*ತಾಯಿ ನಾಡು * ನಾಡು ನಮ್ಮದು ಕರುನಾಡು ನಮ್ಮದು ದಾಸ,ಶರಣ,ಕವಿ,ಸಂತರ ಗುಡಿಯು ನಮ್ಮದು // ಪ//
ಕೃಷ್ಣೆ,ತುಂಗೆ,ಕಾವೇರಿ,ಭೀಮೆ ಹರಿವ ಸೊಬಗು ನೋಡಿರಿ ಶಾರದೆ,ಚಾಮುಂಡಿ,ದುರ್ಗೆ ಹರಸೊ ವರವ ಬೇಡಿರಿ //೧// ಗೀತ,ನಾಟ್ಯ,ಸಾಹಿತ್ಯ,ಶಿಲ್ಪ ವಿಜ್ಞಾನ,ಶಿಕ್ಷಣಕಾಶಿಯು ತಾಯ ಮಡಿಲು ತುಂಬಿಹುದು ಅನ್ನ ,ಹೊನ್ನ ರಾಶಿಯು//೨// ದೂರ ಹಬ್ಬಿ ನೀಲ ತೀರ ಪಡುವಣದಾಳ ಸಾಗರ ತೆಂಗು,ಕಂಗು,ನಂದಿ,ಸುರಗಿ ಸಿರಿಗಂಧ,ಹೊನ್ನೆಯಾಗರ //೩// ಗಂಗ,ಕದಂಬ,ರಾಷ್ಟ್ರಕೂಟ ವಿಜಯನಗರ ವೈಭವ ಚಾಲುಕ್ಯ,ಹೊಯ್ಸಳ,ಕಲಚೂರ್ಯ ಕೆಳದಿ,ಮೈಸೂರ ಹೊಗಳುವ //೪// ಚೆನ್ನಮ್ಮ,ರಾಯಣ್ಣ ಹೊತ್ತಿಸಿದ ಸ್ವತಂತ್ರ್ಯಹೋರಾಟ ಕಿಡಿಯು ಡೆಪ್ಯೂಟಿ,ದೇಶಪಾಂಡೆ,ಆಲೂರರ ಏಕೀಕರಣ ಕಹಳೆಯು //೫// ಹಸಿರನುಟ್ಟ ಘಟ್ಟ ಬೆಟ್ಟ ಬಯಲು,ಮಲೆಯನಾಡು ಆನೆ,ಜಿಂಕೆ,ಚಿರತೆ,ಹುಲಿ ಪಕ್ಷಿ ಮೆರೆವ ಕಾಡು //೬// ಭಿನ್ನ-ವಿಭಿನ್ನ ಭೂಪ್ರದೇಶ ಕನ್ನಡನಾಡೇ ಚೆಂದವು ಚೆನ್ನ ಭಿನ್ನ ಆಡುಭಾಷೆ ನಮ್ಮ ಬೆಸೆವ ಬಂಧವು ! //೭// ಬನ್ನಿರೆಲ್ಲಾ ಸೇರಿ ನಾವು ತಾಯ ಅಡಿಗೆ ನಮಿಸುವಾ ಕನ್ನಡದ ಕಸ್ತೂರಿ ಕಂಪು ದಶ ದಿಕ್ಕಿಗೆ ಹರಡುವಾ //೮// # ಚಂದ್ರೇಗೌಡನಾರಮ್ನಳ್ಳಿ , 8722199344 . -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.