Wish all teachers and friends a happy science day 😜 On Feb 28, 2016 8:33 AM, "HAREESHKUMAR K Agasanapura" <harihusk...@gmail.com> wrote:
> > http://m.vijaykarnataka.com/state/vk-special/VK-Special-C-V-Raman-Today-National-Science-Day/articleshow/51172165.cms > > *ಅನುದಿನವೂ ವಿಜ್ಞಾನ ದಿನವಾಗಲಿ!* > > Feb 28, 2016, 04.00 AM IST > > WhatsappFacebookGoogle PlusTwitterEmail > > C-V-Raman > > AAA > > ಇಂದು ರಾಷ್ಟ್ರೀಯ ವಿಜ್ಞಾನ ದಿನ. ವಿಶ್ವ ವಿಖ್ಯಾತ ವಿಜ್ಞಾನಿ ಸರ್. ಸಿ.ವಿ. ರಾಮನ್, > ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು > ಪ್ರತಿಪಾದಿಸಿದ ದಿನ. ಮಾನವನ ಏಳ್ಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ವಹಿಸುತ್ತಿರುವ > ಮಹತ್ತರ ಪಾತ್ರವನ್ನು ಗುರುತಿಸಿ, ಆ ವಲಯಕ್ಕೆ ಮತ್ತಷ್ಟು ಬಲತುಂಬುವ, ಸಂಶೋಧನಾ ರಂಗದಿಂದ > ವಿಮುಖರಾಗುತ್ತಿರುವ ಪೀಳಿಗೆಯನ್ನು ವಿಜ್ಞಾನಮುಖಿಯಾಗಿಸುವ ಕೆಲಸ ಆಗಬೇಕಿದೆ. > > ----- > * ಸುಧೀಂದ್ರ ಹಾಲ್ದೊಡ್ಡೇರಿ > ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟು ಹದಿನಾರು ವರ್ಷಗಳು ಉರುಳಿವೆ. ಕಳೆದೊಂದು > ಶತಮಾನದತ್ತ ಅವಲೋಕಿಸಿದಾಗ ನಿಚ್ಚಳವಾಗಿ ಕಂಡುಬರುವುದು ವಿಜ್ಞಾನದೊಂದಿಗೆ ನಡೆದ ಅನುಸಂಧಾನದ > ಚರಿತ್ರೆಯೇ. ವಿಜ್ಞಾನದ ಜತೆಗಿನ ಈ ಅನುಸಂಧಾನ ಮಾನವ ಚಿಂತನೆಯ ದಿಕ್ಕನ್ನೇ ಬದಲಿಸಿದೆ. > ವಿಜ್ಞಾನ ಸಂಶೋಧನೆಗಳು, ಚಿಂತನೆಗಳು, ಅವುಗಳಿಂದ ಮೂಡಿದ ತಂತ್ರಜ್ಞಾನ ಹೊಸ ಸಂಸ್ಕೃತಿಯ > ಹುಟ್ಟಿಗೆ ನಾಂದಿ ಹಾಡಿವೆ. ಮನುಕುಲದ ಇತಿಹಾಸದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದಷ್ಟು > ವೈಜ್ಞಾನಿಕ ಪ್ರಗತಿ ಇನ್ಯಾವ ಕಾಲದಲ್ಲಿಯೂ ನಡೆದಿಲ್ಲ. ಈ ಪ್ರಗತಿಯ ಬಗ್ಗೆ ಮಾತನಾಡುವಾಗ > ಕೂಡಲೇ ನಮ್ಮ ನೆನಪಿಗೆ ಬರುವುದು ಅದು ಕೊಟ್ಟಿರುವ ಐಹಿಕ ಸುಖಸಾಧನಗಳು. ಅದು ಮಿಂಚಿನ ವೇಗದ > ವಿಮಾನ - ಅಂತರಿಕ್ಷ ಶಟಲ ಪಯಣವಾಗಿರಬಹುದು. ಇಲ್ಲವೆ ಜಗತ್ತನ್ನೇ ಒಂದು ಪುಟ್ಟ > ಹಳ್ಳಿಯಾಗಿಸಿಬಿಟ್ಟಿರುವ ಟೆಲಿಫೋನ್-ಇಂಟರ್‌ನೆಟ್ ಸಂಪರ್ಕವಿರಬಹುದು. ಅಥವಾ ಕಣ್ಣು > ಮಿಟಕಿಸುವಷ್ಟರಲ್ಲಿ ಮೇಲೇರುತ್ತಾ ಕೃತಕ ಉಪಗ್ರಹವೊಂದನ್ನು ಉಡ್ಡಯಿಸಿರುವ ರಾಕೆಟ್ > ಆಗಿರಬಹುದು. ಹೀಗೆ ಕಳೆದೊಂದು ಶತಮಾನದಿಂದ ಮೂಲ ವಿಜ್ಞಾನ ಮತ್ತದಕ್ಕೆ ಪೂರಕವಾಗಿರುವ > ತಂತ್ರಜ್ಞಾನ ನಮ್ಮೆಲ್ಲರ ಕಲ್ಪನೆಯನ್ನೂ ಮೀರಿ ಬೆಳೆಯುತ್ತಿದೆ. ವಿಜ್ಞಾನ ನೇರವಾಗಿ, ಹಲವು > ಬಾರಿ ಪರೋಕ್ಷವಾಗಿ ಇಪ್ಪತ್ತನೆಯ ಶತಮಾನದ ರಾಜಕೀಯ ವಿಪ್ಲವಗಳಿಗೆ, ಸಾಮಾಜಿಕ ಪಲ್ಲಟಗಳಿಗೆ, > ಜಾಗತಿಕ ಆರ್ಥಿಕ ಏಳು-ಬೀಳುಗಳಿಗೆ ಕಾರಣವಾಗಿದೆ. ಒಟ್ಟಾರೆಯಾಗಿ ವಿಜ್ಞಾನ ಮಾನವನ ಬೌದ್ಧಿಕ > ಚಿಂತನೆಯ ವಿಧಾನವನ್ನೇ ಬದಲಾಯಿಸಿದೆ. > > ಈ ಅಗಾಧ ವಿಶ್ವದಲ್ಲಿ ಸದ್ಯಕ್ಕೆ ಗುರುತಿಸಿರುವಂತೆ ಜೀವಿಗಳಿರುವ ಏಕೈಕ ಗ್ರಹ ನಮ್ಮ ಭೂಮಿ. > ಈ ಭೂಮಿ ತನ್ನದೇ ಅಕ್ಷದಲ್ಲಿ ಸುತ್ತುವ ವೇಗವನ್ನು ಭೂಮಧ್ಯ ರೇಖೆಯ ಹತ್ತಿರ ಅಳೆದರೆ ಅದು > ಗಂಟೆಗೆ ಒಂದು ಸಾವಿರ ಮೈಲಿಗಳು. ಅಕಸ್ಮಾತ್ ಈ ವೇಗ ಗಂಟೆಗೆ ನೂರು ಮೈಲುಗಳಿಗೆ ಇಳಿದರೆ > ಏನಾಗುತ್ತದೆ? ನಮ್ಮ ದಿನ ಮತ್ತು ರಾತ್ರಿಗಳ ಅವಧಿ ಹತ್ತು ಪಟ್ಟು ಹೆಚ್ಚಾಗುತ್ತದೆ. ಸೂರ್ಯ > ಹೆಚ್ಚು ಕಾಲ ಪ್ರಜ್ವಲಿಸಿದಂತೆ ಹಸಿರೆಲ್ಲ ನಾಶವಾಗಬಹುದು. ಸೂರ್ಯನ ತಾಪಮಾನ ಹತ್ತು ಸಹಸ್ರ > ಡಿಗ್ರಿ ಫ್ಯಾರನ್‌ಹೀಟ್ ಎಂದು ಅಂದಾಜು ಮಾಡಲಾಗಿದೆಯಲ್ಲವೆ? ನಮ್ಮ ಭೂಮಿ ಕಾಪಾಡಿಕೊಂಡಿರುವ > ದೂರದಿಂದ ನಾವಿನ್ನೂ ಸುರಕ್ಷವಾಗಿದ್ದೇವೆ. ಈ ದೂರ ಹೆಚ್ಚಾದರೆ ಸಾಕಷ್ಟು ಬಿಸಿಯಿಲ್ಲದೆ ನಮ್ಮ > ರಕ್ತ ಹೆಪ್ಪುಗಟ್ಟಬಹುದು. ದೂರ ಕಮ್ಮಿಯಾದರೆ ಆ ಸುಡು ತಾಪಮಾನಕ್ಕೆ ನಾವೆಲ್ಲಾ ಸುಟ್ಟು > ಕರಕಲಾಗಬಹುದು. ನಮ್ಮ ಭೂಮಿ ಸೂರ್ಯನನ್ನು ಸುತ್ತುವುದು ಇಪ್ಪತ್ಮೂರು ಡಿಗ್ರಿ ಕೋನದಲ್ಲಿ. ಈ > ಕಾರಣದಿಂದ ನಮ್ಮಲ್ಲಿ ಋತು ಬದಲಾವಣೆ. ಈ ವಾಲುವ ಕೋನದ ಬದಲು ಭೂಮಿ ನೆಟ್ಟಗೆ ಸೂರ್ಯನನ್ನು > ಸುತ್ತಿದ್ದರೆ? ಸಾಗರದ ನೀರೆಲ್ಲಾ ಆವಿಯಾಗಿ, ಆ ಆವಿ ತಂಪಾಗಿ ಇಡೀ ಭೂಮಂಡಲದ ತುಂಬ > ಮಂಜುಗಡ್ಡೆಯ ರಾಶಿಯೇ ತುಂಬಿರುತ್ತಿತ್ತು. ಇನ್ನು ಚಂದ್ರ ಮತ್ತು ಭೂಮಿಗಿರುವ ಅಂತರ > ಹೆಚ್ಚಾಗಿದ್ದಿದ್ದರೆ? ಗುರುತ್ವಾಕರ್ಷಣೆಯಲ್ಲಿ ಏರುಪೇರಾಗಿ ಸಮುದ್ರಗಳೆಲ್ಲ ಉಕ್ಕಿ ಹರಿದು > ನಾವೆಲ್ಲ ಕೊಚ್ಚಿ ಹೋಗುತ್ತಿದ್ದೆವೇನೊ? ಇದೇ ರೀತಿ ಭೂಮಿಯೊಳಗಿನ ಕೇಂದ್ರದ ಸ್ಥಾನ > ಹೆಚ್ಚೂ-ಕಮ್ಮಿಯಾಗಿದ್ದರೆ? ಸಾಗರ ಮತ್ತಷ್ಟು ಆಳವಾಗಿದ್ದರೆ? ಆಮ್ಲಜನಕ ಮತ್ತು ಇಂಗಾಲದ ಡೈ > ಆಕ್ಸೈಡ್ ಪ್ರಮಾಣದಲ್ಲಿ ಏರುಪೇರಾಗುತ್ತಿತ್ತು. ಮನುಷ್ಯನೂ ಸೇರಿದಂತೆ ನಮ್ಮೆಲ್ಲ ಜೈವಿಕ > ಪರಿಸರಕ್ಕೆ ಪೂರಕವಾದ ಸಹಸ್ರಾರು ಅಂಶಗಳು ಏಕಕಾಲದಲ್ಲಿ ಒಂದೆಡೆ ಮೇಳೈಸುವ ಸಾಧ್ಯತೆ ಎಷ್ಟು? > ಗ್ರಹವೊಂದರ ಮೇಲೆ ಜೀವ ವಿಕಾಸವಾಗಲು ಅಗತ್ಯವಾದ ಪೂರಕ ಅಂಶಗಳೆಲ್ಲಾ ಏಕ ಕಾಲಕ್ಕೆ ಮೇಳೈಸಲು > ಅದೆಷ್ಟು ಲಕ್ಷ ಕೋಟಿಗಳಲ್ಲಿ ಒಂದು ಸಾಧ್ಯತೆಯೊ? ಎಣಿಸಲಾಗದು. ಈ ಒಂದು ಕುತೂಹಲ > ನಮ್ಮೆಲ್ಲರನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳತ್ತ ಸೆಳೆಯುತ್ತಲೇ ಬಂದಿದೆ. > > 1930ರಿಂದ ಇಂದಿನವರೆಗೆ - ಭಾರತದಲ್ಲೇ ಹುಟ್ಟಿ, ಬೆಳೆದು, ತಮ್ಮ ಕಾರ್ಯಕ್ಷೇತ್ರವನ್ನು > ವಿದೇಶಕ್ಕೆ ಬದಲಿಸದ ಏಕೈಕ ನೊಬಲ್ ಪುರಸ್ಕೃತ ವಿಜ್ಞಾನಿ - ಸಿ.ವಿ.ರಾಮನ್. > > ರಾಮನ್ ಮತ್ತು ಅವರು ಹುಟ್ಟು ಹಾಕಿದ ಅಪ್ಪಟ ಸ್ವಾವಲಂಬನೆಯ ವಿಜ್ಞಾನ ಚಿಂತನೆಯ ಬಗ್ಗೆ > ಚರ್ಚೆ ಮಾಡಲೇಬೇಕಾದ ಸಂದರ್ಭವಿದು. ಜಗತ್ತಿನ ಭವಿಷ್ಯವನ್ನು ರೂಪಿಸುವಲ್ಲಿ ಭಾರತೀಯರು > ಮಹತ್ವದ ಪಾತ್ರವಹಿಸಲಿದ್ದಾರೆಂದು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಈಗಾಗಲೇ ಮನವರಿಕೆಯಾಗಿದೆ. > ದೇಶವೊಂದರ ಆರ್ಥಿಕ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ಇಂದಿನ ವಿಶ್ವ > ವ್ಯಾಪಾರ ಸಂಸ್ಥೆಯಿಂದ ಪ್ರೇರಿತವಾದ ಜಾಗತೀಕರಣದ ಕಾಲದಲ್ಲಿ ವಿಜ್ಞಾನ ಮತ್ತು > ತಂತ್ರಜ್ಞಾನಕ್ಕೆ ಉತ್ತೇಜನ ನೀಡದಿರುವ ದೇಶಗಳಿಗೆ ಉಳಿಗಾಲವಿಲ್ಲ. ಜಗತ್ತಿನೆಲ್ಲೆಡೆ ನೊಬಲ್ > ಪುರಸ್ಕೃತರನ್ನು ಪೋಷಿಸುವ ಸಂಸ್ಥೆ ವಿಶ್ವವಿದ್ಯಾಲಯ. ಈ ನಿಟ್ಟಿನಲ್ಲಿ ನಮ್ಮ ದೇಶದ > ವಿಶ್ವವಿದ್ಯಾಲಯಗಳು ಕಳೆದ ಎಂಬತ್ಮೂರು ವರ್ಷಗಳಲ್ಲಿ ಮತ್ತೊಬ್ಬ ಸಿ.ವಿ.ರಾಮನ್ ಅನ್ನು > ಕೊಟ್ಟಿಲ್ಲ. ಇದರ ಬಗ್ಗೆ ಕಾರಣ ಹುಡುಕ ಹೊರಟರೆ ನಮ್ಮೆಲ್ಲ ಪ್ರತಿಭಾವಂತ ವಿದ್ಯಾರ್ಥಿಗಳು > ಮೂಲ ವಿಜ್ಞಾನ ಅಧ್ಯಯನದಿಂದ ವಿಮುಖರಾಗಿರುವ ಕಠೋರ ಸತ್ಯ ಗೋಚರಿಸುತ್ತದೆ. ಒಂದೆಡೆ > ಸಂಪನ್ಮೂಲಗಳ ಕೊರತೆ, ಮತ್ತೊಂದೆಡೆ ಅನ್ವೇಷಕ ಪ್ರವೃತ್ತಿಯ ವಿದ್ಯಾರ್ಥಿಗಳ ಅಭಾವ. ಈ > ನೆಪಗಳಿಗೂ ಮಿಗಿಲಾದ ಒಂದು ಪ್ರಮುಖ ಕಾರಣವೊಂದಿದೆ. ಅದುವೇ ಬದಲಾಗುತ್ತಿರುವ ಆದ್ಯತೆ. > > ಜಗತ್ತಿನ ಮೂರನೆಯ ಅತಿ ದೊಡ್ಡ ಸಂಖ್ಯೆಯ ವಿಜ್ಞಾನ (ತಂತ್ರಜ್ಞಾನ) ಪದವೀಧರರನ್ನು > ಉತ್ಪಾದಿಸುತ್ತಿರುವ ದೇಶ ನಮ್ಮದು. ಇಂಥದೊಂದು ಕ್ಲೀಶೆಯ ವಾಕ್ಯ ಆಗಿಂದಾಗ್ಗೆ ಕಿವಿಗೆ > ತಪ್ಪದೇ ಬೀಳುತ್ತಿರುತ್ತದೆ. ಈ ಮಾತುಗಳು ನಿಜವೇ ಆಗಿದ್ದರೆ ಮತ್ತೊಬ್ಬ ರಾಮನ್ ನಮ್ಮ > ದೇಶದಲ್ಲೇಕೆ ಹುಟ್ಟಲಿಲ್ಲ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸದ್ಯಕ್ಕೆ ಫ್ಯಾಕ್ಟರಿಯಲ್ಲಿ > ಹೊರಬರುವ ಉತ್ಪನ್ನಗಳಂತೆ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ವರ್ಷದಿಂದ ವರ್ಷಕ್ಕೆ > ಏರುತ್ತಿದೆ. ಆದರೆ ಮೂಲ ವಿಜ್ಞಾನ ವಿಷಯಗಳನ್ನು ಗಂಭೀರವಾಗಿ ಅಭ್ಯಸಿಸುವವರ ಸಂಖ್ಯೆ > ಕ್ಷೀಣಿಸುತ್ತಿದೆ. ಇನ್ನು ಎಂಜಿನಿಯರಿಂಗ್ ಪದವೀಧರರೂ ಹೆಚ್ಚಿನ ಪರಿಶ್ರಮವಿಲ್ಲದ (ದೇಹಕ್ಕೆ > ಮತ್ತು ಮಿದುಳಿಗೆ) ಕೆಲಸಗಳತ್ತಲೇ ಗಮನ ಹರಿಸುತ್ತಿದ್ದಾರೆ. ತಮ್ಮದೇ ದೇಶ ಕಟ್ಟುವ > ಸವಾಲೆಸೆಯಬಲ್ಲ ಕೆಲಸಗಳಿಂದ ವಿಮುಖರಾಗುತ್ತಾ ವಿದೇಶಗಳಲ್ಲಿ ಸಾಮಾನ್ಯರೂ ಮಾಡಬಹುದಾದಂಥ > ಸಣ್ಣ-ಪುಟ್ಟ ಕೆಲಸಗಳಿಗೆ ಶರಣಾಗುತ್ತಿದ್ದಾರೆ. > > ರಾಮನ್ನರೇಕೆ, ವಿಶ್ವೇಶ್ವರಯ್ಯನವರನ್ನೂ ಮರೆತಿರುವ ಕಾಲವಿದು. ಕಾರು ಕಾರ್ಖಾನೆ ಕೊಡದೇ > ಸತಾಯಿಸಿದ ಬ್ರಿಟಿಷರನ್ನು ಸಾಕಷ್ಟು ಒತ್ತಾಯಿಸಿ ಕಡೆಗೆ ವಿಮಾನ ಕಾರ್ಖಾನೆಯೊಂದನ್ನು > ಬೆಂಗಳೂರಿಗೆ ಕೊಡುವಂತೆ ಮಾಡಿದ ಮೇರು ತಂತ್ರಜ್ಞ ವಿಶ್ವೇಶ್ವರಯ್ಯ. ಅಂದಿನ ಅವರ > ಪರಿಶ್ರಮದಿಂದಾಗಿಯೇ ಬೆಂಗಳೂರಿಗೆ ದೇಶದ ವೈಮಾಂತರಿಕ್ಷ ರಾಜಧಾನಿಯೆಂಬ ಬಿರುದು. ಎಲ್ಲ > ವಿದೇಶಿ ಅಸಹಕಾರಗಳನ್ನು ಎದುರಿಸಿ ದೇಶೀಯವಾಗಿ ವಿಮಾನಗಳನ್ನು ವಿನ್ಯಾಸ ಮಾಡಿ, ಅಗ್ಗದ > ದರದಲ್ಲಿ ತಯಾರಿಸಿ ಗಡಿ ಕಾಯುವ ವಾಯುಪಡೆಗೆ ಸತತವಾಗಿ ವಿಮಾನಗಳನ್ನು ಪೂರೈಸುತ್ತಿರುವ > ಕಾರ್ಖಾನೆ ಬೆಂಗಳೂರಿನಲ್ಲಿಯೇ ಇದೆ. ಸಶಕ್ತನಾಗಿದ್ದರೆ ಮಾತ್ರ ಮತ್ತೊಬ್ಬ ಶಕ್ತ ನಮ್ಮನ್ನು > ಗೌರವಿಸಬಲ್ಲ ಎಂಬ ಮಾತುಗಳೊಂದಿಗೆ ದೇಶದ ಪರಮಾಣು ಶಕ್ತಿ ಮತ್ತು ರಕ್ಷಣಾ ಸಂಶೋಧನಾ > ಇಲಾಖೆಗಳನ್ನು ಸ್ವಾವಲಂಬನೆಯ ದಾರಿಗೆ ಎಳೆದ ರಾಜಾರಾಮಣ್ಣನವರನ್ನೂ ಇಂದು ನೆನೆಯಬೇಕು. ಸೂಪರ್ > ವಾಹಕಕ್ಕೆ ಸಂಬಂಧಿಸಿದ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ ಇದೀಗ > ನ್ಯಾನೊ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮಗ್ನರಾಗಿರುವ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್, > ವಾಯು ಚಲನ ವಿಜ್ಞಾನದ ಜಗದ್ಗುರು ರೊದ್ದ ನರಸಿಂಹ, ಬಾಹ್ಯಾಕಾಶ ಕ್ಷೇತ್ರದಲ್ಲಿನ ದೇಶದ > ಅಪ್ರತಿಮ ಸಾಧನೆಯ ರೂವಾರಿ ಉಡುಪಿ ರಾಮಚಂದ್ರ ರಾವ್, ಜೀವ ವಿಜ್ಞಾನದ ಕ್ಲಿಷ್ಟ > ಲೆಕ್ಕಾಚಾರಗಳನ್ನು ಗಣಿತದೊಂದಿಗೆ ತಾಳೆನೋಡುತ್ತಾ ಪರಿಸರ ವಿಜ್ಞಾನದಲ್ಲಿ ವಿಶ್ವಮಾನ್ಯ > ಸಾಧನೆಗೈದಿರುವ ಮಾಧವ ಗಾಡ್ಗೀಳ್, ಪರಮಾಣು ವಿಜ್ಞಾನವನ್ನು ಕಲಿತೂ ಗಾಂಧಿವಾದಿಯಾಗಿ > ರೂಪುಗೊಂಡು ಸಾಮಾನ್ಯರಿಗೆ ವಿಜ್ಞಾನ ಮುಟ್ಟಿಸಿದ ಹೆಚ್.ನರಸಿಂಹಯ್ಯ, ರಾಕೆಟ್ ತಂತ್ರಜ್ಞಾನ > ಅಭ್ಯಸಿಸಿ ದೇಶದ ಮುಂಚೂಣಿ ಯೋಜನೆಗಳ ಸೂತ್ರಧಾರಿಯಾದ ಅಬ್ದುಲ್ ಕಲಾಮ್ .... ನಮ್ಮ ವಿಜ್ಞಾನ > ವಿದ್ಯಾರ್ಥಿಗಳಿಗೆ ರೋಲ್ ಮಾಡಲ್ಗಳಾಗಬೇಕು. ಹಾಗಾದಲ್ಲಿ ಮಾತ್ರ ನಮ್ಮ ದೇಶವೂ ಮುಂಚೂಣಿ > ರಾಷ್ಟ್ರಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಹುದು. ವಿಜ್ಞಾನಗಳು ಕೇವಲ ಪ್ರಯೋಗಗಳಿಗೆ > ಸೀಮಿತವಾಗದೆ, ಎಲ್ಲ ಶೋಷಿತ ಮನುಜರ ಬಿಡುಗಡೆಯ ಹಾದಿಯಾಗಿ, ಸಾಮಾಜಿಕ ದುರಂತಗಳ ಬಗ್ಗೆ > ಎಚ್ಚರಿಸುವ ದನಿಯಾಗಬೇಕು. ಇಂದು ಮಾತ್ರವಲ್ಲ, ಅನುದಿನವೂ ವಿಜ್ಞಾನ ದಿನವಾಗಲಿ ಎಂಬುದು > ವಿಜ್ಞಾನಾಸಕ್ತರೆಲ್ಲರ ಹಾರೈಕೆ. > > ರಾಮನ್ ಪರಿಣಾಮ > > ಸಾಗರದ ಮೇಲೊಂದು ಹಡಗಿನ ಪಯಣ ಬಹುದೊಡ್ಡ ಆವಿಷ್ಕಾರಕ್ಕೆ ಕಾರಣವಾಗಬಹುದೆಂಬ ಕಲ್ಪನೆ ಬಹುಶಃ > ಸಿ.ವಿ.ರಾಮನ್ ಅವರಿಗೂ ಇರಲಿಲ್ಲ. 1921ರ ಬೇಸಗೆಯಲ್ಲಿ ಅವರು ಭಾರತದಿಂದ ಲಂಡನ್ನಿನತ್ತ > ಕೈಗೊಂಡ ಮೊದಲ ಪಯಣದಲ್ಲಿ ಮೆಡಿಟರೇನಿಯನ್ ಸಮುದ್ರದ ನೀರಿನ ಪಾರದರ್ಶಕವಲ್ಲದ ನೀಲ ವರ್ಣವು > ಬೆರಗು ಹುಟ್ಟಿಸಿತು. ಮೊದಲಿಗೆ ಸಮುದ್ರದೊಳಗೆ ಬೆಳಕಿನ ಕಿರಣಗಳು ಪ್ರವೇಶಿಸುವಾಗ ನೀರಿನ > ಅಣುಗಳಲ್ಲಿ ನಡೆಯುವ ವಕ್ರೀಭವನದಿಂದಾಗಿ (ಬಾಗುವಿಕೆ) ನೀಲ ವರ್ಣ ಗೋಚರವಾಗುತ್ತಿರಬಹುದೆಂದು > ಭಾಸವಾಗಿತ್ತು. ಅದೇ ವರ್ಷದ ಸೆಪ್ಟೆಂಬರಿನಲ್ಲಿ ಕೊಲ್ಕೊತ್ತಾಗೆ ಹಿಂದಿರುಗಿದ ರಾಮನ್ ಅವರು ಈ > ಬಗ್ಗೆ ಗಹನವಾದ ಸಂಶೋಧನೆಗಳನ್ನು ಕೈಗೊಂಡರು. ಅನಿಲಗಳು, ಭಾಷ್ಪಗಳು, ಹರಳುಗಳು ಮತ್ತಿತರ > ಬೆಳಕು ಹಾಯಬಲ್ಲ ಎಲ್ಲ ಮಾಧ್ಯಮಗಳ ಮೇಲೆ ತಮ್ಮ ಪ್ರಯೋಗಗಳನ್ನು ಅವರು ಮುಂದುವರಿಸಿದರು. > ಸಮುದ್ರ ನೀರಿನಲ್ಲಿ ಸ್ಥಳೀಯವಾಗಿ ಬದಲಾಗುವ ಸಾಂದ್ರತೆಗೆ ಕಾರಣಗಳನ್ನು ಕಂಡುಕೊಳ್ಳಲು > ಯತ್ನಿಸಿದರು. 1922-1927ರ ತನಕ ತಮ್ಮ ಸಹೋದ್ಯೋಗಿಗಳಾಗಿದ್ದ ಕೆ.ಎಸ್.ಕೃಷ್ಣನ್ ಮತ್ತು > ಕೆ.ಆರ್.ರಾಮನಾಥನ್ ಅವರ ಜತೆಗೂಡಿ ತಾವು ಕಂಡುಕೊಂಡ ಹೊಸ ಹೊಳಹಿಗೆ ಭಾಷ್ಯವನ್ನು ಬರೆದರು. > ಜಗತ್ತಿನ ಭೌತವಿಜ್ಞಾನಿಗಳ ಗಮನವನ್ನು ದಟ್ಟ ಸಾಂದ್ರತೆಯ ಮಾಧ್ಯಮದ ಅಣುಗಳಲ್ಲಿ ಬೆಳಕಿನ > ಚದುರುವಿಕೆ ಎಂಬ ಹೊಸ ವಿಷಯದ ಬಗ್ಗೆ ಹರಿಸಿದರು. > > 1929ರಲ್ಲಿ ಜರುಗಿದ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಅಧ್ಯಕ್ಷೀಯ ಭಾಷಣದಲ್ಲಿ ಸ್ವತಃ > ಸಿ.ವಿ.ರಾಮನ್ ಅವರು ತಾವು ಕಂಡುಕೊಂಡ ಕೌತುಕಗಳ ಕುರಿತು ಹೀಗೆ ಹೇಳಿದ್ದಾರೆ: ''ನೇರಳೆ > ವರ್ಣದ ಗಾಜಿನ ಮೂಲಕ ಸೋಸಿ ಬಂದ ಸೂರ್ಯನ ಕಿರಣಗಳನ್ನು ಕೆಲವೊಂದು ದ್ರವಗಳು ಮತ್ತು > ಘನವಸ್ತುಗಳಲ್ಲಿ (ಉದಾಹರಣೆಗೆ ನೀರು ಅಥವಾ ಮಂಜುಗಡ್ಡೆ) ಹಾಯಿಸಿದಾಗ, ಆ ವಸ್ತುವಿನಿಂದ > ಹೊರಬಂದ ಬೆಳಕಿನಲ್ಲಿ ಹೊಸ ಕಿರಣಗಳು ಗೋಚರವಾದವು. ನಂತರ ಹಸಿರು ವರ್ಣದ ಗಾಜನ್ನು ನೇರಳೆ > ವರ್ಣದ ಗಾಜು ಮತ್ತು ಬೆಳಕು ಸ್ವೀಕರಿಸುವ ವಸ್ತುವಿನ ನಡುವೆ ಇಟ್ಟು ನೋಡಿದಾಗ ಯಾವುದೇ > ಕಿರಣಗಳೂ ಗೋಚರವಾಗಲಿಲ್ಲ. ಮತ್ತೆ ಹಸಿರು ವರ್ಣದ ಗಾಜನ್ನು ಕಣ್ಮುಂದೆ ಇಟ್ಟುಕೊಂಡು ಇದೇ > ನೇರಳೆ ವರ್ಣದ ಗಾಜಿನಿಂದ ಸೋಸಿ ಬಂದ ಕಿರಣಗಳನ್ನು ವಸ್ತುವಿನತ್ತ ಹಾಯಿಸಿದಾಗ, ಕಿರಣಗಳು > ಗೋಚರವಾದವು. ನೇರಳೆ ವರ್ಣದ ಬೆಳಕಿನ ಕಿರಣಗಳು ಹಸಿರು ವರ್ಣದ ಬೆಳಕಿನ ಕಿರಣಗಳಾಗಿ > ಬದಲಾವಣೆಗೊಂಡಿದ್ದವು.'' > > ತೀರಾ ಸರಳವಾಗಿ ರಾಮನ್ ಪರಿಣಾಮದ ತತ್ತ್ವವನ್ನು ವಿವರಿಸಬೇಕೆಂದರೆ, ಅಣುಗಳ ಮೇಲೆ ಬೆಳಕಿನ > ಕಿರಣಗಳನ್ನು ಹಾಯಿಸಿದಾಗ ಕಿರಣಗಳು ಚದುರುವ ಕಾರಣ ಆ ಬೆಳಕಿನ ತರಂಗಾಂತರದಲ್ಲಿ ಬದಲಾವಣೆಗಳು > ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಬೆಳಕಿನ ಸಲಾಕೆಯೊಂದನ್ನು ಧೂಳುರಹಿತ ವಾತಾವರಣದಲ್ಲಿಟ್ಟ > ಪಾರದರ್ಶಕ ರಾಸಾಯನಿಕ ಮಿಶ್ರಣದ ಮೂಲಕ ಹಾಯಿಸಿದಾಗ, ಬೆಳಕಿನ ಕಿರಣಗಳ ಅಲ್ಪಭಾಗವು ಸಲಾಕೆಯು > ಹಾಯುವ ಕೋನಕ್ಕಿಂತಲೂ ಕೊಂಚ ಓರೆಯಾಗಿ ಹೊರಬರುತ್ತದೆ. ಹೀಗೆ ಓರೆಯಾಗಿ ಹೊರಬರುವ ಬೆಳಕಿನ > ಕಿರಣಗಳ ತರಂಗಾಂತರಗಳು ಮೂಲ ಸಲಾಕೆಯ ತರಂಗಾಂತರಗಳಿಗಿಂತಲೂ ಭಿನ್ನವಾಗಿರುತ್ತವೆ. ಈ ಭಿನ್ನ > ತರಂಗಾಂತರಗಳಿಂದ ಹೊರಬರುವ ಬೆಳಕಿನ ಸ್ವಭಾವವನ್ನು ರಾಮನ್ ಪರಿಣಾಮ ಎಂದು ಗುರುತಿಸಲಾಗಿದೆ. ಈ > ತತ್ತ್ವವನ್ನು ಸುಲಭವಾಗಿ ಅರ್ಥೈಸಿಕೊಳ್ಳಬೇಕೆಂದರೆ ಬೆಳಕು ಕೇವಲ ಫೋಟಾನ್ ಕಣಗಳ ರೂಪದಲ್ಲಿ > ಮಾತ್ರ ಪ್ರವಹಿಸುತ್ತದೆಂದು ಪರಿಭಾವಿಸಬೇಕು. ಆದರೆ, ಬೆಳಕು ಅಲೆಗಳ ರೂಪದಲ್ಲೂ > ಪ್ರವಹಿಸುತ್ತದೆಂಬ ವಿಷಯ ಇಲ್ಲಿ ಪರಿಗಣನೆಗೆ ಬರುವುದಿಲ್ಲ. > > 1930ರ ದಶಕದ ಕೊನೆಯ ಹೊತ್ತಿಗೆ ಯಾವುದೇ ರಾಸಾಯನಿಕ ಅಣುಗಳ ಪರೀಕ್ಷೆಯಲ್ಲಿ, ಮಾದರಿಯನ್ನು > ಹಾಳುಗೆಡವದೇ ವಿಶ್ಲೇಷಿಸಲು, ರಾಮನ್ ಪರಿಣಾಮ ಆಧರಿತ ಉಪಕರಣಗಳನ್ನು ಬಳಸುವ ಪರಿಪಾಠ > ಆರಂಭವಾಯಿತು. ಈ ಸಂದರ್ಭದಲ್ಲಿ ನಿರ್ಮಾಣವಾದುದೇ ರಾಮನ್ ಸ್ಪೆಕ್ಟ್ರೋಮೀಟರ್ ಎಂಬ > ರೋಹಿತಮಾಪಕ. ಬಿಳಿಯ ಬೆಳಕಿನಿಂದ ವಿಭಜನೆಯಾದ ವಿವಿಧ ವರ್ಣಗಳ ಬೆಳಕಿನ ಕಿರಣಗಳ > ಗುಣಲಕ್ಷಣಗಳನ್ನು ಈ ಯಂತ್ರವು ಗುರುತಿಸಬಲ್ಲದು. ದ್ವಿತೀಯ ಮಹಾಯುದ್ಧದ ವೇಳೆಗೆ ರಾಮನ್ > ಸ್ಪೆಕ್ಟ್ರೋಮೀಟರ್‌ನ ಜಾಗದಲ್ಲಿ ಇನ್‌ಫ್ರಾರೆಡ್ ಸ್ಪೆಕ್ಟ್ರೋಮೀಟರ್ ಅಂದರೆ ಬೆಳಕಿನ > ಆವಗೆಂಪು ಕಿರಣಗಳನ್ನು ಬಳಸಿ ನಡೆಸುವ ಯಂತ್ರಕ್ಕೆ ಪ್ರಾಧಾನ್ಯ ಸಿಕ್ಕಿತು. 1960ರ ದಶಕದಲ್ಲಿ > ಬೆಳಕಿನ ಸಾಂದ್ರ ಸಲಾಕೆ, ಲೇಸರ್ ಆವಿಷ್ಕಾರವಾಗುವ ತನಕ ರಾಮನ್ ಸ್ಪೆಕ್ಟ್ರಾಮೀಟರ್ > ಬಳಕೆಯಲ್ಲಿರಲಿಲ್ಲ. ತದನಂತರ ಲೇಸರ್ ಬೆಳಕಿನ ಸಲಾಕೆಗಳನ್ನು ಬಳಸಲು ಅನುವಾಗುವಂಥ > ಮಾರ್ಪಾಡುಗಳನ್ನು ರಾಮನ್ ಸ್ಪೆಕ್ಟ್ರೋಮೀಟರ್‌ಗೆ ಮಾಡಲಾಯಿತು. > > ಈ ಹೊಸ ಯಂತ್ರದ ಮೂಲಕ ಇಂದು ಪೆಟ್ರೋರಾಸಾಯನಿಕಗಳು ಮತ್ತು ಔಷಧರಾಸಾಯನಿಕಗಳ ತಯಾರಿಕೆಯಲ್ಲಿ > ರಾಸಾಯನಿಕ ಪ್ರಮಾಣದ ಬಗ್ಗೆ ನಿಗಾ ವಹಿಸಬಹುದಾಗಿದೆ. ಅಪರಾಧಗಳು ನಡೆದ ಸಂದರ್ಭದಲ್ಲಿ > ಪೊಟ್ಟಣಗಳಲ್ಲಿಟ್ಟ ರಾಸಾಯನಿಕ ಕುರುಹುಗಳನ್ನು ಹೊರತೆಗೆಯದೆಯೇ ವಿಶ್ಲೇಷಿಸಲು ಇದೇ > ಯಂತ್ರವನ್ನು ಬಳಸಲಾಗುತ್ತಿದೆ. ಹಾಗೆಯೇ ಸೂಕ್ಷ್ಮ ಬಿಡಿಭಾಗಕ್ಕೆ ಹಚ್ಚಿದ ವರ್ಣದ್ರವ್ಯ > ಎಷ್ಟರಮಟ್ಟಿಗೆ ಒಣಗಿದೆಯೆಂಬುದನ್ನು ಅರಿಯಬಹುದು. ಸುರಕ್ಷ ಅಂತರದಿಂದ ಪರಮಾಣು ವಿದ್ಯುತ್ > ಸ್ಥಾವರಗಳ ತ್ಯಾಜ್ಯದ ರಾಸಾಯನಿಕ ಅಂಶಗಳನ್ನು ಅಳೆಯಬಹುದು. ಕ್ಯಾನ್ಸರ್ ರೋಗದ ಆರಂಭದ > ಹಂತಗಳನ್ನು ಕೋಶ ಬದಲಾವಣೆಗಳನ್ನು ದಾಖಲಿಸಬಲ್ಲ ಈ ಯಂತ್ರದ ಮೂಲಕ ಅರಿಯಬಹುದು. > > ಚರ್ಚೆಯ ವಿಷಯಗಳು > > ಫೆಬ್ರವರಿ 28 ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು > ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ > ದಿನವಿದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ.1928ರ ಫೆಬ್ರವರಿ > 28ರಂದು ಸಿ.ವಿ.ರಾಮನ್ ಅವರು ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ > ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದರು. ಎರಡು ವರ್ಷಗಳ ನಂತರ ಈ ಆವಿಷ್ಕಾರಕ್ಕಾಗಿ > ರಾಮನ್ ಅವರಿಗೆ ನೊಬೆಲ್ ಪುರಸ್ಕಾರ ದೊರಕಿತು. ಮುಂದಿನ ದಿನಗಳಲ್ಲಿ ಅದು ರಾಮನ್ > ಪರಿಣಾಮವೆಂದೇ ಪ್ರಸಿದ್ಧವಾಯಿತು. ಇದು ಇತಿಹಾಸ. 1987ರಿಂದಲೂ ದೇಶಾದ್ಯಂತ ಫೆಬ್ರವರಿ > 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 1999ರಿಂದ ಕೇಂದ್ರ ಸರ್ಕಾರದ > ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಷ್ಟ್ರೀಯ ವಿಜ್ಞಾನ ದಿನದಂದು ಚರ್ಚಿಸಲಾಗುವ > ವಿಷಯವನ್ನು ಮೊದಲೇ ಘೋಷಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಆದ್ಯತೆಯ ಘೋಷ ವಾಕ್ಯವಾದ > ಮೇಕ್ ಇನ್ ಇಂಡಿಯಾ ಕುರಿತಂತೆ ಈ ವರ್ಷ ಚರ್ಚೆಗಳು ನಡೆಯಲಿವೆ. > > 1999: ಬದಲಾಗುತ್ತಿರುವ ನಮ್ಮ ಪೃಥ್ವಿ > > 2000: ಮೂಲ ವಿಜ್ಞಾನದತ್ತ ಆಸಕ್ತಿಯನ್ನು ಕೆರಳಿಸುವ ಮರುಯತ್ನ > > 2001: ವಿಜ್ಞಾನ ಶಿಕ್ಷಣಕ್ಕಾಗಿ ಮಾಹಿತಿ ತಂತ್ರಜ್ಞಾನ > > 2002: ಕಸದಿಂದ ರಸ > > 2003: ಜೀವರಾಶಿಯ ನೀಲನಕ್ಷೆ ಡಿ.ಎನ್.ಎ.ನ 50 ವರ್ಷಗಳು ಮತ್ತು ಐ.ವಿ.ಎಫ್.ನ 25 ವರ್ಷಗಳು > > 2004: ಸಮುದಾಯದಲ್ಲಿ ವಿಜ್ಞಾನ ಪ್ರಜ್ಞೆಗೆ ಪ್ರೋತ್ಸಾಹ > > 2005: ಭೌತವಿಜ್ಞಾನದ ಸಂಭ್ರಮಾಚರಣೆ > > 2006: ನಮ್ಮ ಭವಿಷ್ಯತ್ತಿಗಾಗಿ ಪ್ರಕೃತಿಯ ಪರಿಪಾಲನೆ > > 2007: ಪ್ರತಿ ನೀರಹನಿಗೂ ಹೆಚ್ಚು ಬೆಳೆ > > 2008: ಭೂಗ್ರಹ ಅರ್ಥೈಸಿಕೊಳ್ಳುವಿಕೆ > > 2009: ವಿಜ್ಞಾನ ಕ್ಷಿತಿಜದ ವಿಸ್ತರಣೆ > > 2010: ಸುಸ್ಥಿರ ಅಭಿವೃದ್ಧಿಗಾಗಿ ಲಿಂಗ ಸಮಾನತೆ, ವಿಜ್ಞಾನ ಮತ್ತು ತಂತ್ರಜ್ಞಾನ > > 2011: ನಿತ್ಯ ಜೀವನದಲ್ಲಿ ರಸಾಯನವಿಜ್ಞಾನ > > 2012: ಪರಿಶುದ್ಧ ಇಂಧನದ ಆಯ್ಕೆಗಳು ಮತ್ತು ಪರಮಾಣು ಸ್ಥಾವರಗಳ ಸುರಕ್ಷೆ > > 2013: ತಳಿ ಮಾರ್ಪಾಡಾದ ಬೆಳೆಗಳು ಮತ್ತು ಆಹಾರ ಭದ್ರತೆ > > 2014: ವೈಜ್ಞಾನಿಕ ಮನೋಭಾವದ ಪೋಷಣೆ > > 2015: ರಾಷ್ಟ್ರ ನಿರ್ಮಾಣಕ್ಕಾಗಿ ವಿಜ್ಞಾನ > > 2016: ಭಾರತದಲ್ಲೇ ಉತ್ಪಾದನೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೇರಿತ ಹೊಸಶೋಧಗಳು > > Hareeshkumar K > AM(PCM) > GHS HUSKURU > MALAVALLI TQ > MANDYA DT 571475 > mobile no 9880328224 > email harihusk...@gmail.com > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.