ಕಟುಸತ್ಯ ಮೇಡಂ On Jan 5, 2018 10:28 AM, "Sameera samee" <mehak.sa...@gmail.com> wrote:
> ಆಕೆ ಆಗ ತಾನೇ ಕಾನ್ವೆಂಟ್ ಹೈ ಸ್ಕೂಲಿಗೆ ಹೊರಟಿದ್ದ ತನ್ನ ಮಗಳ ಊಟದ ಡಬ್ಬಿಗೆ ಮೂರು > ಬ್ರೆಡ್ ತುಂಡುಗಳ ಜೊತೆಗೆ ಒಂದು ಜಾಮ್ ಪ್ಯಾಕೆಟ್ ಹಾಕಿ ಡಬ್ಬಿಯ ಮುಚ್ಚಳ ಬಿಗಿಯಾಗಿದೆಯೇ > ಎಂದು ಒಮ್ಮೆ ಎಳೆದು ನೋಡಿ ಅದನ್ನು ಆಕೆಯ ಸ್ಕೂಲ್ ಬ್ಯಾಗ್ ಒಳಗಿಟ್ಟು ತನ್ನ ಗಂಡನಿಗೆ > ತಿನ್ನಲು ದೋಸೆ ಮಾಡಲು ಅಡುಗೆ ಮನೆ ಕಡೆಗೆ ಮುಖ ಮಾಡಿದಳು. > > ಸೋಫಾ ಮೇಲೆ ಕುಳಿತು ಪೇಪರ್ ಓದುತ್ತಿದ್ದ ಯಜಮಾನರು ಗೂಢಾಚಾರಿಕೆಯ ಆರೋಪ ಹೊತ್ತು > ಪಾಕೀಸ್ತಾನದ ಜೈಲಿನಲ್ಲಿ ಕೊಳೆಯುತ್ತಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಅವರ > ಪತ್ನಿ ಅಲ್ಲಿಗೆ ಹೋಗಿದ್ದಾಗ ಅವರು ತೊಟ್ಟಿದ್ದ ಬಟ್ಟೆಯನ್ನು ಬದಲಾಯಿಸುವಂತೆ ಮಾಡಿದ > ಬಗ್ಗೆ,ಆಕೆ ತೊಟ್ಟಿದ್ದ ಷೂ ಬಿಚ್ಚಿಸಿದ ಬಗ್ಗೆ,ಆಕೆ ತೊಟ್ಟಿದ್ದ ಬಳೆಗಳನ್ನು ತೆಗೆಸಿದ > ಬಗ್ಗೆ,ಆಕೆ ಅಲ್ಲಿ ತನ್ನ ಮಾತೃ ಭಾಷೆಯಲ್ಲಿ ಮಾತಾಡಲು ಆಕ್ಷೇಪವೆತ್ತಿದ ಬಗ್ಗೆ,ಆಕೆಯ ಹಣೆಯ > ಮೇಲಿನ ಕುಂಕುಮವನ್ನು ಅಳಿಸುವಂತೆ ಒತ್ತಾಯಿಸಿದ ಬಗ್ಗೆ,ಕೊನೆಗೆ ಆಕೆ ತೊಟ್ಟಿದ್ದ ತಾಳಿಯನ್ನೂ > ಕೂಡಾ ಬಿಚ್ಚಿಸಿದ ಬಗ್ಗೆ ಓದುತ್ತಾ ಓದುತ್ತಾ ಬೆಳ್ಳಂಬೆಳಿಗ್ಗೆಯೇ ಆಕ್ರೋಶದಿಂದ > ಕುದಿಯತೊಡಗಿದರು.ಅವರ ಕೈ ಕಾಲುಗಳು ಸಣ್ಣಗೆ ನಡುಗತೊಡಗಿದವು. ಗಂಟಲು ಉಬ್ಬಿ ಬರತೊಡಗಿತು. > > ಅಲ್ಲೇ ಪಕ್ಕದಲ್ಲಿ ಬಗ್ಗಿ ಷೂ ಕಟ್ಟಿಕೊಳ್ಳುತ್ತಿದ್ದ ಮಗಳನ್ನು ಕರೆದು ಆ ಸುದ್ದಿಯನ್ನು > ತೋರಿಸುತ್ತಾ "ನೋಡಿದೆಯಾ ಮಗಳೇ,ಪಾಕೀಸ್ತಾನ ನಮ್ಮವರ ಮೇಲೆ ಹೇಗೆ ದೌರ್ಜನ್ಯವೆಸಗುತ್ತಿದೆ > ಅಂತ?ಇದರ ವಿರುದ್ಧ ಪ್ರತಿಯೊಬ್ಬ ದೇಶಭಕ್ತನೂ ಸಿಡಿದೇಳಬೇಕು.ಪಾಕೀಸ್ತಾನದ ವಸ್ತುಗಳನ್ನು > ಇನ್ನುಮುಂದೆ ಬಹಿಷ್ಕರಿಸಬೇಕು.ಅದರ ಜೊತೆ ಎಲ್ಲಾ ಸಂಬಂಧಗಳನ್ನೂ ಕಡಿದುಕೊಳ್ಳುವಂತೆ ನಮ್ಮ > ವಿದೇಶಾಂಗ ಸಚಿವರಿಗೆ ಟ್ವೀಟ್ ಮಾಡಬೇಕು, ಪಾಕೀಸ್ತಾನಕ್ಕೆ ಸರಿಯಾಗಿ ಬುದ್ದಿ > ಕಲಿಸಬೇಕು....". ಹೀಗೆ ಇನ್ನೂ ಏನೇನೋ ಹೇಳುತ್ತಲೇ ಹೋದರು.ಅವರ ಆಕ್ರೋಶವಿನ್ನೂ > ಕಡಿಮೆಯಾಗಿರಲಿಲ್ಲ. > > ಮಗಳು ತನ್ನ ಬೆಲ್ಟ್ ಸರಿ ಮಾಡಿಕೊಳ್ಳುತ್ತಲೇ "ಅವರ ದೇಶದಲ್ಲಿ ಅವರು ಏನು ಬೇಕಾದರೂ > ಮಾಡಿಕೊಳ್ತಾರೆ,ನಮಗ್ಯಾಕೆ?" ಅಂತ ಯಾವ ಭಾವನೆಯೂ ಇಲ್ಲದವರಂತೆ ತಣ್ಣಗೆ ಉಸುರಿ ಆ ಕಡೆಗೆ > ತಿರುಗಿದಳು. > > ಇಂಥಾ ಘನಘೋರ ವಿಷಯ ಕೇಳಿದ ನಂತರವೂ ಮಗಳು ಅಷ್ಟೊಂದು ತಣ್ಣಗೆ ಮಾತಾಡಿದ್ದು ಕಂಡು > ಯಜಮಾನರಿಗೆ ಗಾಬರಿಯಾಯಿತು."ಇದೇನು ಹೀಗೆ ಹೇಳ್ತಿದ್ದೀಯಾ ಮಗಳೇ,ಅವರು ಮಾಡಿದ್ದು ಅದೆಂಥಾ > ಅನ್ಯಾಯ ಗೊತ್ತಿದೆಯಾ,ಕುಂಕುಮವನ್ನೇ ಅಳಿಸಿದ್ದಾರೆ ಅಂದ್ರೆ ಅದೇನು ಸಾಮಾನ್ಯ ವಿಷಯವೇನೇ..." > ಎನ್ನುತ್ತಾ ತನ್ನ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ಮನಸ್ಸಿನಲ್ಲಿಯೇ ಅಂಗಲಾಚತೊಡಗಿದರು. > > ಮಗಳು ಮತ್ತೆ ಅಷ್ಟೇ ತಣ್ಣಗೆ ಉತ್ತರಿಸತೊಡಗಿದಳು: > > ಇಲ್ಲಿ ನಮ್ಮದೇ ರಾಜ್ಯದಲ್ಲಿ ನಾವೇ ಆಯ್ಕೆ ಮಾಡಿದ ಸರ್ಕಾರದ ಅನುಮತಿಯೊಂದಿಗೇ > ನಡೆಯುತ್ತಿರುವ,ನೀನೇ ಲಕ್ಷಾಂತರ ಹಣ ಸುರಿದು ನನ್ನನ್ನು ಸೇರಿಸಿದ ಕಾನ್ವೆಂಟ್ > ಸ್ಕೂಲಿನಲ್ಲಿಯೇ ನನ್ನ ಉದ್ದ ಲಂಗ ಬಿಚ್ಚಿಸಿ ಮೊಣಕಾಲಿನ ಮೇಲೆ ಧರಿಸುವ ಲಂಗ ಹಾಕುವಂತೆ > ಖಡ್ಡಾಯ ಮಾಡಿದಾಗ,ಹಣೆಗೆ ಸಿಂಧೂರವಿಡದಂತೆ ನಿಯಮ ಮಾಡಿದಾಗ,ಯೂನಿಫಾರ್ಮ್ ಹೆಸರಿನಲ್ಲಿ ಅವರು > ಹೇಳುವ ರೀತಿಯ ಷೂ ಗಳನ್ನೇ ಧರಿಸುವಂತೆ ಒತ್ತಾಯಿಸಿದಾಗ,ಹೂ ಮುಡಿದು ಬರದಂತೆ ರೂಲ್ಸ್ > ಮಾಡಿದಾಗ,ಸ್ಕೂಲ್ ಒಳಗೆ ಕನ್ನಡ ಮಾತಾಡಿದ್ದಕ್ಕಾಗಿ ಫೈನ್ ಹಾಕಿದಾಗ ಬಾರದ ಆಕ್ರೋಶ ನಿನಗೆ ಈಗ > ಹೇಗೆ ಬಂತು? ಸ್ವತಃ ಈ ದೇಶದ ಮಹಾತ್ಮರೇ ಧರ್ಮದ ಆಧಾರದ ಮೇಲೆ ನಮ್ಮ ದೇಶವನ್ನು ತುಂಡು ಮಾಡಿ > ಸೃಷ್ಟಿ ಮಾಡಿಕೊಟ್ಟ ಅಂತಹಾ ಧರ್ಮಾಂಧ ದೇಶದಿಂದ ಧಾರ್ಮಿಕ ಸ್ವಾತಂತ್ರ್ಯ ಬಯಸುವ ನಿನಗೆ > ನಿನ್ನ ಊರಿನಲ್ಲೇ ನಿನ್ನ ಸ್ವಂತ ಮಗಳ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡಿದ್ದು ಏಕೆ > ಗೊತ್ತಾಗಲಿಲ್ಲ? " ಎಂದು ಕೇಳಿದವಳೇ ವ್ಯಾನ್ ಬಂತು ಎನ್ನುತ್ತಾ ಗಡಿಬಿಡಿಯಿಂದ ಹೊರಗೆ > ಹೆಜ್ಜೆ ಹಾಕಿ ಹೊರಟೇ ಬಿಟ್ಟಳು. > > ಯಜಮಾನರಿಗೆ ತಮ್ಮ ಮುಖದ ಮೇಲೆ 180 ಕಿ.ಮೀ.ವೇಗದಲ್ಲಿ ರಪ್ ಅಂತ ಭಾರಿಸಿದ > ಅನುಭವವಾಯಿತು.ಏಕೆಂದರೆ ಅವರ ಮಗಳು ಹೇಳಿದ್ದರಲ್ಲೂ ಸತ್ಯವಿತ್ತು. > > "ಏಯ್,ಮಗಳೇ..ನಿಲ್ಲು ನಿಲ್ಲು. ಇವತ್ತು ನಾನೇ ನಿನ್ನನ್ನ ಸ್ಕೂಲ್ ಗೆ ಡ್ರಾಪ್ > ಮಾಡ್ತೀನಿ.ನಿಮ್ಮ ಪ್ರಿನ್ಸಿ ಹತ್ರ ನನಗೆ ಸ್ವಲ್ಪ ಮಾತಾಡೋದಿದೆ" ಎನ್ನುತ್ತಾ ಯಜಮಾನರೂ ಮಗಳ > ಹಿಂದೆ ಓಡಿದರು. > > ಚಿತ್ರಕೃಪೆ:The Telegraph,livemint.com. > ಕೃಪೆ: Praveen kumar mavinakadu > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.