http://m.vijaykarnataka.com/state/State-budget-Digital-Education-to-highschool-students/articleshow/51463798.cms

*ಹೈಸ್ಕೂಲ್ ಹೈಕ್ಳುಗಳಿಗೆ ಡಿಜಿಟಲ್ ಶಿಕ್ಷಣ*

Mar 19, 2016, 04.00 AM IST

Whatsapp <javascript:void(0);>Facebook <javascript:void(0);>Google Plus
<javascript:void(0);>Twitter <javascript:void(0);>Email
<javascript:void(0);>

state-budget-2

AAA

ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ಕೆ ಅನುಮತಿ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ
'ನಲಿ-ಕಲಿ' ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4,
5ನೇ ತರಗತಿಗಳಿಗೂ ವಿಸ್ತರಣೆ

* ಈ ವರ್ಷದೊಳಗೆ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ.

* ಬಿಸಿಯೂಟ ಅಡಿಗೆಯವರ ಮಾಸಿಕ ಗೌರವಧನ 300 ರೂ. ಹೆಚ್ಚಳ.

* 'ನಲಿ-ಕಲಿ' ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ.

* ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4,5ನೇ ತರಗತಿಗಳಿಗೂ ವಿಸ್ತರಣೆ.

* ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಶಿಕ್ಷಕರ 6 ತರಬೇತಿ ಕಾಲೇಜುಗಳು.

* ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ.

* ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ.

ಸರಕಾರಿ ಪ್ರೌಢಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ಒದಗಿಸಲು
ಪ್ರೌಢಶಾಲಾ ಶಿಕ್ಷಕರ ಮೂಲಕ ಸಮಗ್ರವಾದ ಇ-ವಿಷಯಾಧರಿತ 'ಐಟಿ ಅಟ್ ಸ್ಕೂಲ್ಸ್ ಇನ್ ಕರ್ನಾಟಕ'
ಎಂಬ ಕಾರ್ಯಕ್ರಮ ಪ್ರಾರಂಭಿಸಲು ಸರಕಾರ ನಿರ್ಧರಿಸಿದೆ.

ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಪ್ರಸ್ತುತ ಜಾರಿಯಲ್ಲಿರುವ
ಯೋಜನೆಗಳನ್ನು ತಾರ್ಕಿಕವಾಗಿ ಸಮನ್ವಯಗೊಳಿಸಿ, ಐದು ಹೊಸ ಕಾರ್ಯಕ್ರಮಗಳಡಿ ಜಾರಿಗೆ ತರಲು
ಉದ್ದೇಶಿಸಲಾಗಿದೆ. ಅವುಗಳೆಂದರೆ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮ, ಗುಣಮಟ್ಟ ಖಾತರಿಯ
ಉಪ ಕ್ರಮಗಳು, ತಂತ್ರಜ್ಞಾನ ಆಧರಿತ ಕಲಿಕೆ, ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕಾರ್ಯಕ್ರಮಗಳು.

ಸಮಂಜಸವಾದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ನೆರವಿನಿಂದ ಸರಕಾರಿ ಶಾಲೆಗಳಲ್ಲಿರುವ
ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಿಗೆ ದಾಖಲಾದ
ವಿದ್ಯಾರ್ಥಿಗಳ ಕಲಿಕೆಯಲ್ಲಿನ ಸಾಧನೆಯ ಬಗ್ಗೆ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾಗಿದೆ.

'ನಲಿ-ಕಲಿ' ಪುನರ್‌ರೂಪಿಸಿ ಜಾರಿ

ಇನ್ನು, ಸರಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ವಸ್ತುನಿಷ್ಠ
ಮೌಲ್ಯಮಾಪನದಿಂದ ಯಶಸ್ವಿ ಕಲಿಕೆಯ ವಿಧಾನ ಎಂದು ಗುರುತಿಸಲಾಗಿರುವ ಚಟುವಟಿಕೆ ಆಧರಿತ
'ನಲಿ-ಕಲಿ' ವಿಧಾನವನ್ನು ಪುನರ್ ರೂಪಿಸಿ ಸಮಗ್ರವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಗಣಿತ ವಿಷಯದ ಚಟುವಟಿಕೆ ಆಧಾರಿತ ಕಲಿಕೆಯನ್ನು 4 ಮತ್ತು 5ನೇ ತರಗತಿಗಳಿಗೂ
ವಿಸ್ತರಿಸಲಾಗುತ್ತಿದೆ.

ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ಮೂಡಿಸುವ ಯಶಸ್ವಿ ಉಪ ಕ್ರಮಗಳನ್ನು
ಕೈಗೊಂಡು ಲಾಭದ ನಿರೀಕ್ಷೆ ಹೊಂದಿಲ್ಲದ ಸಂಸ್ಥೆಗಳ ಚಟುವಟಿಕೆಗಳನ್ನು ವಿಸ್ತರಿಸಲು
ಉದ್ದೇಶಿಸಿರುವ ಸರಕಾರ, 3 ವರ್ಷಗಳ ಅವಧಿಯಲ್ಲಿ ವೆಚ್ಚದ ಶೇ.50ರಷ್ಟನ್ನು ಭರಿಸಲಿದೆ.
ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಜೆಯಲ್ಲಿ ಪೂರಕ ಬೋಧನೆಯ
ವ್ಯವಸ್ಥೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ

2016ರೊಳಗೆ ಖಾಸಗಿ ಶಾಲೆ-ಕಾಲೇಜುಗಳೂ ಸೇರಿದಂತೆ ಶಾಲೆ-ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳ
ಆಧಾರ್ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ತೀರ್ಮಾನಿಸಿದೆ. ಎಲ್ಲ ಸರಕಾರಿ
ಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಆರಂಭಿಸುವುದಕ್ಕೆ ಪ್ರೋತ್ಸಾಹ ನೀಡುವುದಾಗಿ ಸರಕಾರ
ಪ್ರಕಟಿಸಿದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡಿಗೆಯವರ ಗೌರವಧನವನ್ನು ಮಾಸಿಕ
300 ರೂ. ಹೆಚ್ಚಿಸಲಾಗಿದೆ. ಶಿಕ್ಷಕರ 6 ತರಬೇತಿ ಕಾಲೇಜುಗಳನ್ನು ಉನ್ನತ ಶಿಕ್ಷಣ ಇಲಾಖೆಯ
ವ್ಯಾಪ್ತಿಗೆ ತರಲಾಗುತ್ತಿದೆ. ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಒಂದೇ ಆಡಳಿತ
ಹಾಗೂ ಕಾರ್ಯವ್ಯವಸ್ಥೆಯಡಿ ತರಲು ಮೂರು ವರ್ಷದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.

5 ವರ್ಷಗಳಿಗೆ ಮಾನ್ಯತೆ ನವೀಕರಣ

ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ. ಸಿಬಿಎಸ್‌ಇ ಮತ್ತು
ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ
ಸ್ಥಾನಮಾನಕ್ಕಾಗಿ ಮಾನ್ಯತೆ ಅಥವಾ ನಿರಾಕ್ಷೇಪಣೆ ಪತ್ರ ನೀಡುವುದು. ಶಿಕ್ಷಣ ಹಕ್ಕು
ಕಾಯಿದೆಯಡಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಖಾಸಗಿ ಶಾಲೆಗಳಿಗೆ ಶಿಕ್ಷಣ ವೆಚ್ಚ
ಮರುಪಾವತಿ ಪ್ರಕ್ರಿಯೆ ಮುಂದುವರಿಕೆ. ಎಲ್ಲ ಖಾಸಗಿ ಶಾಲೆ ಹಾಗೂ ಕಾಲೇಜುಗಳಲ್ಲಿರುವ ಬೋಧಕ
ಮತ್ತು ಮೂಲಸೌಕರ್ಯ ಸಂಪನ್ಮೂಲಗಳ ವಿವರವನ್ನು ಸಾರ್ವಜನಿಕ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ
ವ್ಯವಸ್ಥೆ ಮಾಡುವುದಾಗಿ ಸರಕಾರ ಪ್ರಕಟಿಸಿದೆ. ಒಟ್ಟಾರೆ, 2016-17ನೇ ಸಾಲಿನಲ್ಲಿ ಪ್ರಾಥಮಿಕ
ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 13,373 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ನಿರ್ಧಾರ

-ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ, ಪ್ರಶಸ್ತಿ-

* ಕಲಬುರ್ಗಿ ಹೆಸರಿನಲ್ಲಿ ಅತ್ಯುತ್ತಮ ಸಂಶೋಧನಾ ಸಾಹಿತ್ಯಕ್ಕೆ ಪ್ರತಿ ವರ್ಷ ಪ್ರಶಸ್ತಿ

* ಬೀದರ್‌ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ

* ಕರ್ನಾಟಕ ಚಿತ್ರಕಲಾ ಪರಿಷತ್‌ನ ಕಾರ್ಯಕ್ರಮಗಳಿಗೆ 1.5 ಕೋಟಿ ರೂ. ಅನುದಾನ

* ಕರ್ನಾಟಕ ಜಾನಪದ ವಿವಿ ವ್ಯಾಪ್ತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಪಾರಂಪರಿಕ
ಕೇಂದ್ರ ಸ್ಥಾಪನೆ

* ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸಂಸ್ಥೆಗಳಿಗೂ 'ಜ್ಞಾನ ಸಂಗಮ' ಯೋಜನೆ ವಿಸ್ತರಣೆ

* ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ತುಮಕೂರು ವಿವಿಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ
ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ

ರಾಜ್ಯದಲ್ಲಿ ಜ್ಞಾನ ಮತ್ತು ಆರ್ಥಿಕ ಅಗತ್ಯಗಳಿಗೆ ಒತ್ತು ನೀಡುವ ಮಾನವ ಸಂಪನ್ಮೂಲ ಕೇಂದ್ರಿತ
ಪ್ರಗತಿದಾಯಕ ಕರ್ನಾಟಕ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ.

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಸಂಸ್ಥೆಗಳಲ್ಲಿ 'ಜ್ಞಾನ ಸಂಗಮ' ಯೋಜನೆ
ವಿಸ್ತರಿಸುವುದರ ಜತೆಗೆ, ಸರಕಾರಿ ಕಾಲೇಜುಗಳು ಎನ್‌ಎಎಸಿ ಮಾನ್ಯತೆ ಪಡೆದು ಯುಜಿಸಿ ಅನುದಾನ
ಪಡೆಯಲು ಅನುವಾಗುವಂತೆ 10 ಕೋಟಿ ರೂ.ಗಳ ಅನುದಾನ ಒದಗಿಸಲಾಗುತ್ತದೆ. ಸಾಂಪ್ರದಾಯಿಕ ಪದವಿ
ಕೋರ್ಸ್‌ಗಳ ಜತೆಗೆ, ಉತ್ತಮ ಉದ್ಯೋಗವಕಾಶಗಳಿರುವ ಕ್ಷೇತ್ರಗಳಾದ ಮಾಹಿತಿ ತಂತ್ರಜ್ಞಾನ,
ದೂರಸಂಪರ್ಕ, ರೀಟೇಲ್, ಪ್ರವಾಸೋದ್ಯಮ, ಮಾಧ್ಯಮ ಮತ್ತು ಮನೋರಂಜನೆ, ಎಲೆಕ್ಟ್ರಾನಿಕ್ಸ್
ಮತ್ತು ಆರೋಗ್ಯ ಪಾಲನೆ, ಮೆಕ್ಯಾನಿಕಲ್, ಸೈಬರ್ ಭದ್ರತೆ ಇತ್ಯಾದಿ ಕೋರ್ಸ್‌ಗಳನ್ನು 5 ಕೋಟಿ
ರೂ.ಗಳ ವೆಚ್ಚದೊಂದಿಗೆ ಇಂಡೋ-ಜರ್ಮನ್ ಸಹಭಾಗಿತ್ವದಲ್ಲಿ ಐದು ಸರಕಾರಿ ಎಂಜಿನಿಯರಿಂಗ್
ಕಾಲೇಜುಗಳಲ್ಲಿ ಪ್ರಾರಂಭಿಸಲಾಗುತ್ತದೆ.

ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ

ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿವಿಗಳಲ್ಲಿ
ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು 10 ಕೋಟಿ ರೂ. ವೆಚ್ಚದಲ್ಲಿ
ಶ್ರೇಷ್ಠತಾ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ಜಾನಪದ ವಿವಿ ಕಾರ್ಯವ್ಯಾಪ್ತಿಯಲ್ಲಿ ರಾಜ್ಯದ ಶ್ರೀಮಂತ ಹಾಗೂ ಸಾಂಸ್ಕೃತಿಕ ಮತ್ತು
ಶೈಕ್ಷಣಿಕ ಪರಂಪರೆ ಬಿಂಬಿಸಲು ಕರ್ನಾಟಕ ಪಾರಂಪರಿಕ ಕೇಂದ್ರವನ್ನು 2 ಕೋಟಿ ರೂ. ವೆಚ್ಚದಲ್ಲಿ
ಸ್ಥಾಪಿಸಲಾಗುತ್ತಿದೆ. ಬೀದರ್‌ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು
ತೀರ್ಮಾನಿಸಲಾಗಿದೆ.

ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು

ಈ ವರ್ಷದಿಂದ ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು ನೀಡಲು 'ಕ್ಷೀರಭಾಗ್ಯ ಯೋಜನೆ'ಯಡಿ
42.50 ಕೋಟಿ ರೂ. ಅನುದಾನ ಮೀಸಲಿಟ್ಟರೆ, ಹಿಂದುಳಿದ ತಾಲೂಕುಗಳಲ್ಲಿರುವ ಗರ್ಭಿಣಿ ಮತ್ತು
ಬಾಣಂತಿಯರಿಗೆ ಮೈಕ್ರೊ ನ್ಯೂಟ್ರಿಯಂಟ್ಸ್ ಒದಗಿಸಲು 'ಮಾತೃಪುಷ್ಟಿವರ್ಧಿನಿ' ಯೋಜನೆಗಾಗಿ 42
ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ವಿಶೇಷ ಚೇತನರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಈವರೆಗೆ ಇದ್ದ ಮಹಿಳಾ
ಅಭಿವೃದ್ಧಿ ನಿಗಮವನ್ನು 'ಮಹಿಳಾ ಮತ್ತು ವಿಶೇಷಚೇತನರ ಅಭಿವೃದ್ಧಿ ನಿಗಮ'ಎಂದು ಮರುನಾಮಕರಣ
ಮಾಡಲು ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ.

ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 25 ಸಾವಿರ ಮಕ್ಕಳಿಗೆ ಬಾಲ ಪೋಷಕ ಯೋಜನೆಯಡಿ
ಪ್ರತಿದಿನ (180 ದಿನ) 2 ಗ್ರಾಂ ಸ್ಪಿರುಲಿನಾ ನೀಡಲು 3.6 ಕೋಟಿ ವೆಚ್ಚದ 'ಬಾಲ ಪೋಷಕ
ಯೋಜನೆ'ಯನ್ನು ರೂಪಿಸಲಾಗಿದೆ. ಬಹು ಅಪೌಷ್ಟಿಕ ಆಹಾರ ಕೊರತೆಯುಳ್ಳ ಮಕ್ಕಳ ಹಿತದೃಷ್ಟಿಯಿಂದ
3.12 ಕೋಟಿ ರೂ. ಮೀಸಲಿಟ್ಟಿದ್ದು, ಪ್ರಸ್ತುತ ಪ್ರತಿ ಮಗುವಿಗೆ ನೀಡುತ್ತಿರುವ 750 ರೂ.ಗಳ
ಬದಲಿಗೆ 2 ಸಾವಿರ ರೂ.ಗೆ ಏರಿಸಲಾಗಿದೆ.

4 ಸಾವಿರ ಅಂಗನವಾಡಿ ಕಟ್ಟಡಗಳು

ಪರಿಶಿಷ್ಟ ಜಾತಿ/ಪಂಗಡದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ 500
ಸ್ಥಳಗಳಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ನಿಧಿಗಳಿಂದ 3 ಸಾವಿರ ಅಂಗನವಾಡಿ ಕಟ್ಟಡಗಳು,
ಎಸ್‌ಡಿಪಿ ಅಡಿಯಲ್ಲಿ 500 ಕಟ್ಟಡಗಳು ಸೇರಿದಂತೆ ಒಟ್ಟಾರೆ 4 ಸಾವಿರ ಅಂಗನವಾಡಿ
ಕಟ್ಟಡಗಳನ್ನು ನಿರ್ಮಿಸಲಾಗುವುದು. ಅಂಗನವಾಡಿ ಮಕ್ಕಳಿಗೆ ಕೆನೆಭರಿತ ಹಾಲು ನೀಡಲು ಬಾಲ
ಸ್ನೇಹಿ ಕೇಂದ್ರಗಳ ಯೋಜನೆಯಡಿ 10 ಸಾವಿರ ಅಂಗನವಾಡಿ ಕೇಂದ್ರಗಳನ್ನು 'ಶಿಶು ಸ್ನೇಹಿ
ಕೇಂದ್ರ'ಗಳನ್ನಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ತಲಾ 10 ಸಾವಿರ
ರೂ. ಅನುದಾನ ಘೋಷಣೆಯಾಗಿದೆ.

ಸ್ಪರ್ಧಾಚೇತನ ಯೋಜನೆ

ಸ್ತ್ರೀಶಕ್ತಿ ಗುಂಪುಗಳ ನೋಂದಣಿಗಾಗಿ 30 ಲಕ್ಷ ರೂ., ಮಹಿಳಾ ಸಬಲೀಕರಣ ಕಾರ್ಯನೀತಿ ಜಾರಿ,
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಪ್ರಾರಂಭ, ಐಎಎಸ್/ಕೆಎಎಸ್ ಆಕಾಂಕ್ಷಿಗಳ ತರಬೇತಿಗಾಗಿ
'ಸ್ಪರ್ಧಾ ಚೇತನ ಯೋಜನೆ'ಯಡಿ 1 ಕೋಟಿ ರೂ. ಸಹಾಯಧನ ಮೀಸಲು. 1.50 ಕೊಟಿ ರೂ.ವೆಚ್ಚದಲ್ಲಿ
ವಿಶೇಷಚೇತನ ಪೋಷಕರಿಗೆ ಅರಿವು ಮೂಡಿಸಲು 'ಅರಿವಿನ ಸಿಂಚನ' ಯೋಜನೆ ಜಾರಿ ಹಾಗೂ ನಿರಾಶ್ರಿತ
ಬುದ್ಧಿಮಾಂದ್ಯರ ಸಂರಕ್ಷಣೆಗಾಗಿ 'ಅನುಪಾಲನಾ ಗೃಹ'ಗಳನ್ನು ತೆರೆಯಲು 4 ಕೋಟಿ ರೂ. ಅನುದಾನ
ಘೋಷಣೆಯಾಗಿದೆ.

ವಿಶೇಷಚೇತನರಿಗೆ ನಿರಾಳ

ವಿಶೇಷಚೇತನರಿಗೆ 'ಸಾಧನಾ ಸಲಕರಣಾ ಯೋಜನೆ'ಯಡಿ ನೀಡುವ ಮೊತ್ತ 15 ಸಾವಿರ ರೂ.ಗೆ
ಏರಿಕೆಯಾಗಿದೆ. ಜತೆಗೆ ಈ ವರ್ಷದಿಂದ ತೀವ್ರ ಅಂಗವಿಕಲತೆಯುಳ್ಳ 2 ಸಾವಿರ ಮಂದಿಗೆ
ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಒದಗಿಸಲಾಗುವುದು. ಜಿಲ್ಲಾ ಪುನರ್ವಸತಿ ಕೇಂದ್ರಗಳ
ಸಹಾಯಧನವನ್ನು ಇನ್ನೂ 16 ಜಿಲ್ಲೆಗಳಿಗೆ ವಿಸ್ತರಿಸಿ, ಪ್ರತಿ ಕೇಂದ್ರಕ್ಕೆ 28 ಲಕ್ಷದ
ಬದಲಿಗೆ 36 ಲಕ್ಷ ರೂ. ನೀಡಲಾಗುವುದು. ವಿಶೇಷಚೇತನರ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು
ದುರಸ್ತಿಗಾಗಿ 10 ಕೋಟಿ ರೂ. ಮೀಸಲಿಡಲಾಗಿದೆ.

ಬುದ್ಧಿಮಾಂದ್ಯ ಮಕ್ಕಳ ಶಾಲೆಗಳಿಗೆ ಪ್ರತಿ ಮಗುವಿಗೆ ನೀಡುತ್ತಿರುವ ಅನುದಾನವನ್ನು ವಸತಿ
ಶಾಲೆಗಳಲ್ಲಿ 5 ಸಾವಿರವಿದ್ದುದು 5,600 ರೂ.ಗೆ ಮತ್ತು ವಸತಿ ರಹಿತ ಶಾಲೆಗಳಿಗೆ 4 ಸಾವಿರ
ರೂ. ಇದ್ದುದು 4,800 ರೂ.ಗೆ ಪರಿಷ್ಕರಿಸಲಾಗಿದೆ. ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರಿಗೆ
'ಸ್ತ್ರೀ ಶಕ್ತಿ ಕೌಶಲ್ಯ' ಯೋಜನೆಯಡಿ ತರಬೇತಿ ನೀಡಲು 2.50 ಕೋಟಿ ರೂ., ಎಚ್‌ಐವಿ
ಪೀಡಿತರಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸಾಲದ ರೂಪದಲ್ಲಿ 40 ಸಾವಿರ ಹಾಗೂ
ಸಹಾಯಧನವಾಗಿ 10 ಸಾವಿರ ರೂ. ನೀಡಲು 'ಧನಶ್ರೀ' ಯೋಜನೆಗಾಗಿ 5 ಕೋಟಿ ಅನುದಾನ
ಮೀಸಲಿಡಲಾಗಿದೆ. ಈ ಬಾರಿ ಈ ಇಲಾಖೆಗೆ ಒಟ್ಟಾರೆ 4,497 ಕೋಟಿ ರೂ. ಅನುದಾನ ನೀಡಲಾಗಿದೆ.

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to