ಹೊಸ ಪಾಠ ಮಾಡುವೆ

‌ಓ ಮೂರು ತಿಂಗಳ ಬಳಿಕ ಕನ್ನಡ ಬುಕ್ ಬಂತು
ಹೊಸ ಪದ್ಯ ಮಾಡುವ ಬನ್ನಿ ಎಂದೆ‌
ಮೊದಲು ಹೋಂವರ್ಕ್ ಕಾಪಿ ತೆಗೆಯಿರಿ
ತೆಗೆಯಿರಿ ಸುಭಾಷಿತದ ಬುಕ್
ಸತೀಶನೇಕೆ ಬಂದಿಲ್ಲ? ಮಿಸ್ ಅವನು ಊರಿಗೋದ
ಯಾಕೆ ಹೋದ? ಯಾರು ಸತ್ತರು,ಯಾರ ಮದುವೆ?
ಇಲ್ಲ ಮಿಸ್ ಊರಲ್ಲಿ ಅಣ್ಣಮ್ಮಜಾತ್ರೆ.
ಮೂರು ಜನರಿಲ್ಲ ಹಳಗನ್ನಡ ಪದ್ಯವನು ಮಾಡುವುದು ಹೇಗೆ
ಸರಿ ಶನಿವಾರವಿಂದು ಸೋಮವಾರ ಎಲ್ಲಾ ಬರುವರು
ಮಾಡೋಣ ಆಗ ಹೊಸ ಪದ್ಯವ
ಭಾನುವಾರದ ರಾತ್ರಿ ಪೋನ್ ಮಾಡಿದೆ ನಾನೆ
ಶಾಲೆಗೆ ಬರಬೇಡಿ ರಜಾ ನಾಳೆಗೆ
ಟಿ.ವಿ.ಯಲಿ ಬಂತು ಶಾಲೆಗೆ ರಜೆ
ಮಾಡಲು "ಭಾರತ್ ಬಂಧ್"
ಪೆಟ್ರೋಲ್ ಬೆಲೆ ಇಳಿಸಲೆಂದು
ಮತ್ತೆ ಮಂಗಳವಾರ ನಾಲ್ಕು ಜನರಿಲ್ಲ.ಎಲ್ಲೊ ಇವರು
ಮಿಸ್ ಅವರಿಗೆ ಲಾಠಿ ಏಟು ಬಿತ್ತು
ರಸ್ತೆ ತಡೆಯಲು ಇವರು ಸ್ಟ್ರಯಕ್ ಮಾಡಿದರು ಇನ್ನಿಬ್ಬರು ಇವರ ಜತೆಗಿದ್ದರು
ಅಯ್ಯೊ ಹೊಸ ಪಾಠವೆ ಈಗೇನು ಮಾಡಲಿ ಇದೊ ಕಲಿಯಿರಿ ಈ ಪ್ರಶ್ನೆಗುತ್ತರವ
ಬಿಡಿಸಿ ಬರೆಯಿರಿ ಪದ
ಹೆಸರಿಸಿ ಸಂಧಿ.
ಮಿಸ್ ನಾಳೆ ಮಾಡಿ ಹೊಸ ಪದ್ಯವ
ಈ ದಿನ ಬಂದೆನು ಬಹಳ ಮಕ್ಕಳು ಎಂದು ಆದರೆ
ಮಕ್ಕಳೆಂದರು ಮಿಸ್ ನೀವೆ ಬರಲಿಲ್ಲ ಐದು ದಿನದಿಂದ
ಹೌದು ಮಕ್ಕಳೆ ನನಗೆ ತರಬೇತಿ ಇತ್ತು.
ಎಣಿಸಿ ನೋಡಿದರಲ್ಲಿ ಏಳು ಜನರಿಲ್ಲ
ಏನೋ ರವಿ ಎಲ್ಲೊ ನಿನ್ನ ಗೆಳೆಯ
ಮಿಸ್ ಅವನು ಹಬ್ಬಕ್ಕೆ ಊರಿಗೋದ
ಗಣೇಶನಬ್ಬಕ್ಕ್ಕೊಂದು ದಿನ ಮೊದಲೆ ಮಕ್ಕಳೆಲ್ಲ ಮಂಗಮಾಯ.
ಬಿಡು ಎರಡು ದಿನ ಕಳೆದರಾಯಿತು ಇನ್ನು
ಶುಕ್ರವಾರ ಮಾಡುವ ಹೊಸ ಪದ್ಯವ
ಇಂದು ಶುಕ್ರವಾರ ಬಂದೆನುತ್ಸಾಹದಲಿ
ನೋಡಿದರೆ ಮಕ್ಕಳೆಲ್ಲ ಇಹರು!!
ಸಿಹಿ ಕಡುಬು ತಿಂದು ಹೊಸ ಬಟ್ಟೆ ಧರಿಸಿ ನಗು ನಗುತ ಹೊಸ ಪಾಠ ಕೇಳಲೆಂದು!
ಅಹಾ! ಅಂತು ಇಂತು ಹೊಸ ಪಾಠಮಾಡುವೆ
ಸೀಮೆಸುಣ್ಣಹಿಡಿದು ಬುಕ್ಕು ತೆರೆದೆ.
ಪ್ರೇರಣಾ ಗೀತೆಯ ಜೊತೆಯಲ್ಲೆ ಬಂತು.
" ಶರಣು ಶರಣಯ್ಯ ಶರಣು ಜನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ"
ಕಿವಿಗೆ ಬೀಳುವ ಮೊದಲೆ ಶಾಲೆ ಪಕ್ಕದಲಿ
ಗಣಪತಿಯ ಹಬ್ಬ
ಮೈಕಾಸುರನ ಪಕ್ಕ
ಬೀದಿ ಹುಡುಗರು ಇದ್ರು
ಧರಿಸಿ ಜುಬ್ಬಾ
ಅಯ್ಯೊ ನನ್ನ ಹೊಸ ಪಾಠವೆ.
ಅಬ್ಬಾ! ಆ ಮೂರು ದಿನ
ಕರ್ಕಶದ ಕಿವುಡಲ್ಲಿ
ಅರ್ಧ ಮಕ್ಕಳು "ಅಲ್ಲಿ "
ಹೊಸ ಪಾಠವೆಲ್ಲಿ?.
ಹಾಳಾಗಲಿ ಬನ್ನಿ ನಾಳೆ ಮಾಡುವ ಪಾಠ
ಎಲ್ಲರೂ ಬರಬೇಕು ತಿಳಿಯಿತಲ್ಲ?
ಆಗಲಿ ಮಿಸ್
 "ಅವರೂ"ಬರುವರು ನಾಳೆ.
ಮರುದಿನ
ಸಂತಸದಲಿ ಮಿಂದು ಹೊಸ ಪಾಠ ಮಾಡಲು ಚಾರ್ಟ್ ತಂದು!
ಛೇ! ಎಲ್ಲೊ ಚಂದ್ರು ಸೋಮಶೇಖರ ,ರತ್ನ ,ಗಿರಿಜ,
ಪದ್ಮ ,ಮೀನ,ಕಾವೇರಿ ಜಲಜರೆಲ್ಲಿ?
ಮಂಜು,ವಿದ್ಯಾ,ಭಾರತಿ ಬಂದೆ ಇಲ್ಲ
ಯಾರಿಗೆ ಮಾಡುವುದು ಹೊಸ ಪಾಠವಾ?
ಮಿಸ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಬೇಕೆಂದು ಆನ್ ಲೈನಿ ನಲ್ಲಿ. ಅವರೆಲ್ಲ ಬ್ಯಾಂಕು .
ತಾಲ್ಲೂಕು ಆಫೀಸ್ ನ ಸಾಲಿನಲ್ಲಿ!!!????


ಶ್ರೀ ಮತಿ ಜಯಲಕ್ಷ್ಮಿ. ಎನ್. ಕೆ
ಸರ್ಕಾರಿ ಪ್ರೌಢಶಾಲೆ.
ಅರಳೇಪೇಟೆ.ಬೆಂಗಳೂರು, ದಕ್ಷಿಣ ವಲಯ.--೨.

!

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to