ಮುಖಪುಟ

ಗಣಿತದಲ್ಲಿ ಅಗಣಿತ ಸಾಧನೆ- ಯಾಕೂಬ್ ಮಾಸ್ಟರ್

ನಾಳೆ ಶ್ಯಾಮ ರಾವ್ ಪ್ರತಿಷ್ಠಾನದ ಗೌರವ ಮಂಗಳೂರು, ಫೆ.13: ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ
ಅಪಾರ ಕೊಡುಗೆಗಳ ಹಿನ್ನೆಲೆಯಲ್ಲಿ ಶಿಕ್ಷಕ ಕೊಯ್ಯೂರು ಯಾಕುಬ್ ಅವರು ರವಿವಾರ ಪ್ರತಿಷ್ಠಿತ
ಶ್ಯಾಮರಾವ್ ಸ್ಮಾರಕ - ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಬೆಳ್ತಂಗಡಿ ತಾಲೂಕಿನ ಹಿಂದುಳಿದ ಗ್ರಾಮ - ಕೊಯ್ಯೂರು ನಲ್ಲಿ ಸಂಪ್ರದಾಯಸ್ತ ಕುಟುಂಬದಲ್ಲಿ
ಜನಿಸಿ, ವಿದ್ಯಾಕ್ಷೇತ್ರದಲ್ಲಿ ಬೆಳೆದ ರೀತಿ ಬೆರಗು ಹುಟ್ಟಿಸುವಂತಹದು. ಪ್ರಾಥಮಿಕ
ವಿದ್ಯಾಭ್ಯಾಸ, ಕೊಯ್ಯೂರು ಸ.ಹಿ.ಪ್ರಾ. ಶಾಲೆಯಲ್ಲಿ ಹಾಗೂ ಹೈಸ್ಕೂಲು ಶಿಕ್ಷಣವನ್ನು
ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಪಡೆದರು. ತಮ್ಮ ಮನೆಯಿಂದ 10 ಕಿ.ಮೀ. ದೂರದ
ಪ್ರೌಢಶಾಲೆಗೆ ಕಾಲ್ನಡಿಗೆಯಲ್ಲೇ, ಕಾಡುದಾರಿಯಲ್ಲಿ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ
ಇತ್ತು. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತನ್ನ ಬಿ. ಎಸ್ಸಿ. ಪದವಿಯನ್ನು ಉನ್ನತ
ಶ್ರೇಣಿಯಲ್ಲಿ ಪೂರೈಸಿ ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿ.ಎಡ್.
ಪದವಿಯನ್ನು ಪಡೆದರು. ಮಂಗಳೂರು ವಿವಿಯಲ್ಲಿ ಅತ್ಯುನ್ನತ ಶ್ರೇಣಿ (ರ್ಯಾಂಕ್) ಗಳಿಸಿದ್ದರು.
1996 ರಲ್ಲಿ ನಡ ಸರಕಾರಿ ಪ್ರೌಢಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು - ಲೆಕ್ಕದ (ಗಣಿತ)
ಮಾಸ್ಟರ್ ಆಗಿದ್ದರು. ವಿದ್ಯಾರ್ಥಿಗಳ ಶ್ರೇಯಸ್ಸನ್ನು ಬಯಸಿ ಹಗಲು- ರಾತ್ರಿ ತರಗತಿ ನಡೆಸಿ,
ಉತ್ತಮ ಫಲಿತಾಂಶ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ಬರೇ ಲೆಕ್ಕಕ್ಕೆ ಮಾಸ್ತರಲ್ಲ.
ಗಣಿತ ಪಾಠವನ್ನು ವಿನೂತನ ರೀತಿಯಲ್ಲಿ ಬೋಧನೆ ಮಾಡಿದವರು. 2012ರಲ್ಲಿ ಗಣಿತಲೋಕಕ್ಕೆ
ಅಗಣಿತವಾದ ಗಣಿತ ಪ್ರಯೋಗ ಶಾಲೆ (ಗಣಿತ ಲೋಕ) ಯನ್ನು ನಿರ್ಮಿಸಿ ಕರ್ನಾಟಕ ರಾಜ್ಯದಲ್ಲೇ
ಅಪ್ರತಿಮ ಗಣಿತ ಸಾಧಕನೆನಿಸಿಕೊಂಡವರು. ಸರಕಾರದಿಂದ ಯಾವುದೇ ಅನುದಾನ ಪಡೆಯದೆ, ತನ್ನ ಸ್ವಂತ
ಕರ್ಚಿನಿಂದ ಹಳೆವಿದ್ಯಾರ್ಥಿಗಳಿಂದ ಪ್ರಯೋಗಶಾಲೆಯ ವಿಸ್ತ್ರತ ಯೋಜನೆಯನ್ನು ರೂಪಿಸಿ
ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ, ಸಹಶಿಕ್ಷಕರು ಹಾಗೂ ಊರವರ ಸಹಕಾರಗಳಿಂದ ರಾಜ್ಯ
ಮಟ್ಟದ ಗಣಿತ ಪ್ರಯೋಗಾಲಯವನ್ನು ನಡ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಲು ಸಾಧ್ಯವಾಯ್ತು
ಎನ್ನುತ್ತಾರೆ ಯಾಕೂಬ್ ಮಾಸ್ತರ್. 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಕಲಿಕೆಯಲ್ಲಿ
ಹಿಂದುಳಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ 'ಟಾರ್ಗೆಟ್-40' ಎಂಬ ಶೀರ್ಷಿಕೆಯಡಿ, ಪ್ರಶ್ನೆ
ಪತ್ರಿಕೆ ತಯಾರಿ, ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಸಂಕ್ಷಿಪ್ತ ನೋಟ್ಸ್
ತಯಾರಿಕೆ ಅಲ್ಲದೇ ಇನ್ನೂ ಅನೇಕ ರಚನೆಗಳನ್ನು ಮಾಡಿ, ರಾಜ್ಯ ಗಣಿತ ಮತ್ತು ವಿಜ್ನ ಶಿಕ್ಷಕರ
ವೇದಿಕೆಯ ಮೂಲಕ ರಾಜ್ಯದ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿ, ತನ್ನ
ಮಾತ್ಸರ ರಹಿತ ಶಿಕ್ಷಕ ವೃತ್ತಿಗೆ ಕಾರಣರಾಗಿ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪ್ರೀತಿಗೆ
ಪಾತ್ರರಾದವರು. 2015ನೇ ಸಾಲಿನಲ್ಲಿ 10ನೇ ತರಗತಿಯ ಗಣಿತ ಪಠ್ಯ ವಿಷಯಕ್ಕೆ 'ಎಸೆಸೆಲ್ಸಿ
ಕ್ಲಾಸ್ ನೋಟ'ನ್ನು ಎಲ್ಲಾ ಅಧ್ಯಾಯಗಳಿಗೆ ಆಕರ್ಷಕ ಶೈಲಿಯಲ್ಲಿ ರಚಿಸಿ ಎಲ್ಲರಿಗೂ ಉಚಿತವಾಗಿ
ಲಭ್ಯವಾಗುವಂತೆ ಮಾಡಿದ್ದರಲ್ಲದೇ, ಗಣಿತದ ವಿನೂತನ ಪ್ರಯೋಗಕ್ಕೆ ಪ್ರಯತ್ನ ಮಾಡಿ ಗಣಿತ ಪಾಠದ
ವೀಡಿಯೋ ತಯಾರಿಸಿ, ಎಲ್ಲಾ ಶಿಕ್ಷಕರಿಗೆ ಪೂರೈಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೇ
ವಿಶೇಷ ಶೈಲಿಯಲ್ಲಿ ಗಣಿತ ಅಧ್ಯಾಯವಾರು ಕ್ವಿಜ್(ಮಲ್ಟಿಪಲ್ ಕ್ವಶ್ಚನ್ಸ್) ತಯಾರಿಸುವ
ಪ್ರಯತ್ನ ಮಾಡಿದ್ದಾರೆ. ಈ ತನ್ಮಧ್ಯೆ ಸರಕಾರವು ಯಾಕೂಬ್ ರವರನ್ನು, ಬೆಳ್ತಂಗಡಿ ತಾಲೂಕಿನ
ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾಗಿ ನಿಯೋಜಿಸಲಾಗಿದ್ದು ಶಾಲಾ ಮಕ್ಕಳ ಬಿಸಿಯೂಟದ
ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದು. ಉತ್ತಮ ಸಂಪನ್ಮೂಲ
ವ್ಯಕ್ತಿ ಎಸೆಸೆಲ್ಸಿ ಪರೀಕ್ಷಾ ಪೂರ್ವತರಬೇತಿಗಳನ್ನು ಅನೇಕ ಸಂಘಸಂಸ್ಥೆಗಳ ಸಹಯೋಗದೊಂದಿಗೆ,
ಮುಝ್ಯವಾಗಿ ಬೆಳ್ತಂಗಡಿ ಜಮಿಯತ್ತುಲ್ ಫಲಾಹ್ ಘಟಕದೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟು
ಉತ್ತಮ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2002ರಲ್ಲಿ ಯಾಕೂಬ್
ಕರ್ನಾಟಕ ಸರಕಾರದ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಗೆ ಭಾಜನಾರಾದರು, ಇದೀಗ ಕೆಂದ್ರ ಸರಕಾರದ
ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಆಶ್ರಯದಲ್ಲಿರುವ ರಾಷ್ಟ್ರೀಯ ಆವಿಷ್ಕಾರ ಅಭಿಯಾನದ
ರಾಜ್ಯಮಟ್ಟದ ಗಣಿತ ಸಮಿತಿಯ ಸದಸ್ಯರಾಗಿ ಇವರನ್ನು ನೇಮಿಸಿ ಸರಕಾರ ಆದೇಶ ನೀಡಿದೆ. ಇದೀಗ
ಶ್ಯಾಮ ರಾವ್ ಪ್ರತಿಷ್ಠಾನವು ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರೌಢ ಶಾಲೆ-ಪದವಿ ಪೂರ್ವ
ಕಾಲೇಜಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಶಿಕ್ಷಕರಿಗಾಗಿ ನೀಡುತ್ತಿರುವ ಪ್ರತಿಷ್ಠಿತ
ಸ್ಯಾಮ ರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದು ಪ್ರಶಸ್ತಿಯನ್ನು
ಫೆ.14ರಂದು ವಳಚ್ಚಿಲಿನಲ್ಲಿರುವ ಶ್ರೀನಿವಾಸ ಕಾಲೇಜಿನ ಸಂಭ್ರಮದ ಸಮಾರಂಭದಲ್ಲಿ
ಸ್ವೀಕರಿಸಲಿದ್ದಾರೆ.

ಗಣಿತದಲ್ಲಿ ಅಗಣಿತ ಸಾಧನೆ- ಯಾಕೂಬ್ ಮಾಸ್ಟರ್
http://newshunt.com/share/49662038
via Dailyhunt
ಗಣಿತದಲ್ಲಿ ಅಗಣಿತ ಸಾಧನೆ- ಯಾಕೂಬ್ ಮಾಸ್ಟರ್

Click 👉 http://bit.ly/1QdIaQQ

    📧 Varthabharati 📧

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to