Mahantagouda sir incharge principal/HM avrige yearly 30 ELiruttave anta tilisiddiri adakke sambandisida order copy send madi pleas sir...
On 03-Jan-2017 6:52 AM, "Mahantagoud Patil" <[email protected]> wrote: > 👁👁 *ಸಿಸಿ ಕ್ಯಾಮರಾ ಇಲ್ಲದಿದ್ರೆ ಪರೀಕ್ಷಾ ಕೇಂದ್ರ ರದ್ದು* > Tuesday, 03.01.2017, ವಿಜಯವಾಣಿ ಸುದ್ದಿಜಾಲ > > *MAHANTAGOUD.T.PATIL.SWCM.KSPSTA* > > *ಪ್ರಸಕ್ತ ವರ್ಷ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಪ್ರತಿ ಪರೀಕ್ಷಾ > ಕೇಂದ್ರದ ಕಾರ್ಯ ಚಟುವಟಿಕೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಲಿದ್ದು, ಜ.31ರವರೆಗೆ ಕ್ಯಾಮರಾ > ಅಳವಡಿಸಲು ಕೇಂದ್ರಗಳ ಮುಖ್ಯಸ್ಥರಿಗೆ ಡೆಡ್ಲೈನ್ ನೀಡಲಾಗಿದೆ.* > > *ಅಷ್ಟರೊಳಗಾಗಿ ಕ್ಯಾಮರಾ ಅಳವಡಿಸದ ಕೇಂದ್ರಗಳನ್ನು ಪರೀಕ್ಷೆ ಸಂಘಟಿಸುವ ಜವಾಬ್ದಾರಿಯಿಂದಲೇ > ದೂರವಿಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತೀರ್ವನಿಸಿದೆ.* > > *ಕಳೆದ ವರ್ಷದ ಪರೀಕ್ಷೆಯಲ್ಲಿ ಎಲ್ಲ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ. > ಕ್ಯಾಮರಾ ಅಳವಡಿಸದ ಕೇಂದ್ರಗಳಲ್ಲಿ ಸಾಮೂಹಿಕ ನಕಲಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ > ಕೇಳಿಬಂದಿತ್ತು. ಈ ಬಾರಿ ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಂಡಳಿಯು ಪ್ರತಿ > ಕೇಂದ್ರದಲ್ಲಿ ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಲು ಮುಂದಾಗಿದೆ.* > > *2017ರ ಮಾರ್ಚ್ನಲ್ಲಿ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಿದ > ಕೇಂದ್ರಗಳ ಪಟ್ಟಿಯನ್ನು ಆಯಾ ಜಿಲ್ಲಾ ಡಿಡಿಪಿಐಗಳು ಮಂಡಳಿಯ ಕೇಂದ್ರ ಕಚೇರಿಗೆ > ಕಳುಹಿಸಿದ್ದಾರೆ. ಕ್ಯಾಮರಾ ಅಳವಡಿಸದಿದ್ದರೂ ಅನಿವಾರ್ಯವಾಗಿ ಕೇಂದ್ರ ರಚಿಸುವ ಅವಶ್ಯಕತೆ > ಇದ್ದ ಕಡೆಗಳಲ್ಲಿ ಜ.31ರೊಳಗಾಗಿ ಕ್ಯಾಮರಾ ಅಳವಡಿಸುವ ಬಗ್ಗೆ ಕೇಂದ್ರದ (ಶಾಲಾ) > ಮುಖ್ಯಸ್ಥರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳುತ್ತಿದ್ದಾರೆ.* > *MAHANTAGOUD T PATIL SWCM KSPSTA* > > *ಗಡುವು ನೀಡಿದ ಹೊರತಾಗಿಯೂ ಕ್ಯಾಮರಾ ಅಳವಡಿಸದಿದ್ದರೆ ಕೇಂದ್ರವನ್ನೇ ರದ್ದುಗೊಳಿಸಿ, > ಪರ್ಯಾಯ ವ್ಯವಸ್ಥೆ ಕಲ್ಪಿಸಲು ಈಗಿನಿಂದಲೇ ಯೋಜನೆ ರೂಪಿಸುತ್ತಿದ್ದಾರೆ.* > > *ಪ್ರಶ್ನೆಪತ್ರಿಕೆ ಪಾಲಕರ ನೇಮಕ* > > *ಪ್ರಶ್ನೆಪತ್ರಿಕೆ ಕೆಲಸ ನಿರ್ವಹಣೆ, ಸೋರಿಕೆ ತಡೆಗಟ್ಟಲು ರಾಜ್ಯದಲ್ಲೇ ಇದೇ ಮೊದಲ > ಬಾರಿಗೆ ಪ್ರತಿ ಪರೀಕ್ಷಾ ಕೇಂದ್ರಕ್ಕೂ ತಲಾ ಒಬ್ಬ ಪ್ರಶ್ನೆಪತ್ರಿಕೆ ಪಾಲಕರನ್ನು > ನೇಮಿಸಲಾಗುತ್ತಿದೆ. ಈ ಹಿಂದೆಲ್ಲ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಎಲ್ಲರೂ > ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು. ಯಾರ ಮೇಲೆ ಕ್ರಮ ಜರುಗಿಸಬೇಕೆಂದು ಮಂಡಳಿಯು > ಗೊಂದಲ, ಇಕ್ಕಟ್ಟಿಗೆ ಸಿಲುಕುತ್ತಿತ್ತು. ಇನ್ಮುಂದೆ ಪ್ರಶ್ನೆಪತ್ರಿಕೆ ಸೋರಿಕೆಯಾದರೆ > ಮಂಡಳಿಯು ನೇರವಾಗಿ ಪ್ರಶ್ನೆಪತ್ರಿಕೆ ಪಾಲಕರನ್ನೇ ಹೊಣೆಯಾಗಿಸಲಿದೆ. ಖಜಾನೆಯಿಂದ ಬರಲಿರುವ > ಪ್ರಶ್ನೆಪತ್ರಿಕೆಗಳನ್ನು ಪ್ರಶ್ನೆಪತ್ರಿಕೆ ಪಾಲಕರುಸುಪರ್ದಿಗೆ ಪಡೆದು ಕೇಂದ್ರದ ಮುಖ್ಯ > ಅಧೀಕ್ಷಕರಿಗೆ ವಿತರಿಸಲಿದ್ದಾರೆ. ಗೈರಾದ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ವಾಪಸ್ ಪಡೆದು > ಮಂಡಳಿಗೆ ಮರಳಿಸಲಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಗಟ್ಟಲಿದ್ದಾರೆ > ಎನ್ನುತ್ತಾರೆ ಬೆಳಗಾವಿ ಬಿಇಒ ಎಂ.ಆರ್.ಅಲಾಸೆ.* > > *ಹೇಗೆ ಅಳವಡಿಸಬೇಕು?* > > *ಪರೀಕ್ಷಾ ಕೇಂದ್ರದಲ್ಲಿ ಅಳವಡಿಕೆಯಾದ ಕ್ಯಾಮರಾಗಳು ದಿನದ 24 ಗಂಟೆಗಳ ಕಾರ್ಯ > ನಿರ್ವಹಿಸಬೇಕು. ಕೇಂದ್ರದ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಕ್ಯಾಮರಾ ಅಳವಡಿಸಬೇಕು. ಕೇಂದ್ರದ > ಮುಖ್ಯ ಅಧೀಕ್ಷಕರ ಕೊಠಡಿಯಲ್ಲಿ ಎಲ್ಲ ಪರೀಕ್ಷಾ ಚಟುವಟಿಕೆ ವೀಕ್ಷಿಸಲು ಸ್ಕ್ರೀನ್ ಪರದೆ > ವ್ಯವಸ್ಥೆ ಮಾಡಬೇಕು. ಕೊಠಡಿಯ ಕಪ್ಪು ಹಲಗೆಯಿಂದ ಆರಡಿ ಜಾಗ ಬಿಟ್ಟು ಎಲ್ಲ 24 > ವಿದ್ಯಾರ್ಥಿಗಳು ಕಾಣುವಂತೆ 360 ಡಿಗ್ರಿ ಕೋನದಲ್ಲಿ ಕ್ಯಾಮರಾ ಅಳವಡಿಸುವಂತೆ > ಸೂಚಿಸಲಾಗಿದೆ. ಬೆಳಗಾವಿ ಸೇರಿ ರಾಜ್ಯದ ಹಲವೆಡೆ ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಕೆ > ಪ್ರಕ್ರಿಯೆ ಭರದಿಂದ ಸಾಗಿದೆ.* > > -- > You received this message because you are subscribed to the Google Groups > "KSHST" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > To view this discussion on the web visit https://groups.google.com/d/ > msgid/kshst/CAL8OgzBSeQCWpc6moPH%2BRG1pHDbGmMyqcMWG-JWODVD-N4% > 2BEpw%40mail.gmail.com > <https://groups.google.com/d/msgid/kshst/CAL8OgzBSeQCWpc6moPH%2BRG1pHDbGmMyqcMWG-JWODVD-N4%2BEpw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAMgShGtKeqD3WxZj%3DPwMJ%3DH-0x%3D79sortK3LFQyOOWNjSS7dUg%40mail.gmail.com. For more options, visit https://groups.google.com/d/optout.
