ಮೇಡಂ,ಶುಭಕಾಮನೆಗಳು.

On 27 Mar 2017 11:02 p.m., "Lakshmikandghal11" <lakshmikandgha...@gmail.com>
wrote:

> [10:57pm, 27/03/2017] lakshmi kandgal: samgra vachan samputa pustaka idre
> hakri
> [10:57pm, 27/03/2017] lakshmi kandgal: devar dasimayyna jeevana &sahitya
> .book idre hakri
>
>
> Sent from Samsung Mobile
>
>
> VIJAYALAKSHMI S <harshitdh2...@gmail.com> wrote:
>
>
> Yugadi visheshathe thilisid ninage dhanyavadagalu
>
> On 27-Mar-2017 10:57 AM, "Sameera samee" <mehak.sa...@gmail.com> wrote:
>
> *ಹಿಂದೂಗಳ ಹೊಸ ವರ್ಷಾರಂಭ – ಯುಗಾದಿ*
>
>
>
> ಯಾವುದೇ ಕೃತಿಯನ್ನು ಮಾಡುವ ಮೊದಲು ಅದನ್ನು ಏಕೆ ಮಾಡಬೇಕು? ಅದರ ಹಿಂದಿನ ಶಾಸ್ತ್ರ,
> ಇತಿಹಾಸ ಏನು ಎಂದು ನಾವು ನೋಡುತ್ತೇವೆ. ಹಾಗಿದ್ದರೆ ಈಗ ಎಲ್ಲರೂ ಡಿಸೆಂಬರ್ ೩೧ ರಂದು ಯಾಕೆ
> ಹೊಸ ವರ್ಷ ಆಚರಿಸುತ್ತಾರೆ? ಇದರ ಹಿಂದಿನ ಶಾಸ್ತ್ರ ಅಥವಾ ಇತಿಹಾಸವೇನು ಎಂದು ನಿಮಗೆ
> ಅನಿಸಿಲ್ಲವೇ? ಸರಿಯಾದ ಕಾರಣಗಳಿಲ್ಲದಿದ್ದರೂ ನಾವು ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತಾ
> ಡಿಸೆಂಬರ್ ೩೧ ರಂದು ಹೊಸವರ್ಷ ಎಂದು ಆಚರಿಸುತ್ತೇವೆ. ರಾತ್ರಿ ೧೨ ಗಂಟೆಗೆ ಡಿಸ್ಕೋ,
> ಪಬ್ಬುಗಳ ಕರ್ಕಶ ಸದ್ದು, ಕುಡಿದು ಕುಣಿಯುವ ಹುಡುಗರೊಂದಿಗೆ ಹೊಸವರ್ಷವನ್ನು ಆಚರಿಸುವುದು
> ನಿಮಗೆ ಸರಿ ಅನಿಸುತ್ತದೆಯೇ? ಅದನ್ನು ನೋಡಿ ನಿಜವಾಗಲೂ ಹೊಸವರ್ಷವೆಂದು ನಮಗೆ
> ಅನಿಸುತ್ತದೆಯೇ? ನೀವೇ ಇದರ ಕುರಿತು ವಿಚಾರ ಮಾಡಿ. ನಮ್ಮ ದಿನದ ಆರಂಭವು ಕತ್ತಲು, ದುಃಖದಿಂದ
> ಆಗಬೇಕೆಂದು ನಿಮಗೆ ಅನಿಸುತ್ತದೆಯೇ? ಹಿಂದೂ ಸಂಸ್ಕೃತಿಯನುಸಾರ ದಿನದ ಆರಂಭವು ಬೆಳಗ್ಗೆ
> ಸೂರ್ಯೋದಯದೊಂದಿಗೆ ಆಗುತ್ತದೆ.
>
> ನಮ್ಮ ಹಿಂದೂ ಸಂಸ್ಕೃತಿಯನುಸಾರ ನಾವು ಯುಗಾದಿಯಂದು ಏಕೆ ಹೊಸವರ್ಷ ಆಚರಿಸುತ್ತೇವೆ ಎಂದು
> ನಿಮಗೆ ತಿಳಿದಿದೆಯೇ?
>
> ಯುಗಾದಿ ಹಬ್ಬವನ್ನು ಆಚರಿಸುವುದರ ಮಹತ್ವ ಮತ್ತು ಕಾರಣಗಳು
>
> ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ
> ಪ್ರತಿಪದೆ. ’ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ
> ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧ ಚೈತ್ರ
> ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ
> ಕಾರಣಗಳಿವೆ.
>
> ನೈಸಗಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ
> ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ)
> ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ
> ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ
> ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ
> ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ
> ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ
> ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ
> ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ
> ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ತದ್ವಿರುದ್ಧವಾಗಿ
> ಡಿಸೆಂಬರ್ ೩೧ ರಂದು ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ
> ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು
> ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.
>
> ನಿಸರ್ಗದ ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು
> ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕಾರಿಯಾಗಿರುತ್ತವೆ. ಆದುದರಿಂದ
> ಪಾಶ್ಚಾತ್ಯ ಸಂಸ್ಕೃತಿಗನುಸಾರ ಜನವರಿ ಒಂದರಂದು ಹೊಸವರ್ಷಾರಂಭವನ್ನು ಮಾಡದೇ, ಯುಗಾದಿ
> ಪಾಡ್ಯದಂದೇ ಹೊಸವರ್ಷವನ್ನು ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ.
>
> ಐತಿಹಾಸಿಕ ಕಾರಣಗಳು: ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು
> ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ
> ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ
> ವಿಜಯವನ್ನು ಪಡೆದನು.
>
> ಆಧ್ಯಾತ್ಮಿಕ ಕಾರಣಗಳು : ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು.
> ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು
> ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ
> ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ
> ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ
> ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.
>
> ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕೃತಿಗಳು
>
> ಯಾವುದೇ ಹಬ್ಬ ಬಂದರೆ ಆ ಹಬ್ಬದ ವೈಶಿಷ್ಟ್ಯದಂತೆ ಮತ್ತು ನಮ್ಮ ಪದ್ಧತಿಯಂತೆ ನಾವು ಏನಾದರೂ
> ಮಾಡುತ್ತಿರುತ್ತೇವೆ, ಆದರೆ ಧರ್ಮದಲ್ಲಿ ಹೇಳಿದಂತಹ ಇಂತಹ ಪಾರಂಪರಿಕ ಕೃತಿಯ ಹಿಂದಿನ
> ಅಧ್ಯಾತ್ಮಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡರೆ ಅದರ ಮಹತ್ವವು ನಮಗೆ ಹಿಡಿಸುತ್ತದೆ. ಇಲ್ಲಿ
> ನಾವು ಯುಗಾದಿಯಂದು ಮಾಡಬೇಕಾದ ಧಾರ್ಮಿಕ ಕೃತಿಗಳ ಮಾಹಿತಿಯನ್ನು ಪಡೆಯೋಣ.
>
> ಅಭ್ಯಂಗಸ್ನಾನ
> ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು.
> ಅಭ್ಯಂಗಸ್ನಾನವನ್ನು ಮಾಡುವಾಗ ‘ದೇಶಕಾಲಕಥನ’ ಮಾಡಬೇಕು.‘ ದೇಶಕಾಲಕಥನ’ ದಿಂದ ಅಹಂ
> ಕಡಿಮೆಯಾಗಲು ಸಹಾಯವಾಗುತ್ತದೆ.
>
> ತೋರಣವನ್ನು ಕಟ್ಟುವುದು
> ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಎಲ್ಲ
> ಬಾಗಿಲುಗಳಿಗೆ ಕಟ್ಟಬೇಕು. ಏಕೆಂದರೆ ಕೆಂಪು ಬಣ್ಣ ಶುಭಸೂಚಕವಾಗಿದೆ. ಸಾತ್ತ್ವಿಕ ತೋರಣದಿಂದ
> ಚೈತನ್ಯ ಪ್ರಕ್ಷೇಪಿತವಾಗಿ ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ.
>
> ಪೂಜೆ
> ಮೊದಲು ನಿತ್ಯಕರ್ಮ ದೇವರ ಪೂಜೆಯನ್ನು ಮಾಡಬೇಕು. ‘ವರ್ಷದ ಪಾಡ್ಯದಂದು ಮಹಾಶಾಂತಿ ಮಾಡಬೇಕು.
> ಶಾಂತಿಯ ಪ್ರಾರಂಭದಲ್ಲಿ ಬ್ರಹ್ಮದೇವನ ಪೂಜೆಯನ್ನು ಮಾಡಬೇಕು, ಏಕೆಂದರೆ ಬ್ರಹ್ಮದೇವನು
> ವಿಶ್ವವನ್ನು ಈ ದಿನವೇ ನಿರ್ಮಿಸಿದನು. ಪೂಜೆಯಲ್ಲಿ ಅವನಿಗೆ ದವನವನ್ನು (ಸುವಾಸನೆಯ
> ಎಲೆಗಳನ್ನು) ಅರ್ಪಿಸಬೇಕು. ಅನಂತರ ಹೋಮಹವನ ಮತ್ತು ಬ್ರಾಹ್ಮಣಸಂತರ್ಪಣೆ ಮಾಡಬೇಕು. ತರುವಾಯ
> ಅನಂತ ರೂಪಗಳಲ್ಲಿ ಅವತರಿಸುವ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ‘ನಮಸ್ತೆ ಬಹುರೂಪಾಯ
> ವಿಷ್ಣವೇ ನಮಃ|’ ಎನ್ನುವ ಮಂತ್ರವನ್ನು ಹೇಳಿ ಅವನಿಗೆ ನಮಸ್ಕರಿಸಬೇಕು. ಅನಂತರ
> ಬ್ರಾಹ್ಮಣರಿಗೆ ದಕ್ಷಿಣೆಯನ್ನು ನೀಡಬೇಕು, ಸಾಧ್ಯವಾದರೆ ಇತಿಹಾಸ, ಪುರಾಣ ಮುಂತಾದ
> ಗ್ರಂಥಗಳನ್ನು ಬ್ರಾಹ್ಮಣರಿಗೆ ದಾನವೆಂದು ನೀಡಬೇಕು. ಈ ಶಾಂತಿಯನ್ನು ಮಾಡುವುದರಿಂದ ಎಲ್ಲ
> ಪಾಪಗಳು ನಾಶವಾಗುತ್ತವೆ, ಸಂಕಟಗಳು ಬರುವುದಿಲ್ಲ,ಆಯುಷ್ಯವೃದ್ಧಿಯಾಗುತ್ತದೆ ಮತ್ತು
> ಧನಧಾನ್ಯಗಳ ಸಮೃದ್ಧಿಯಾಗುತ್ತದೆ.’ ಈ ದಿನ ಯಾವ ವಾರವಿರುತ್ತದೆಯೋ, ಆ ವಾರದೇವತೆಯ
> ಪೂಜೆಯನ್ನೂ ಮಾಡಬೇಕು.
>
> ಬ್ರಹ್ಮಧ್ವಜವನ್ನು ಏರಿಸುವುದು
> ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ
> ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು
> ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ.
> ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ. ಇದಕ್ಕೆ ‘ಬ್ರಹ್ಮಧ್ವಜಾಯ ನಮಃ|’ ಎಂದು ಹೇಳಿ
> ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಎರಡನೆಯ ದಿನದಿಂದ ಈ ಕಲಶವನ್ನು ನೀರು ಕುಡಿಯಲು
> ಉಪಯೋಗಿಸಬೇಕು, ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯವನ್ನು ತೋರಿಸಿ ಧ್ವಜವನ್ನು
> ಕೆಳಗಿಳಿಸುತ್ತಾರೆ.
>
> ಧರ್ಮಧ್ವಜವನ್ನು ನಿಲ್ಲಿಸುವ ಪದ್ಧತಿ
>
> 
>
> ೧. ಧರ್ಮಧ್ವಜದ ಸ್ಥಾನ : ಧರ್ಮಧ್ವಜವನ್ನು ಬಾಗಿಲ ಹೊರಗೆ; ಅದರೆ ಹೊಸ್ತಿಲಿನ ಹತ್ತಿರ
> (ಮನೆಯೊಳಗಿಂದ ನೋಡಿದರೆ) ಬಲಗಡೆಯಲ್ಲಿ ನಿಲ್ಲಿಸಬೇಕು.
>
> ೨. ಪದ್ಧತಿ :
>
> ಅ. ಧರ್ಮಧ್ವಜವನ್ನು ನಿಲ್ಲಿಸುವಾಗ ಎಲ್ಲಕ್ಕಿಂತ ಮೊದಲು ಸೆಗಣಿಯಿಂದ ನೆಲಸಾರಿಸಿ
> ಅಂಗಳವನ್ನು ರಂಗೋಲಿಯಿಂದ ಸುಶೋಭಿತಗೊಳಿಸಬೇಕು. ಧರ್ಮಧ್ವಜವನ್ನು ನಿಲ್ಲಿಸುವ ಜಾಗದಲ್ಲಿ
> ರಂಗೋಲಿಯಿಂದ ಸ್ವಸ್ತಿಕವನ್ನು ಬಿಡಿಸಿ ಅದರ ಮಧ್ಯಬಿಂದುವಿನಲ್ಲಿ ಅರಿಷಿಣ ಕುಂಕುಮವನ್ನು
> ಹಾಕಬೇಕು.
> ಆ. ಧರ್ಮಧ್ವಜವನ್ನು ನಿಲ್ಲಿಸುವಾಗ ಬ್ರಹ್ಮಾಂಡದಲ್ಲಿನ ಶಿವ ಶಕ್ತಿಯ ಲಹರಿಗಳ ಆವಾಹನ ಮಾಡಿ
> ಅವುಗಳನ್ನು ಸ್ವಸ್ತಿಕದ ಮೇಲೆ ಸ್ಥಾಪಿಸಬೇಕು. ಇದರಿಂದ ಧರ್ಮಧ್ವಜದ ತುದಿಯಲ್ಲಿ ಇರುವ ಎಲ್ಲ
> ಘಟಕಗಳಿಗೆ ದೇವತ್ವವು ಪ್ರಾಪ್ತವಾಗುತ್ತದೆ.
> ಇ. ಧರ್ಮಧ್ವಜವನ್ನು ನೆಲದ ಮೇಲೆ ಹೊಸ್ತಿಲಿನ ಹತ್ತಿರ; ಆದರೆ ಸ್ವಲ್ಪ ಬಾಗಿದ ಸ್ಥಿತಿಯಲ್ಲಿ
> ನಿಲ್ಲಿಸಬೇಕು.
>
> ಪಂಚಾಂಗ ಶ್ರವಣ ಎಂದರೇನು ಮತ್ತು ಅದರ ಮಹತ್ವ ಏನು?
>
> ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು
> ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು. ಈ ವರ್ಷಫಲದ ಶ್ರವಣದ ಫಲ ಹೇಳಲಾಗಿದೆ, ಅದು
> ಮುಂದಿನಂತಿದೆ. ತಿಥಿಯ ಶ್ರವಣದಿಂದ ಲಕ್ಷ್ಮೀಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು
> ವೃದ್ಧಿಯಾಗುತ್ತದೆ, ನಕ್ಷತ್ರಶ್ರವಣದಿಂದ ಪಾಪನಾಶ ವಾಗುತ್ತದೆ, ಯೋಗಶ್ರವಣದಿಂದ ರೋಗಗಳ
> ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿತ ಕಾರ್ಯವು ಸಾಧ್ಯವಾಗುತ್ತದೆ. ಇವು ಪಂಚಾಂಗ
> ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ.’
>
> ಬೇವಿನ ಪ್ರಸಾದ
> ಪಂಚಾಂಗಶ್ರವಣದ ನಂತರ ಕಹಿ ಬೇವಿನ ಪ್ರಸಾದ ಹಂಚಬೇಕು. ಈ ಪ್ರಸಾದವನ್ನು ಬೇವಿನ
> ಹೂವು,ಚಿಗುರೆಲೆಗಳು, ನೆನೆಸಿದ ಕಡಲೆಕಾಳು ಅಥವಾ ಬೇಳೆ, ಜೇನು, ಜೀರಿಗೆ ಮತ್ತು ಸ್ವಲ್ಪ
> ಇಂಗು ಇವೆಲ್ಲವನ್ನು ಬೆರೆಸಿ ತಯಾರಿಸುತ್ತಾರೆ.
>
> ಭೂಮಿಯನ್ನು ಊಳುವುದು
> ಯುಗಾದಿಯಂದು ಭೂಮಿಯನ್ನು ಊಳಬೇಕು. ಭೂಮಿಯನ್ನು ಊಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ.
> ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜ ಮೊಳಕೆಯೊಡೆಯುವ ಭೂಮಿಯ
> ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಭೂಮಿಗೆ ಉಪಯೋಗಿಸಲ್ಪಡುವ ಸಲಕರಣೆ ಮತ್ತು
> ಎತ್ತುಗಳ ಮೇಲೆ ಪ್ರಜಾಪತಿ ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆಗಳನ್ನು
> ಹಾಕಬೇಕು. ಹೊಲದಲ್ಲಿ (ಗದ್ದೆಯಲ್ಲಿ) ಕೆಲಸ ಮಾಡುವವರಿಗೆ ಹೊಸ ಬಟ್ಟೆಗಳನ್ನು ಕೊಡಬೇಕು. ಈ
> ದಿನ ಹೊಲದಲ್ಲಿ ಕೆಲಸ ಮಾಡುವ ಜನರ ಮತ್ತು ಎತ್ತುಗಳ ಭೋಜನದಲ್ಲಿ ಕುಂಬಳಕಾಯಿ, ಹೆಸರುಬೇಳೆ,
> ಅಕ್ಕಿ, ಹೂರಣ ಮುಂತಾದ ಪದಾರ್ಥಗಳಿರಬೇಕು.
>
> ದಾನ
> ಯಾಚಕರಿಗೆ ಅನೇಕ ವಿಧದ ದಾನವನ್ನು ಕೊಡಬೇಕು, ಉದಾ. ಅರವಟ್ಟಿಗೆಯನ್ನು (ಜಲ ಮಂದಿರ)
> ನಿರ್ಮಿಸಿ ನೀರಿನ ದಾನವನ್ನು ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.
>
> ಈ ದಿನ ಅನೇಕ ವಿಧದ ಮಂಗಲ ಹಾಡುಗಳನ್ನು ಮತ್ತು ಪುಣ್ಯಪುರುಷರ ಕಥೆಗಳನ್ನು ಕೇಳುತ್ತಾ ಈ
> ದಿನವನ್ನು ಆನಂದದಿಂದ ಕಳೆಯಬೇಕು. ಈಗಿನ ಕಾಲದ ಹಬ್ಬವೆಂದರೆ ಮೋಜು ಮಜಾ ಮಾಡುವ ದಿನವೆಂಬ
> ಸಂಕಲ್ಪನೆ ಬರುವಂತಾಗಿದೆ, ಆದರೆ ಹಿಂದೂ ಧರ್ಮದ ಶಾಸ್ತ್ರೀಯ ಪದ್ಧತಿಯ ಹಬ್ಬವೆಂದರೆ
> ‘ಹೆಚ್ಚೆಚ್ಚು ಚೈತನ್ಯ ಪಡೆಯುವ ದಿನ’ವಾಗಿರುತ್ತದೆ. ಆದ್ದರಿಂದ ಹಬ್ಬದಂದು ಸಾತ್ತ್ವಿಕ
> ಆಹಾರ, ಸಾತ್ತ್ವಿಕ ಬಟ್ಟೆ ಹಾಗೂ ಇತರ ಧಾರ್ಮಿಕ ಕೃತಿ ಇತ್ಯಾದಿಗಳನ್ನು ಮಾಡುವುದರೊಂದಿಗೆ
> ಸಾತ್ತ್ವಿಕವಾದ ಸುಖದಾಯಕ ಕೃತಿಗಳನ್ನು ಮಾಡಲು ಶಾಸ್ತ್ರವು ಹೇಳಿದೆ. ಈ ರೀತಿ ಯುಗಾದಿಯನ್ನು
> ಆಚರಿಸುವುದರಿಂದ ಆರೋಗ್ಯ, ಕೃಷಿ ಮುಂತಾದವು ಹೆಚ್ಚಾಗುತ್ತದೆ.
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8Yx
> geXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರ
> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/Public_
> Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to