ಗೌರವಾನ್ವಿತ ಶಿಕ್ಷಕ ಮಿತ್ರರೆ,
                  ಈಗಾಗಲೇ ಅನೇಕ ಶಿಕ್ಷಕರು ತಿಳಿಸಿರುವಂತೆ ಈ ಸಾಲಿನ ಎಸ್.ಎಸ್.ಎಲ್.ಸಿ
ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಓರ್ವ ಸಾಮಾನ್ಯ ಶಿಕ್ಷಕನಾಗಿ ನಾನಂತೂ ಈ ರೀತಿಯ
ಪ್ರಶ್ನೆಗಳನ್ನು ನಿರೀಕ್ಷಿಸಿರಲಿಲ್ಲ.ನಾನೂ ಸಹ ನಮ್ಮ ತಾಲೂಕಾ ಹಾಗೂ ಜಿಲ್ಲಾ ಹಂತದ ಕೆಲವು
ಪ್ರಶ್ನೆಪತ್ರಿಕೆ ರಚನೆಗಳಲ್ಲಿ ಪಾಲ್ಗೊಂಡ  ಅಲ್ಪ  ಅನುಭವ ಪಡೆದಿದ್ದು, ನಾನು ಹಾಗೂ
ನನ್ನೊಂದಿಗೆ ಅನೇಕ ಮಿತ್ರರು ಪ್ರಶ್ನೆಪತ್ರಿಕೆ ರಚಿಸುವಾಗ ನೀಲನಕ್ಷೆಯ ಜೊತೆಗೆ ಮಕ್ಕಳ
"ಕಲಿಕಾ ಮಟ್ಟ"ವನ್ನೂ ಪ್ರಮುಖವಾಗಿ ಪರಿಗಣಿಸುತ್ತೇವೆ. ಪ್ರಶ್ನೆಗಳು "ಕೇವಲ ಉತ್ತೀರ್ಣತೆಯ
 ದೃಷ್ಟಿಕೋನದಿಂದ 'ಸುಲಭ' ಹಾಗೂ 100%  ಅಂಕ ಗಳಿಸಲು ಕಠಿಣ"  ಎನ್ನುವ ಅಂಶ  ಆಧರಿಸಿ
ತಯಾರಿಸುತ್ತೇವೆ.
      ಆದರೆ ಈ ಸಾಲಿನ ಪ್ರಶ್ನೆಪತ್ರಿಕೆ ನಮ್ಮ ನಿರೀಕ್ಷೆ ಹುಸಿಗೊಳಿಸಿದೆ. ಸರಾಸರಿಗಿಂತ
ಮೇಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಿದ್ದರೂ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಯ
ಕಂಗೆಡಿಸಿದೆ.
ಈಗಾಗಲೇ ಆದ ಸಮಸ್ಯೆಗೆ ಚಿಂತಿಸಿ ಫಲವಿಲ್ಲ.
ವರ್ಷಪೂರ್ತಿ ಪ್ರಯತ್ನಿಸಿದ ನಾವುಗಳೆಲ್ಲ  ಈಗ ಕೊನೆಯ ಯತ್ನ  ಎಂಬಂತೆ, ಮಂಡಳಿಗೆ
* *ಪ್ರಶ್ನೆಯಲ್ಲಿನ ದೋಷಗಳು *(ವಿಷಯ ಶಿಕ್ಷಕರ ವೇದಿಕೆ)
** ಅನಿರೀಕ್ಷಿತ ಪ್ರಶ್ನೆಗಳು *(ಶಿಕ್ಷಕ ಸಂಘಟನೆ)
** ತಿರುಚಿ ಕೇಳಲಾದ ಪ್ರಶ್ನೆಗಳಿಂದ  ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾದ ತೊಂದರೆ *(ಶಿಕ್ಷಕ
ಸಂಘಟನೆ)
** 5%  ಕೃಪಾಂಕ ನೀಡುವಂತೆ ಮನವಿ *(ಶಿಕ್ಷಕ ಸಂಘಟನೆ)
ಇತ್ಯಾದಿಗಳನ್ನು ಕೆಲವನ್ನು ವಿಷಯ ಶಿಕ್ಷಕರ ವೇದಿಕೆ ಹಾಗೂ ಕೆಲವನ್ನು ವಿವಿಧ ಶಿಕ್ಷಕ
ಸಂಘಟನೆ ಮುಖಾಂತರ ಮಂಡಳಿಗೆ ಮನವರಿಕೆ ಮಾಡಿಸುವ ಯತ್ನವನ್ನು ಮಾಡೋಣ. ಈಗಾಗಲೇ ತಿಳಿದಿರುವಂತೆ
ದಿನಾಂಕ
13-04-2017ರಿಂದ 15-04-2017ರವರೆಗೆ ಆಕ್ಷೇಪಣೆಗೆ ಅವಕಾಶವಿದ್ದು, ಈ ಅವಧಿಯಲ್ಲಿ ಎಲ್ಲರೂ
ಒಂದಾಗಿ ಪ್ರಯತ್ನಿಸೋಣ ಎಂದು ವಿನಂತಿ. ತಮ್ಮ ಸಲಹೆಗಳೇನಾದರೂ ಇದ್ದರೆ ದಯವಿಟ್ಟು ಮುಕ್ತವಾಗಿ
ವ್ಯಕ್ತಪಡಿಸಿ.ನಮ್ಮ ಹಾನಗಲ್ಲ ತಾಲೂಕಿನ  ಬಹುತೇಕ ಗಣಿತ ಶಿಕ್ಷಕರ ಅಭಿಪ್ರಾಯವೂ ಸಹ  ಇದೇ
ಆಗಿರುತ್ತದೆ.
*ಇವೆಲ್ಲವುಗಳ ಜೊತೆ ಮೌಲ್ಯಮಾಪನದ ಸಂದರ್ಭದಲ್ಲಿ ಪ್ರತಿಯೊಬ್ಬರೂ"ನಿಮ್ಮದೇ ವಿದ್ಯಾರ್ಥಿಗಳು"
ಎನ್ನುವ  ಮೃದು ಧೋರಣೆ ಇರಲಿ ಎಂದು ಎಲ್ಲರಲ್ಲಿ ವಿನಂತಿ.*

ಮಹೇಶ.ನಾಯ್ಕ
ಹಾನಗಲ್ಲ
ಹಾವೇರಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to