7.ಪರಮ ಸತ್ಯದ ಒಗಟುಗಳು....

    ಒಗಟು..7
  =====
'ಸೊನ್ನೆ'ಯನು 'ಸೊನ್ನೆ'ಯಲಿ
ಭಾಗಿಸಿದರೆ ಉಳಿಯುವುದು
                        ಎಷ್ಟು,?..!
'ಬೆಳೆವ ಸಿರಿ ಮೊಳಕೆಯಲೆ'..
ತರಗತಿಯಲ್ಲೆ ಕೇಳಿದ್ದು
ಈ ಪುಟ್ಟ ಮನಸ್ಸು...!!

ಹುಟ್ಟೂರು ಅತಿದೂರವೆನಲ್ಲ
ಹತ್ತಿರ,ತಮಿಳುನಾಡಿನ 'ಈರೊಡ್'..!
'ಶ್ರೀನಿವಾಸ-ಕೊಮಲತ್ತಮ್ಮಾಳ'ರ
ಮುದ್ದು ಮಗುವಿದು ನೋಡು...!!

ಗಣಿತದಲಿ ಅತೀ ಆಸಕ್ತಿ
'ಮಾಯಾಚೌಕ'ವ ರಚಿಸಿ
ಮಾಡಿದರು ಜಗದೊಳಗೆ ಮೋಡಿ..!
ಹಾಸಿಗೆಯಾಳಾದರೇನು?
ಗಣಿತವೆ ಉಸಿರು ,ನುಡಿದರು
ಸಂಖ್ಯೆ 1729,,,.ಕೇಳಿ ಅಚ್ಚರಿ
ಪಟ್ಟಿದ್ದು ಗಣಿತ ಗುರು 'ಹಾರ್ಡಿ'..!!

Conjucture,prime,identities....
ಎಲ್ಲದರಲೂ ಮೂಡಿಸಿದರು
ಇವರ ಜ್ಞಾನದ 'ಛಾಪು'...!
ಛೆ..!,
ದೇವರಿಗೆ ಅಸೂಯೆ ,32ರಲೆ
ಇಹಲೋಕ ತ್ಯಜಿಸಿದರೇನು?
ಸ್ವಲ್ಪವೂ ಕಳೆಗುಂದಿಲ್ಲ ಈಗಲೂ,
ಮಾಡಿರುವ ಸಾಧನೆಗಳ ಹೊಳಪು..!!

ಹೇಳುವೆಯ ನೀ ಜಾಣ
ಸುಳ್ಳಲ್ಲ ಗಣಿತವಿದು
'ಪರಮ ಸತ್ಯ'.....!!

               .....ಕವಿಹೃದಯಿ
                    ಪರಮೇಶ್ವರಹೆಗಡೆ.


On Jan 31, 2016 7:42 PM, "Parameshwar Hegde" <phegde...@gmail.com> wrote:

> ಹೀಗೊಂದು ಯೋಚನೆ..
> ಗಣಿತಕ್ಕೊಂದು ಒಗಟು--''ಪರಮ ಸತ್ಯದ ಒಗಟುಗಳು''...!!
>
>    ಸ್ನೇಹಿತರೆ,
>      ಗಣಿತವೆಂಬುದು ನಮಗೇನು ಅಚ್ಚುಮೆಚ್ಚು...ಮಕ್ಕಳಿಗೆ?!!..ಇಷ್ಟವೇ.ಆದರೆ, ಅರ್ಥವಾಗಿ
> ತಾವೇ ಸ್ವಂತ ಬಿಡಿಸುವಂತಾದಾಗ ಮಾತ್ರ.ಇಲ್ಲವಾದಲ್ಲಿ ಗಣಿತ ಕಬ್ಬಿಣದ ಕಡಲೆ,ಬಿಡಿಸಲಾಗದ
> ಒಗಟು.!!ಇದಕ್ಕೆಲ್ಲ ಗಣಿತದ ಮೂಲಕಲ್ಪನೆಗಳ ಕುರಿತಾದ  ಅಸ್ಪಷ್ಟ ಮಾಹಿತಿಗಳು ಎಂಬುದನ್ನು
> ಪ್ರತ್ಯೇಕವಾಗಿ ಹೇಳಬೇಕೆಂದೇನು ಇಲ್ಲ.ಹಾಗಾಗಿ ಗಣಿತದ ಮೂಲ ಕಲ್ಪನೆಗಳು, ಕ್ರಿಯೆಗಳು,ಮತ್ತು
> ಗಣಿತ ವಿಷಯಗಳ ಕುರಿತ ಕೆಲವು ಒಗಟುಗಳನ್ನು ಬರೆಯುವ ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿದ್ದೇನೆ
> .ನಿಮ್ಮ ತರಗತಿಗಳ ನಡುವೆ,ವಿರಾಮದ ಅವಧಿಗಳಲ್ಲಿ ಅಥವಾ ಚಿಕ್ಕ ತರಗತಿಗಳಲ್ಲಿ(8th)
> ಉಪಯೋಗವಾದೀತು...
> ಇದು ಒಂದು ಹೊಸ ಪ್ರಯತ್ನವಷ್ಟೆ.ಮೂಲಭೂತ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ
> ಸರಿಪಡಿಸುವಲ್ಲಿ ತಾವಿದ್ದೀರೆಂಬ ಧೈರ್ಯ ಇದ್ದೇ ಇದೆ
>                ನಿಮ್ಮವ,
>                      ಪರಮೇಶ್ವರ ಹೆಗಡೆ.
>
>       ''ಪರಮ ಸತ್ಯದ ಒಗಟುಗಳು''
>    ಒಗಟು1:
>    ''ಎಲ್ಲರನೂ ಬಾಗಿಪನು
> ತಾನಾರಿಗೂ ತಲೆ ಬಾಗನು..
> ವರ್ಗ,ಘನ,ಚತುರ್ಥ..
> ...ನೀವೆಷ್ಟೇ ಏರಿಸಿದರೂ 'ಘಾತ'
> ಜಗ್ಗನಿವ ಭಂಡ...!
> ಕೇಳಿದರೆ ಪ್ರಥ್ವಿಯೇ
> ತಾನೆಂಬ ಪ್ರಚಂಡ..!!
> ಹೇಳುವೆಯಾ ನೀ ಜಾಣ
> ಸುಳ್ಳಲ್ಲ ಗಣಿತವಿದು-ಪರಮ ಸತ್ಯ..!!
>                ಕವಿಹೃದಯಿ,
>              ಪರಮೇಶ್ವರ ಹೆಗಡೆ
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to