Useful information.

On 26 Aug 2016 6:44 am, "HAREESHKUMAR K Agasanapura" <harihusk...@gmail.com>
wrote:

> http://m.prajavani.net/article/2016_08_25/433460
> *ಕೋಣೆಗೆ ಬಂದಿರುವ ಆನೆ ಕಾಣದೇಕೆ?*
>
> 25 Aug, 2016
>
> ನಾಗೇಶ್ ಹೆಗಡೆ
>
> <https://www.facebook.com/sharer/sharer.php?u=http%3A%2F%2Fgoo.gl%2FV4jZBK>
> <https://twitter.com/intent/tweet?text=%E0%B2%95%E0%B3%8B%E0%B2%A3%E0%B3%86%E0%B2%97%E0%B3%86+%E0%B2%AC%E0%B2%82%E0%B2%A6%E0%B2%BF%E0%B2%B0%E0%B3%81%E0%B2%B5+%E0%B2%86%E0%B2%A8%E0%B3%86+%E0%B2%95%E0%B2%BE%E0%B2%A3%E0%B2%A6%E0%B3%87%E0%B2%95%E0%B3%86%3F+http%3A%2F%2Fgoo.gl%2FV4jZBK>
> <https://plus.google.com/share?url=http%3A%2F%2Fgoo.gl%2FV4jZBK>
> <http://www.pinterest.com/pin/find/?url=http%3A%2F%2Fgoo.gl%2FV4jZBK>
> <http://www.linkedin.com/shareArticle?mini=true&title=%E0%B2%95%E0%B3%8B%E0%B2%A3%E0%B3%86%E0%B2%97%E0%B3%86+%E0%B2%AC%E0%B2%82%E0%B2%A6%E0%B2%BF%E0%B2%B0%E0%B3%81%E0%B2%B5+%E0%B2%86%E0%B2%A8%E0%B3%86+%E0%B2%95%E0%B2%BE%E0%B2%A3%E0%B2%A6%E0%B3%87%E0%B2%95%E0%B3%86%3F+&url=http%3A%2F%2Fgoo.gl%2FV4jZBK>
>
> ನಮ್ಮ ದೇಶದ ಯಾವುದಾದರೂ ಒಬ್ಬ ಪ್ರಖ್ಯಾತ ರಾಕೆಟ್ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ?
> ಮಕ್ಕಳಿಗೆ ಈ ಪ್ರಶ್ನೆಯನ್ನು ಕೇಳಿದರೆ ಪಟಪಟನೆ ಹತ್ತಾರು ಸರಿ ಉತ್ತರಗಳು ಬರುತ್ತವೆ. ನಮ್ಮ
> ದೇಶದ ಪ್ರಸಿದ್ಧ ಪರಮಾಣು ವಿಜ್ಞಾನಿಯ ಹೆಸರು ಗೊತ್ತಿದೆಯೆ? ಅದಕ್ಕೂ ಪಟಪಟನೆ ನಾಲ್ಕಾರು ಸರಿ
> ಉತ್ತರಗಳು ಬರುತ್ತವೆ.
>
> ಬಹಳಷ್ಟು ಬಾರಿ ಆ ಪ್ರಶ್ನೆಯ ಉತ್ತರವೇ ಈ ಪ್ರಶ್ನೆಯ ಉತ್ತರವೂ ಆಗಿರುತ್ತದೆ. ಹಾಗಿದ್ದರೆ,
> ನಮ್ಮ ದೇಶದ ಪ್ರಸಿದ್ಧ ಹವಾಮಾನ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ?.... ಈಗ ಎಲ್ಲೆಡೆ ಮೌನ
> ಆವರಿಸುತ್ತದೆ. ತಪ್ಪು ಉತ್ತರ ಕೊಡಲಿಕ್ಕೂ ಮಕ್ಕಳಿಗೆ ಒಂದು ಹೆಸರು ಹೊಳೆಯುವುದಿಲ್ಲ.
>
> ನಮ್ಮ ದೇಶದ ಕ್ರೀಡಾರಂಗಕ್ಕೂ ವಿಜ್ಞಾನರಂಗಕ್ಕೂ ತುಂಬ ಹೋಲಿಕೆಗಳಿವೆ. ಒಲಿಂಪಿಕ್ಸ್ ಪದಕ
> ಪಡೆಯುವಲ್ಲಿ ನಮ್ಮ ಸ್ಥಾನಮಾನ ಎಷ್ಟಿದೆಯೊ ಅಷ್ಟೇ ಕಳಪೆಯ ಸ್ಥಾನಮಾನ ವಿಜ್ಞಾನದ ನೊಬೆಲ್ ಪದಕ
> ಪಡೆಯುವಲ್ಲಿಯೂ ಇದೆ.
>
> ಕ್ರೀಡಾರಂಗದಲ್ಲಿ ಕ್ರಿಕೆಟ್, ಟೆನ್ನಿಸ್‌ಗಳಿಗೆ ಇನ್ನಿಲ್ಲದ ಮಾನ್ಯತೆ, ಪ್ರಭಾವಳಿ ಇದೆ.
> ಆದರೆ ತೀರ ಸಾಮಾನ್ಯ ಶಾಲಾ ಮಕ್ಕಳ ಕೈಗೆಟುಕಬಹುದಾದ ಓಟ, ಜಿಗಿದಾಟ (ಜಿಮ್ನಾಸ್ಟಿಕ್)ಗಳಿಗೆ
> ಮಾನ್ಯತೆ ಇಲ್ಲ. ವಿಜ್ಞಾನದಲ್ಲೂ ಅಷ್ಟೆ: ಪರಮಾಣು ವಿಜ್ಞಾನಕ್ಕೆ, ಕ್ಷಿಪಣಿ
> ತಂತ್ರಜ್ಞಾನಕ್ಕೆ ಸಿಗುವ ಮಾನ್ಯತೆ ಹವಾಮಾನ ವಿಜ್ಞಾನಕ್ಕೆ ಇಲ್ಲ. ಹವಾಮಾನ ಅಧ್ಯಯನಕ್ಕೆ
> ಬೇಕಾದ ಸಲಕರಣೆಗಳನ್ನು ಶಾಲಾ ಮಕ್ಕಳೇ ಹೊಂದಿಸಿಕೊಳ್ಳಬಹುದು, ಅಥವಾ ಅಲ್ಪವೆಚ್ಚದಲ್ಲಿ
> ಖರೀದಿಸಿ ತರಬಹುದು. ಆದರೆ ಅದರ ಮಹತ್ವವನ್ನು ಗ್ರಹಿಸಲು ಬೇಕಾದ ಅಆಇಈ ತರಬೇತಿ ಕೂಡ ನಮ್ಮ
> ಶಿಕ್ಷಕರಿಗೆ ಇಲ್ಲ.
>
> ಹವಾಮಾನ ದಿನದಿನಕ್ಕೆ ಕ್ರೂರವಾಗುತ್ತಿದೆ. ಬರ- ನೆರೆ ಎಂಬಂಥ ಕನಿಷ್ಠ ಗರಿಷ್ಠಗಳ ಅಂಚಿನ
> ಹೊಯ್ದಾಟವೇ ನಿತ್ಯದ ಸುದ್ದಿಯಾಗುತ್ತಿದೆ. ದಾಖಲೆಗಳ ಪ್ರಕಾರ ಕಳೆದ ಜುಲೈ ತಿಂಗಳಲ್ಲಿ
> ಜಾಗತಿಕ ಸರಾಸರಿ ಉಷ್ಣತೆ ಹಿಂದಿನ ಎಲ್ಲ ಜುಲೈ ತಿಂಗಳ ದಾಖಲೆಗಳನ್ನೂ ಮೆಟ್ಟಿ ನಿಂತಿದೆ.
> ಎಲ್ಲ ಜುಲೈಗಳಷ್ಟೇ ಅಲ್ಲ, ನಾಸಾ ವರದಿಯ ಪ್ರಕಾರ, 1880ರಿಂದ ಭೂಮಿಯ ತಾಪಮಾನದ ದಾಖಲೆ ಇಡುವ
> ಪ್ರಕ್ರಿಯೆ ಆರಂಭವಾದಾಗಿನಿಂದ ಭೂತಾಪ ಇಷ್ಟು ಏರಿಕೆ ಆಗಿದ್ದು ಇದೇ ಮೊದಲು. ಈ ಏರಿಕೆ
> ಹಠಾತ್ತಾಗಿ ಆಗಿದ್ದೇನೂ ಇಲ್ಲ.
>
> ಕಳೆದ ಒಂದು ತಲೆಮಾರಿನಿಂದ ಆಗುತ್ತಲೇ ಇದೆ. ಹಿಂದಿನ 14 ವರ್ಷಗಳಲ್ಲಿ ಒಟ್ಟೂ 12 ವರ್ಷ
> ಅತ್ಯಧಿಕ ಉಷ್ಣತೆಯ ವರ್ಷಗಳೇ ಆಗಿದ್ದವು. ಬುಂದೇಲಖಂಡದಲ್ಲಿ ಸತತ ಮೂರು ಬರವರ್ಷಗಳಿಂದಾಗಿ
> ಶ್ರಮಜೀವಿಗಳು ನಿರಾಶ್ರಿತರಾಗಿ ದಿಲ್ಲಿಯ ಮೇಲುಸೇತುವೆಗಳ ಕೆಳಗೆ, ಕೊಳಕು ಕೊಳ್ಳಗಳ ಅಂಚಿಗೆ
> ಸಂತೆ ನೆರೆದಿದ್ದಾರೆ.
>
> ನೀರಿನ ರೈಲಿಗಾಗಿ ಕಾದುನಿಂತ ಮರಾಠಾವಾಡಾದ ಜನರ ಸ್ಥಿತಿಯಂತೂ ಗೊತ್ತೇ ಇದೆ.
> ಛತ್ತೀಸಗಢದಲ್ಲಿ ಅರಣ್ಯಗಳ ಮಧ್ಯೆ ಬರಗಾಲ ಬಂದಿದೆ. ಅಲ್ಲಿ ಜೇನು ಮತ್ತು ಮಹುವಾ ಇಳುವರಿ
> ಕುಸಿದಿದ್ದರಿಂದ ಕೋಟಿಗಟ್ಟಲೆ ಆದಿವಾಸಿಗಳು ತತ್ತರಿಸಿದ್ದಾರೆ. ಇದೀಗ ಉತ್ತರ ಭಾರತದಲ್ಲಿ
> ಗಂಗೆ, ಯಮುನೆ, ಸೋನ್ ನದಿಗಳು ಧ್ವಂಸಧಾರೆಯನ್ನೇ ಹರಿಸುತ್ತಿವೆ.
>
> ಬಿಹಾರದಲ್ಲಿ ಎಂದಿಗಿಂತ ಕಡಿಮೆ ಮಳೆಯಾದರೂ ಏಳು ನದಿಗಳ ನೆರೆ ಹಾವಳಿಯಿಂದ ಜನಸ್ತೋಮ
> ನಲುಗುತ್ತಿದೆ. ಕರ್ನಾಟಕದಲ್ಲಿ 74 ತಾಲ್ಲೂಕುಗಳಲ್ಲಿ ಬರ ಸಿಡಿಲಿನಂತೆ ಎರಗಿದೆ. ಆಲಮಟ್ಟಿ
> ತುಂಬಿದ್ದರೂ 50 ಕಿ.ಮೀ ಆಚೆ ರೈತರ ಸೇಂಗಾ ಬೆಳೆ ಒಣಗುತ್ತಿದೆ. ಚೆನ್ನೈಯಲ್ಲಿ ನೆರೆ ಹಾವಳಿಯ
> ಮಧ್ಯೆ ನಿಂತ ಜಯಲಲಿತಾ ಕಾವೇರಿಯ ನೀರು ಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ
> ಇಡುತ್ತಿದ್ದಾರೆ.
>
> ನಮ್ಮೆಲ್ಲರ ನೆಮ್ಮದಿಯನ್ನು ಹಿಂಡಿ ಹಿಪ್ಪೆ ಮಾಡಿ ಎಸೆಯಬಲ್ಲ ಈ ಹವಾಮಾನ ವಿದ್ಯಮಾನ ನಮ್ಮ
> ಸಾಹಿತಿಗಳಿಗೆ, ಕಲಾವಿದರಿಗೆ, ಸಿನೆಮಾ ಮಂದಿಗೆ, ಚಿಂತಕರಿಗೆ, ಧಾರ್ಮಿಕ ಮುಖಂಡರಿಗೆ,
> ಶಿಕ್ಷಣತಜ್ಞರಿಗೆ, ಯೋಜನಾ ಧುರಂಧರರಿಗೆ ಕಾಣುತ್ತಿಲ್ಲ ಏಕೆ? ವಿಶೇಷವಾಗಿ ನಿನ್ನೆ ಮತ್ತು
> ನಾಳೆಗಳನ್ನು ಗ್ರಹಿಸಿ, ಮಥಿಸಿ ಸಮಾಜಕ್ಕೆ ದಾರಿದೀಪವಾಗಬಲ್ಲ (ರವಿ ಕಾಣದ್ದನ್ನೂ ಕಾಣುವ)
> ಕವಿಗಳು, ಸಾಹಿತಿಗಳು ಯಾಕೆ ಇದನ್ನು ಗ್ರಹಿಸುತ್ತಿಲ್ಲ?
>
> ಈ ಪ್ರಶ್ನೆಯನ್ನು ಕೇಳಿದವರು ಭಾರತದ ಪ್ರಖ್ಯಾತ ಇಂಗ್ಲಿಷ್ ಕಾದಂಬರಿಕಾರ ಅಮಿತಾವ್ ಘೋಷ್.
> ಅವರು ಈಚೆಗಷ್ಟೆ ಬರೆದ ‘ದಿ ಗ್ರೇಟ್ ಡಿರೇಂಜ್‌ಮೆಂಟ್- ಕ್ಲೈಮೇಟ್ ಚೇಂಜ್ ಅಂಡ್ ದಿ
> ಅನ್‌ಥಿಂಕಬಲ್’ ಹೆಸರಿನ ಗ್ರಂಥ ಈಗ ಸಾಕಷ್ಟು ಶ್ಲಾಘನೆಗೆ, ಚರ್ಚೆಗೆ ಗ್ರಾಸವಾಗುತ್ತಿದೆ
> (ಡಿರೇಂಜ್‌ಮೆಂಟ್ ಅಂದರೆ ಅಸ್ತವ್ಯಸ್ತ, ಕ್ರಮಭಂಗ, ಅಲ್ಲೋಲಕಲ್ಲೋಲ).
>
> ಈಗ ಕಾಣುತ್ತಿರುವ ವ್ಯಾಪಕ ಹವಾಗುಣ ಬದಲಾವಣೆ ನಮ್ಮ ಭೂಗೋಲ, ಸಂಸ್ಕೃತಿ, ವಾಣಿಜ್ಯಗಳಿಗಷ್ಟೇ
> ಅಲ್ಲ, ಸ್ವಾತಂತ್ರ್ಯದ ಪರಿಕಲ್ಪನೆಗೇ ಸವಾಲು ಹಾಕುತ್ತಿದೆ; ಇಡೀ ಮನುಕುಲವೇ ಹೇಗೆ ಹೊಸದೊಂದು
> ಪ್ರಪಾತದ ಅಂಚಿನಲ್ಲಿ ತೊನೆದಾಡುತ್ತಿದೆ ಎಂಬುದರ ಒಳನೋಟ ಈ ಕೃತಿಯಲ್ಲಿದೆ. ಆಕ್ಸ್‌ಫರ್ಡ್,
> ಅಲೆಕ್ಸಾಂಡ್ರಿಯಾಗಳಲ್ಲಿ ಓದಿದ ಅಮಿತಾವ್ ಘೋಷ್ ತಮ್ಮ ‘ದ ಹಂಗ್ರಿ ಟೈಡ್’, ‘ಫ್ಲಡ್ ಆಫ್
> ಫಾಯರ್’, ‘ರಿವರ್ ಆಫ್ ಸ್ಮೋಕ್’, ‘ದ ಗ್ಲಾಸ್ ಪ್ಯಾಲೇಸ್’ ಮುಂತಾದ ಕಾದಂಬರಿಗಳಿಗೆ ಅನೇಕ
> ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದವರು.
>
> ವಿಜ್ಞಾನದ ಸಾಮಾಜಿಕ ಮುಖಗಳನ್ನು ತಮ್ಮ ಕಾದಂಬರಿಗಳಲ್ಲಿ ಸಾಕಷ್ಟು ಅನಾವರಣ ಮಾಡಿದ ಇವರು
> (ತಮ್ಮ ‘ಕಲ್ಕತ್ತಾ ಕ್ರೊಮೊಸೋಮ್’ ವೈಜ್ಞಾನಿಕ ಕಾದಂಬರಿಗೆ ಆರ್ಥರ್ ಸಿ.ಕ್ಲಾರ್ಕ್
> ಪ್ರಶಸ್ತಿಯನ್ನು ಪಡೆದಿದ್ದಾರೆ) ಈಗಿನ ಬಿಸಿಪ್ರಳಯ, ಅದರಿಂದಾಗುತ್ತಿರುವ ಅಂತರರಾಷ್ಟ್ರೀಯ
> ಬಿಕ್ಕಟ್ಟು, ಪ್ಯಾರಿಸ್ ಒಪ್ಪಂದ ಮುಂತಾದ ವಿಷಯಗಳ ಮೇಲೆ ಪ್ರಬುದ್ಧ ಚಿಂತನೆ ಮಾಡುತ್ತಾರೆ.
>
> ಅವರ ‘ಡಿರೇಂಜ್‌ಮೆಂಟ್’ ಕೃತಿ ಹೊರಬಂದ ನಂತರ ಅನೇಕ ಇಂಗ್ಲಿಷ್ ಪತ್ರಿಕೆಗಳಲ್ಲಿ,
> ಚಾನೆಲ್‌ಗಳಲ್ಲಿ ಅವರ ಸಂದರ್ಶನ ನಡೆಯುತ್ತಿದೆ. ಕೆಲವನ್ನು ಯೂಟ್ಯೂಬ್‌ನಲ್ಲ್ಲೂ ನೋಡಬಹುದು.
> ವಿಜ್ಞಾನ ಮತ್ತು ಪರಿಸರ ಕುರಿತ ‘ಡೌನ್ ಟು ಅರ್ಥ್’ ಪಾಕ್ಷಿಕ ಈಚಿನ ಸಂಚಿಕೆಯಲ್ಲಿ ಅವರ
> ಕೃತಿಯ ಸಾರಾಂಶ ಮತ್ತು ಸಂದರ್ಶನವನ್ನು ಆದ್ಯತೆಯ ವಿಷಯವಾಗಿ ಪ್ರಕಟಿಸಿದೆ. ಮುಂದಿನ ಕೆಲವು
> ಪರಿಚ್ಛೇದಗಳು ಅವರ ದೃಷ್ಟಿಕೋನವನ್ನು ಧ್ವನಿಸುತ್ತವೆ:
>
> ಈಗಿನ ಈ ಸಂಕಷ್ಟಗಳಿಗೆ ಮೂಲ ಕಾರಣ ಎನಿಸಿದ ಕಾರ್ಬನ್ ಹಿಂದೆಲ್ಲ ಅಸಲೀ ಸಂಪತ್ತೆನಿಸಿತ್ತು.
> ಯಾರು ಜಾಸ್ತಿ ಕಾರ್ಬನ್ನಿನ (ಅಂದರೆ ಕಲ್ಲಿದ್ದಲು, ಪೆಟ್ರೋಲು) ಯಜಮಾನಿಕೆ ಪಡೆಯುತ್ತಾರೊ
> ಅವರೇ ಶ್ರೀಮಂತರೆನ್ನಿಸಿದರು. ಅಂಥ ದೇಶವೇ ಧನಿಕ ದೇಶವೆನ್ನಿಸಿತ್ತು. ಹಾಗಾಗಿ ಈಗಿನ ಎಲ್ಲ
> ಸುಧಾರಿತ ದೇಶಗಳ ಆರ್ಥಿಕತೆಯೂ ಕಾರ್ಬನ್ನನ್ನೇ ಅವಲಂಬಿಸಿದೆ. ಭೂಮಿ ಬಿಸಿಯಾಗುತ್ತಿದೆ ಎಂಬ
> ಕಾರಣಕ್ಕೆ ಕಾರ್ಬನ್ ಆರ್ಥಿಕತೆಯನ್ನು ಕೊಡವಿ ಹಾಕುವುದು ಸುಲಭವಲ್ಲ.
>
> ಎರಡನೆಯದಾಗಿ, ಆ ಕಾರ್ಬನ್ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕೆಂದರೆ ಹೆಚ್ಚು ಹೆಚ್ಚು
> ಜನರನ್ನು ಭೋಗದಾಸರನ್ನಾಗಿ ಮಾಡಬೇಕು. ‘ಕಡಿಮೆ ಶ್ರಮ, ಹೆಚ್ಚು ಸುಖ’ದ ಆಮಿಷವನ್ನು
> ಒಡ್ಡುತ್ತ, ಅದಕ್ಕಾಗಿ ಅವರೆಲ್ಲ ಕಾರ್ಬನ್ನನ್ನೇ ಅವಲಂಬಿಸುವಂತೆ ಮಾಡಬೇಕು- ಇದು ಹುನ್ನಾರ.
> ಅದಕ್ಕೆ ಬೇಕಾದ ಸ್ವಾತಂತ್ರ್ಯ ಮತ್ತು ಸ್ವಚ್ಛಂದತೆಗೆ ಯಾವ ದೇಶವೂ ಕಡಿವಾಣ ಹಾಕದಂತೆ
> ನೋಡಿಕೊಳ್ಳಬೇಕು.
>
> ಇಷ್ಟಕ್ಕೂ ಪಾಶ್ಚಿಮಾತ್ಯರ ಸ್ವಾತಂತ್ರ್ಯದ ಪರಿಕಲ್ಪನೆಯೇ ನಮ್ಮದಕ್ಕಿಂತ ಭಿನ್ನವಾಗಿದೆ.
> ಅವರಿಗೆ ಮೂಲತಃ ಪ್ರಕೃತಿಯ ದೌರ್ಜನ್ಯದಿಂದ ಪಾರಾಗುವುದು ಬೇಕಿತ್ತು. ಹಾಗಾಗಿ ನಿಸರ್ಗ
> ಒಡ್ಡುತ್ತಿರುವ ಸಂಕಷ್ಟಗಳಿಂದ ಪಾರಾಗಿ, ಸುಖ ಮತ್ತು ಸ್ವಾತಂತ್ರ್ಯವನ್ನು ಅನುಭವಿಸಲೆಂದೇ
> ತಂತ್ರಜ್ಞಾನದ ಹತಾರಗಳು ಪಾಶ್ಚಾತ್ಯ ದೇಶಗಳಲ್ಲಿ ಮೊದಲು ರೂಪುಗೊಂಡವು.
>
> ದಟ್ಟ ಅರಣ್ಯದ ಡೊಂಕು ರಸ್ತೆಯಲ್ಲಿ ತಂಗಾಳಿಯನ್ನು ಸೀಳುತ್ತ ಕಾರಿನಲ್ಲಿ ಜೋರಾಗಿ ಸಾಗುವುದೇ
> ಸುಖದ ಪರಮೋಚ್ಚ ಹಂತ ಎಂಬಂಥ ಜಾಹೀರಾತುಗಳು 50 ವರ್ಷಗಳ ಹಿಂದೆ ಪಶ್ಚಿಮದ ದೇಶಗಳಲ್ಲಿ
> ಬರುತ್ತಿದ್ದವು. ಈಗ ನಮ್ಮ ಟಿವಿಗಳಲ್ಲೂ ಅಂಥದ್ದೇ ಜಾಹೀರಾತು ಬರುತ್ತಿವೆ. ನಿಸರ್ಗವನ್ನು
> ಮಣಿಸಬೇಕು, ಭೋಗಿಸಬೇಕೆಂಬ ಸಿದ್ಧಸೂತ್ರವೇ ಎಲ್ಲ ಕಡೆ ರಾರಾಜಿಸುತ್ತವೆ.
>
> ನಮ್ಮ ಮೇಲೆ ಹೇರಲಾದ ತಂತ್ರಜ್ಞಾನದ ಈ ಅಹಮಿಕೆಯನ್ನು, ನಾವು ಒಪ್ಪಿಕೊಂಡ ಈ ದಾಸ್ಯತ್ವವನ್ನು
> ಪ್ರಶ್ನಿಸುವ ಚಿಂತನಶೀಲ ಸಾಹಿತ್ಯ ಕೃತಿಗಳು ಏಕೆ ಬರುತ್ತಿಲ್ಲ? ಭೋಗಸ್ವಾತಂತ್ರ್ಯದ ಕುರಿತು,
> ಹವಾಮಾನದ ತೀವ್ರತೆಯ ಕುರಿತು ಚರ್ಚಿಸುವುದೆಂದರೆ ಬುದ್ಧಿಜೀವಿಗಳಿಗೆ ಏಕೆ  ಪರಿಧಿಯಂಚಿನ
> ಚಟುವಟಿಕೆಯಾಗಿ ಕಾಣುತ್ತಿದೆ? ಹಿಂದಿನ ಕಾಲದ ನಮ್ಮ ಮೌಲಿಕ ಸಾಹಿತ್ಯಗಳೆಲ್ಲ ಸ್ವಾತಂತ್ರ್ಯದ
> ವಿವಿಧ ಪರಿಕಲ್ಪನೆಗಳ ಸುತ್ತವೇ ಇದ್ದವು.
>
> ಶೋಷಣೆ, ಲೈಂಗಿಕ ದೌರ್ಜನ್ಯ, ಶೂದ್ರ ಸಂಸ್ಕೃತಿ, ರಾಜಕೀಯ ಮೇಲಾಟಗಳೇ ಮುಂತಾದ ಸಾಮಾಜಿಕ
> ಸ್ಥಿತ್ಯಂತರಗಳನ್ನು ದಾಖಲಿಸುವ ಸಾಹಿತ್ಯಗಳೂ  ಮೂಲತಃ ಸ್ವಾತಂತ್ರ್ಯದ ವಿಶ್ಲೇಷಣೆಯೇ
> ಆಗಿದ್ದವು. ಈಗ ಎಲ್ಲರ ಬದುಕಿನ ಎಲ್ಲ ಆಯಾಮಗಳನ್ನೂ ಅಸ್ಥಿರಗೊಳಿಸಬಲ್ಲ ಸಂಕಷ್ಟಗಳು
> ಎದುರಾಗುತ್ತಿವೆ. ಸ್ವಾತಂತ್ರ್ಯಹರಣವಾಗುತ್ತಿದೆ.
>
> ಆದರೂ ಅದು ನಮ್ಮ ಗಮನಕ್ಕೆ ಬರುತ್ತಿಲ್ಲ. ಹವಾಮಾನದ ಉತ್ಪಾತಗಳು ಮುಂಬೈ, ಚೆನ್ನೈ,
> ದಿಲ್ಲಿಯನ್ನೂ ತಟ್ಟುತ್ತಿದ್ದರೂ ತಟ್ಟಿಸಿಕೊಳ್ಳದಂತೆ ತಮ್ಮದೇ ಗೋಪುರದಲ್ಲಿ ಬುದ್ಧಿಜೀವಿಗಳು
> ನಿಂತಿರುತ್ತಾರೆ.
>
> ಹವಾಮಾನದ ವೈಪರೀತ್ಯದಿಂದಾಗಿ ಪ್ರವಾಹವಿರಲಿ, ಬರಗಾಲವಿರಲಿ, ಪರಿಸರ ನಿರಾಶ್ರಿತರು
> ಪ್ರವಾಹದಂತೆ ತಮ್ಮ ಮೂಲ ನೆಲೆಗಳನ್ನು ಬಿಟ್ಟು ನಗರಗಳತ್ತ ಬರುತ್ತಿದ್ದಾರೆ.ಬಂಗಾಳದ ಜನರು
> ದಿಲ್ಲಿಯ ಕಡೆ, ಬಾಂಗ್ಲಾ ದೇಶದ ಜನರು ನಮ್ಮ ದೇಶದ ಕಡೆ ಬರುತ್ತಿದ್ದರೆ ಸುಡಾನ್, ಸಿರಿಯಾ,
> ಆಫ್ರಿಕದ ಸಹೇಲ್ ಪ್ರಾಂತಗಳಿಂದ ನಿರಾಶ್ರಿತರು ಯುರೋಪ್ ಕಡೆ ಸಾಗುತ್ತಿದ್ದಾರೆ.
>
> ಶಾಂತಸಾಗರದಲ್ಲಿನ ಟುವಾಲು ದ್ವೀಪದೇಶ ಮುಳುಗಲಿದೆ, ಹತ್ತು ಸಾವಿರ ಜನರು ರಾಷ್ಟ್ರವನ್ನೇ
> ಕಳೆದುಕೊಳ್ಳಲಿದ್ದಾರೆ ಎಂಬ ಆತಂಕದ ಮಾತು ಅಲ್ಲಲ್ಲಿ ಕೇಳಬರುತ್ತಿದೆ ನಿಜ.ಆದರೆ ಏಷ್ಯದ
> ಸಮಸ್ಯೆಗಳ ಭೀಕರತೆಯನ್ನು ಯಾರೂ ಗ್ರಹಿಸಿದಂತಿಲ್ಲ. ಬಾಂಗ್ಲಾದೇಶದ ಒಂದು ದ್ವೀಪ (ಭೋಲಾ
> ದ್ವೀಪ) ಈಗಾಗಲೇ ಭಾಗಶಃ ಮುಳುಗಿರುವುದರಿಂದ ಐದು ಲಕ್ಷ ಜನರು ಆಗಲೇ ನಿರಾಶ್ರಿತರಾಗಿ ವಲಸೆ
> ಹೋಗಿದ್ದಾರೆ.
>
> ಪಾಕಿಸ್ತಾನದಲ್ಲಿ ಸಿಂಧೂ ನದಿಯ ಮುಖದಲ್ಲಿ ಉಪ್ಪುನೀರು ನುಗ್ಗಿದ್ದರಿಂದ ಹತ್ತು ಲಕ್ಷಕ್ಕೂ
> ಹೆಚ್ಚು ಎಕರೆ ಭೂಮಿ ನಿರುಪಯುಕ್ತವಾಗಿದೆ. ಹವಾಮಾನ ಬದಲಾವಣೆ ಉಗ್ರವಾಗುತ್ತ ಹೋದಂತೆ ಅರಬ್ಬೀ
> ಸಮುದ್ರದಲ್ಲೂ ಚಂಡಮಾರುತಗಳು, ವರ್ಷಾಘಾತಗಳು ಹೆಚ್ಚುತ್ತವೆಂದು ವಿಜ್ಞಾನಿಗಳು
> ಹೇಳುತ್ತಿದ್ದಾರೆ. ಅದರ ಪರಿವೆ ಇಲ್ಲದಂತೆ ಇಡೀ ಪಶ್ಚಿಮ ಕರಾವಳಿಗುಂಟ ಅಭಿವೃದ್ಧಿಯ
> ದುಂದು-ಭಿ ಮೊಳಗುತ್ತಿದೆ.
>
> ಮುಂಬೈ ಶೇರುಪೇಟೆ, ರಿಸರ್ವ್ ಬ್ಯಾಂಕ್, ಪರಮಾಣುಸ್ಥಾವರ, ನೌಕಾನೆಲೆ, ಪೆಟ್ರೊಖಜಾನೆಗಳನ್ನು
> ಬಚಾವು ಮಾಡುವ ನೀಲನಕ್ಷೆಯೇ ನಮ್ಮಲ್ಲಿಲ್ಲ. ಆದರೆ ಬಡವರನ್ನೂ ಜಿಡಿಪಿಯನ್ನೂ ಒಟ್ಟೊಟ್ಟಿಗೆ
> ಮೇಲಕ್ಕೆತ್ತುವ ಹೆಸರಿನಲ್ಲಿ ಕೆಲವರನ್ನಷ್ಟೇ ಮೇಲಕ್ಕೆತ್ತಬಲ್ಲ ಯೋಜನೆಗಳು
> ರೂಪಿತವಾಗುತ್ತವೆ.
>
> ರಾಜಕಾರಣಿಗಳು, ರಾಜತಾಂತ್ರಿಕ ತಜ್ಞರು, ಯೋಜನಾಪಟುಗಳು ಸೇರಿ ವಿಜ್ಞಾನ ತಂತ್ರಜ್ಞಾನವನ್ನು
> ಬಳಸಿಕೊಂಡು ಏನೋ ಮಾಡುತ್ತಾರೆ, ಎಲ್ಲವನ್ನೂ ಸರಿಪಡಿಸುತ್ತಾರೆ ಎಂಬ ಭ್ರಮೆಯಲ್ಲಿ
> ನಾವಿದ್ದೇವೆ. ಆದರೆ ಸಂಕಷ್ಟ ಆರಂಭವಾಗಿದ್ದೇ ವಿಜ್ಞಾನ ತಂತ್ರಜ್ಞಾನಗಳ ಅತಿ ಬಳಕೆಯಿಂದ
> ತಾನೆ? ತಂತ್ರಜ್ಞಾನದ ಭಜನೆಯನ್ನು ಬಿಟ್ಟು, ನಮ್ಮ ಆರ್ಥಿಕ ನೀತಿ, ಬದುಕಿನ ಶೈಲಿ ಮತ್ತು
> ನಮ್ಮ ಆಶೋತ್ತರಗಳನ್ನು ಪೂರೈಸುವ ವಿಧಾನಗಳನ್ನು ಬದಲಿಸಬೇಕೆಂದು ಯಾರಿಗೂ ಅನ್ನಿಸುತ್ತಿಲ್ಲ
> ಏಕೆ?
>
> ಪೋಪ್ ಮತ್ತು ದಲಾಯಿ ಲಾಮಾರನ್ನು ಬಿಟ್ಟರೆ ಇತರ ಯಾವ ಧರ್ಮಗುರುಗಳೂ ಈ ಬೃಹತ್
> ಸ್ಥಿತ್ಯಂತರಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಳೆದ ವರ್ಷ ಪ್ಯಾರಿಸ್ ಸಮ್ಮೇಳನಕ್ಕೆ ಮುನ್ನ
> ಪೋಪ್ ಹೊರಡಿಸಿದ ಧರ್ಮಾದೇಶ (ಎನ್‌ಸೈಕ್ಲಿಕಲ್) ಮಾತ್ರವೇ ಮನುಕುಲಕ್ಕೆ ಮುಂದಿನ ದಾರಿಯನ್ನು
> ತೋರಬಲ್ಲ ಸಮರ್ಥ ಸಾಹಿತ್ಯವಾಗಿದೆ (184 ಪುಟಗಳ ಈ ಜಾಗತಿಕ ಸುತ್ತೋಲೆ ಕುರಿತು 1 ಜುಲೈ
> 2015ರ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು).
>
> ಜಗತ್ತನ್ನು ಹಿಂಡುತ್ತಿರುವ ಲಾಭಬಡುಕ ಶಕ್ತಿಗಳನ್ನು ಹಾಗೂ ಸಾರ್ವತ್ರಿಕ ಹಿತಚಿಂತನೆಯಿಲ್ಲದ
> ನಾಯಕತ್ವವನ್ನು ಎದುರಿಸಿ ಅರ್ಥಪೂರ್ಣ ಬದುಕನ್ನು ಹೇಗೆ ಸಾಧಿಸಬೇಕು. ಭೋಗಸಂಸ್ಕೃತಿಯನ್ನು
> ಎಲ್ಲಿಯವರೆಗೆ ಅನುಸರಿಸಬೇಕು ಎಂಬುದರ ಬಗ್ಗೆ ಅದರಲ್ಲಿ ಮಾರ್ಗದರ್ಶಿ ಸೂತ್ರಗಳಿವೆ.
>
> -ಹೀಗೆಂದು ಹೇಳುವ ಅಮಿತಾವ್ ಘೋಷ್ ಗಾಂಧೀಜಿಯನ್ನು ಅಲ್ಲಲ್ಲಿ ನೆನಪಿಸಿಕೊಳ್ಳುತ್ತಾರೆ.
> ಗಾಂಧಿ ತೋರಿದ ಮಾರ್ಗವನ್ನು ಮರೆತು ನಾವೆಲ್ಲ ಭೋಗಮಾರ್ಗದಲ್ಲಿ ಬಹುದೂರ ಬಂದಿದ್ದೇವೆ.
> ಹಿಂದಿರುಗಲು ದಾರಿಯೇ ಕಾಣದಷ್ಟು ತಿಪ್ಪೆರಾಶಿಗಳನ್ನು ಆಕಾಶದೆತ್ತರಕ್ಕೆ ಚೆಲ್ಲಾಡುತ್ತ
> ಬಂದಿದ್ದೇವೆ. ಬದಲೀ ಮಾರ್ಗದ ಬಗ್ಗೆ ಚಿಂತಿಸುವ ಯಾರಾದರೂ ಇದ್ದಾರೆಯೇ ಎಂದು ಘೋಷ್
> ಕೇಳುತ್ತಾರೆ.
>
> ಈ ಸಂಕಷ್ಟದಲ್ಲಿ, ‘ಅಮೆರಿಕ ಯಾಕೆ ನಮಗೆ ದಾರಿ ತೋರಿಸುತ್ತಿಲ್ಲವೆಂದು ನಮ್ಮಲ್ಲಿ ಕೆಲವರು
> ಅಲವತ್ತುಕೊಳ್ಳುತ್ತಿದ್ದಾರೆ- ಅದು ಬೇರೆ ಕೇಡು’ ಎಂದು ಅವರ ಜತೆ ಸಂವಾದ ನಡೆಸಿದ ಡೌನ್ ಟು
> ಅರ್ಥ್ ಸಂಪಾದಕಿ ಸುನಿತಾ ನಾರಾಯಣ್ ವ್ಯಂಗ್ಯವಾಡುತ್ತಾರೆ.
>
> ಅಮೆರಿಕ ಏನು ದಾರಿ ತೋರಿಸೀತು? ಮೊನ್ನೆ ಆಗಸ್ಟ್ 11ರಂದು ಅಲ್ಲಿನ ಲೂಸಿಯಾನಾ ರಾಜ್ಯದಲ್ಲಿ
> ಅದೆಂಥ ವಿಕೋಪ ಸಂಭವಿಸಿತೆಂದರೆ ಕೋಲಾರದಲ್ಲಿ ಇಡೀ ವರ್ಷ ಸುರಿಯುವಷ್ಟು ಮಳೆ ಒಮ್ಮೆಲೇ ಅಲ್ಲಿ
> ಸುರಿಯಿತು. 1.1 ಲಕ್ಷಕ್ಕೂ ಹೆಚ್ಚು ಮನೆಗಳು ಧ್ವಂಸವಾದವು. 11 ಸಾವಿರ ಆಶ್ರಯತಾಣಗಳನ್ನು
> ನಿರ್ಮಿಸಬೇಕಾಯಿತು. ‘ಸಾವಿರ ವರ್ಷಕ್ಕೊಮ್ಮೆಯೂ ಬರದಿದ್ದ’ ಪ್ರಳಯ ಅದಾಗಿತ್ತು. ದಾರಿ ತೋರುವ
> ಸ್ಥಿತಿಯಲ್ಲಿ ಯಾರಿದ್ದಾರೆ?
>
> ಈಗಿನ ಪೀಳಿಗೆಗಂತೂ ದಾರಿ ಕಾಣಲಿಕ್ಕಿಲ್ಲ. ಮುಂದಿನ ಪೀಳಿಗೆಗಾದರೂ ಸೂಕ್ತ ಶಿಕ್ಷಣವನ್ನು
> ಕೊಡೋಣವೆಂದರೆ ಹೈಟೆಕ್ ರಾಕೆಟ್‌ಗಳೇ ನಮಗೆ ಕಾಣುತ್ತವೆ ವಿನಾ, ಹವಾಮಾನ ವಿಜ್ಞಾನದ ಕಡೆ ಗಮನ
> ಹರಿಯುವುದು ಕಡಿಮೆ. ಬರ ನೀಗಿಸುವ, ನೀರಿಂಗಿಸುವ, ಬದುಕಿನ ಸುಸ್ಥಿರ ಮಾರ್ಗವನ್ನು ಸೂಚಿಸುವ
> ಕೈಮರಗಳೇ ನಮಗೆ ಕಾಣುತ್ತಿಲ್ಲ.
>
> ಅಮೆರಿಕದಲ್ಲಿ ಸಿಗುವ ಬರ್ಗರ್‌ನದೇ ಡಿಟ್ಟೋ ರುಚಿ, ಆಕಾರ, ಗಾತ್ರದ ಬರ್ಗರ್‌ಗಳು
> ಚೆನ್ನೈಯಲ್ಲೂ ಶಾಂಘೈಯಲ್ಲೂ ಸಿಗುತ್ತಿವೆ ಎಂದು ಜಾಗತೀಕರಣದ ಭಜಕರು ಖುಷಿಯಿಂದ ಹೇಳುತ್ತಾರೆ.
> ಅಮೆರಿಕದ ಲೂಸಿಯಾನಾದಲ್ಲಿ ಬಂದಷ್ಟೇ ಗಾತ್ರದ ಜಡಿಮಳೆ ಚೆನ್ನೈಯಲ್ಲೂ ರಾಜಸ್ತಾನದ
> ಭೀಲ್ವಾಡಾದಲ್ಲೂ ಬರುತ್ತಿದೆ.
>
> Hareeshkumar K
> GHS HUSKURU
> MALAVALLI TQ
> MANDYA DT
> MOB 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to