http://m.vijaykarnataka.com/district/mandya/jmfc-court-judge-daughter-studying-at-govt-school/articleshow/54007687.cms
*ಜಡ್ಜ್ ಮಗಳು ಸರಕಾರಿ ಶಾಲೆ ವಿದ್ಯಾರ್ಥಿನಿ !* ವಿಕ ಸುದ್ದಿಲೋಕ | Sep 5, 2016, 09.00 AM IST Whatsapp <javascript:void(0);>Facebook <javascript:void(0);>Google Plus <javascript:void(0);>Twitter <javascript:void(0);>Email <javascript:void(0);>SMS <javascript:void(0);> govt-school AAA ಚನ್ನಮಾದೇಗೌಡ ಪಾಂಡವಪುರ(ಮಂಡ್ಯ): ಸರಕಾರಿ ನೌಕರರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಮೂಗು ಮುರಿಯುವ ದಿನಗಳಲ್ಲಿ ನ್ಯಾಯಾಧೀಶರೊಬ್ಬರು ತಮ್ಮ ಪುತ್ರಿ ಹಾಗೂ ಕುಟುಂಬದ ಮತ್ತೊಬ್ಬ ಬಾಲಕಿಯನ್ನು ಸರಕಾರಿ ಶಾಲೆಗೆ ಸೇರಿಸಿದ್ದಾರೆ. ಪಾಂಡವಪುರದ ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶ ಜಗದೀಶ್ ಬಿಸೆರೊಟ್ಟಿ ಅವರೇ ತಮ್ಮ ಮಗಳು ನೀಲಮ್ಮಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದ್ದಾರೆ. ಜಡ್ಜ್ ಕುಟುಂಬದ ಮತ್ತೊಬ್ಬ ಬಾಲಕಿ ವಿದ್ಯಾ ಈರಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಮೂಲತಃ ಧಾರವಾಡದ ಜಗದೀಶ್ ಬಿಸೆರೊಟ್ಟಿ ಅವರು 2 ತಿಂಗಳ ಹಿಂದೆಯಷ್ಟೇ ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಿರಿಯ ಶ್ರೇಣಿ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿದ್ದಾರೆ. ಪಟ್ಟಣದ ಶಾಂತಿ ನಗರದಲ್ಲಿ ವಾಸವಾಗಿದ್ದಾರೆ. ಪಾಂಡವಪುರದಲ್ಲಿ 10ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದರೂ, ತಾವು ವಾಸವಿರುವ ಬಡಾವಣೆಯಲ್ಲೇ ಇರುವ ಶಾಂತಿನಗರ ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿದ್ದಾರೆ. ನ್ಯಾಯಾಧೀಶರ ಪುತ್ರಿ 7 ವರ್ಷದ ನೀಲಮ್ಮ 2ನೇ ತರಗತಿಯಲ್ಲಿ ಹಾಗೂ ವಿದ್ಯಾ ಈರಪ್ಪ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಂತಿನಗರ ಬಡಾವಣೆಯಲ್ಲಿ ಇರುವ ಸರಕಾರಿ ಶಾಲೆಯಲ್ಲಿ ಸುತ್ತಮುತ್ತಲ ಬಡ ಹಾಗೂ ಕಡು ಬಡತನವುಳ್ಳ ಕುಟುಂಬಸ್ಥರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾಜಿಕ,ಆರ್ಥಿಕ ಹಾಗೂ ಶೈಕ್ಷ ಣಿಕವಾಗಿ ತೀರ ಹಿಂದುಳಿದಿರುವ ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಂ ಧರ್ಮಕ್ಕೆ ಸೇರಿದ ಕುಟುಂಬಸ್ಥರ ಮಕ್ಕಳು ಇಲ್ಲಿ ಹೆಚ್ಚಾಗಿ ದಾಖಲಾಗಿದ್ದಾರೆ. ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದೇ ನ್ಯಾಯಾಧೀಶರು ಇಲ್ಲಿಗೆ ಸೇರಿಸಿದ್ದಾರಂತೆ. ಸರಕಾರ ಶಾಲೆಯಲ್ಲಿ ಉಚಿತವಾಗಿ ಸಿಗುವ ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಪ್ರೋತ್ಸಾಹ ಯೋಜನೆಗಳು ಎಲ್ಲಾ ಮಕ್ಕಳಂತೆ ನ್ಯಾಯಾಧೀಶರ ಮನೆಯ ಮಕ್ಕಳಿಗೂ ಸಿಗುತ್ತಿವೆ. ''ನ್ಯಾಯಾಧೀಶರ ಮಗಳು ನಮ್ಮ ಶಾಲೆಯಲ್ಲಿ ಕಲಿಯುತ್ತಿರುವುದು ಸಂತೋಷಕರ ಸಂಗತಿ. ಸಮಾಜದ ಗೌರವಾನ್ವಿತ ಸ್ಥಾನದಲ್ಲಿರುವ ವೈದ್ಯರು, ಎಂಜಿನಿಯರ್‌ಗಳು, ಪೊಲೀಸರು, ಅಧ್ಯಾಪಕರು, ವಕೀಲರು, ಪತ್ರಕರ್ತರು ತಮ್ಮ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿದರೆ, ಅವುಗಳನ್ನು ಮುಚ್ಚುವ ಪರಿಸ್ಥಿತಿಯೇ ಬರುವುದಿಲ್ಲ'' ಎನ್ನುತ್ತಾರೆ ಶಾಲೆಯ ಸಹ ಶಿಕ್ಷ ಕಿ ವಿ.ಭಾರತಿ. ಪ್ರಸ್ತುತ ಸಂದರ್ಭದಲ್ಲಿ ರಾಜ್ಯದ ಅನೇಕ ಸರಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಕೊರತೆಯಿಂದಾಗಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ ನ್ಯಾಯಾಧೀಶರ ಈ ನಿರ್ಧಾರ ರಾಜ್ಯಕ್ಕೆ ಮಾದರಿಯಾಗಿದೆ. ಸರಕಾರದ ಉನ್ನತ ಹುದ್ದೆಯಲ್ಲಿರುವ ನ್ಯಾಯಾಧೀಶರು ತಮ್ಮ ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವ ಮೂಲಕ ಸರಕಾರಿ ಶಾಲೆಗಳೇ ಗುಣಮಟ್ಟದ ಶಿಕ್ಷ ಣ ನೀಡುತ್ತವೆ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ. ನ್ಯಾಯಾಧೀಶರು ಮಗಳು ಹಾಗೂ ಇವರ ಕುಟುಂಬಸ್ಥರ ಮಗಳನ್ನು ನಮ್ಮ ಶಾಲೆಗೆ ಸೇರಿಸಿರುವುದು ನಮ್ಮ ಶಾಲೆಗೆ ಕೀರ್ತಿ ಬಂದಂತಾಗಿದೆ. -ಎಚ್.ಎನ್.ಜಗದೀಶ್, ಪ್ರಭಾರ ಮುಖ್ಯ ಶಿಕ್ಷ ಕ, ಸರಕಾರಿ ಪ್ರೌಢಶಾಲೆ ಶಾಂತಿನಗರ. ಶಾಲೆ ಉಳಿಸಿ ಬೆಳೆಸಬೇಕೆಂದು ಸರಕಾರ ಸಾಕಷ್ಟು ಪ್ರಯತ್ನಿಸುತ್ತಿರುವ ದಿನಗಳಲ್ಲಿ ನ್ಯಾಯಾಧೀಶರು ತಮ್ಮ ಮಗಳನ್ನು ಸರಿಕಾರಿ ಶಾಲೆಗೆ ಸೇರಿಸಿರುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸರಕಾರಿ ಕೆಲಸದಲ್ಲಿರುವ ನೌಕರರೇ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಹಿಂದೆ ಸರಿಯುವ ದಿನಗಳಲ್ಲಿ ನ್ಯಾಯಾಧೀಶರ ಈ ಚಿಂತನೆ ನಮ್ಮ ಶಾಲೆಗೆ ಹಾಗೂ ನಮ್ಮ ಇಲಾಖೆಗೆ ಗೌರವವನ್ನು ಹೆಚ್ಚಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕು ಎನ್ನುವುದೇ ನಮ್ಮ ಆಶಯ. -ಬಿ.ಚಂದ್ರಶೇಖರ್, ಕ್ಷೇತ್ರ ಶಿಕ್ಷ ಣಾಧಿಕಾರಿ. Hareeshkumar K GHS HUSKURU MALAVALLI TQ MANDYA DT MOB 9880328224 -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.