ಉಪನ್ಯಾಸಕರ. ಹುದ್ದೆ ಯ ಪ್ರಶ್ನೆ ಪತ್ರಿಕೆಗಳ ಕಳಿಸಿ ಪ್ಲೀಸ್
On Apr 26, 2017 10:53 AM, "Sameera samee" <mehak.sa...@gmail.com> wrote: > ದಯವಿಟ್ಟು ಓದಿ 📝 > > ಅದೊಂದು ಕೈಗಾರಿಕಾ ಪ್ರದೇಶ. ನೂರಾರು ಕಾರಖಾನೆಗಳ ನಡುವೆ ಅದೊಂದು ಫ್ರೀಜರ್ ಘಟಕ. ಆಹಾರ > ಪದಾರ್ಥಗಳನ್ನು ಸಂಗ್ರಹಿಸಿಡುವ ಶೀತಲೀಕರಣ ಯಂತ್ರಗಳು ಅದರ ಮುಖ್ಯ ಭಾಗ. ಅದೊಂದು ದಿನ ಸಂಜೆ > ಎಲ್ಲರೂ ಮನೆಗೆ ಹೊರಡುವ ಸಮಯ ಆಗಿತ್ತು. ಒಬ್ಬೊಬ್ಬರಾಗಿ, ಗಡಿಯಾರ ನೋಡಿಕೊಂಡು, ಘಟಕದಿಂದ > ಮರಳಿ ಮನೆಯ ಕಡೆ ಪ್ರಯಾಣ ಬೆಳೆಸಲು ಆರಂಭಿಸಿದ್ದರು. ಆದರೆ ಆ ಘಟಕದ ಎಲೆಕ್ಟ್ರಾನಿಕ್ಸ್ > ವಿಭಾಗದ ಇಂಜಿನಿಯರ್ ಒಬ್ಬರು ಎಲ್ಲಾ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು > ನೋಡಿಕೊಂಡು ಬರುತ್ತಿರುವಾಗ, ಯಾವುದೋ ಫ್ರೀಜರಿನಲ್ಲಿ ಸಮಸ್ಯೆ ಇರುವುದು ಗೊತ್ತಾಯಿತು. ಒಂದು > ಗೋಡೌನ್ನಷ್ಟು ಗಾತ್ರವಿದ್ದ, ಆ ಫ್ರೀಜರಿನಲ್ಲಿರುವ ಸಮಸ್ಯೆಯನ್ನು ಗುರುತಿಸಲು ಆತನಿಗೆ ಸಮಯ > ಸಾಲದಾಯಿತು. ಅದರ ಒಳಗೆ ಸಮಸ್ಯೆಯನ್ನು ಬಗೆ ಹರಿಸಿ, ಹೊರಗೆ ಬರಲು ನೋಡಿದರೆ ಮನೆಗೆ ಹೋಗುವ > ಆತುರದಲ್ಲಿ ಯಾರೋ ಒಬ್ಬ, ಎಲ್ಲರೂ ಹೊರಗೆ ಬಂದಿದ್ದಾರೆ ಎಂದು ನೋಡದೆ ಹೊರಗಿನಿಂದ ಬಾಗಿಲು > ಹಾಕಿ ಬಿಟ್ಟಿದ್ದನು. ಒಳಗಿದ್ದ ಇಂಜಿನಿಯರ್ ಕಿರುಚುತ್ತಾ ಯಾರಾದರೂ ಸಹಾಯ ಮಾಡುತ್ತಾರಾ ಎಂದು > ಕರೆದನು. ಆದರೆ ಅವನಿಗೆ ಪ್ರತಿಕ್ರಿಯಿಸುವವರು ಯಾರೂ ಇರಲಿಲ್ಲ. ಸಾಲದ್ದಕ್ಕೆ ಘಟಕದ ಒಳಭಾಗದ > ದೀಪಗಳೆಲ್ಲ ಆರಿಸಲ್ಪಟ್ಟಿದ್ದವು. ಮೈನಸ್ ಉಷ್ಣಾಂಶವಿದ್ದ ಆ ಫ್ರೀಜರ್ ಘಟಕ ಆತನಿಗೆ > ಮಂಜುಗಡ್ಡೆಯ ಸಮಾಧಿಯಂತೆ ಕಾಣಿಸಲಾರಂಭಿಸಿತು. ಅವನು ಧರಿಸಿದ್ದ ಬೆಚ್ಚನೆಯ ಉಡುಪು ಸಹ > ಚಳಿಯನ್ನು ತಡೆಯಲು ಅಸಾಧ್ಯ ಎನ್ನುವಂಥ ಸ್ಥಿತಿ ತಲುಪಿತು. ಹೀಗೆ ಸಮಯ ಕಳೆಯುತ್ತ ಹೋಯಿತು. > ಇವನ ಕೈ ಕಾಲು ಮರಗಟ್ಟಲು ಆರಂಭಿಸಿತು. ಅಷ್ಟರಲ್ಲಿ ಯಾರೋ ಬಾಗಿಲು ತೆರೆಯುತ್ತಿರುವುದು > ಕಾಣಿಸಿತು. ಆ ಘಟಕದ ಸೆಕ್ಯೂರಿಟಿ ಗಾರ್ಡ್ ಟಾರ್ಚ್ ಹಿಡಿದುಕೊಂಡು ಯಾರನ್ನೋ ಹುಡುಕುತ್ತಾ > ಬಂದಂತೆ ಕಂಡನು. ಅವನನ್ನು ಕರೆದಾಗ ಓಡಿ ಬಂದು, ಬಾಗಿಲು ತೆರೆದನು. ಓಡಿ ಹೋಗಿ ತಾನು > ರಾತ್ರಿಗೆಂದು ಫಾಸ್ಕ್ನಲ್ಲಿ ತುಂಬಿ ತಂದಿದ್ದ ಬಿಸಿ ಬಿಸಿ ಚಹವನ್ನು ಸುರಿದು ಕೊಟ್ಟನು. > ಬದುಕಿದೆಯಾ ಬಡಜೀವವೇ, ಎಂಬಂತಾಗಿದ್ದ ಇವನು ಆ ಚಹವನ್ನು ಕುಡಿದು ಚೇತರಿಸಿಕೊಂಡನು ಹಾಗೂ > ಕುತೂಹಲದಿಂದ ಆ ಗಾರ್ಡನನ್ನು ಕೇಳಿದನು. "ನಾನು ಒಳಗೆ ಸಿಕ್ಕಿ ಹಾಕಿಕೊಂಡಿದ್ದೆ ಎಂದು ನಿನಗೆ > ಹೇಗೆ ಗೊತ್ತಾಯಿತು? ಯಾರು ನಿನಗೆ ತಿಳಿಸಿದರು? " ಎಂದು ಕೇಳಿದನು. ಅದಕ್ಕೆ ಆ ಗಾರ್ಡ್ > ಹೇಳಿದನು " ಯಾರೂ ಹೇಳಲಿಲ್ಲ ಸರ್, ಈ ಪ್ಲಾಂಟ್ನಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಜನ ಕೆಲಸ > ಮಾಡುತ್ತಾರೆ, ಆದರೆ ಬೆಳಗ್ಗೆಯಾದರೆ ಒಂದು ಹಾಯ್, ಸಂಜೆಯಾದರೆ ಬಾಯ್, ಎಂದು ಹೇಳಿ ಹೋಗುವುದು > ಮಾತ್ರ ನೀವೊಬ್ಬರೇ! ನಾನು ನಿಮಗೆ ನಮಸ್ಕಾರ ಹೇಳುವ ಮೊದಲೇ ನೀವು ಮೇಲಧಿಕಾರಿ ಎಂಬ > ಭಾವನೆಯನ್ನೂ ತೋರದೆ ನೀವಾಗಿಯೇ ನನ್ನ ಕಡೆ ನೋಡಿ ನಗುತ್ತಾ ಕೈಬೀಸಿ ಹಾಯ್ ಹೇಳುತ್ತೀರಿ ಹಾಗೂ > ಸಂಜೆ ಮನೆಗೆ ಹೋಗುವಾಗಲೂ ಅದೇ ನಗುಮುಖದಿಂದ ಬಾಯ್ ಹೇಳಿ ಹೋಗುತ್ತಿರುವ. ನಾನು ಬೆಳಗ್ಗೆಯಿಂದ > ಗೇಟಿನಲ್ಲೇ ಇದ್ದೆ, ಬೆಳಗ್ಗೆ ನೀವು ಒಳಗೆ ಬಂದವರು ಹೊರಗೆ ಬರಲಿಲ್ಲ, ಅದಕ್ಕೆ ಸಂಶಯ ಬಂದು > ನಿಮ್ಮನ್ನೇ ಹುಡುಕಿಕೊಂಡು ಬಂದೆ ಎಂದನು. > ಇದನ್ನು ಕೇಳಿದ ಆ ನೌಕರ ಆ ಗಾರ್ಡನನ್ನು ಬಾಚಿ ತಬ್ಬಿಕೊಂಡ. ಹೇಳಲು ಅವನ ಬಳಿ ಪದಗಳೇ > ಇರಲಿಲ್ಲ. ಕೇಳಲು ಆ ಗಾರ್ಡ್ಗೆ ಯಾವ ಪ್ರಶ್ನೆಗಳೇ ಇರಲಿಲ್ಲ. > > ಒಮ್ಮೆ ಆಲೋಚಿಸಿ. ಒಬ್ಬ ಮನುಷ್ಯನಿಗೆ ಆ ನೌಕರ ತೋರಿದ ಒಂದು ಸಣ್ಣ ಗೌರವ ಪೂರ್ವಕ ನಡವಳಿಕೆ > ಆತನ ಜೀವವನ್ನು ಉಳಿಸಿತು. > ಹಾಗಾಗಿ ಯಾರನ್ನಾದರು ಭೇಟಿಯಾದಾಗ ಅವರಿಗೆ ಒಂದು ನಮಸ್ಕಾರ ಹೇಳಿ. ಕನಿಷ್ಠ ಪಕ್ಷ ಅವರಿಗೆ > ಗೌರವ ಪೂರ್ವಕವಾಗಿ ನಗುತ್ತ ಮಾತನಾಡಿಸಿ. ಈ ಸಮಯದಲ್ಲಿ ಒಂದು ಮುಗುಳ್ನಗೆ ನಿಮ್ಮ > ಮುಖದಲ್ಲಿರಬೇಕೆಂಬುದನ್ನು ಮರೆಯಬೇಡಿ. ಇಂತಹ ಉತ್ತಮ ಶಿಷ್ಠಾಚಾರಗಳನ್ನು ನಿಮ್ಮ ಮಕ್ಕಳಿಗೆ > ಚಿಕ್ಕ ವಯಸ್ಸಿನಿಂದಲೇ ತಿಳಿಸಿಕೊಡುವುದನ್ನು ಮತ್ತು ನೀವೂ ಪಾಲಿಸಲು ಮರೆಯಬೇಡಿ. ಇದರಿಂದ > ನಮಗೆ ಒಳ್ಳೆಯದೇ ಆಗುತ್ತದೆಯೇ ಹೊರತು ನಷ್ಟ ಎಂದಿಗೂ ಆಗದು! ಯಾರು ಬಲ್ಲರು?, ನಮ್ಮ ಈ ಒಂದು > ಸಣ್ಣ ನಡವಳಿಕೆಯು ನಮ್ಮ ಜೀವನದಲ್ಲಿ ಪವಾಡವನ್ನೇ ಮಾಡಬಹುದು! ಅಲ್ಲವೇ? *You earn Respect > if u learn to Respect Others* > > ಬದುಕಿಗೊಂದು ಪಾಠ... ಓದಿದ್ದನ್ನ ಹಂಚಿಕೊಂಡಿದ್ದಿನಿ. > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.