Nice On Oct 12, 2016 5:37 PM, "Girish T P" <girisht...@gmail.com> wrote:
> ಮಕ್ಕಳಲ್ಲಿ 'ಸರ್ವಾಂಗೀಣ/ಸರ್ವತೋಮುಖ ಅಭಿವೃದ್ಧಿ/ವಿಕಾಸವೆಂದರೆ.. > > ಮಕ್ಕಳಲ್ಲಿ ಪಂಚಮುಖಿ ಬೆಳವಣಿಯಾಗಬೇಕು. > > ೧. ಶಾರೀರಿಕವಾಗಿ > ೨. ಬೌದ್ಧಿಕವಾಗಿ > ೩. ಭಾವನಾತ್ಮಕವಾಗಿ > ೪. ಸಾಮಾಜಿಕವಾಗಿ > ೫. ನೈತಿಕವಾಗಿ > > ೧. ಶಾರೀರಿಕ > > ಒಳ್ಳೆಯ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ಪರಿಸರ ಶಾರೀರಿಕ ಬೆಳವಣಿಗೆಗೆ ಬುನಾದಿ. > ಮಧ್ಯಾಹ್ನದ ಬಿಸಿಯೂಟ ಯೋಜನೆ, > ಯೋಗ ಮತ್ತು ಕ್ರೀಡೆ, > ಸ್ವಚ್ಚತಾ ಕೆಲಸಗಳು & ಉತ್ತಮ ಭೌತಿಕ ಸಂಪನ್ಮೂಲಗಳು ಶಾರೀರಿಕ ಬೆಳವಣಿಗೆಗೆ ನಮ್ಮ > ಶಾಲೆಯಲ್ಲಿರುವ ಅವಕಾಶಗಳು. > > ೨. ಬೌದ್ಧಿಕತೆ > > ಗರಿಷ್ಠ ಪ್ರಚೋದನೆ ಮತ್ತು ಶಿಕ್ಷಣ ಬೌದ್ಧಿಕ ಬೆಳವಣಿಗೆಗೆ ಸಹಕಾರಿ. > ಮಕ್ಮಳು ಕಲಿಯುತ್ತಿಲ್ಲವೆಂದಾದಲ್ಲಿ ನಾವು ಮಕ್ಕಳನ್ನು ಕಲಿಕೆಯೆಡೆಗೆ ಪ್ರೇರೆಪಿಸುವಲ್ಲಿ > ಯಶಸ್ವಿಯಾಗಿಲ್ಲವೆಂದೇ ಅರ್ಥ. > > ಕೆಳಗಿನ ಶಾಲೆಗಳಿಂದ ಮಕ್ಕಳು ಏನೂ ಕಲಿಯದೇ ಬರುತ್ತಾರೆ ಎಂಬ ಕಾರಣ ತೀರಾ ಹಳತಾದುದು. ಈಗ > ಅದು ನೆಪವಷ್ಟೇ. > ಪರಿಹಾರ ಬೋಧನೆ ಎಂಬ ಚಿಕಿತ್ಸಕ ಶೈಕ್ಷಣಿಕ ಉಪಕಾರ್ಯಕ್ರಮದ ಬಗ್ಗೆ ಹೆಚ್ಚಿನವರಲ್ಲಿ > ನಕಾರಾತ್ಮಕ ಭಾವನೆಯೇ ಮೈದಳೆದಿರುವಾಗ ಮಕ್ಕಳನ್ನು ಬೌದ್ಧಿಕವಾಗಿ ಸಶಕ್ತಗೊಳಿಸುವುದು ಹೇಗೆ ? > > ೩. ಭಾವನಾತ್ಮಕತೆ. > > ಪ್ರೀತಿ, ಆಸರೆ, ಸುರಕ್ಷಿತ ಭಾವನೆ, ಹಿತಕಾರಿಯಾದ ಜನ, ಆತ್ಮೀಯತೆ ಮತ್ತು ಆಪ್ತತೆಯ > ವಾತಾವರಣ ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಸಹಕಾರಿ. > > ಸಾಧ್ಯವಾದಷ್ಟು ಮಟ್ಟಿಗೆ ಶಾಲೆಯಲ್ಲಿರುವ ಎಲ್ಲಾ ಮಕ್ಕಳ ಹೆಸರಾದರೂ ತಿಳಿದಿರಬೇಕು, ಮಕ್ಕಳ > ಕುಶಲಕ್ಷೇಮ ವಿಚಾರಿಸಿಕೊಳ್ಳಬೇಕು, ಆಗಾಗ್ಗೆ ವೈಯಕ್ತಿಕವಾಗಿ ಮಾತನಾಡಿಸಬೇಕು > ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದ, ಭಾಗವಹಿಸಲು ಹಿಂಜರಿಯುವ > ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು. > ಮಕ್ಕಳ ಇಷ್ಟ-ಕಷ್ಟಗಳ ಬಗೆಗಿನ ಅರಿವು ಬೆಳೆಸಿಕೊಳ್ಳಬೇಕು. > > ೪. ಸಾಮಾಜಿಕತೆ > > ಸೌಹಾರ್ದ ಸಂಬಂಧ, ಮಾದರಿ ಪಾತ್ರಗಳು, ಒಳ್ಳೆಯ ತರಬೇತಿ, ಶ್ರೇಷ್ಠ ನಡವಳಿಕೆಗಳ ಪ್ರದರ್ಶನ > ಮಕ್ಕಳ ಸಮಾಜಿಕ ಬೆಳವಣಿಗೆಗೆ ಕಾರಣವಾಗಬಲ್ಲದು. > > ವಿವಿಧ ಸಮಾಜಿಕ ಹಿನ್ನಲೆಯುಳ್ಳ ಮಕ್ಕಳ ಮನೆಗಳ ಪರಸ್ಪರ ಭೇಟಿ ಇದಕ್ಕೆ ಪೂರಕವಾಗಬಲ್ಲದು. > ವಿವಿಧ ಸಮುದಾಯಗಳ ವಿಭಿನ್ನ ಆಚರಣೆಗಳ ಪರಿಚಯ ಮತ್ತು ಅವುಗಳಲ್ಲಿ ಭಾಗವಹಿಸುವುದು ಸಹ > ಸಮಾಜಿಕ ಬೆಳವಣಿಗೆಗೆ ಪ್ರೇರಕವಾಗಬಲ್ಲದು. > > ೫. ನೈತಿಕತೆ > > ಸರಿ-ತಪ್ಪುಗಳ ಸರಿಯಾದ ವ್ಯಾಖ್ಯಾನ, > ನ್ಯಾಯ, ಧರ್ಮಗಳ ಬಗ್ಗೆ ಅರಿವು, > ಸ್ವಹಿತಕ್ಕಿಷ್ಟು-ಪರಹಿತಕ್ಕಿಷ್ಟು ಪ್ರಾಮುಖ್ಯತೆ ಬಗೆಗಿನ ತಿಳಿವು ನೈತಿಕ ವಿಕಾಸಕ್ಕೆ > ನೆರವಾಗಬಲ್ಲದು. > > ಉತ್ತಮ ಚಿತ್ರಗಳನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡುವುದು, > ಕಥೆಗಳನ್ನು ಹೇಳುವುದು ಮತ್ತು ಹೇಳಿಸುವುದು, > ತಪ್ಪಿತಸ್ಥ ಮಕ್ಕಳನ್ನು ತಿದ್ದುವ ರೀತಿ ನೈತಿಕತೆ ಬೆಳೆಸುವಲ್ಲಿ ಪ್ರಮುಖವಾಗುತ್ತವೆ. > ......................................................... > ಈ ಮೇಲಿನ ಐದು ಅಂಶಗಳ ಬೆಳವಣಿಗೆ ಮತ್ತು ವಿಕಾಸಕ್ಕೆ ಶಾಲೆಯಲ್ಲಿ ಇರುವ ವಿನೂತನ > ಆಯಾಮಗಳನ್ನು, ಅವಕಾಶಗಳನ್ನು ಸ್ನೇಹಿತರು, ಹಿರಿಯರು ಪರಿಚಯ ಮಾಡಿಕೊಡಿ. > > 'ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನಿರ್ಮಾಣವಾಗುತ್ತದೆ.' > > ಸದೃಢವಾದ > ಶಾರೀರಿಕತೆ, ಬೌದ್ಧಿಕತೆ, ಭಾವನಾತ್ಮಕತೆ, ಸಮಾಜಿಕತೆ ಮತ್ತು ನೈತಿಕತೆ > > ನಿರ್ಮಿಸುವಲ್ಲಿ ನೀವುಗಳು ನಿಮ್ಮ ಶಾಲೆಯಲ್ಲಿ ಜಾರಿಗೊಳಿಸಿರುವ, ಜಾರಿಗೊಳಿಸಬೇಕೆಂದಿರುವ > ವಿನೂತನ ಕ್ರಮಗಳ ಬಗ್ಗೆ ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಳ್ಳಿರಿ. > ----------------------------------------------------- > > ಇತ್ತೀಚಿನ ದಿನಗಳಲ್ಲಿ ನಾವುಗಳು, ಪಾಲಕ-ಪೋಷಕರು ಬೌದ್ಧಿಕ ಬೆಳವಣಿಗೆಗೆ ಮಾತ್ರ ಹೆಚ್ಚಿನ > ಒತ್ತಾಸೆ ನೀಡುತ್ತಿದ್ದೆವೆ. > ಮಕ್ಕಳು ಪರೀಕ್ಷೆಯಲ್ಲಿ ಗಳಿಸುವ ಫಲಿತಾಂಶ, ಅಂಕಗಳ ಮೇಲೆಯೇ ನಮಗೆ ಹೆಚ್ಚಿನ ಗಮನ. > ಉದಾಹರಣೆಗೆ: ಇತ್ತೀಚೆಗೆ ಕ್ರೀಡೆ, ಪ್ರತಿಭಾಕಾರಂಜಿ ಕಾರ್ಯಕ್ರಮಗಳು ಮುಗಿದವು. > ಹೆಚ್ಚು-ಕಡಿಮೆ ಆ ಕ್ಷಣದಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದ್ದೆವೆ. > ಆ ಎಲ್ಲಾ ಸ್ಪರ್ಧೆಗಳು, ಕಾರ್ಯಕ್ರಮಗಳು ಮುಗಿದ ಮೇಲೆ > 'ಈ ಹಾಳಾದ್ದೂ sports, ಪ್ರತಿಭಾ ಕಾರಂಜಿಯಿಂದ syllabus cover ಆಗಲೇ ಇಲ್ಲ, ಮುಗೀಲೆ > ಇಲ್ಲ' > ಎಂದೂ ಗೊಣಗಿದ್ದೇವೆ. > > ನಮ್ಮ ಹೆಚ್ಚಿನ ಶಿಕ್ಷಕರ ಬಾಯಿಂದ ಬರುವುದು > 'ಡಿಸೆಂಬರ್ ಹೊತ್ತಿಗೆ Syllabus Cover ಮಾಡಬೇಕು, ಮುಗಿಸಬೇಕು' ಅಂತಾ. > Actually Syllabus has to be open in front of students and not be covered. > > ನಾವು ಬೌದ್ಧಿಕತೆ ಕುರಿತಂತೆ ಈ ರೀತಿಯಲ್ಲಿ ಅವೈಜ್ಞಾನಿಕವಾಗಿ ಹೆಚ್ಚಿನ ಆಕ್ರಮಣಶೀಲ > ಒತ್ತಾಸೆ ನೀಡುತ್ತಿರುವುದರಿಂದ ಸಾಕಷ್ಟು ಮಕ್ಕಳು ನಕಾರಾತ್ಮಕ ಭಾವನೆಗಳಿಂದ ಬಳಲುವರು. > ಇತರರೊಡನೇ ಹೊಂದಿಕೊಳ್ಳುವದೇ, ಹಂಚಿಕೊಳ್ಳದೇ ಸ್ವಾರ್ಥಿಗಳಾಗುತ್ತಿದ್ದಾರೆ. > > ಗುರಿ ಮುಖ್ಯವೇ ಹೊರತು ಮಾರ್ಗ ಮುಖ್ಯವಲ್ಲ ಎಂಬ ಧೋರಣೆ ಬೆಳೆಸಿಕೊಳ್ಳುತ್ತಿದ್ದಾರೆ. > SSLC ಪರೀಕ್ಷಾ ರೀತಿ-ನೀತಿಗಿಂತ ಬೇರೆ ಉದಾಹರಣೆ ಬೇಕಿಲ್ಲ. > ಎಳವೆಯಲ್ಲಿ ಕಂಡ ರುಚಿಗಾಗಿ ಜೀವನದ ಉದ್ದಕ್ಕೂ ಹಂಬಲಿಸುತ್ತಾರೆ. > > ಹೀಗೆ ಮುಂದುವರೆದಲ್ಲಿ > ಮಕ್ಕಳಲ್ಲಿ/ಹದಿಹರೆಯದವರಲ್ಲಿ ಆನೇಕಾನೇಕ ನಡವಳಿಕೆ ದೋಷಗಳು ಕಂಡು ಬರುತ್ತವೆ, ಅವರಲ್ಲಿ > ಕೀಳರಿಮೆ, ಆಕ್ರಮಣಶೀಲತೆ, ಆತ್ಮಹತ್ಯೆಯಂತಹ ದುರಾಲೋಚನೆಗಳು, ಸಮಾಜ ವಿರೋಧಿ ಭಾವನೆಗಳು > ಕಂಡುಬರುತ್ತಿವೆ. > > ಈ ಹಿನ್ನಲೆಯಲ್ಲಿ ಪೋಷಕರಾಗಿ, ಶಿಕ್ಷಕರಾಗಿ, ಅದರಲ್ಲೂ ಒಂದು ಶಾಲೆಯ ಮುಖ್ಯಸ್ಥರಾಗಿ > ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಜವಬ್ದಾರಿ ಮತ್ತು ಹೊಣೆಗಾರಿಕೆಗಳು ಹೆಚ್ಚಿನದಾಗಿವೆ. > ನಾವು ಮಕ್ಕಳ ಮನೋವಿಜ್ಞಾನದ ಕುರಿತು ಹೆಚ್ಚಿನ ಜ್ಞಾರ್ನಾಜನೆ ಮಾಡಬೇಕಾಗಿದೆ. > > - ಗಿರೀಶ ಟಿ. ಪಿ. > ಸ.ಪ್ರೌ.ಶಾಲೆ, ಹಾದೀಕೆರೆ, ತರೀಕೆರೆ ತಾ. > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.