Thank u sir for d information....
On May 8, 2016 7:31 AM, "HAREESHKUMAR K Agasanapura" <harihusk...@gmail.com>
wrote:

> http://m.prajavani.net/article/2016_05_04/406562
>
> *ಖಗೋಳ ವಿಸ್ಮಯ: ಅಪೂರ್ವ ‘ಬುದ್ಧ ಸಂಕ್ರಮಣ’*
>
> 4 May, 2016
>
> ಪ್ರೊ. ಎಸ್‌.ಎ. ಮೋಹನ್‌ ಕೃಷ್ಣ
>
> <https://www.facebook.com/sharer/sharer.php?u=http%3A%2F%2Fgoo.gl%2FN2etZn>
> <https://twitter.com/intent/tweet?text=%E0%B2%96%E0%B2%97%E0%B3%8B%E0%B2%B3+%E0%B2%B5%E0%B2%BF%E0%B2%B8%E0%B3%8D%E0%B2%AE%E0%B2%AF%3A+%E0%B2%85%E0%B2%AA%E0%B3%82%E0%B2%B0%E0%B3%8D%E0%B2%B5+%E2%80%98%E0%B2%AC%E0%B3%81%E0%B2%A6%E0%B3%8D%E0%B2%A7+%E0%B2%B8%E0%B2%82%E0%B2%95%E0%B3%8D%E0%B2%B0%E0%B2%AE%E0%B2%A3%E2%80%99+http%3A%2F%2Fgoo.gl%2FN2etZn>
> <https://plus.google.com/share?url=http%3A%2F%2Fgoo.gl%2FN2etZn>
> <http://www.pinterest.com/pin/find/?url=http%3A%2F%2Fgoo.gl%2FN2etZn>
> <http://www.linkedin.com/shareArticle?mini=true&title=%E0%B2%96%E0%B2%97%E0%B3%8B%E0%B2%B3+%E0%B2%B5%E0%B2%BF%E0%B2%B8%E0%B3%8D%E0%B2%AE%E0%B2%AF%3A+%E0%B2%85%E0%B2%AA%E0%B3%82%E0%B2%B0%E0%B3%8D%E0%B2%B5+%E2%80%98%E0%B2%AC%E0%B3%81%E0%B2%A6%E0%B3%8D%E0%B2%A7+%E0%B2%B8%E0%B2%82%E0%B2%95%E0%B3%8D%E0%B2%B0%E0%B2%AE%E0%B2%A3%E2%80%99+&url=http%3A%2F%2Fgoo.gl%2FN2etZn>
>
> ಖಗೋಳ ವಿಜ್ಞಾನವು (astronomy) ಅತ್ಯಂತ ಕುತೂಹಲಕರ ಹಾಗೂ  ಕೌತುಕಮಯ ವಿಷಯ.
> ಅನಾದಿಕಾಲದಿಂದಲೂ  ಮಾನವ ಆಕಾಶಕಾಯಗಳ ಬಗ್ಗೆ ಸಂಶೋಧನೆ  ಮಾಡುತ್ತಲೇ ಬಂದಿದ್ದಾನೆ. ಇವನ
> ತಾಳ್ಮೆ, ಸಹನೆ ಹಾಗೂ ಪ್ರಯತ್ನಕ್ಕೆ ಒಳ್ಳೆಯ ಫಲವೂ ಸಿಕ್ಕಿದೆ. ಖಗೋಳ ವಿಜ್ಞಾನಿಗಳಾದ
> ಮವರಾಹಾ ಮಿಹಿರ, ಆರ್ಯಭಟ,  ಬ್ರಹ್ಮಗುಪ್ತ, ನಿಕೊಲಾಸ್‌ ಕೋಪರ್‌ನಿಕಸ್‌, ಯೊಹಾನೆಸ್‌
> ಕೆಪ್ಲರ್‌ ಗೆಲಿಲಿಯೊ  ಗೆಲಿಲಿ, ಸರ್‌ ಐಸಾಕ್‌ ನ್ಯೂಟನ್‌, ಎಡ್ಮಂಡ್‌ ಹ್ಯಾಲಿ, ಟೈಕೋ
> ಬ್ರಾಹೆ  ಮತ್ತಿತರರು ಮಾಡಿರುವ ಸಾಧನೆಗಳು ನಿಜಕ್ಕೂ ಶ್ಲಾಘನೀಯ.
>
> ಇವರೆಲ್ಲರ ಪರಿಶ್ರಮದಿಂದಾಗಿ ಪ್ರತಿಯೊಂದು ಆಕಾಶಕಾಯಗಳ ಬಗ್ಗೆ ಅನೇಕ ಮಾಹಿತಿಗಳು ಬಹಳ
> ಸುಲಭವಾಗಿ ದೊರಕುತ್ತದೆ. ಬಹುತೇಕರಿಗೆ ಆಕಾಶಕಾಯಗಳಾದ ನಕ್ಷತ್ರ, ಗ್ರಹ, ಉಲ್ಕೆ, ಧೂಮಕೇತು,
> ಕ್ಷುದ್ರಗ್ರಹಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಬಹಳ ಆಸೆ ಇರುತ್ತದೆ. ಇದಲ್ಲದೆ, ಪ್ರಮುಖ
> ಖಗೋಳ ಘಟನೆಗಳಾದ ಗ್ರಹಣ, ಸಂಕ್ರಮಣ ಹಾಗೂ ಗ್ರಹಗಳ ಸಂಯೋಜನೆ ಅತ್ಯಂತ  ವಿಸ್ಮಯಕಾರಿಯಾದ
> ವಿದ್ಯಮಾನ.
>
> ಈ ರೀತಿಯ  ಅದ್ಭುತಗಳಲ್ಲಿ, ಮೇ 9ರಂದು  ವಿಶಿಷ್ಟ ಖಗೋಳ ಘಟನೆಯೊಂದು ಸಂಭವಿಸಲಿದೆ. ಸಂಜೆಯ
> ವೇಳೆಯಲ್ಲಿ  ‘ಬುಧ’  ಗ್ರಹವು ಸೂರ್ಯನ ಮುಂದೆ ಹಾದು ಹೋಗಲಿದೆ. ಈ ಒಂದು ಅಪೂರ್ವ ಘಟನೆಯ
> ಹೆಸರು ‘ಬುಧ ಸಂಕ್ರಮಣ’ (transit of Mercury). ಇದು ಈ ವರ್ಷದ ಅತ್ಯಂತ, ರೋಮಾಂಚಕಾರಿ
> ಘಟನೆಯೆಂದರೆ ತಪ್ಪಾಗಲಾರದು. ಬುಧ ಗ್ರಹವು ಸೂರ್ಯನ ಮುಂದೆ ಹಾದು ಹೋಗುವ ದೃಶ್ಯ ನಿಜಕ್ಕೂ
> ಕುತೂಹಲಕಾರಿ!
>
> 2004 ಹಾಗೂ 2012 ರಲ್ಲಿ ಸಂಭವಿಸಿದ ‘ಶಕ್ರ ಸಂಕ್ರಮಣ’ (transit of  Venus) ಎಲ್ಲರಿಗೂ
> ಜ್ಞಾಪಕವಿರಲೇಬೇಕು. ಶುಕ್ರ ಗ್ರಹವು ಸೂರ್ಯನ ಮುಂದೆ ಹಾದು ಹೋಗಿ, ಒಂದು ಕಪ್ಪು ಚುಕ್ಕೆಯಂತೆ
> ಕಂಡದ್ದು ಅವಿಸ್ಮರಣೀಯ. ಇದೇ ರೀತಿ ಮೇ 9 ರಂದು ಬುಧ ಗ್ರಹವು ಕಪ್ಪು ಚುಕ್ಕಿಯಂತೆ ಕಾಣಲಿದೆ.
>
> ಸೌರಮಂಡಲದಲನ ಗ್ರಹಗಳ ಹೆಸರುಗಳು ಗೊತ್ತಿದ್ದರೂ, ಲಕ್ಷಾಂತರ ಗ್ರಹ ಹಾಗೂ ಉಪಗ್ರಹಗಳಿರುವ
> ವಿಚಾರ ಅನೇಕರಿಗೆ ಗೊತ್ತಿಲ್ಲ. ಸೂರ್ಯನಿಗೆ ಬಹಳ ಸಮೀಪದಲ್ಲಿರುವ ಗ್ರಹವೆಂದರೆ ‘ಬುಧ’.
> ಸೂರ್ಯನ ಆಪ್ತಮಿತ್ರನೆಂದರೂ ತಪ್ಪಾಗಲಾರದು. ಇದರ  ರಚನೆ ವಿಶಿಷ್ಟ ಮತ್ತು  ನಿಗೂಢವಾಗಿಯೂ
> ಇದೆ. ಇದರ ಚಲನ–ವಲನ ಸ್ಪಷ್ಟವಾಗಿದ್ದರೂ, ಇದು ಬರಿ  ಕಣ್ಣಿಗೆ ಕಾಣುವುದು ಬಹಳ ಕಷ್ಟ.
>
> ಕಂದು ಬಣ್ಣಹೊಂದಿದ್ದು, ಭೂಮಿಗೆ ಹೋಲಿಸಿದರೆ ಇದರ ಗಾತ್ರ ಚಿಕ್ಕದು. ‘ಮೆಸೆಂಜರ್‌’
> ಉಪಗ್ರಹವು ಇದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದೆ. ಇದರ ರಚನೆ, ಚಲನವಲನ,
> ಆವರ್ತನಾ ಹಾಗೂ ಪರಿಭ್ರಮಣೆಯ ಅವಧಿ, ಕಕ್ಷಾವೇಗ, ಉಷ್ಣಾಂಶ, ಬಣ್ಣ, ಕೋನ ಹಾಗೂ ಗಾತ್ರಗಳ
> ಬಗ್ಗೆ ಖಚಿತ ಮಾಹಿತಿ ದೊರಕಿದೆ.
>
> ವಿಶ್ವದ ಹುಟ್ಟು ನಿಗೂಢವಾಗಿರುವಾಗ, ಇನ್ನು  ಗ್ರಹಗಳು, ಧೂಮಕೇತುಗಳ ಉಗಮ ಊಹಿಸಲೂ
> ಸಾಧ್ಯವಿಲ್ಲ. ಗ್ರಹಗಳ ಬಗ್ಗೆ ತೀವ್ರವಾದ ಸಂಶೋಧನೆ ಹಾಗೂ ಅನ್ವೇಷಣೆ ಪ್ರಾರಂಭವಾಗಿ
> ಸಾವಿರಾರು ವರ್ಷಗಳೇ ಕಳೆದಿವೆ. ಆದರೆ ನಿರ್ದಿಷ್ಟವಾದ ಮಾಹಿತಿಗಳು ದೊರಕಲು
> ಪ್ರಾರಂಭವಾಗಿದ್ದು ವರಾಹಾ ಮಿಹಿರ ಹಾಗೂ ಆರ್ಯಭಟರ ಕಾಲದಲ್ಲಿ.
>
> ಗಣಿತ ಲೆಕ್ಕಾಚಾರದ ಪ್ರಕಾರ ಗ್ರಹಗಳ ಪಥ, ಚಲನ–ವಲನ, ಕಕ್ಷೆ ಹಾಗೂ ಇನ್ನಿತರ ವಿವರಗಳನ್ನು
> ಇವರು ನೀಡಿದ್ದಾರೆ.     ಸರ್‌ ಐಸ್ಯಾಕ್‌ ನ್ಯೂಟನ್‌, ಗೆಲಿಲಿಯೊ ಗೆಲಿಲಿ, ಯೊಹಾನೆಸ್‌
> ಕೆಪ್ಲರ್‌, ಟೈಕೊ ಬ್ರಾಹೆ ಇವರುಗಳು ಸಹ  ಅನೇಕ ಗಣನೀಯ ಸಾಧನೆಗಳನ್ನು ಮಾಡಿದ್ದಾರೆ.
> ಇವರುಗಳಲ್ಲದೇ, ಹಲವಾರು ಖಗೋಳ ವಿಜ್ಞಾನಿಗಳು ಗ್ರಹಗಳ ಬಗ್ಗೆ, ಧೂಮಕೇತು, ಗ್ರಹಣ,
> ಸಂಕ್ರಮಣಗಳ ವಿಚಾರವಾಗಿ ಸಂಶೋಧನೆ ನಡೆಸಿದ್ದಾರೆ.
>
> *ಸಂಕ್ರಮಣ:ಇತಿಹಾಸ*
> ‘ಸಂಕ್ರಮಣ’ ಎಂದರೆ ಅನೇಕರಿಗೆ  ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಪ್ರಮುಖ ಗ್ರಹಗಳಾದ
> ಬುಧ ಹಾಗೂ ಶುಕ್ರ, ಸೂರ್ಯನ ಮುಂದೆ ಹಾದು ಹೋಗುವುದು ವಾಡಿಕೆ.   ಸಂಕ್ರಮಣ ಹಾಗೂ
> ಗ್ರಹಣಗಳಲ್ಲಿ ವ್ಯತ್ಯಾಸ ಇದೆ.  ಸಂಕ್ರಮಣವು ಗ್ರಹಣಕ್ಕಿಂತಲೂ ಕುತೂಹಲಕಾರಿ. ಸೂರ್ಯನ ಮುಂದೆ
> ಗ್ರಹಗಳಾದ ‘ಬುಧ’ ಹಾಗೂ‘ಶುಕ್ರ’ ಹಾದು ಹೋದರೆ, ಈ ಪ್ರಕ್ರಿಯೆಯೇ ‘ಸಂಕ್ರಮಣ.’
>
> ಖಗೋಳ ವಿಜ್ಞಾನಿಗಳು ಸಂಕ್ರಮಣಗಳ ಬಗ್ಗೆ ಸುಧೀರ್ಘ ಆಲೋಚನೆ ಮಾಡಲು ಪ್ರಾರಂಭಿಸಿದ್ದು 1631
> ರಲ್ಲಿ. ನವೆಂಬರ್ 7, 1631 ರಂದು ಖಗೋಳ ತಜ್ಞ ಪಿಯರಿ ಗೆಸೆಂಡಿ (1592–1655) ಮೊಟ್ಟಮೊದಲ
> ಬಾರಿಗೆ ಬುಧ ಸಂಕ್ರಮಣದ ಬಗ್ಗೆ ಅನ್ವೇಷಣೆ ಮಾಡಿದ. 1639 ರಲ್ಲಿ ಜೆರಿಮಿಯಾ ಹೊರೊಕ್‌್ಸ
> ಶುಕ್ರ ಸಂಕ್ರಮಣವನ್ನು ಮೊಟ್ಟಮೊದಲಿಗೆ ವೀಕ್ಷಿಸಿದ. ಇವರುಗಳ ಜೊತೆಗೆ ಎಡ್ಮಂಡ್‌ ಹ್ಯಾಲಿ
> ಹಾಗೂ ಯೊಹಾನೆಸ್‌ ಕೆಪ್ಲರ್‌ ಕೈ ಜೋಡಿಸಿದರು. ಅಂದಿನಿಂದ ಇಂದಿನವರೆಗೂ, ಬುಧ ಮತ್ತು ಶುಕ್ರ
> ಸಂಕ್ರಮಣಗಳ ಬಗ್ಗೆ ವೀಕ್ಷಣೆ ನಡೆಯುತ್ತಲೇ ಬಂದಿದೆ.
>
> ಖಗೋಳ ಶಾಸ್ತ್ರಜ್ಞರ ಪ್ರಕಾರ ‘ಬುಧ ಸಂಕ್ರಮಣ’ವು 7, 13 ಹಾಗೂ 33 ವರ್ಷಗಳಿಗೊಮ್ಮೆ ಮತ್ತು
> ಶುಕ್ರ ಸಂಕ್ರಮಣವು 8 ಹಾಗೂ 121 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.
>
> ಒಂದು ಶತಮಾನದಲ್ಲಿ ಬುಧ ಸಂಕ್ರಮಣವು 13 ರಿಂದ 14 ಸಲ ಸಂಭವಿಸುತ್ತದೆ. ಬುಧ ಸಂಕ್ರಮಣವು
> ಕಳೆದ ಬಾರಿ 2006 ರಲ್ಲಿ ಸಂಭವಿಸಿತ್ತು.
>
> *ಬುಧ ಸಂಕ್ರಮಣ*
> ಬುಧ ಗ್ರಹವು ಸೂರ್ಯನಿಗಿರುವ ಅತ್ಯಂತ ಸಮೀಪ ಗ್ರಹ. ಇದರ ವ್ಯಾಸ 4,848 ಕಿ.ಮೀ. ಹಾಗೂ
> ಸೂರ್ಯನಿಂದ ಇದರ ಅಂತರ  80 ದಶಲಕ್ಷ ಕಿ.ಮೀ. ಮೇ 9 ರಂದು ಹಲವಾರು ದೇಶಗಳಲ್ಲಿ ಈ ಅದ್ಭುತ
> ಖಗೋಳ ಘಟನೆ ಸಂಭವಿಸಲಿದೆ. ಸಂಪೂರ್ಣ ಸಂಕ್ರಮಣವು ಅಮೆರಿಕ, ಆಫ್ರಿಕಾ, ಗ್ರೀನ್‌ ಲ್ಯಾಂಡ್‌,
> ಫೆಸಿಪಿಕ್‌ ಮತ್ತು ಅಟ್ಲಾಂಟಿಕ್‌ ಮಹಾಸಾಗರಗಳ ಸಮೀಪ ಗೋಚರಿಸಲಿದೆ.
>
> ಆದರೆ ಭಾರತದ ಎಲ್ಲಾ ಭಾಗಗಳಲ್ಲಿ ಸಂಕ್ರಮಣದ ಪ್ರಾರಂಭಿಕ ಹಂತವು ಮಾತ್ರ ಗೋಚರಿಸುತ್ತದೆ.
> ಅಂತ್ಯದ ಭಾಗ ಗೋಚರಿಸಲು ಅಸಾಧ್ಯ ಏಕೆಂದರೆ, ಬೇರೆ ದೇಶಗಳಲ್ಲಿ ಘಟನೆ ಸಂಭವಿಸುತ್ತಿರುವಾಗಲೇ
> ಭಾರತದಲ್ಲಿ ಸೂರ್ಯಾಸ್ತವಾಗಿರುತ್ತದೆ.
>
> ಮೇ 9 ರಂದು ಭಾರತದ ಎಲ್ಲಾ ಭಾಗಗಳಲ್ಲಿ ಬುಧ ಸಂಕ್ರಮಣದ ಪ್ರಾರಂಭಿಕ ಘಟ್ಟವನ್ನು ಮಾತ್ರ
> ವೀಕ್ಷಿಸಬಹುದು.  ಬುಧ ಸಂಕ್ರಮಣವು ಅಂದು ಸಂಜೆ 4 ಗಂಟೆ 42 ನಿಮಿಷಕ್ಕೆ ಸೂರ್ಯನ ಮುಂದೆ
> ಕಪ್ಪು ಚುಕ್ಕೆಯಂತೆ ಗೋಚರಿಸುತ್ತದೆ. ಆದರೆ, ಮಧ್ಯದ ಹಾಗೂ ಕೊನೆಯ ಭಾಗಗಳು ವೀಕ್ಷಿಸಲು
> ಅಸಾಧ್ಯ.   ಸಂಜೆ  ಸುಮಾರು ಒಂದು ಮುಕ್ಕಾಲು ಗಂಟೆ ವೀಕ್ಷಿಸಬಹುದು. ಸಂಜೆ  6:40 ಸಂಜೆ
> ಹೊತ್ತಿಗೆ ಸೂರ್ಯಾಸ್ತವಾಗುತ್ತದೆ.  ಸಂಕ್ರಮಣವು ಸಂಭ್ರಮಿಸುತ್ತಿದ್ದಾಗ ಸೂರ್ಯನ ಪ್ರಖರತೆ
> ಮತ್ತು ತೀರ್ವತೆ ಸಹಜವಾಗಿರುತ್ತದೆ.
>
> *ವೀಕ್ಷಿಸುವ ಪರಿ*
> ಬುಧ ಸಂಕ್ರಮಣವನ್ನು ವೀಕ್ಷಿಸುವ ಪರಿ ಹೇಗೆ? ವೀಕ್ಷಿಸಿದರೆ ಗಂಡಾಂತರ ಕಾದಿದೆಯೆ
> ಎಂದೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಸಂಕ್ರಮಣವನ್ನು ನೇರವಾಗಿ ವೀಕ್ಷಿಸಿದರೆ ಬುಧ
> ಗ್ರಹವು ಗೋಚರಿಸುವುದಿಲ್ಲ ಹಾಗೂ ಅಕ್ಷಿಪಲ್ಲಟಕ್ಕೆ ಸ್ವಲ್ಪ ಊನ ಉಂಟಾಗಬಹುದು.
>
> ಸೌರ ಕನ್ನಡಕ ಇಲ್ಲವೆ ಸೋಲಾರ್‌ ಫಿಲ್ಟರ್ (solar  filter)  ಬಳಸಿ ದೂರದರ್ಶಕದ ಮೂಲಕ
> ವೀಕ್ಷಿಸುವುದೇ ಲೇಸು. ಸೂರ್ಯ ಮತ್ತು ಬುಧ ಗ್ರಹವು ಅಂಟಿಕೊಂಡಿವೆ ಏನೊ ಎಂಬಂತೆ
> ಭಾಸವಾಗುತ್ತದೆ. ಸೌರ ಕನ್ನಡಕಗಳೂ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಈ ಘಟನೆ
> ವೀಕ್ಷಿಸಿದರೆ ಯಾವ ಗಂಡಾಂತರವೂ ಇಲ್ಲ.
>
> Hareeshkumar K
> AM(PCM)
> GHS HUSKURU
> MALAVALLI TQ
> MANDYA DT 571475
> mobile no 9880328224
> email harihusk...@gmail.com
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to