಟೇ ತಣ್ಣಗೆ ಉತ್ತರಿಸತೊಡಗಿದಳು:

ಇಲ್ಲಿ ನಮ್ಮದೇ ರಾಜ್ಯದಲ್ಲಿ ನಾವೇ ಆಯ್ಕೆ ಮಾಡಿದ ಸರ್ಕಾರದ ಅನುಮತಿಯೊಂದಿಗೇ
ನಡೆಯುತ್ತಿರುವ,ನೀನೇ ಲಕ್ಷಾಂತರ ಹಣ ಸುರಿದು ನನ್ನನ್ನು ಸೇರಿಸಿದ ಕಾನ್ವೆಂಟ್
ಸ್ಕೂಲಿನಲ್ಲಿಯೇ ನನ್ನ ಉದ್ದ ಲಂಗ ಬಿಚ್ಚಿಸಿ ಮೊಣಕಾಲಿನ ಮೇಲೆ ಧರಿಸುವ ಲಂಗ ಹಾಕುವಂತೆ
ಖಡ್ಡಾಯ ಮಾಡಿದಾಗ,ಹಣೆಗೆ ಸಿಂಧೂರವಿಡದಂತೆ ನಿಯಮ ಮಾಡಿದಾಗ,ಯೂನಿಫಾರ್ಮ್ ಹೆಸರಿನಲ್ಲಿ ಅವರು
ಹೇಳುವ ರೀತಿಯ ಷೂ ಗಳನ್ನೇ ಧರಿಸುವಂತೆ ಒತ್ತಾಯಿಸಿದಾಗ,ಹೂ ಮುಡಿದು ಬರದಂತೆ ರೂಲ್ಸ್
ಮಾಡಿದಾಗ,ಸ್ಕೂಲ್ ಒಳಗೆ ಕನ್ನಡ ಮಾತಾಡಿದ್ದಕ್ಕಾಗಿ ಫೈನ್ ಹಾಕಿದಾಗ ಬಾರದ ಆಕ್ರೋಶ ನಿನಗೆ ಈಗ
ಹೇಗೆ ಬಂತು? ಸ್ವತಃ ಈ ದೇಶದ ಮಹಾತ್ಮರೇ ಧರ್ಮದ ಆಧಾರದ ಮೇಲೆ ನಮ್ಮ ದೇಶವನ್ನು ತುಂಡು ಮಾಡಿ
ಸೃಷ್ಟಿ ಮಾಡಿಕೊಟ್ಟ ಅಂತಹಾ ಧರ್ಮಾಂಧ ದೇಶದಿಂದ ಧಾರ್ಮಿಕ ಸ್ವಾತಂತ್ರ್ಯ ಬಯಸುವ ನಿನಗೆ
ನಿನ್ನ ಊರಿನಲ್ಲೇ ನಿನ್ನ ಸ್ವಂತ ಮಗಳ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡಿದ್ದು ಏಕೆ
ಗೊತ್ತಾಗಲಿಲ್ಲ? " ಎಂದು ಕೇಳಿದವಳೇ ವ್ಯಾನ್ ಬಂತು ಎನ್ನುತ್ತಾ ಗಡಿಬಿಡಿಯಿಂದ ಹೊರಗೆ
ಹೆಜ್ಜೆ ಹಾಕಿ ಹೊರಟೇ ಬಿಟ್ಟಳು.

ಯಜಮಾನರಿಗೆ ತಮ್ಮ ಮುಖದ ಮೇಲೆ 180 ಕಿ.ಮೀ.ವೇಗದಲ್ಲಿ ರಪ್ ಅಂತ ಭಾರಿಸಿದ
ಅನುಭವವಾಯಿತು.ಏಕೆಂದರೆ ಅವರ ಮಗಳು ಹೇಳಿದ್ದರಲ್ಲೂ ಸತ್ಯವಿತ್ತು.

"ಏಯ್,ಮಗಳೇ..ನಿಲ್ಲು ನಿಲ್ಲು. ಇವತ್ತು ನಾನೇ ನಿನ್ನನ್ನ ಸ್ಕೂಲ್ ಗೆ ಡ್ರಾಪ್
ಮಾಡ್ತೀನಿ.ನಿಮ್ಮ ಪ್ರಿನ್ಸಿ ಹತ್ರ ನನಗೆ ಸ್ವಲ್ಪ ಮಾತಾಡೋದಿದೆ" ಎನ್ನುತ್ತಾ ಯಜಮಾನರೂ ಮಗಳ
ಹಿಂದೆ ಓಡಿದರು.

ಚಿತ್ರಕೃಪೆ:The Telegraph,livemint.com.
ಕೃಪೆ: Praveen kumar mavinakadu

ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to