http://m.prajavani.net/article/2016_02_18/388163

*₹ 251ಕ್ಕೆ ‘3ಜಿ’ ಸ್ಮಾರ್ಟ್‌ ಫೋನ್*



Previous <http://m.prajavani.net/article/2016_02_18/388163#>Next
<http://m.prajavani.net/article/2016_02_18/388163#>

18 Feb, 2016

<https://www.facebook.com/sharer/sharer.php?u=http%3A%2F%2Fgoo.gl%2FJml27K>
<https://twitter.com/intent/tweet?text=%E2%82%B9+251%E0%B2%95%E0%B3%8D%E0%B2%95%E0%B3%86+%E2%80%983%E0%B2%9C%E0%B2%BF%E2%80%99+%E0%B2%B8%E0%B3%8D%E0%B2%AE%E0%B2%BE%E0%B2%B0%E0%B3%8D%E0%B2%9F%E0%B3%8D%E2%80%8C+%E0%B2%AB%E0%B3%8B%E0%B2%A8%E0%B3%8D+http%3A%2F%2Fgoo.gl%2FJml27K>
<whatsapp://send?text=%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%A6+%E0%B2%85%E0%B2%A4%E0%B3%8D%E0%B2%AF%E0%B2%82%E0%B2%A4+%E0%B2%85%E0%B2%97%E0%B3%8D%E0%B2%97%E0%B2%A6+%E0%B2%AC%E0%B3%86%E0%B2%B2%E0%B3%86%E0%B2%AF+3%E0%B2%9C%E0%B2%BF+%E0%B2%B8%E0%B3%8D%E0%B2%AE%E0%B2%BE%E0%B2%B0%E0%B3%8D%E0%B2%9F%E0%B3%8D%E2%80%8C%E0%B2%AB%E0%B3%8B%E0%B2%A8%E0%B3%8D%E2%80%8C+%E2%80%98%E0%B2%AB%E0%B3%8D%E0%B2%B0%E0%B3%80%E0%B2%A1%E0%B2%82+251%E2%80%99%26nbsp%3B+%E0%B2%85%E0%B2%A8%E0%B3%8D%E0%B2%A8%E0%B3%81+%E0%B2%AC%E0%B3%81%E0%B2%A7%E0%B2%B5%E0%B2%BE%E0%B2%B0+%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AE%E0%B2%BE%E0%B2%B0%E0%B3%81%E0%B2%95%E0%B2%9F%E0%B3%8D%E0%B2%9F%E0%B3%86%E0%B2%97%E0%B3%86+%E0%B2%AC%E0%B2%BF%E0%B2%A1%E0%B3%81%E0%B2%97%E0%B2%A1%E0%B3%86+%E0%B2%AE%E0%B2%BE%E0%B2%A1%E0%B2%B2%E0%B2%BE%E0%B2%97%E0%B2%BF%E0%B2%A6%E0%B3%86.%0D%0Ahttp%3A%2F%2Fgoo.gl%2FJml27K>
<https://plus.google.com/share?url=http%3A%2F%2Fgoo.gl%2FJml27K>
<http://www.pinterest.com/pin/find/?url=http%3A%2F%2Fgoo.gl%2FJml27K>
<http://www.linkedin.com/shareArticle?mini=true&title=%E2%82%B9+251%E0%B2%95%E0%B3%8D%E0%B2%95%E0%B3%86+%E2%80%983%E0%B2%9C%E0%B2%BF%E2%80%99+%E0%B2%B8%E0%B3%8D%E0%B2%AE%E0%B2%BE%E0%B2%B0%E0%B3%8D%E0%B2%9F%E0%B3%8D%E2%80%8C+%E0%B2%AB%E0%B3%8B%E0%B2%A8%E0%B3%8D+&url=http%3A%2F%2Fgoo.gl%2FJml27K>

*ನವದೆಹಲಿ (ಪಿಟಿಐ): *ವಿಶ್ವದ ಅತ್ಯಂತ ಅಗ್ಗದ ಬೆಲೆಯ 3ಜಿ ಸ್ಮಾರ್ಟ್‌ಫೋನ್‌ ‘ಫ್ರೀಡಂ
251’  ಅನ್ನು ಬುಧವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ನೊಯಿಡಾ ಮೂಲದ ರಿಂಗಿಂಗ್‌ ಬೆಲ್ಸ್‌ ಕಂಪೆನಿ ತಯಾರಿಸಿರುವ ಈ ಮೊಬೈಲ್‌ ಬೆಲೆ ಕೇವಲ ₹251
ಮಾತ್ರ! ಇದು ವಿಶ್ವದ ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌  ಅವರು
ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡಿದರು. ಬಿಜೆಪಿ  ನಾಯಕ ಮುರುಳಿ ಮನೋಹರ್‌ ಜೋಷಿ ಅಧ್ಯಕ್ಷತೆ
ವಹಿಸಿದ್ದರು.

ಗುರುವಾರ ಬೆಳಿಗ್ಗೆ 6 ಗಂಟೆಯಿಂದ  ಕಂಪೆನಿಯ ‘ಫ್ರೀಡಂ 251’ ವೆಬ್‌ಸೈಟ್‌ನಲ್ಲಿ
ಆನ್‌ಲೈನ್‌   ಮುಂಗಡ ಬುಕ್ಕಿಂಗ್‌  ಆರಂಭವಾಗಲಿದ್ದು, ಫೆ.21ರ ರಾತ್ರಿ 8ಗಂಟೆಗೆ
ಬುಕ್ಕಿಂಗ್ ಕೊನೆಗೊಳ್ಳಲಿದೆ.

ಈ ಮೊದಲು ₹500ಗೆ ಮೊಬೈಲ್‌ ನೀಡುವುದಾಗಿ ಹೇಳಿದ್ದ ಕಂಪೆನಿ, ಏಕಾಏಕಿ ಬೆಲೆಯನ್ನು ₹251ಕ್ಕೆ
ಇಳಿಸಿ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಖರೀದಿಗೆ ಗ್ರಾಹಕರು ಭಾರಿ ಉತ್ಸಾಹ
ತೋರಿಸಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆ ಎಂದರೂ ₹1,500
ಆಗಿದೆ. ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌, ಯೂಟ್ಯೂಬ್‌ ಜೊತೆಗೆ ಮಹಿಳಾ ಸುರಕ್ಷತೆ, ಸ್ವಚ್ಛ
ಭಾರತ್‌, ಮೀನುಗಾರಿಕೆ, ಕೃಷಿ, ವೈದ್ಯಕೀಯ  ಆ್ಯಪ್‌ಗಳ ಜೊತೆಗೆ   ಮೊಬೈಲ್‌ ದೊರೆಯಲಿದೆ.

ಕಳೆದ ವರ್ಷವಷ್ಟೇ ಅಸ್ತಿತ್ವಕ್ಕೆ ಬಂದ ರಿಂಗಿಂಗ್‌ ಬೆಲ್ಸ್  ಇದಕ್ಕೂ ಮೊದಲು ಮಾರುಕಟ್ಟೆಗೆ
₹ 2,999 ಬೆಲೆಯಲ್ಲಿ 4ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು.

ಕಳೆದ ವರ್ಷ ಉದ್ಯಮಿ ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಕಮ್ಯೂನಿಕೇಷನ್ಸ್‌ ಕಂಪೆನಿ
ಜೊತೆಗೂಡಿ ಡಾಟಾ ವಿಂಡ್‌ ಎಂಬ ಕಂಪೆನಿ ₹999  ಬೆಲೆಯ  ಸ್ಮಾರ್ಟ್‌ಫೋನ್‌ ಬಿಡುಗಡೆ
ಮಾಡುವುದಾಗಿ ಘೋಷಿಸಿತ್ತು. ಆದರೆ, ಆ ಫೋನ್‌ ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

*ಗುಟ್ಟು ಬಿಡದ ಬೆಲ್ಸ್‌!: *ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಲಾದ
ಹ್ಯಾಂಡ್‌ಸೆಟ್‌ನ್ನು  ಇಷ್ಟೊಂದು ಅಗ್ಗದ ಬೆಲೆಯಲ್ಲಿ ಹೇಗೆ ನೀಡಲಾಗುತ್ತಿದೆ  ಎಂಬ
ಗುಟ್ಟನ್ನು ಕಂಪೆನಿ ಬಿಟ್ಟುಕೊಟ್ಟಿಲ್ಲ. ಸಂಸ್ಥೆಯು ಇದರೊಂದಿಗೆ ಇನ್ನೂ ಎರಡು ಫೀಚರ್‌
ಫೋನ್‌ಗಳನ್ನು ಬಿಡುಗಡೆ ಮಾಡಿದೆ.
*
*ಮೊಬೈಲ್‌ ಉದ್ದಿಮೆಯ ಆಕ್ಷೇಪ*
₹ 251ಕ್ಕೆ ಸ್ಮಾರ್ಟ್‌ಫೋನ್‌ ಮಾರಾಟ ಮಾಡುವುದಕ್ಕೆ ಮೊಬೈಲ್‌ ತಯಾರಕರ ಸಂಘ ‘ಐಸಿಎ’ ಆಕ್ಷೇಪ
ದಾಖಲಿಸಿದೆ. ಈ ಸಂಬಂಧ ದೂರಸಂಪರ್ಕ ಸಚಿವ ರವಿ ಶಂಕರ್‌ ಪ್ರಸಾದ್‌ ಅವರಿಗೆ ಪತ್ರ ಬರೆದಿರುವ
‘ಐಸಿಎ’, ಸಬ್ಸಿಡಿ ನೀಡಿದರೂ ಸ್ಮಾರ್ಟ್‌ಫೋನ್‌ಗಳನ್ನು ₹ 3,500ಕ್ಕಿಂತ ಕಡಿಮೆ ಬೆಲೆಗೆ
ಮಾರಲು ಸಾಧ್ಯವಿಲ್ಲ. ‘ಫ್ರೀಡಂ 251’ಗೆ ಸಂಬಂಧಿಸಿದ ಹಲವಾರು ಅನುಮಾನ  ದೂರವಾಗುವ ಮುನ್ನವೇ
ಕೇಂದ್ರ  ಸಚಿವರು  ಮತ್ತು ರಾಜಕಾರಣಿಗಳು ಮೊಬೈಲ್‌ ಬಿಡುಗಡೆ ಸಮಾರಂಭದಲ್ಲಿ
ಭಾಗವಹಿಸಿರುವುದು ಸೂಕ್ತವಲ್ಲ ಎಂದೂ ‘ಐಸಿಎ’ ಅಭಿಪ್ರಾಯಪಟ್ಟಿದೆ.

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to