ಲಾವಣಿ ಶೈಲಿಯ ಪರಿಸರ ಗೀತೆ...

ಕೇಳಿರಿ ಕೇಳಿರಿ ಊರಿನ ಜನರೇ
ಸಾರುವ ನಮ್ಮೀ ಲಾವಣಿಯ,
ನಾಡಿನ ಜನತೆಗೆ ಹಿತವನು ಹೇಳುವ
 ನಮ್ಮೀ ಸುಂದರ ಸವಿನುಡಿಯ||

ಕಾಡನು ಬೆಳೆಸಿ,ನಾಡನು ಉಳಿಸಿ
 ನಲಿಯುತ ಬದುಕಿರಿ ನೀವಣ್ಣ,
ಮರ ಗಿಡ ಕಡಿದರೆ ಬಾಳೆ ಗೋಳು
ಅರಿತು ಬದುಕಿರಿ ನೀವಣ್ಣ||

 ಕೈಗಾರಿಕೆಗಳ ಮಲಿನ ತ್ಯಾಜ್ಯವು
 ನದಿಗೆ ಸೇರಿದೆ ನೋಡಣ್ಣ,
 ಅದೇ ನೀರನು ಸೇವಿಸೆ
 ದೇಹವು ರೋಗದ ಗೂಡು ಕೇಳಣ್ಣ||

 ಕಾರ್ಖಾನೆಗಳ ಹೊಗೆ ಕೊಳವೆಯು ತಾ
ಉಗುಳಿದೆ ವಿಷವ ನೋಡಣ್ಣ,
ವಾಯುಮಾಲಿನ್ಯದಿ ಗಾಳಿಯೇ ವಿಷವು
 ಬದುಕೇ ದುರ್ಭರ ತಿಳಿಯಣ್ಣ||

ಪಟಾಕಿ,ಬಾಂಬು,ವಾಹನ ಸದ್ದು
ಶಬ್ದ ಮಾಲಿನ್ಯ ಕೇಳಣ್ಣ,
 ಶಾಂತಿಯು ನಾಶ,ನೆಮ್ಮದಿ ಹಾಳು
ಕಿವಿಯೇ ಕೇಳದು ನೋಡಣ್ಣ ||

ಅಶುದ್ಧ ಗಾಳಿಯು, ಕಲ್ಮಶ ನೀರು
 ಬಿಸಿ ಬಿಸಿ ಬಿಸಿಲು ಈಗಣ್ಣ,
ಪರಿಸರ ನಾಶವೇ ಇದಕೆ ಕಾರಣ
ಎಚ್ಚರಾಗಿರಿ ನೀವಣ್ಣ ||

ಭೂಮಿ ತಾಯಿಯ ಗರ್ಭವ ಸೀಳುತ
 ಅದಿರನು ತೆಗೆದಿರಿ ನೀವಣ್ಣ,
 ಗಣಿ ಮಾಲೀಕರ ಸ್ವಾರ್ಥ ದಾಹಕೆ
ನೆಲವೇ ಬರಿದು ಕೇಳಣ್ಣ||

ಖಾಲಿ ಜಾಗದಿ ಗಿಡವನು ನೆಟ್ಟು
ಪೋಷಿಸಿ ಬೆಳೆಸಿರಿ ನೀವಣ್ಣ,
ನೆಲ ಜಲ ವಾಯು ಮಾಲಿನ್ಯ ತಡೆಯುತ
ಬದುಕಿ ಬಾಳಿರಿ ನೀವಣ್ಣ||

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
ಅರಿತರೆ ಬಾಳು ಸೊಗಸಣ್ಣ ,
ನೆಲ ಜಲ ಅರಣ್ಯ ರಕ್ಷಿಸಿ ಉಳಿಸೆ
ಬದುಕೇ ಹಸಿರು ಕೇಳಣ್ಣ||

(ಕೃಷ್ಣ ಡಿ.ಎಸ್.ಶಂಕರನಾರಾಯಣ)

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to