*ರೈತರ ಮೆಕ್ಕೆಜೋಳ ರಾಜಕಾರಣಿಗಳೆ ಖರೀದಿಸಲಿ* :

ಆಯಾ ಜಿಲ್ಲೆಗಳ ಎಲ್ಲಾ ರಾಜಕೀಯ ಪಕ್ಷಗಳ ಹಾಲಿ ಮಾಜಿ ಎಂ.ಪಿ., ಎಂ.ಎಲ್.ಎ., ಎಂ.ಎಲ್ಸಿ.ಗಳು
ಒಟ್ಟಾಗಿ ತಮ್ಮ ಯೋಗ್ಯತಾನುಸಾರ ನಿಗದಿಪಡಿಸಿದ ಬೆಂಬಲ ಬೆಲೆಯಂತೆ ರೈತರಿಂದ ಮೆಕ್ಕೆಜೋಳ
ಖರೀದಿಸಿ ಸರ್ಕಾರಿ ಗೋಡೌನುಗಳಲ್ಲಿ  ಸಂಗ್ರಹಿಸಿಕೊಳ್ಳಲಿ ಅಥವಾ ನಂತರ ಖರೀದಿದಾರರಿಗೆ 10%
ಅಥವಾ 20% ರಿಯಾಯಿತಿಯಲ್ಲಿ ಮಾರಿಕೊಳ್ಳಲಿ. ಆಗ ಅಂತವರ ಮೇಲೆ ರೈತರಿಗೂ ನಂಬುಗೆ ಮೂಡುತ್ತದೆ.
ವ್ಯಾಪಾರಸ್ತರಿಗೂ ಅನುಕೂಲ ಮಾಡಿದಂತಾಗುತ್ತದೆ. ರೈತರ ಕಷ್ಟವೂ ನೀಗುತ್ತದೆ.
      ರೈತರಿಗೆ ಸಾಲ ಮನ್ನ , ಬಡ್ಡಿಮನ್ನ ಮಾಡಲೂ ಇಲ್ಲ ಬೆಳೆದ ಫಸಲೂ ಕೊಳ್ಳಲ್ಲ ಅಂದ್ರೆ
ಅವರು ಏನು ಮಾಡಬೇಕು?  ರೈತರು ಈ ಎಲ್ಲಾ ರಾಜಕಾರಣಿಗಳ ಪೊಳ್ಳು ಮಾತಿಗೆ ಬಲಿಪಶುವಾಗುವುದು
ನಿಲ್ಲುವುದು ಯಾವಾಗ ? ಕೊರೊನಾದಿಂದ ಸಾಯುವವರ ಸಂಖ್ಯೆಗಿಂತ ಈ ಅನ್ಯಾಯದಿಂದ ಸಾಯುವವರ
ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಎಲ್ಲಾ ರಾಜಕಾರಣಿಗಳು ಆರಾಮಾಗಿ ಅವರವರ ಮನೆಯಲ್ಲಿ
ಆಯಾಗಿದ್ದಾರೆ. ರೈತ ತನ್ನ ಹೆಗಲ ಮೇಕಿನ ಬಾರುಕೋಲಿನ ಚಾಟಿಯನ್ನು ಇವರೆಲ್ಲರತ್ತ ಬೀಸಬೇಕಿದೆ.
     ಆದರೆ ರೈತರಲ್ಲೂ ಸಹ ಬಹುತೇಕರು ಈ ರಾಜಕಾರಣಿಗಳ ಹಿಂದೆ ಅಲೆಯುತ್ತ  ಗ್ರಾ.ಪಂ.,
ತಾ.ಪಂ., ಜಿ.ಪಂ. ರಾಜಕಾರಣಿಗಳ ಹಿಂದೆ ಅಡ್ಡಾಡುವ ಅಡ್ನಾಡಿಗಳಾಗಿದ್ದಾರೆ. ಅರಿವು ಹಾಗೂ
ಒಗ್ಗಟ್ಟು ಇಲ್ಲದ ಸ್ವಾಭಿಮಾನಿ ಅನ್ನದಾತರನ್ನು ಸಾಲಗಾರರನ್ನಾಗಿಸಿ ರಣಹೇಡಿಗಳನ್ನಾಗಿ
ಮಾಡಲಾಗುತ್ತಿದೆ.
    ನಮ್ಮವರೇ ಆದ  ಕೃಷಿಮಂತ್ರಿ ಬಿ.ಸಿ.ಪಾಟೀಲರು ಏನಾದರೂ ಹೊಸತನವನ್ನು ಈ ನಿಟ್ಟಿನಲ್ಲಿ
ತಂದು ದೇಶಕ್ಕೇ ಮಾದರಿಯಾಗಲೆಂದು ಆಶಿಸೋಣವೇ ?!
     - ಆರ್.ಶಿವಕುಮಾರಸ್ವಾಮಿ ಕುರ್ಕಿ, ದಾವಣಗೆರೆ.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/CACdWH%2BDV%2BLiDvZxoxVKq8-6E%2BJ6vrucceEJgw1x%2BFasx05PrfA%40mail.gmail.com.

Reply via email to