Supper history

On 30 Aug 2016 7:58 am, "HAREESHKUMAR K Agasanapura" <harihusk...@gmail.com>
wrote:

> http://m.prajavani.net/article/2016_08_30/434709
>
> *ವಿಜ್ಞಾನ ಮತ್ತು ಪರಂಪರೆಯ ಜ್ಞಾನ*
>
> 30 Aug, 2016
>
> ಬಿಂಡಿಗನವಿಲೆ ಭಗವಾನ್
>
>
> <https://www.facebook.com/sharer/sharer.php?u=http%3A%2F%2Fwww.prajavani.net%2Farticle%2F2016_08_30%2F434709>
> <https://twitter.com/intent/tweet?text=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%AA%E0%B2%B0%E0%B2%82%E0%B2%AA%E0%B2%B0%E0%B3%86%E0%B2%AF+%E0%B2%9C%E0%B3%8D%E0%B2%9E%E0%B2%BE%E0%B2%A8+http%3A%2F%2Fwww.prajavani.net%2Farticle%2F2016_08_30%2F434709>
> <https://plus.google.com/share?url=http%3A%2F%2Fwww.prajavani.net%2Farticle%2F2016_08_30%2F434709>
> <http://www.pinterest.com/pin/find/?url=http%3A%2F%2Fwww.prajavani.net%2Farticle%2F2016_08_30%2F434709>
> <http://www.linkedin.com/shareArticle?mini=true&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%AA%E0%B2%B0%E0%B2%82%E0%B2%AA%E0%B2%B0%E0%B3%86%E0%B2%AF+%E0%B2%9C%E0%B3%8D%E0%B2%9E%E0%B2%BE%E0%B2%A8+&url=http%3A%2F%2Fwww.prajavani.net%2Farticle%2F2016_08_30%2F434709>
>
> ‘ವಿಜ್ಞಾನ ಮತ್ತು ಪರಂಪರೆಯ ಜ್ಞಾನ’ ಬರಹದಲ್ಲಿ (ಸಂಗತ, ಆ. 19) ಡಾ. ರಾಜೇಗೌಡ ಹೊಸಹಳ್ಳಿ
> ಅವರು ಪ್ರಸ್ತಾಪಿಸಿರುವ ವಿಪರ್ಯಾಸಗಳನ್ನು ಗಮನಿಸುತ್ತಲೇ ವಿಶ್ವಮಾನ್ಯ ವಿಜ್ಞಾನಿ ಆಲ್ಬರ್ಟ್
> ಐನ್‌ಸ್ಟೀನ್‌ರ ನುಡಿ ‘ಧರ್ಮರಹಿತ ವಿಜ್ಞಾನ ಕುಂಟು. ವಿಜ್ಞಾನರಹಿತ ಧರ್ಮ ಕುರುಡು’ ಅದೆಷ್ಟು
> ದಿಟ ಅನ್ನಿಸಿತು. ಇಲ್ಲಿ ‘ಧರ್ಮ’ ಎಂದರೆ ಮಾನವ ಧರ್ಮ ಎಂದು ಭಾವಿಸುವುದೇ ಯುಕ್ತ.
>
> ಮಾನವನ ಇತಿಹಾಸದುದ್ದಕ್ಕೂ ಜಗತ್ತಿನೆಲ್ಲೆಡೆ ಸಂಸ್ಕೃತಿಗಳು ನಿಸರ್ಗದ ಬಗೆಗೆ ವಿವಿಧ
> ಗ್ರಹಿಕೆಗಳನ್ನು ತಳೆಯುತ್ತ ಬಂದಿವೆ. ಅವುಗಳಲ್ಲಿ ಹಲವು ನಂಬಿಕೆ, ಆಚರಣೆಗಳಲ್ಲಿ
> ಬೇರುಬಿಟ್ಟಿವೆ. ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಪ್ರವಹಿಸಿವೆ.
>
> ವಿಜ್ಞಾನದ ಪ್ರಗತಿಯನ್ನು ಪಾರಂಪರಿಕ ಜ್ಞಾನದೊಂದಿಗೆ ಸಮನ್ವಯಿಸಿ ಮನುಷ್ಯನ ಒಳಿತಿಗೆ ಆವಕ
> ಮಾಡಿಕೊಳ್ಳುವುದು ಹೊಸ ಆವಿಷ್ಕಾರಗಳಿಗಿಂತಲೂ ಹೆಚ್ಚು ಕಠಿಣತಮ ಹೊಣೆಗಾರಿಕೆ. ಈ ಸವಾಲು
> ಎದುರಿಸಲು ನಿಸರ್ಗ ಮತ್ತು ಸಮಾಜ ಕುರಿತ ಗಾಢ ಅರಿವು, ತನ್ಮೂಲಕ ಪ್ರಸ್ತುತ ಹಾಗೂ ಭಾವಿ
> ಪೀಳಿಗೆಗಳ ಬದುಕಿಗೆ ಅನುವು ಮಾಡಿಕೊಡುವ ಬದ್ಧತೆ ಮೆರೆಯಬೇಕಾಗುತ್ತದೆ.
>
> ಪರಂಪರೆಯ ಜ್ಞಾನವನ್ನು ವಿಜ್ಞಾನದೊಳಗಿಟ್ಟು ತಕ್ಕಡಿಯಲ್ಲಿ ತೂಗಿ ನೋಡಬೇಕೆನ್ನುವಾಗ ಒಂದು
> ನಿದರ್ಶನ ನೆನಪಾಗುತ್ತದೆ. ನೀರನ್ನು ಮಡಕೆಯಲ್ಲಿರಿಸಿದರೆ ತಂಪಾಗಿರುತ್ತದೆ. ತಲೆಮಾರಿನಿಂದ
> ತಲೆಮಾರಿಗೆ ವರ್ಗಾವಣೆಯಾಗಿ ಬಂದ ಸಮಷ್ಟಿ ವಿವೇಕಕ್ಕೆ ಒಂದು ಉದಾಹರಣೆಯಿದು. ಹೌದು, ಏಕೆ
> ಮಡಕೆಯೊಳಗೆ ನೀರು ತಂಪು ಎನ್ನುವುದನ್ನು ವಿವರಿಸಿ ಹೇಳಿದ್ದರೆ ಎಷ್ಟು ಸೊಗಸಿತ್ತು
> ಎನ್ನಿಸುವುದು ಸಹಜ.
>
> ಫ್ರಿಜ್‌ನ ಕೊರತೆ ತುಂಬಲು ಇದು ಸರಳ ಉಪಾಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಡಕೆಯೊಳಗಿನ
> ಶಾಖವನ್ನು ಬಳಸಿಕೊಂಡು ನೀರು ಆವಿಯಾಗಿ ಸಣ್ಣ ಸಣ್ಣ ರಂಧ್ರಗಳ ಮೂಲಕ ಹೊರಹೋಗಲು
> ಹವಣಿಸುತ್ತದೆ. ಇದುವೆ ನೀರು ತಣ್ಣಗಿರುವ ರಹಸ್ಯ ಎಂದು ಕಾರ್ಯಕಾರಣ ನಂಟನ್ನು
> ಬಿಡಿಸಿಟ್ಟಾಗಲೇ ಜ್ಞಾನಕ್ಕೆ ಗರಿ ಮೂಡುತ್ತದೆ. ವಿಶಿಷ್ಟವಾಗಿ ಅದು ವಿಜ್ಞಾನವಾಗುತ್ತದೆ.
>
> ಏಕೆ, ಏನು, ಹೇಗೆ ಎಂದು ವಿವರಿಸದೆ ಕೇವಲ ಅದು ಹಾಗೆ, ನಂಬು, ತಿಳಿ ಎಂದರೆ ಅಷ್ಟರಮಟ್ಟಿಗೆ
> ಅರಿವು ಅಪೂರ್ಣವೆನ್ನಿಸುತ್ತದೆ. ಪೂರ್ಣತೆಯಿಲ್ಲದ ತಿಳಿವು ಉಪಯಕ್ತವಾಗದು. ಕೆಲವೊಮ್ಮೆ ಅಪಾಯ
> ಕೂಡ. ಕಟ್ಟಿಗೆಯಲ್ಲಿ ಬೆಂಕಿ ಇದೆ ಎನ್ನುವುದು ಜ್ಞಾನ. ಅದನ್ನು ಉರಿಸಿ ಅಡುಗೆ
> ತಯಾರಿಸಿಕೊಂಡು ಊಟ ಮಾಡುವುದು ವಿಜ್ಞಾನ.
>
> ‘ಜ್ಞಾನವು ವಿಜ್ಞಾನ ಸಮೇತ’ ಎಂಬ ಮಾತಿದೆ. ಹಿರಿಯರ ಮಾರ್ಗದರ್ಶನಗಳು ಅನುಭವಜನ್ಯ.
> ಅವುಗಳಲ್ಲಿ ವ್ಯಾಪ್ತಿ, ವೈಭವವಿದೆ. ಆದರೆ ತಕ್ಕ ಸಮಜಾಯಿಷಿ ಬಯಸುತ್ತವೆ. ಸಾಂಬಾರು
> ತಯಾರಿಸುವಾಗ ತರಕಾರಿ, ಬೇಳೆಕಾಳುಗಳು ಬೆಂದ ನಂತರವೇ ಉಪ್ಪು, ಹುಳಿ, ಖಾರ
> ಬೆರೆಸಬೇಕೆನ್ನುವುದು ಸಾಂಪ್ರದಾಯಿಕ ವಿಧಾನ. ಕಾರಣವಿಷ್ಟೆ. ಅವನ್ನು ಮೊದಲೇ ಬೆರೆಸಿದರೆ
> ನೀರಿನ ಶಾಖದ ಸಾಮರ್ಥ್ಯ ಕಡಿಮೆಯಾಗುತ್ತದೆ. ತರಕಾರಿ, ಬೇಳೆ ಕಾಳು ಬೇಯುವುದು ನಿಧಾನವಾದೀತು.
>
> ಅಲ್ಯೂಮಿನಿಯಂ ಪಾತ್ರೆಯಲ್ಲಿ ಉಪ್ಪೂ ಸೇರಿದಂತೆ ಯಾವುದೇ ಆಹಾರ ವಸ್ತುವನ್ನೂ
> ಇಡಬಾರದೆನ್ನುವ ಕಿವಿಮಾತಿನಲ್ಲಿ ವಿಜ್ಞಾನವಿಲ್ಲದಿಲ್ಲ. ದವಸ, ಧಾನ್ಯ, ಹಣ್ಣು, ತರಕಾರಿ,
> ಸೊಪ್ಪು ವಗೈರೆಗಳಲ್ಲಿನ ಪೌಷ್ಟಿಕಾಂಶಗಳು ಮತ್ತು ಖನಿಜಾಂಶಗಳನ್ನು ಪರಿಣಾಮಹೀನಗೊಳಿಸುವ ಗುಣ
> ಅಲ್ಯೂಮಿನಿಯಂಗಿದೆ.  ಎಷ್ಟಾದರೂ ಮನೆಯಲ್ಲಿ ಅಡುಗೆಮನೆ ಎನ್ನುವುದೊಂದು ಅನುಪಮ ಪ್ರಯೋಗಾಲಯ.
>
> ಅಂತೆಯೆ ಮುಸ್ಸಂಜೆಯಲ್ಲಿ ಕಸ ಗುಡಿಸಬಾರದೆಂಬ ಪಾರಂಪರಿಕ ಹಿತವಚನದಲ್ಲಿ ಆಕಸ್ಮಿಕವಾಗಿ ಬೆಲೆ
> ಬಾಳುವ ಸಣ್ಣ ಪುಟ್ಟ ನಾಣ್ಯ, ಒಡವೆಗಳು ತ್ಯಾಜ್ಯದೊಂದಿಗೆ ಬೆರೆತು ವಿಲೇವಾರಿಯಾಗದಿರಲೆಂಬ
> ಸದಾಶಯವಿದೆ.
>
> ಪರಂಪರೆ ಮರೆತರೆ ಹೊಸತನ ಕಂಡುಕೊಳ್ಳಲಾಗದು. ‘ಹಳೆ ಬೇರು, ಹೊಸ ಚಿಗುರು’ ಸಾರ್ವಕಾಲಿಕವಾಗಿ
> ಸಲ್ಲುವ ಇರಾದೆ.  ಬಹುಮುಖ್ಯವೆಂದರೆ ವೃಥಾ ಎಲ್ಲಕ್ಕೂ ಬಾಲಿಶವಾಗಿ ಸಮಜಾಯಿಷಿಗಳನ್ನು
> ಪೋಣಿಸಬಾರದಷ್ಟೆ! ವೈಚಾರಿಕತೆ ಹೈರಾಣಾಗಬಾರದು. ವಿಜ್ಞಾನಕ್ಕೆ ಹುಸಿ ವೈಭವೀಕರಣದ
> ಅಗತ್ಯವಿಲ್ಲ.
>
> ಮೈಸೂರಿನಲ್ಲಿ ನಾವು ಶಾಲಾ ಹುಡುಗರಿದ್ದಾಗ ನಮ್ಮ ಬೈಸಿಕಲ್ ದುರಸ್ತಿ ಮಾಡಿಕೊಡುತ್ತಿದ್ದವ
> ತನ್ನ ಇತಿಮಿತಿಯಲ್ಲಿ ಮನಮುಟ್ಟುವಂತೆ ನಮಗೆ ಬೈಸಿಕಲ್ಲಿನ ಪ್ರತಿ ಬಿಡಿ ಭಾಗ, ಅದರ
> ಕಾರ್ಯಕ್ಷಮತೆ ವಿವರಿಸುತ್ತಿದ್ದ ಪರಿ ನೆನಪಾಗುತ್ತದೆ. ‘ನೋಡಿ ಇದೇ ಫ್ರೀವೀಲ್.
>
> ಇದು ನಾವು ಪೆಡಲ್ ಮಾಡಿದ ಶಕ್ತಿಯನ್ನು ತನ್ನಲ್ಲಿ ಶೇಖರಿಸಿಕೊಂಡು ನಿಧಾನವಾಗಿ ಬಿಡುಗಡೆ
> ಮಾಡುತ್ತದೆ. ಬೈಸಿಕಲ್ಲಿನ ಹೃದಯವೆ ಇದು. ಮುಂದಿನ ಗಾಲಿಯ ಬ್ರೇಕ್ ಒಂದನ್ನೇ ಹಾಕೀರಿ ಜೋಕೆ’
> ಎನ್ನುವ ವೈಜ್ಞಾನಿಕ ಎಚ್ಚರಿಕೆ ಬೇರೆ ಅವನಿಂದ.
>
> ಅಬ್ಬ! ಎಂಥ ಬಹೂಪಯೋಗಿ ವಾಹನ. ಆದರೂ ಅತಿ ಸರಳ. ‘ಬೈಸಿಕಲ್ಲಿನ ಪಿತಾಮಹ ಸ್ಕಾಟ್ಲೆಂಡಿನ
> ಮ್ಯಾಕ್ಮಿಲನ್ ಎಂಬ ಮಹಾನುಭಾವನಿಗೆ ಎಷ್ಟು ಋಣಿಯಾಗಿದ್ದರೂ ಸಾಲದು ತಾನೆ’ ಅಂತ ಆತ ನಮಗೆ
> ತರಗತಿಯನ್ನೇ ತೆಗೆದುಕೊಂಡುಬಿಡುತ್ತಿದ್ದ. ಆಗಿಂದಾಗ್ಗೆ ವಾಹನದ ಅದ್ಭುತ ಮೆಚ್ಚಲು
> ಉತ್ತೇಜಿಸುತ್ತಿದ್ದ. ಹಾಗಾಗಿ ಪ್ರತಿ ಬಾರಿ ರಿಪೇರಿ ಸಲುವಾಗಿ ಅವನ ಬೈಸಿಕಲ್ ಶಾಪಿಗೆ
> ಹೋಗುವುದೇ ಶಿಕ್ಷಣವೆನ್ನಿಸುತ್ತಿತ್ತು.
>
> ಟಿ.ವಿ. ರಿಪೇರಿಯಿರಲಿ, ರೈಲು ಚಾಲನೆಯಿರಲಿ ಅಥವಾ ವಿಮಾನ ಹಾರಿಸುವುದಿರಲಿ ಅದನ್ನು
> ಕೈಗೊಳ್ಳುವವರು ಈ ಮಾಹಿತಿ ದಿನಮಾನಗಳಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು
> ಕನಿಷ್ಠ ತಿಳಿವನ್ನು ರೂಢಿಸಿಕೊಳ್ಳುವುದು ಅಪೇಕ್ಷಣೀಯ.
>
> ಹಡಗಿನ ಕ್ಯಾಪ್ಟನ್ ಈ ದೊಡ್ಡ ವಾಹನ ನೀರಿನಲ್ಲಿ ಮುಳುಗದೆ ಹೇಗೆ ತೇಲುತ್ತದೆ ಎನ್ನುವುದು
> ಕಟ್ಟಿಕೊಂಡು ನನಗೇನಾಗಬೇಕಿದೆ ಎಂದೋ ಕಟ್ಟಡದ ಗುತ್ತಿಗೆದಾರ ಸಿಮೆಂಟ್ ನೀರು ಹೀರಿದಷ್ಟೂ
> ಗಟ್ಟಿ ಹೇಗೆನ್ನುವುದು ತನಗೆ ಸಂಬಂಧಿಸಿದ್ದಲ್ಲ ಎಂದೋ ಮೂಗೆಳೆದರೆ ಏನು ಚಂದ?
> ಅರಿವೆನ್ನುವುದು ಸಾಟಿಯಿಲ್ಲದ ಬೆಳಕು.
>
> ಪರಂಪರೆಯ ಜ್ಞಾನವನ್ನು ಸಂಗ್ರಹಿಸುವ, ವಿಂಗಡಿಸುವ ಮತ್ತು ಸಮರ್ಪಕವಾಗಿ ವ್ಯಾಖ್ಯಾನಿಸುವ
> ವ್ಯವಸ್ಥೆಯಿರಬೇಕು. ಈ ನಿಟ್ಟಿನಲ್ಲಿ ಜನಸಾಮಾನ್ಯರನ್ನು ಅದರಲ್ಲೂ ವಿಶೇಷವಾಗಿ ಸಂಪನ್ಮೂಲಗಳ
> ನಿಧಿಗಳೇ ಆದ ಆದಿವಾಸಿಗಳನ್ನು ತೊಡಗಿಸಿಕೊಳ್ಳುವುದು ಅತ್ಯವಶ್ಯ. ಸಾಂಪ್ರದಾಯಿಕ ಗ್ರಹಿಕೆಗಳು
> ಸ್ಥಳಜನ್ಯವಾಗಿರುತ್ತವೆ. ಅವು ನಿರ್ದೇಶಿಸುವ ದಿಕ್ಕು, ಧ್ವನಿ ಮಹತ್ವದ್ದು.
>
> ವಿಜ್ಞಾನ ಒಂದು ವ್ಯವಸ್ಥಿತ ಅರಿವು. ವಿಶ್ವದ ಬಗೆಗೆ ಪ್ರಮಾಣಾರ್ಹ ಸ್ಪಷ್ಟೀಕರಣಗಳು ಹಾಗೂ
> ಮುಂಗಾಣ್ಕೆಗಳ ರೂಪಗಳಲ್ಲಿ ಅದು ತಿಳಿವನ್ನು ಕಟ್ಟಿಕೊಡುತ್ತದೆ. ಪರೀಕ್ಷೆಗಳಂತೂ ಆ
> ನೆಲೆಯಲ್ಲಿ ಅವ್ಯಾಹತ. ಆವರ್ತಗಳೋಪಾದಿಯಲ್ಲಿ ತರ್ಕಬದ್ಧ ಪರಿಷ್ಕರಣೆಗಳು, ನಿರ್ವಚನಗಳು.
>
> ಗ್ರೀಕ್ ದಾರ್ಶನಿಕ ಸಾಕ್ರೆಟಿಸ್ ಕೇವಲ ವಸ್ತುಗಳ ಸ್ವಭಾವ, ಚಲನೆಯ ಗತಿ,
> ಲೆಕ್ಕಾಚಾರಗಳಿಗಷ್ಟೆ ತಿಳಿವಳಿಕೆ ಸೀಮಿತವಾಗಬಾರದು, ನೈಜ ಬದುಕಿನ
> ಸವಾಲುಗಳನ್ನೆದುರಿಸುವಲ್ಲಿ ಅದು ಪೂರಕವಾಗಿರಬೇಕೆಂದ.
>
> ಅವನ ಟೀಕೆ  ಅಂದಿನ ಸಮಾಜಕ್ಕೆ ಸರಿಕಾಣಲಿಲ್ಲ. ಸಾಕ್ರೆಟಿಸ್‌ಗೆ ಮರಣದಂಡನೆಯೆ ಆಯಿತು.
> ರಾಜೇಗೌಡ ಅವರು ಉದಾಹರಿಸಿರುವ ಎಡವಟ್ಟುಗಳಿಗೆ ಪರಿಹಾರವೆಂದರೆ,  ಧರ್ಮ ಸಹಿತ ವಿಜ್ಞಾನ
> ಮತ್ತು ವಿಜ್ಞಾನಸಹಿತ ಧರ್ಮ ಎರಡೂ ಒಂದನ್ನೊಂದು ಕೈ ಹಿಡಿದೇ ಮುಂದೆ ಸಾಗುವುದು.
>
> Hareeshkumar K
> GHS HUSKURU
> MALAVALLI TQ
> MANDYA DT
> MOB 9880328224
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to