ನಿಮ್ಮ ಅನಿಸಿಕೆ ಚನ್ನಾಗಿ ದೆ
On Apr 18, 2017 9:58 AM, "Harikrishna Holla" <harikrishnaho...@gmail.com>
wrote:
>
>             ಈ ಬಾರಿ ನಾವು ಗಣಿತ ಶಿಕ್ಷಕರೆಲ್ಲರೂ ಸೋಲು ಅನುಭವಿಸುತ್ತಿದ್ದೇವೆ. ಮೊದಲು
ವಿದ್ಯಾರ್ಥಿಗಳನ್ನು ಚೆನ್ನಾಗಿ ತರಬೇತಿಗೊಳಿಸಿದ್ದೆವು. ಆದರೆ, ಪ್ರಶ್ನೆಗಳು ನಾವು
ನಿರೀಕ್ಷಿಸಿದ ರೀತಿಯಲ್ಲಿ ಬಾರದೇ ಇದ್ದುದರಿಂದ ನಾವು ಸೋತೆವು. ನಂತರ ತಪ್ಪುಗಳಿರುವ
ಪ್ರಶ್ನೆಗಳಿಗೆ ಉಚಿತ ಅಂಕ ಕೊಡಿಸಲು ಪ್ರಯತ್ನಿಸಿದೆವು. ಆ ಪ್ರಯತ್ನದಲ್ಲಿಯೂ ಸೋತೆವು. ಹೀಗೆ
ನಮ್ಮ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತಿವೆ. ಬಹುಶಃ ನಾವು ಸರಿಯಾದ ದಿಕ್ಕಿನಲ್ಲಿ
ಪ್ರಯತ್ನಿಸುತ್ತಿಲ್ಲ ಅನ್ನಿಸುತ್ತಿದೆ. ಕೆಲವು ಪತ್ರಿಕೆಗಳಲ್ಲಿ ವರದಿಯಾದಂತೆ 'ಹೊರಗಡೆ
ಬಿಗಿ ಭದ್ರತೆ ಇಟ್ಟುಕೊಂಡು ಒಳಗಡೆ ಪಾಸಿಂಗ್ ಪ್ಯಾಕೇಜ್' ಮಾಡಿಸಬೇಕಿತ್ತೇನೋ ಅನ್ಸುತ್ತೆ.
ಅದೇ ಸುಲಭ ನೋಡಿ. ಒಂದು ದಿನ ಕಷ್ಟಪಟ್ಟರಾಯಿತು ಅಲ್ವಾ?
>              ವಿದ್ಯಾರ್ಥಿಗಳಿಗೆ ಮೊದಲೇ ಗಣಿತ ಕಷ್ಟ. ಅದರಲ್ಲೂ ಸಿಲೆಬಸ್ ತುಂಬಾ
ಜಾಸ್ತಿ ಇದೆ. ಪಠ್ಯದಲ್ಲಿಯೇ ಸಾವಿರಾರು ಕ್ಲಿಷ್ಟ ಸಮಸ್ಯೆಗಳಿವೆ. ಅವುಗಳನ್ನೇ
ವಿದ್ಯಾರ್ಥಿಗಳಿಗೆ ಬಿಡಿಸಲು ಬಾರದೇ ಇರುವಾಗ, ಪಠ್ಯದಲ್ಲಿ ಇಲ್ಲದ ರೀತಿಯ ಪ್ರಶ್ನೆಗಳನ್ನು
ಕೇಳಿದರೆ ಅವರು ಹೇಗೆ ತಾನೆ ಬಿಡಿಸಿಯಾರು? ಈ ಸಲದ ಪ್ರಶ್ನೆಪತ್ರಿಕೆಯಲ್ಲಿರುವ ಎಷ್ಟು
ಪ್ರಶ್ನೆಗಳು ಪಠ್ಯದಲ್ಲಿ ಇವೆ? ಪಠ್ಯದಲ್ಲಿ ಇರುವ ಪ್ರಶ್ನೆಗಳೇ ಅಲ್ಲದಿದ್ದರೆ ಹೋಗಲಿ ,
ಕನಿಷ್ಟ ಪಠ್ಯದಲ್ಲಿ ಇರುವ ಮಾದರಿಯಲ್ಲಾದರೂ ಎಷ್ಟು ಪ್ರಶ್ನೆಗಳು ಇವೆ? ಈ ಬಗ್ಗೆ
ಪ್ರಶ್ನೆಪತ್ರಿಕೆ ವಿಶ್ಲೇಷಣೆ ಮಾಡಬೇಕು. ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನೇ
ಕೇಳುವುದಾದಲ್ಲಿ ಆ ಪಠ್ಯಪುಸ್ತಕ ಯಾಕೆ? ನಾವು ಅಧ್ಯಾಪಕರು ಯಾವ ಪುಸ್ತಕದ ಆಧಾರದಮೇಲೆ ಪಾಠ
ಮಾಡಬೇಕು? ಪರೀಕ್ಷೆಗೆ ಕೆಲವು ದಿನಗಳಿರುವಾಗ ಬೋರ್ಡಿನವರು ಒಂದು ಮಾದರಿ
ಪ್ರಶ್ನೆಪತ್ರಿಕೆಯನ್ನು ತಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸಿದರು. ಈಗ ಪಬ್ಲಿಕ್
ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆ ಅವರು ಪ್ರಕಟಿಸಿದ ಮಾದರಿ ಪ್ರಶ್ನೆ
ಪತ್ರಿಕೆಯಂತೆಯೇ ಇದೆಯೇ? ಈ ಬಗ್ಗೆ ಚರ್ಚೆಯಾಗಬೇಕು.
>              ಪರೀಕ್ಷೆ ಅಂದ್ರೇನು? ನಾವು ಹೇಳಿಕೊಟ್ಟಿರುವುದನ್ನು ವಿದ್ಯಾರ್ಥಿಗಳು
ಸರಿಯಾಗಿ ಕಲಿತಿದ್ದಾರೋ? ಇಲ್ಲವೋ? ಎಂಬುದನ್ನು ದೃಢಪಡಿಸಿಕೊಳ್ಳುವುದು ತಾನೇ? ಹಾಗಿರುವಾಗ
ನಾವು ಹೇಳಿಕೊಟ್ಟಿರದ , ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿದರೆ ಅದು ಪರೀಕ್ಷೆ
ಹೇಗಾಗುತ್ತದೆ? ಅದಕ್ಕೆ ಅವರು 'ಎಪ್ಲಿಕೇಶನ್ ಕೊಶ್ಚನ್' ಅಂತೆಲ್ಲ ಹೇಳ್ತಾರೆ. ಈ
ಎಪ್ಲಿಕೇಶನ್ ಪಿಯುಸಿನಲ್ಲಿ ಅಥವಾ ಅದಕ್ಕಿಂತ ಮೇಲಿನ ತರಗತಿಗಳಲ್ಲಿ ಇದೆಯಾ? ಅಲ್ಲಿ
ಯಾಕಿಲ್ಲ? ಇಲ್ಲಿ ಮಾತ್ರ ನಮ್ಮ ಜೀವ ತಿನ್ನುವುದು ಯಾಕೆ? ಸ್ಕೂಟರ್ ರೈಡಿಂಗ್ ಹೇಳಿಕೊಟ್ಟು
ಟೆಸ್ಟಿಂಗ್ ದಿನ 'ಎಪ್ಲಿಕೇಶನ್' ಅಂತ ಕಾರ್ ಡ್ರೈವ್ ಮಾಡಿ ತೋರಿಸಲು ಹೇಳಿದರೆ ಹೇಗೆ ಸ್ವಾಮೀ?
>
> Harikrishna Holla G,
> Brahmavara.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
"Maths & Science STF" group.
> To unsubscribe from this group and stop receiving emails from it, send an
email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to