*"ಭಾರತಾಂಬೆಯ ಹೆಮ್ಮೆಯ ಯೋಧರೆ ನಿಮಗಿದೋ ಕೋಟಿ ಕೋಟಿ ನಮನ "*

   ಪುಲ್ವಾಮ ಬಳಿ ನಮ್ಮ 40 ಜನ ವೀರಯೋಧರನ್ನು ಪಾಕಿಸ್ಥಾನಿ ಉಗ್ರಗಾಮಿಗಳು ಮೋಸದಿಂದ
ಸಾವಪ್ಪುವಂತೆ ಮಾಡಿ ನಮ್ಮ ಸಹನೆ ಶಾಂತಿ ಕದಡಿದ್ದಾರೆ. ಕೆರಳಿನಿಂತ ನಮ್ಮ ಭಾರತದ ಸೈನಿಕರು
ಪ್ರಧಾನಮಂತ್ರಿ ನರೇಂದ್ರಮೋದಿ ಅವರ ದಿಟ್ಟ ಆದೇಶವನ್ನು ಪಡೆದು ಉಗ್ರರ ನೆಲೆಗಳನ್ನೆಲ್ಲಾ
ಉಡಾಯಿಸುತ್ತಿದ್ದಾರೆ.
    ಭಾರತೀಯರು ಆಕ್ರಮಣಕಾರಿಗಳಲ್ಲ ತಡವಿದರೆ ತಿರುಗಿ ಬಗ್ಗುಬಡಿಯದೇ ಬಿಡುವುದಿಲ್ಲ ಎಂಬ
ಪಾರಂಪರಿಕ ಯುದ್ಧನೀತಿ ಶಕ್ತಿ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ. ಸೈನಿಕರ ಈ ಸೇವೆ
ಅವಿಸ್ಮರಣೀಯವಾದುದು.

      ನಮ್ಮ ದೇಶ ಕಾಯುವ ಸೈನಿಕರನ್ನು ಗೌರವಿಸುವ ಪ್ರೋತ್ಸಾಹಿಸುವ ಹೊಣೆ ಪ್ರತಿಯೊಬ್ಬ
ಭಾರತೀಯ ಪ್ರಜೆಯದಾಗಿದೆ. ಹಾಗೆಯೇ ಸಂಘಸಂಸ್ಥೆಗಳೂ ಸಹ ಜನರಲ್ಲಿ ಸೈನಿಕರ ಬಗ್ಗೆ ಗೌರವ
ಪ್ರೀತಿ ಆದರ ಅಭಿಮಾನ ಮೂಡುವಂತೆ ಮಾಡಬೇಕಿದೆ.
   ಈ ಸದುದ್ದೇಶದಿಂದ ಈಗಾಗಲೇ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ
ಮಾಜಿಯೋದರನ್ನು, ಸೇವೆಸಲ್ಲಿಸುತ್ತಿರುವ ಹಾಲಿ ಸೈನಿಕರನ್ನು ಮತ್ತು  ದೇಶ ರಕ್ಷಣೆಗಾಗಿ
ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರ ಕುಟುಂಬದವರನ್ನು ಆಹ್ವಾನಿಸಿ ಗೌರವಿಸುವ
ಸತ್ಕಾರ್ಯವನ್ನು ನಮ್ಮ ಗ್ರಂಥಸರಸ್ವತಿ ಪ್ರತಿಭಾರಂಗ ಹಮ್ಮಿಕೊಂಡಿದೆ.
 ‌   ದಾವಣಗೆರೆ ವಿದ್ಯಾನಗರದ ಉದ್ಯಾನವನದಲ್ಲಿರುವ ಕಾವ್ಯಮಂಟಪದಲ್ಲಿ  ದಿನಾಂಕ:
03-03-2019 ರ ಭಾನುವಾರ ಬೆಳಗ್ಗೆ 11.00 ಕ್ಕೆ  ನಡೆಯುವ 'ಕನ್ನಡಕಬ್ಬ ಉಗಾದಿಹಬ್ಬ'
ಕಾರ್ಯಕ್ರಮದಡಿಯಲ್ಲಿ  'ಹುತಾತ್ಮ ಯೋದರಿಗೆ ನಮನ,  ವಿಶ್ರಾಂತ ಯೋದರಿಗೆ ಸನ್ಮಾನ ಹಾಗೂ
ಸೇವಾನಿರತ ಸೈನಿಕರಿಗೆ ಪ್ರೇರಣೆ' ನೀಡುವ ಸಲುವಾಗಿ *"ಭಾರತಾಂಬೆಯ ಹೆಮ್ಮೆಯ ಯೋಧರೆ ನಿಮಗಿದೋ
ಕೋಟಿ ಕೋಟಿ ನಮನ"* ಎಂಬ  ಸನ್ಮಾನ ಸಂವಾದ  ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ.

  ಈ ಕಾರ್ಯಕ್ರಮದಲ್ಲಿ ಸುಮಾರು 100 ಜನ ಹಾಲಿಯೋಧರು, ವಿಶ್ರಾಂತ ಯೋಧರು ಹಾಗೂ ಹುತಾತ್ಮ
ಯೋಧರ ಕುಟುಂಬದವರನ್ನು ಆಹ್ವಾನಿಸಿ ಶಾಲು, ಹಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
    ಹಾಗಾಗಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಮಾಜಿ, ಹಾಲಿ ಹಾಗೂ ಹುತಾತ್ಮ ಯೋಧರ
ಕುಟುಂಬದವರು ತಮ್ಮ ಹೆಸರು, ವಿಳಾಸ, ಮೊಬೈಲ್  ಸಂಖ್ಯೆಯನ್ನು ನಮ್ಮ ಮೊ. 8970948221
ಇಲ್ಲಿಗೆ  01-03-2019 ರೊಳಗೆ  SMS ಮೂಲಕ ನಮಗೆ ತಲುಪುವಂತೆ ಕಳುಹಿಸಲು ವಿನಂತಿ.
   .....ಆರ್.ಶಿವಕುಮಾರಸ್ವಾಮಿ ಕುರ್ಕಿ, ಅಧ್ಯಕ್ಷರು, ಗ್ರಂಥಸರಸ್ವತಿ ಪ್ರತಿಭಾರಂಗ,
ದಾವಣಗೆರೆ.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to