Super information.
On 08-Sep-2016 7:11 am, "csm cbpur" <csmcbpur67...@gmail.com> wrote:

>
>
> *** This message has been sent using GIONEE M2 ***
>
> -------- Original Message --------
> Subject: ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ... | A
> tribute to Sir M. Vishweshwaraiah - ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ
> ಶ್ರಮಪಡದಿದ್ದರೆ... - Kannada Oneindia
> From: csm cbpur <csmcbpur67...@gmail.com>
> To: csm cbpur <csmcbpur67...@gmail.com>
> CC:
>
> ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ...
> Published: Thu, Sep 14, 2000, 5:30 [IST]
> ಇಂಡಸ್ಟ್ರಿಯಲೈಸ್‌ ಆರ್‌ ಪೆರಿಷ್‌ ಎಂದು ಹೇಳಿದವರಾರು ನಿಮಗೆ ಗೊತ್ತೆ ? ಕೈಗಾರೀಕರಣ
> ಆಗದಿದ್ದರೆ ಮತ್ತೆ ನಾವು ಶಿಲಾಯುಗಕ್ಕೇ ಹೋಗುತ್ತೇವೆ ಎನ್ನುತ್ತಿದ್ದ ಶತಾಯುಷಿ ಸರ್‌.ಎಂ.
> ವಿಶ್ವೇಶ್ವರಯ್ಯನವರನ್ನು ಪ್ರತಿಯಾಬ್ಬ ಕನ್ನಡಿಗನೂ ನೆನೆಯಲೇ ಬೇಕು. ಮೈಸೂರು - ಮಂಡ್ಯ -
> ಬೆಂಗಳೂರಿಗರು ತಾವು ಒಂದೊಂದು ಹನಿ ಕಾವೇರಿ ನೀರು ಕುಡಿಯುವಾಗಲೂ ವಿಶ್ವೇಶ್ವರಯ್ಯನವರನ್ನು
> ಕಡ್ಡಾಯವಾಗಿ ನೆನೆಯಲೇ ಬೇಕು. ಮಂಡ್ಯ ಇಂದು ಕಬ್ಬಿನ ಕಣಜವಾಗಿದ್ದರೆ, ಅದಕ್ಕೆ
> ವಿಶ್ವೇಶ್ವರಯ್ಯನವರೇ ಕಾರಣ.
> ಕರ್ನಾಟಕದಲ್ಲಿ ಇಂದು ನೂರಾರು ಕೈಗಾರಿಕೆ - ಕಾರ್ಖಾನೆಗೆ ಯಂತ್ರಗಳು ವಿದ್ಯುತ್‌
> ನೆರವಿನಿಂದ ವೇಗವಾಗಿ ಚಲಿಸುತ್ತಿದ್ದರೆ, ಕರ್ನಾಟಕದ ಕೋಟ್ಯಂತರ ಮನೆಗಳಲ್ಲಿ ವಿದ್ಯುತ್‌ ದೀಪ
> ಉರಿಯುತ್ತಿದ್ದರೆ ಅದಕ್ಕೆ ವಿಶ್ವೇಶ್ವರಯ್ಯನವರೇ ಕಾರಣ. ಕೋಲಾರ ಚಿನ್ನದ ನಾಡಾಗಲು
> ವಿಶ್ವೇಶ್ವರಯ್ಯನವರ ಕಾಣಿಕೆ ಅಪಾರ.
> ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ.... ಕನ್ನಂಬಾಡಿಯ
> ಕಟ್ಟದಿದ್ದರೆ... ಈ ಗೀತೆ ಕೇಳಿದ್ದೀರಲ್ಲ. ಆಗದು ಎಂದು ಕೈಲಾಗದು ಎಂದು ಕೈಕಟ್ಟಿ
> ಕುಳಿತರೆ... ಸಾಗದು ಕೆಲಸವು ಮುಂದೆ ಎಂಬ ತತ್ವವನ್ನೇ ತಮ್ಮ ಬಾಳಲ್ಲಿ ಅಳವಡಿಸಿಕೊಂಡ
> ವಿಶ್ವೇಶ್ವರಯ್ಯನವರನ್ನು ನೆನೆಯದವರೇ ಇಲ್ಲ.
> ವಿಜ್ಞಾನ, ತಂತ್ರಜ್ಞಾನ ಅಥವಾ ಮನೆಯಲ್ಲಿ ನೀವು ಪುಟ್ಟದೊಂದು ತಾಂತ್ರಿಕ ಸಲಹೆ ನೀಡಿ ಅದು
> ಯಶಸ್ವಿಯಾದರೆ. ಅಬ್ಬಾ ವಿಶ್ವೆಶ್ವರಯ್ಯನವರ ತಲೆ ಎಂದು ಪ್ರಶಂಸೆಯಿಂದ ಹೇಳುವುದುಂಟು. ಬಹುಶಃ
> ನಿಮ್ಮ ತಾಯಿಯೋ ಅಜ್ಜಿಯೋ ನಿಮಗೂ ಈ ಮಾತು ಹೇಳಿರಬಹುದು. ಒಬ್ಬ ವ್ಯಕ್ತಿಯ ತಲೆಗೆ ಕೋಟ್ಯಂತರ
> ಕನ್ನಡಿಗರು ಬೆಲೆ ನೀಡುವಂತಹ ಹೆಮ್ಮೆಯ ಕೆಲಸವನ್ನು ಮಾಡಿದವರಲ್ಲಿ ಸರ್‌.ಎಂ.ವಿ. ಅಗ್ರೇಸರರು.
> ಸೆಪ್ಟೆಂಬರ್‌ 15 ಸರ್‌.ಎಂ. ವಿ ಹುಟ್ಟಿದ ದಿನ. ಇಂದು ಕರ್ನಾಟಕ ವಿಶ್ವ ಭೂಪಟದಲ್ಲಿ
> ತನ್ನದೇ ಆದ ಒಂದು ಸ್ಥಾನ ಪಡೆದಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಂತೂ ರಾಜ್ಯದ
> ಕೊಡುಗೆ ಅಪಾರ. ಈ ಎಲ್ಲದಕ್ಕೂ ಮೂಲವಾದ ವೇದಿಕೆ ಸಜ್ಜುಗೊಳಿಸಿದವರು ಸರ್‌.ಎಂ.ವಿ. ಅವರ
> ಹುಟ್ಟು ಹಬ್ಬದ ದಿನದಂದು ಅವರನ್ನು ನೆನೆವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.
> ಸರ್‌ಎಂವಿ ವಿಶ್ವಖ್ಯಾತ ಎಂಜಿನಿಯರ್‌. ಹೀಗಾಗಿ ಸೆಪ್ಟೆಂಬರ್‌ 15ನ್ನು ಎಂಜಿನಿಯರುಗಳ
> ದಿನವಾಗಿ ಆಚರಿಸುತ್ತಾರೆ. ವಿಶ್ವೇಶ್ವರಯ್ಯನವರು ಕೇವಲ ಒಬ್ಬ ಎಂಜಿನಿಯರ್‌ ಅಷ್ಟೇ ಅಲ್ಲ.
> ಅತ್ಯುತ್ತಮ ಆಡಳಿತಗಾರ, ವಿಶ್ವದ ಮೊಟ್ಟ ಮೊದಲ ಅರ್ಥ ಯೋಜಕ ತಜ್ಞ, ಕೈಗಾರಿಕೋದ್ಯಮಿ,
> ವಿಜ್ಞಾನಿ, ಶಿಕ್ಷಣ ತಜ್ಞ..... ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸರ್‌.ಎಂ.ವಿ. ಸೇವೆ
> ಸಲ್ಲಿಸದ ಕ್ಷೇತ್ರವೇ ಇಲ್ಲ ಎನ್ನುವ ಮಾತು ಅತಿಶಯೋಕ್ತಿಯದಲ್ಲ.
> ಆನೆ ಬೈಲು : ಒಂದು ಕಾಲದಲ್ಲಿ ಆನೆಗಳ ತವರಾಗಿದ್ದ ದುರ್ಗಮ ಅರಣ್ಯ ಇಂದು ಲಕ್ಷಾಂತರ
> ಪ್ರವಾಸಿಗರನ್ನು ತನ್ನತ್ತ ಸೆಳೆಯುವ ವಿಶ್ವಖ್ಯಾತ ಜೋಗವಾಗಲು ವಿಶ್ವೇಶ್ವರಯ್ಯನವರೇ ಕಾರಣ.
> ದುರ್ಗಮವಾಗಿದ್ದ ಜೋಗದ ಸೊಬಗನ್ನು ಕಾಣಲು ನೂರು ವರ್ಷಗಳ ಹಿಂದೆ ಹರ ಸಾಹಸ ಮಾಡಿದವರೂ
> ಇದ್ದಾರೆ. ಕೆಲವರಷ್ಟೇ ತಮ್ಮ ಈ ಸಾಹಸದಲ್ಲಿ ಯಶಸ್ವಿಯಾಗಿ ತಮ್ಮ ಬಾಳು ಸಾರ್ಥಕವಾಯಿತು ಎಂದೂ
> ತಿಳಿಯುತ್ತಿದ್ದರು.
> ಈ ಪ್ರದೇಶಕ್ಕೆ ಭೇಟಿಕೊಟ್ಟ ವಿಶ್ವೇಶ್ವರಯ್ಯನವರು ಜೋಗದ ಸೊಬಗು ನೋಡಿ ಸಂತೋಷ ಪಟ್ಟರಾದರೂ,
> ಅಯ್ಯೋ ಎಷ್ಟೊಂದು ವ್ಯರ್ಥ, ತುಂಬಲಾರದ ನಷ್ಟ ಎಂದು ಉದ್ಗರಿಸಿದರು. ಇಂತಹ ಪ್ರಕೃತಿ ದತ್ತ
> ಅಗಾಧ ಸಂಪತ್ತು ವ್ಯರ್ಥವಾಗಿ ಹಾಳಾಗುತ್ತಿರುವುದಕ್ಕೆ ಮರುಗಿದರು. ಅಂದು
> ವಿಶ್ವೇಶ್ವರಯ್ಯನವರು ಈ ಆನೆಬೈಲಿಗೆ ಹೋಗದಿದ್ದರೆ, ಕರ್ನಾಟಕದ ವಿದ್ಯುತ್‌ ಸಮಸ್ಯೆಯನ್ನು
> ಮತ್ತಷ್ಟು ಮಗದಷ್ಟು ಬಿಗಡಾಯಿಸುತ್ತಿತ್ತು.
> ವಿಶ್ವೇಶ್ವರಯ್ಯ : ವಿಶ್ವೇಶ್ವರಯ್ಯನವರ ಪೂರ್ಣ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಾಯ.
> 1861ರ ಸೆಪ್ಟೆಂಬರ್‌ 15ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ
> ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿಗಳು. ಶ್ರೀನಿವಾಸ ಶಾಸ್ತ್ರಿಗಳು ಘನ
> ವಿದ್ವಾಂಸರು, ಸಂಸ್ಕೃತ ಪಂಡಿತರು. ತಾಯಿ ವೆಂಕಚ್ಚಮ್ಮನವರು ಸದ್ಗೃಹಿಣಿ.
> ಗುಣ ಶ್ರೀಮಂತಿಕೆಯ ಕುಟುಂಬದಲ್ಲಿ ಜನಿಸಿದ ವಿಶ್ವೇಶ್ವರಯ್ಯನವರು ಬೆಳೆದದ್ದೆಲ್ಲಾ ಕಡು
> ಬಡತನದಲ್ಲಿ. ಬೀದಿ ದೀಪದ ಕೆಳಗೆ ಕುಳಿತು ತಮ್ಮ ಓದು ಮುಂದುವರಿಸಿದ ವಿಶ್ವೇಶ್ವರಯ್ಯನವರು,
> ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರೂ ವೆಸ್ಲಿಯನ್‌ ಹಾಗೂ ಸೆಂಟ್ರಲ್‌
> ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಂದುವರಿಸಿದರು. ವಿದ್ಯಾಭ್ಯಾಸಕ್ಕಾಗಿ ಹಲವು ಮಕ್ಕಳಿಗೆ
> ಮನೆಪಾಠ ಹೇಳಿಕೊಟ್ಟು, ಶಿಕ್ಷಣದ ಜತೆಜತೆಗೇ ಸಂಪಾದನೆಯನ್ನೂ ಮಾಡಿದ ವಿಶ್ವೇಶ್ವರಯ್ಯನವರು
> ತಮ್ಮ ವಿದ್ಯಾಭ್ಯಾಸಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೂ ಛಲ ಬಿಡದ ತ್ರಿವಿಕ್ರಮರಂತೆ
> ಎಲ್ಲ ಕಷ್ಟಗಳನ್ನೂ ನುಂಗಿದ ಅವರು, 80ರಲ್ಲಿ ಪದವಿ ಗಳಿಸಿ, ಪುಣೆಯಲ್ಲಿ ಎಂಜಿನಿಯರಿಂಗ್‌
> ಶಿಕ್ಷಣ ಪಡೆದು, ಮುಂಬಯಿ ಸರಕಾ-ರದಲ್ಲಿ ಅಸಿಸ್ಟೆಂಟ್‌ ಎಂಜಿನಿಯರ್‌ ಆದರು. ಎಂಜಿನಿಯರ್‌ ಆದ
> ನಂತರ ಇವರ ಸಾಧನೆಗಳನ್ನು ಕಂಡು ನಿಬ್ಬೆರಗಾದ ಲಂಡನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸಿವಿಲ್‌
> ಎಂಜಿನಿಯರ್ಸ್‌ ಸಂಸ್ಥೆ ಇವರಿಗೆ ಗೌರವ ಸದಸ್ಯತ್ವ ನೀಡಿ ತಮ್ಮ ಹಿರಿಮೆಯನ್ನು
> ಹೆಚ್ಚಿಸಿಕೊಂಡಿತು. ಇವರು ಆವಿಷ್ಕರಿಸಿದ ಸ್ವಯಂಚಾಲಿತ ಜಲ ನಿಯಂತ್ರಕ ಬಾಗಿಲು ವಿಶ್ವದ ಗಮನ
> ಸೆಳೆಯಿತು.
> ಏಡನ್‌ ನಗರಕ್ಕೆ ನೀರು ಪೂರೈಸುವ ಯೋಜನೆ ಸಿದ್ಧಪಡಿಸಿ ಯಶಸ್ವಿಯಾದ ವಿಶ್ವೇಶ್ವರಯ್ಯನವರು,
> ಹೈದರಾಬಾದ್‌ ನಗರ ಎದುರಿಸುತ್ತಿದ್ದ ಪ್ರವಾಹದ ಸಮಸ್ಯೆಗೆ ಪರಿಹಾರ ಒದಗಿಸಿದರು. ಹೈದರಾಬಾದ್‌
> ಇಂದು ಸುಂದರ ನಗರ ಎನಿಸಿಕೊಳ್ಳಲು ಸರ್‌.ಎಂ.ವಿ. ನೀಡಿದ ಕಾಣಿಕೆ ಅನುಪಮವಾದದ್ದು. ಇಂತಹ
> ಪ್ರತಿಭಾವಂತ ಕನ್ನಡಿಗನಾಗಿದ್ದೂ ಅನ್ಯರ ನಾಡಿನಲ್ಲಿ ಇರುವುದು ಸೂಕ್ತವಲ್ಲ. ನಮ್ಮ ನಾಡಿನ
> ಪ್ರತಿಭೆಯ ಸದ್ಬಳಕೆ ನಮ್ಮಲ್ಲೇ ಆಗಬೇಕೆಂದು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ
> ಒಡೆಯರು ಸರ್‌.ಎಂ.ವಿಗೆ ತಾಯ್ನಾಡಿಗೆ ಮರಳುವಂತೆ ಆಹ್ವಾನಿಸಿದರು.
> ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್‌ ಆಗಿ ಸೇರಿದ ವಿಶ್ವೇಶ್ವರಯ್ಯನವರು, 1912ರಲ್ಲಿ
> ಮೈಸೂರಿನ ದಿವಾನರೇ ಆದರು. ತಮ್ಮ ಈ ಆಡಳಿತಾವಧಿಯಲ್ಲಿ ಭದ್ರಾವತಿ ಉಕ್ಕಿನ ಕಾರ್ಖಾನೆ,
> ಮೈಸೂರು ವಿ.ವಿ.ಯ ಸ್ಥಾಪನೆಗೆ ನೆರವಾದ ಸರ್‌ಎಂವಿ ಅವರು ಆರ್ಥಿಕ ಅಭಿವೃದ್ಧಿಗೂ ಕಾರಣವಾದರು.
> ಮೈಸೂರು ಬ್ಯಾಂಕ್‌, ಹಿಂದೂಸ್ತಾನ್‌ ಎರೋನಾಟಿಕ್ಸ್‌, ನ್ಯಾಯವಿಧಾಯಕ ಸಭೆ, ಪ್ರಜಾಪ್ರತಿನಿಧಿ
> ಸಭೆಗಳು ಸರ್‌ಎಂವಿ ಅವರ ಕಲ್ಪನೆಯ ಕೈಗೂಸುಗಳು.
> ಮೈಸೂರು ಮಾದರಿ ರಾಜ್ಯ ಎಂದು ಹೆಸರು ಗಳಿಸುವಲ್ಲಿ ವಿಶ್ವೇಶ್ವರಯ್ಯನವರ ಸಿಂಹಪಾಲಿದೆ.
> ಮೈಸೂರು ಸಂಸ್ಥಾನಕ್ಕೆ ವಿತ್ತ ಯೋಜನೆಯಾಂದನ್ನು ರೂಪಿಸಿ, ಕಾರ್ಯರೂಪಕ್ಕೆ ತಂದು ರಾಷ್ಟ್ರದ
> ಪ್ರಥಮ ಅರ್ಥಯೋಜಕರೆಂಬ ಖ್ಯಾತಿಯನ್ನೂ ವಿಶ್ವೇಶ್ವರಯ್ಯ ಅವರು ಪಡೆದರು.
> ಸುವರ್ಣಯುಗ : ರಾಜ್ಯದಲ್ಲಿ ಸಿಮೆಂಟ್‌ ಕಾರ್ಖಾನೆ, ಕಾಗದದ ಕಾರ್ಖಾನೆ, ಗಂಧದೆಣ್ಣೆಯ
> ಕಾರ್ಖಾನೆ, ಛೇಂಬರ್‌ ಆಫ್‌ ಕಾಮರ್ಸ್‌, ಸೋಪು ಮತ್ತು ಮಾರ್ಜಕಗಳ ಕಾರ್ಖಾನೆ, ಠಂಕಸಾಲೆ,
> ಶ್ರೀ ಜಯ-ಚಾಮ-ರಾ-ಜೇಂ-ದ್ರ ಪಾಲಿ ಟೆಕ್ನಿ-ಕ್‌, ಎಣ್ಣೆ ಗಿರಣಿಗಳೇ ಮುಂತಾದ ನೂರಾರು
> ಕಾರ್ಖಾನೆಗಳು ಮೈಸೂರು ಸಂಸ್ಥಾನದಲ್ಲಿ ತಲೆ ಎತ್ತಲು ವಿಶ್ವೇಶ್ವರಯ್ಯನವರೇ ಕಾರಣ.
> ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲವನ್ನು ಸುವರ್ಣಯುಗ ಎಂದೇ
> ಬಣ್ಣಿಸುತ್ತಾರೆ. ಕನ್ನ-ಡ ಸಾಹಿ-ತ್ಯ ಪರಿ-ಷ-ತ್‌ ಸ್ಥಾ-ಪ-ನೆ-ಯಾ-ದ-ದ್ದು ಇವ-ರ
> ಕಾಲ-ದ-ಲ್ಲೇ.
> ಕಟ್ಟಾ ಕನ್ನಡಾಭಿಮಾನಿಯಾಗಿದ್ದ ವಿಶ್ವೇಶ್ವರಯ್ಯನವರು 1913ರಲ್ಲೇ ಕನ್ನಡವನ್ನು ಆಡಳಿತ
> ಭಾಷೆ ಎಂದು ಘೋಷಿಸಿದ ಖ್ಯಾತಿಗೂ ಪಾತ್ರರಾದರು. ವಿಶ್ವೇಶ್ವರಯ್ಯನವರ ತಾಂತ್ರಿಕ ಕುಶಲತೆ,
> ಅವರ ಆಡಳಿತಾತ್ಮಕ ವಿಚಾರಧಾರೆ, ಆರ್ಥಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಎಲ್ಲವರನ್ನೂ
> ಪರಿಗಣಿಸಿದ ಸರಕಾರ ಅವರಿಗೆ ಸರ್‌. ಪುರಸ್ಕಾರ ನೀಡಿ ಗೌರವಿಸಿತು. 1962ರ ತನಕ ನೂರು ವರ್ಷಗಳ
> ತುಂಬು ಜೀವನ ನಡೆಸಿದ ಸರ್‌.ಎಂ.ವಿ. ವಿಶ್ವಕ್ಕೇ ಮಾರ್ಗದರ್ಶಕವಾದ ನೂರಾರು ಯೋಜನೆಗಳನ್ನು
> ನಾಡಿಗೆ ಕೊಟ್ಟಿದ್ದಾರೆ.
> ಸರ್‌.ಎಂ.ವಿ. ಹುಟ್ಟೂರಾದ ಮುದ್ದೇನಹಳ್ಳಿ ಆಗಲಿದೆ ಸ್ವಚ್ಛಗ್ರಾಮ
> ನಿರ್ಲಕ್ಷ್ಯಕ್ಕೊಳಗಾಗಿರುವ ಸರ್‌.ಎಂ.ವಿಶ್ವೇಶ್ವರಯ್ಯನವರ ಸಮಾಧಿ
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to