*ಪಾಪ ವಿಮೋಚನಾ ಯೋಜನೆ*"

ಆ ಊರಲ್ಲೊಂದು ಬಾವಿ, ಬಾವಿಯ ನೀರು ಕುಡಿದವನು ಕೆಟ್ಟವನು ಒಳ್ಳೆಯ
ಮನುಷ್ಯನಾಗುತ್ತಿದ್ದ,ಮೋಸ ಮಾಡಿದ್ದರು ಮನುಷ್ಯನಾಗುತ್ತಿದ್ದ, ಬಾವಿ ನೀರು ಸಿಕ್ಕವನಿಗೆ ರೋಗ
ರುಜಿನಗಳು ಸುಳಿಯುತ್ತಿರಲಿಲ್ಲ,ಅಲ್ಲಿಯ ನೀರು ಕುಡಿದರೆ ಅಕ್ಷರ ಅರಿಯದವನು ಪುಸ್ತಕ ಓದಲು
ಕಲಿಯುತ್ತಿದ್ದ,ಹತ್ತು ಕೊಲೆ ಮಾಡಿದವನು ಕೂಡ ಬಾವಿಯ ನೀರು ಬಾಯಿಗೆ ಬಿದ್ದರೆ ಅವನು
 ಮಾಡಿದ ಅಪರಾಧಗಳನ್ನು ಜನ್ರು ಮರೆತು ಬಿಡುತ್ತಿದ್ದರು. ಆ ಊರಿನ ಬಾವಿಗೆ ದೈವಶಕ್ತಿ ಇದೆ
ಎಂದು ತರ್ಲೆ ತಿಮ್ಮ ಗುಲ್ಲೆಬ್ಬಿಸಿದ್ದ. ಆ ಊರಿನ ವಾರಸುದಾರ "ತರ್ಲೆ ತಿಮ್ಮ"ನಿಗೆ ಬಾವಿ
ನೀರು ಹನಿ ಹನಿಯಾಗಿ ಹಂಚಲು "ಬುಲ್ಡಿ ಈರ" ಅಪ್ಪಣೆ ಕೊಡಿಸಿದ್ದ.
ಇದಕ್ಕಾಗಿ "ಪಾಪ ವಿಮೋಚನಾ ಯೋಜನೆ" ಜಾರಿಗೆ ತರಲು ಹೇಳಿದ್ದ ಬಾವಿ ನೀರು ಸಿಕ್ಕವರಿಗೆ ಮಾತ್ರ
ಪಾಪ ವಿಮೋಚನಾ ಪತ್ರ ನೀಡಿ ಗೌರವಿಸುತ್ತಿದ್ದ.
ಬಾವಿ ನೀರು ಕುಡಿದು ಪ್ರಮಾಣ ಪತ್ರ ಪಡೆಯಲು ಸುತ್ತ ಹತ್ತೂರಿನಿಂದ ಜನ ಗಾಡಿಯಲ್ಲಿ
ಬರುತ್ತಿತ್ತು. ನೀರು ಕುಡಿದವರು ಲಕ್ಷ ಲಕ್ಷ ಫೀಜು ತಿಮ್ಮನಿಗೆ ಒಪ್ಪಿಸಿ ಪಾಪ ವಿಮೋಚನಾ
ಪತ್ರ ಪಡೆದು ಪುನೀತರಾಗುತ್ತಿದ್ದರು,ಪ್ರೇಮು ತೊಡಿಸಿದ ಪತ್ರ ಮನೆಯಲ್ಲಿ ನೇತು ಹಾಕಿದರೆ
ಅವರಿಗೆ ಯಾವುದೆ ಕೆಡುಗಾಲವಿರುತ್ತಿರಲಿಲ್ಲ,ಅವರ ವಿರುದ್ಧ ಯಾವುದೇ ಮಾಟ ಮಂತ್ರ ಕೆಲಸ
ಮಾಡುತ್ತಿರಲಿಲ್ಲ.
ಬಾವಿಯ ನೀರು ಕುಡಿದು ಪ್ರಮಾಣ ಪತ್ರ ಪಡೆದವನು ಚುನಾವಣೆಗೆ ನಿಂತರೆ ಗೆಲವು ಗ್ಯಾರಂಟಿ ಎಂಬ
ನಂಬಿಕೆ ಇತ್ತು,ಹೀಗಾಗಿ ಪುಡಿ ಲೀಡ್ರುಗಳು ತಿಮ್ಮನ ಉಸ್ತುವಾರಿಯಲ್ಲಿರುವ ಬಾವಿ ನೀರು
ಕುಡಿಯಲು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ನಿಂತಿದ್ದರು. ದೊಡ್ಡ ದೊಡ್ಡ ಸಾಲುಗಳು
ಪ್ರಮಾಣ ಪತ್ರಕ್ಕೆ ಪಾಳಿ ಹಚ್ಚಿದ್ದವು,ಕೆಲವರಿಗಾಗಿ ವಿಶೇಷ ಸಾಲುಗಳಿದ್ದವು ಆದರೆ ಸಾಲಿಗೆ
ನಿಂತವರೆಲ್ಲ ಪ್ರಮಾಣ ಪತ್ರ ಸಿಗುತ್ತಿರಲಿಲ್ಲ ಬಾವಿ ನೀರು ಸಿಕ್ಕವರಿಗೆ ಮಾತ್ರ ತರ್ಲೆ
ತಿಮ್ಮನಿಂದ ಪಾಪ ವಿಮೋಚನಾ ಪತ್ರ ಸಿಗುತ್ತಿತ್ತು,ಆ ಊರಿನ ಗಣ್ಯಾತಿ ಗಣ್ಯರ ಮನೆಯಲ್ಲಿ ತರ್ಲೆ
ತಿಮ್ಮನ ಭಾವ ಚಿತ್ರ ವಿರುವ ಪಾಪ ವಿಮೋಚನಾ ಪತ್ರ ಗೋಡೆಯ ಮೇಲೆ ನೇತಾಡುತ್ತಿತ್ತು, ಈ ಪ್ರಮಾಣ
ಪತ್ರ ವಿರುವ ಮನೆ ಎಷ್ಟೆ ಪಾಪ ಕಾರ್ಯ ಮಾಡಿದ್ದರು ತರ್ಲೆ ತಿಮ್ಮ ನೀಡಿದ ನೀರಿನ ಪ್ರಭಾವದಿಂದ
ಉಶ್ಯಾಪವಾಗುತ್ತಿತ್ತು ಇಂತಹ ದಿವ್ಯ ಪ್ರಶಸ್ತಿಯನ್ನು ದಯಪಾಲಿಸಿ ತರ್ಲೆ ತಿಮ್ಮ ಊರಿಗೆ
ಮಹಾನ್ ವ್ಯಕ್ತಿಯಾಗಿದ್ದ.

ಈ ಪ್ರಮಾಣ ಪತ್ರ ಪಡೆಯುವದಕ್ಕಾಗಿ ರಾಜಕಾರಣಿಗಳು,ಸಿರಿವಂತರು,ಕೆಲವು ಹೋರಾಟಗಾರರು ತಿಮ್ಮನ
ದುಂಬಾಲು ಬಿದ್ದಿದ್ದರು ತಿಮ್ಮನ ಬಾವಿನೀರು ಕುಡಿಯುವ ತವಕವಿದ್ದವನು ಅತಿ ಹೆಚ್ಚು ಭೂಮಿ
ನುಂಗಿದ್ದರೆ, ಅಕ್ರಮ ಹಣ ಗಳಿಸಿದ್ದರೆ,ಕೆರೆಗೆ ಕೆರೆಯನ್ನೇ ತಮ್ಮ ಹೊಲದ ಕಡೆ ಟ್ರಾನ್ಸಫರ್
ಮಾಡಿಕೊಂಡಿದ್ದರೆ, ತುಳಿದು ಬೆಳದಿದ್ದರೆ ಅವುಗಳನ್ನೆಲ್ಲ ಪ್ರಾಮಾಣಿಕವಾಗಿ ಬರೆದು ಒಂದು
ಪ್ರಸ್ತಾವನೆಯನ್ನು ಸಿದ್ದಪಡಿಸಿ ಅಗತ್ಯ ವಿದ್ದರೆ ಪೋಟೋ ಲಗತ್ತಿಸಿ ತರ್ಲೆ ತಿಮ್ಮನಿಗೆ
ಸಲ್ಲಿಸಿದರೆ ಅವನು ಯೋಜನೆಯ ಫಲಾನುಭವಿಯನ್ನು ಆಯ್ಕೆ ಮಾಡಿ ತನ್ನ ಬಾವಿ ನೀರು ಕುಡಿಸಿ
ಪ್ರಮಾಣ ಪತ್ರ ನೀಡಿ ಗೌರವಿಸುತ್ತಿದ್ದ,ಇದರಿಂದ ಅವನ ಪಾಪ ವಿಮೋಚನೆಯಾಗಿ ಭೂಮಿ
ನುಂಗಿದವನು,ಕೆರೆ ಕಟ್ಟೆಗಳನ್ನು ಸಾಪು ಮಾಡಿದವನು ಸೇಫ್ ಆಗಿ ಬಿಡುತ್ತಿದ್ದ, ರೈತರ ಸಾಲ
ಮನ್ನಾ ಮಾಡಿದಂತೆ ತಿಮ್ಮನ ಯೋಜನೆಯಿಂದ ಎಲ್ಲ ಪಾಪಗಳು ಉಶ್ಯಾಪವಾಗಿ ಬಿಡುತ್ತಿತ್ತು ಹೀಗಾಗಿ
ತಪ್ಪು ಮಾಡಿದವರೆಲ್ಲ ತಿಮ್ಮನ ಮನೆಗೆ ಬಂದು ಅವನ ಕಾಲಿಗೆ ಬಿದ್ದು ನೀರು ಕೇಳಿ ಪಾಪ ವಿಮೋಚನಾ
ಪತ್ರ  ಪಡೆಯುತ್ತಿದ್ದರು, ಇದಕ್ಕಾಗಿ ತಗುಲುವ ವೆಚ್ಚವನ್ನು ತುಂಬಿ ತಾವು ಮಾಡಿದ ಪಾಪ
ಕಾರ್ಯಗಳಲ್ಲಿ ತಿಮ್ಮನಿಗೆ ಪಾಲು ನೀಡಿ ಪಾವನವಾಗುತ್ತಿದ್ದರು.
ಉದ್ದಿಮೆಗಳು,ಕಳಪೆ ಕಾಮಗಾರಿಗಳ ಕಾಂಟ್ರಾಕ್ಟರ್ ಗಳು,ವ್ಯಾಪಾರಿಗಳು,ರಿಯಲ್ ಮಾಲಿಕರು ಬಾವಿ
ನೀರು ಕುಡಿದು ಪಾಪ ವಿಮೋಚನಾ ಯೋಜನೆಯ ಫಲಾನುಭವಿಯಾಗಲು ತಳ್ಳಾಟ ನಡೆಸಿದ್ದರು,ಊರಲ್ಲಿ ಕಾಲರಾ
ಬೇನೆ ಬಂದು ಮಕ್ಕಳು ಮರಿಗಳು ಸಾಯುತ್ತಿದ್ದರು,ಅನ್ನವಿಲ್ಲದೆ ಜನ ಕಂಗಾಲಾಗಿದ್ದರು,ಬಿರುಗಾಳಿ
ಬಂದು ಮನೆ ಮಠಗಳು ಉರುಳಿದವು,ನೆರೆಹಾವಳಿ ಬಂದು ಜನ ನೆಲೆ ಕಳೆದು ಕೊಂಡಿದ್ದರು ಊರಲ್ಲಿ
ಕುಡಿಯುವ ನೀರಿಲ್ಲ,ದುಡಿಯುವ ಕೈಗಳಿಗೆ ಕೆಲಸವಿಲ್ಲ,ಉದ್ಯೋಗವಿಲ್ಲದೆ ಜನ ಊರು ಬಿಡುತ್ತಿದ್ದ
ವೇಳೆಯಲ್ಲಿ ತಿಮ್ಮ ಮಾರೆಮ್ಮನ ಉತ್ಸವ ಮಾಡಿ ಊರು ಉದ್ದರಿಸಬೇಕೆಂದು ಮನೆಯಿಂದ ಮಾರೆಮ್ಮನ
ಗುಡಿಯವರೆಗೆ ದೀಡು ನಮಸ್ಕಾರ ಹಾಕಿ ಸಾಮು ತೆಗೆದಿದ್ದ, ಅಂದು ಮಾರೆಮ್ಮನ ಪೂಜಾರಿ "ಬುಲ್ಡಿ
ಈರನಿಗೆ" ದೇವಿ ಮೈತುಂಬಿ ಬಂದು ಮೈಗೆ ಬೇವಿನ ತಪ್ಪಲು ಸುತ್ತಿ ಕೆದರಿದ ಕೂದಲು ಬಿಟ್ಟು
ಕೈಯಲ್ಲಿ ಅಲಗು ಹಿಡಿದು ಊರು ತುಂಬ ಓಡಾಡಿದ್ದ,ಬುಲ್ಡಿ ಈರನಿಗೆ ವರ್ಷಕ್ಕೊಮ್ಮೆ ಮಾರೆಮ್ಮ
ಮೈತುಂಬಿ ಬರುತ್ತಿದ್ದಳು, ಹೀಗೆ ಬಂದಾಗ ಸುಮಂಗಲೆಯರೆಲ್ಲ ಪೂರ್ಣ ಕುಂಬ ದೊಂದಿಗೆ ಮಾರೆಮ್ಮನ
ಗುಡಿಯ ಮುಂದೆ ಸೇರುತ್ತಿದ್ದರು,ರಾಜಕಾರಣಿಗಳು,ಗಣ್ಯರೆಲ್ಲರೂ ಬುಲ್ಡಿ ಈರನ ಹೇಳಿಕೆಯನ್ನು
ಕಿವಿ ನಿಗರಿಸಿ ಕೇಳುತ್ತಿದ್ದರು ವರ್ಷಕ್ಕೊಮ್ಮೆ ಈ ಪೂಜಾರಿಯ ಹೇಳಿಕೆ ನೆರೆದ ಜನರಲ್ಲಿ
ದೈವದ ಬಗ್ಗೆ ಜಾಗೃತಿ ಮೂಡಿಸುತ್ತಿತ್ತು "ಊರಲ್ಲಿ ಪಾಪ ತುಂಬಿದೆ ಮೋಸ ವಂಚನೆ ಹೆಚ್ಚಾಗಿದೆ"
ಇದರ ವಿಮೋಚನೆಗಾಗಿ ತಿಮ್ಮನ ಬಾವಿ ನೀರು ಕುಡಿದು ಪವಿತ್ರವಾಗಬೇಕೆಂದು ಮೂರ್ಛೆ ಹೋದ.
ಈರನ ಹೇಳಿಕೆಯಿಂದ ಗಾಬರಿಗೊಂಡ ಜನ ಊರಿಗೆ ಊರೆ ತಿಮ್ಮನ ಮನೆಗೆ ಓಡಿತು ವಿಷಯವೆಲ್ಲ ತರ್ಲೆಗೆ
ನಿವೇದಿಸಿದರು,ಒಳಗೊಳಗೆ ಉಬ್ಬಿ ಹೋದ ತರ್ಲೆ ಬಾವಿ ನೀರು ಕುಡಿಯಲು ಕೆಲವು ಕರಾರುಗಳಿವೆ
ಎಂದು ತಕರಾರು ತೆಗೆದ,ಈ ನೀರು ಎಲ್ಲರಿಗೂ ಸುಲಭವಾಗಿ ಸಿಗುವಂತದ್ದಲ್ಲ ಎಂದು ಹೇಳಿ "ಪಾಪ
ವಿಮೋಚನಾ ಟ್ರಸ್ಟ್" ಪ್ರಾರಂಭಿಸಿದ ಜನರಿಂದ ದೇಣಿಗೆ ವಸೂಲಿ ಮಾಡಿದ ಪಾಪ ಪರಿಹಾರಕ್ಕಾಗಿ ಜನ
ತಿಮ್ಮನ ಬಾಗಿಲಲ್ಲಿ ಮೂರು ಮೂರು ದಿನ ಕಾಯುತ್ತಿದ್ದರು,
ತಿಮ್ಮ ಪಂಚಾಯ್ತಿ ಪ್ರೆಸಿಡೆಂಟಾಗಿ ಊರನ್ನು ಆಳುತ್ತಿದ್ದ,ಅರಸು ಮಕ್ಕಳಿಗೆ ಸಿಗದ ಕುದುರೆ
ನನಗೆ ಸಿಕ್ಕಿದೆ ನನ್ನಿ ಕುದುರೆ ಎಂದು ಬೀಗುತ್ತಿದ್ದ,ಅನೇಕ ಯೋಜನೆಗಳನ್ನು ಜಾರಿಗೆ ತಂದು
ಫಲಾನುಭವಿಗಳ ಹೆಸರಲ್ಲಿ ಬಿಲ್ ಎತ್ತಿ ಸಫಲನಾಗಿದ್ದ, ಆ ಊರಿನ ಹೆಣ್ಣು ಲೀಡ್ರ್ರು ತರ್ಲೆ
ಸುಬ್ಬಿ ಅನಾಥ ಮಕ್ಕಳ ಅನ್ನ ಕದ್ದಿದ್ದಳು ಮಕ್ಕಳ ದವಸ ಧಾನ್ಯ ಮಿಲ್ಲಿಗೆ ಮಾರಿ ತಿಮ್ಮನಿಂದ
ಸೈ ಎನಿಸಿಕೊಂಡಿದ್ದಳು,ಸುಬ್ಭಿಯ ಸಾಹಸ ಕಾರ್ಯವನ್ನು ಮೆಚ್ಚಿ ತಾನು ಒಂದಿಷ್ಟು ಸುಬ್ಬಿಯ
ಪಾಲಿನಲ್ಲಿ ಪಾಟ್ನರ್ ಆದ ತನ್ನ ಬಾವಿ ನೀರು ಸುಬ್ಬಿಗೆ ಕುಡಿಸಿ "ಪಾಪ ವಿಮೋಚನಾ ಪತ್ರ" ನೀಡಿ
"ತರ್ಲೆ ರಾಣಿ" ಎಂದು ಘೋಷಿಸಿದ. ಪ್ರತಿ ವರ್ಷ ಪಾಪ ವಿಮೋಚನೆ ಪತ್ರ ರಿನಿವಲ್
ಮಾಡಿಸಿಕೊಳ್ಳಲು ತಿಳಿಸಿದ
ತರ್ಲೆ ತಿಮ್ಮನ ಕುಲ ಗುರು ಬುಲ್ಡಿ ಈರ ತಿಮ್ಮನ ಪಾಲಿಗೆ ದೇವದೂತ,ಅವನು ಹೇಳಿದಂತೆ ಊರನ್ನು
ಆಳುವ ಅರಸ ,ಕುಲ ಗುರುವಿನ ಮಾತಿನಂತೆ ಪಾಪ ವಿಮೋಚನಾ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯ
ಪ್ರಯೋಜನ ಪಡೆದವರು ಖದೀಮರು,ಕಳ್ಳರು,ರಿಯಲ್ ಮಾಲೀಕರೆ ಹೆಚ್ಚಾಗಿದ್ದರು ಇವರೆಲ್ಲ ಬುಲ್ಡಿ
ಈರನ ಪರಮ ಭಕ್ತರಾಗಿರುವದರಿಂದ ತಿಮ್ಮನ ಪಾಪ ವಿಮೋಚನಾ ಟ್ರಸ್ಟಿಗೆ ಕೋಟಿ ಕೋಟಿ ದುಡ್ಡು
ಕೊಟ್ಟು ಪ್ರಮಾಣ ಪತ್ರ ಪಡೆಯುತ್ತಿದ್ದರು.
ಮೊದ್ಲೆಲ್ಲ ಬುಲ್ಡಿ ಈರ ತರ್ಲೆ ತಿಮ್ಮನಿಗೆ ಮಟ್ಕಾ ನಂಬ
ರ್ ಹೇಳಿಕೊಡುವ ಬಾಬಾ ಮಾರೆಮ್ಮನ ಪೂಜಾರಿಯಾಗಿದ್ದ, ತಿಮ್ಮ ಮಟ್ಕಾ ದಂದೆಯಲ್ಲಿ ತೊಡಗಿ
ಹಾಳಾಗಿ ಹೋಗಿದ್ದ ಇಬ್ಬರು ಪೋಲಿಸರ ಅತಿಥಿಯಾಗಿ ಜೈಲು ಪಾಲಾಗಿದ್ದರು,ಜೈಲಲ್ಲಿ ಬುಲ್ಡಿ
ಈರನಿಗೆ ಮೈ ತುಂಬಿ ಬಂದು ಯದ್ವಾ ತದ್ವಾ ಕೂಗಾಡಿ ಪೋಲೀಸರಿಗೆ ಶಾಪ ಹಾಕಿದ್ದ ಇವನ ಕೋಪಕ್ಕೆ
ಹೆದರಿ ಇಬ್ಬರನ್ನು ಬಿಡುಗಡೆ ಮಾಡಿ ಶಾಪ ದಿಂದ ತಪ್ಪಿಸಿ ಕೊಂಡಿದ್ದರು.
ಬುಲ್ಡಿಯ ಹೇಳಿಕೆಯಂತೆ ತಿಮ್ಮ ಮನೆ ಹಿಂದೆ ಬಾವಿ ತೋಡಿಸಿ ಕಂಗಾಲಾದ, ಬಾವಿಯಲ್ಲಿ ಕೊಡ ನೀರು
ತುಂಬುತ್ತಿರಲಿಲ್ಲ ಇನ್ನೇನು ಊರು ಬಿಡಬೇಕೆಂದಿದ್ದ ಮೀಸಲಿನ ಮೋಸದಾಟದಲ್ಲಿ ತಿಮ್ಮನಿಗೆ
ಪಂಚಾಯ್ತಿ ಛಾನ್ಸು ಸಿಕ್ಕು ಪ್ರೆಸಿಡೆಂಟಾಗಿ ಬೆಳೆದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ
ಈರನ ಉಪದೇಶದಂತೆ "ಪಾಪ ವಿಮೋಚನಾ ಟ್ರಸ್ಟ್" ಸ್ಥಾಪಿಸಿದ. ಬಾವಿ ನೀರು ಖರ್ಚು ಮಾಡಲು ಈರನ
ಕಾಲಿಗೆ ಬಿದ್ದು ಊರು ಜನರಿಗೆ ನೀರು ಕುಡಿಸಿದ ತಿಮ್ಮನ ಬಾವಿ ನೀರು ಕುಡಿದರೆ ಪಾಪ
ನಿವಾರಣೆಯಾಗುತ್ತದೆ ಎಂದು ಮಾರೆಮ್ಮನ ಪೂಜಾರಿ ಬುಲ್ಡಿ ಈರನ ಬಾಯಿಂದ ಹೇಳಿಸಿದ.
ಇದರಿಂದ ಪಾಪಿಗಳು ಬಾವಿನೀರು ಕುಡಿಯಲು ಕಂತೆ ಕಂತೆ ದುಡ್ಡು ಕೊಟ್ಟರು "ಈರ, ತರ್ಲೆ"
ಪಾಪಿಗಳ ದುಡ್ಡಲ್ಲಿ ಪಾಟ್ನರ್ ಆದರು ಗಣ್ಯಾತಿ ಗಣ್ಯರಿಗೆ ನೀರು ಕುಡಿಸಿ ಶ್ರೀಮಂತರಾದರು.
ಈಗ ಊರಲ್ಲಿ ಪಾಪ ವಿಮೋಚನಾ ಪ್ರಮಾಣ ಪತ್ರ ಪಡೆದವರಿಗೆ ಕೋರ್ಟಿಂದ ವಾರೆಂಟ ಬಂದಿದೆ, ತಿಮ್ಮನ
ವೈರಿ ಗುಂಪಿನ ಅನುಯಾಯಿಗಳು ಲೋಕಾಯುಕ್ತರಿಗೆ ದೂರು ನೀಡಿ ಪಾಪ ವಿಮೋಚನೆ ನೆಪದಲ್ಲಿ ತಮ್ಮ
ತಪ್ಪುಗಳನ್ನು ಪ್ರಾಮಾಣಿಕವಾಗಿ ಒಪ್ಪಿಸಿ ಕೊಂಡಿದ್ದಾರೆಂದು ಕೇಸು ದಾಖಲಿಸಿದ್ದರು.
ಈ ನಡುವೆ ಬುಲ್ಡಿ ಈರ ತರ್ಲೆ ತಿಮ್ಮನಿಗಾಗಿ ಪೋಲೀಸರು ಹುಡುಕಾಟ ನಡೆಸಿದ್ದರು,ತಿಮ್ಮ ಹಂಚುವ
ನೀರಿನಿಂದ ಊರಲ್ಲಿ ಕಾಲರಾ ಬೇನೆ ತಗುಲಿದೆ ಎಂದು ದೂರು ನೀಡಿದ್ದರು.
ಈರ ತಿಮ್ಮನ ಸುಳಿವು ಊರವರಿಗೆ ತಿಳಿದಿದೆ,ಆದರೆ ನೀರಿನ ಋಣ ತೀರಿಸುವುದಕ್ಕಾಗಿ
ತೆಪ್ಪಗಿದ್ದಾರೆ.

*(ಅಜಮೀರ ನಂದಾಪುರ*.)
ಗಂಗಾವತಿ,9449705672.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/CAPHu_VYJftH_PKVzxKmzUYV7OGBg69F7kOPFARk-rtd2tZH7Cg%40mail.gmail.com.

Reply via email to