ಅರ್ಥಪೂರ್ಣ ವಿವರಣೆ ಧನ್ಯವಾದಗಳು ಸರ್
6 ಫೆಬ್ರು., 2018 ಮಂ. 10:09 ದಿನಾಂಕದಂದು Sameera samee <mehak.sa...@gmail.com> ಅವರು ಬರೆದಿದ್ದಾರೆ: > ಕಾರಕಾರ್ಥಗಳನ್ನು ಸುಲಭವಾಗಿ ಅರ್ಥೈಸುವ ಒಂದು ಯತ್ನ : ದಯವಿಟ್ಟು ಒಂದ್ಸಲ ಓದಿ. > ************************* > ಕಾರಕಗಳು: > ^^^^^^^^^^^ > ನಾಮ ವಿಭಕ್ತಿಗಳನ್ನು ಹೊಂದಿದ ಪದಗಳು ಕಾರಕಗಳು. > > ಕಾರಕಾರ್ಥ:-ನಾಮ ವಿಭಕ್ತಿಯನ್ನು ಹೊಂದಿಯೂ,ಅರ್ಥವನ್ನು ಹೊಂದಿರುವ ಪದಗಳು ಕಾರಕಾರ್ಥಗಳು. > ************************* > ಕರ್ತೃ,ಕರ್ಮ, ಕರಣ, ಸಂಪ್ರದಾನ,ಅಪಾದಾನ,ಸಂಬಂಧ, ಅಧಿಕರಣ ಮತ್ತು ಅಭಿಮುಖೀಕರಣ ಎಂಬ ೮ > ಕಾರಕಾರ್ಥಗಳಿವೆ. > ************************* > ಪ್ರತ್ಯಯ ಎಂದರೇನು? > ಉತ್ತರ:-ವ್ಯಾಕರಣದಲ್ಲಿ ಶಬ್ಧಗಳ ಮುಂದೆ ಸೇರಿ ನಾಮಪದಗಳನ್ನು ಹುಟ್ಟಿಸುವ ಅಕ್ಷರಗಳು. > > ಅಥವಾ > ********* > ನಾಮಪ್ರಕೃತಿಗಳ ಮುಂದೆ ಸೇರಿ ನಾಮಪದವಾಗುವಲ್ಲಿ ಸಹಾಯಕವಾಗುವ ಅಕ್ಷರ (ಪ್ರತ್ಯಯ)ಗಳೇ > ಪ್ರತ್ಯಯಗಳು > > ವಿಭಕ್ತಿ :-ವಿಭಾಗ,ಪಾಲು,ಭಾಗಾಕಾರ,ಹಂಚಿಕೆ, ನಾಮ ಮತ್ತು ಧಾತುಗಳ ಮುಂದೆ ಬರುವ ಪದಸಂಬಂಧ > ಪ್ರತ್ಯಯ. > ************************* > > ಪ್ರತ್ಯಯಗಳು:-ಉ, ಅನ್ನು, ಇಂದ, ಗೆ (ಕ್ಕೆ ಕೆ ),ದೆಸೆಯಿಂದ, ಅ , ಅಲ್ಲಿ (ಅಲಿ,ಎ > ,ಒಳು),ಆ ,ಏ,ಇರಾ,ಈ > (ಹಳಗನ್ನಡದಲ್ಲಿ ಬೇರೆ ಇವೆ) > ^^^^^^^^^^^^^^^^^^^^^^^^^^ > ಕರ್ತೃ, ಕರ್ಮ, ಕರಣ, ಸಂಪ್ರದಾನ,ಅಪಾದಾನ,ಅಧಿಕರಣಾಧಿ > ಕಾರಕಾರ್ಥಗಳನ್ನು ವಿಭಾಗಿಸಿ ಕೊಡುವ ಶಬ್ದರೂಪವನ್ನು ವಿಭಕ್ತಿ ಎನ್ನುವರು. > ************************* > ಈ ಕಾರಕಾರ್ಥಗಳನ್ನು ಈ ಕೆಳಗಿನ ಒಂದು ವಾಕ್ಯವನ್ನು > ಉದಾಹರಣೆ(ಆಧಾರವಾಗಿಟ್ಟುಕೊಂಡು)ಯಾಗಿಟ್ಟುಕೊಂಡು ಮಕ್ಕಳಿಗೆ ಸುಲಭವಾಗಿ ಅರ್ಥೈಸಬಹುದು. > ವಾಕ್ಯ:--ರೈತನು, ಅನಿರೀಕ್ಷಿತವಾಗಿ ಆಗಮಿಸಿದ ಶರಣರುಗಳಿಗೆ ,ಮಾಡುವ ಆದರಾತಿಥ್ಯದೆಸೆಯಿಂದ > ,ತನ್ನ ತೋಟದ, ತೆಂಗಿನಮರದಲ್ಲಿರುವ, ಎಳೆನೀರನ್ನು, ಕುಡುಗೋಲಿನಿಂದ ಕೊಯ್ದು,"ಅಣ್ಣಗಳಿರಾ" > ಕುಡಿಯಿರಿ ಎಂದು ಕೊಟ್ಟನು. > ************************* > ವಿವರಣೆ :- ೧]ಪ್ರಥಮಾ ವಿಭಕ್ತಿ --ಉ-- ಕ್ರಿಯೆಯನ್ನು ಮಾಡಿದ ವ್ಯಕ್ತಿ :ಕರ್ತೃ ಅಂದರೆ > 'ರೈತ' ಉ ಪ್ರತ್ಯಯ ಸೇರಿ ರೈತನು ಆಯಿತು ಇದು ಕರ್ತೃವಿನ ಅರ್ಥ ಕೊಡುವುದರಿಂದ > "ಕರ್ತ್ರರ್ಥ"ಕಾರಕವಾಯಿತು.ಕರ್ತೃ ಕಾರಕವನ್ನು ವಿಭಾಗಿಸಿ ಕೊಡುತ್ತದೆ. > ************************* > ೨]ದ್ವಿತೀಯಾ ವಿಭಕ್ತಿ :--'ಅನ್ನು' > ಕ್ರಿಯೆಗೆ ಕಾರಣವಾದ ವಸ್ತು(ಕ್ರಿಯೆಗೆ ತುತ್ತಾದ ವಸ್ತು ಕರ್ಮ)--"ಎಳೆನೀರು" > ರೈತನು ಏನನ್ನು ಕೊಯ್ದನು ಎಂಬ ಪ್ರಶ್ನೆಗೆ ಎಳೆನೀರು+ಅನ್ನು=ಎಳೆನೀರನ್ನು ಎಂಬ ಉತ್ತರ > ಬರುತ್ತದೆ ಇದು ಕರ್ಮಪದವಾಯಿತು. > ಆದ್ದರಿಂದ ಇದು ಕರ್ಮಾರ್ಥಕಾರಕ. > ************************* > ೩]ತೃತೀಯಾ ವಿಭಕ್ತಿ :--"ಇಂದ" > ರೈತನು ಯಾವ ಸಾಧನ ಬಳಸಿ ಎಳನೀರನ್ನು ಕೊಯ್ದನು? > ಈ ಪ್ರಶ್ನೆಗೆ "ಕುಡಗೋಲು"(ಕಡೆಗೋಲಿನಿಂದ )ಎಂಬ ಉತ್ತರ ಬರುತ್ತದೆ. ಇದುವೇ ಸಾಧನಾರ್ಥ > (ಕರಣ=ಉಪಕರಣ, ಕೆಲಸ ಮಾಡಲು ಬೇಕಾಗುವ ಸಾಧನ ಸಾಮಾಗ್ರಿ) ರೈತನು ಕುಡಗೋಲು ಸಾಧನ ಬಳಸಿ > ಕ್ರಿಯೆ ಮಾಡಿದ್ದರಿಂದ ಇದು "ಕರಣಾರ್ಥಕಾರಕ"(ಸಾಧನಾರ್ಥ) > *************************೪]ಚತುರ್ಥೀ ವಿಭಕ್ತಿ :--ಗೆ ಇಗೆ ಕೆ ಅಕ್ಕೆ. > ರೈತನು ಯಾರಿಗೆ ಕೊಡುವುದಕ್ಕಾಗಿ ಎಳನೀರನ್ನು ಕೊಯ್ದನು. > ಖಇದು ಸಂಪ್ರದಾನ ಅರ್ಥ ಕೊಡುತ್ತದೆ ಅಂದರೆ ಕೊಡುವಿಕೆ > ಕೊಡುವ ವಸ್ತು ಯಾರನ್ನು ಸೇರಿತು?ಎಂಬ ಪ್ರಶ್ನೆ ಬಂದಾಗ "ಶರಣರುಗಳಿಗೆ "ಎಂಬ ಉತ್ತರ > ಬರುತ್ತದೆ. ಅಂದರೆ ಇಲ್ಲಿ ಸಂಪ್ರದಾನ (ಕೊಡುವಿಕೆ,ಕೊಡುಗೆ, ಕಾಣಿಕೆ)ಅರ್ಥ ಬರುವುದರಿಂದ ಇದು > ಸಂಪ್ರದಾನ ಕಾರಕ. > ************************* > ೫]ಪಂಚಮೀ ವಿಭಕ್ತಿ :--"ದೆಸೆಯಿಂದ " > ಎಳನೀರು ಯಾವ ಕಾರಣದಿಂದಾಗಿ ಅಪಾದಾನ (ಅಗಲುವಿಕೆ)ವಾಯಿತು)? > ಎಂಬ ಪ್ರಶ್ನೆ ಬಂದಾಗ "ಆದರಾತಿಥ್ಯದೆಸೆಯಿಂದ"(ಶರಣರುಗಳಿಗೆ ಮಾಡುವ ಅತಿಥಿ ಸತ್ಕಾರ > ದೆಸೆಯಿಂದ )ಎಂಬ ಉತ್ತರ ಬರುತ್ತದೆ.ಅಂದರೆ ಇಲ್ಲಿ ಎಳನೀರು ತೆಂಗಿನ ಮರದಿಂದ ಅಗಲಿತು ಎಂಬ > ಅರ್ಥ ಬರುವುದರಿಂದ ಇದು "ಅಪಾದಾನಕಾರಕ". > ************************* > ೬]ಷಷ್ಠೀ ವಿಭಕ್ತಿ :--"ಅ" > ರೈತನು ಯಾರಿಗೆ ಸಂಬಂಧಿಸಿದ ತೋಟದ ತೆಂಗಿನ ಮರದಲ್ಲಿರುವ ಎಳನೀರನ್ನು ಕೊಯ್ದನು ಎಂಬ > ಪ್ರಶ್ನೆ ಬಂದಾಗ , ತನ್ನ (ತಾನು+ಅ=ತನ್ನ) ಅಂದರೆ ತನಗೆ ಸಂಬಂಧಿಸಿದ ತೋಟದ ತೆಂಗಿನ > ಮರದಲ್ಲಿರುವ ಎಳನೀರನ್ನು ಕೊಯ್ದನು ಎಂಬ ಉತ್ತರ ಬರುತ್ತದೆ.ಇಲ್ಲಿ ರೈತ ಮತ್ತು ತೋಟದ ನಡುವೆ > ಸಂಬಂಧವಿದೆ ಆದ್ದರಿಂದ ಇದು ಸಂಬಂಧಕಾರಕ. > ************************* > ೭]ಸಪ್ತಮೀ ವಿಭಕ್ತಿ :--"ಅಲ್ಲಿ" > ತೋಟದಲ್ಲಿ ಎಳನೀರು ಎಲ್ಲಿವೆ? > ಉತ್ತರ :-ತೆಂಗಿನಮರದಲ್ಲಿವೆ. > ಎಳನೀರಿಗೆ ಆಧಾರ ಯಾವುದು? > ಉತ್ತರ :-ತೆಂಗಿನಮರ > ಇದು ಅಧೀಕರಣ (ಆಧಾರ) > ಎಳೆನೀರಿಗೆ ತೆಂಗಿನಮರ ಆಶ್ರಯವಾಗಿದೆ,ಇಲ್ಲಿ ಎಳನೀರು ಅಧೇಯ (ಆಶ್ರಯ ಪಡೆದಿರುವ > ವಸ್ತು,ಹೊಂದಿಕೊಂಡ ವಸ್ತು); > ತೆಂಗಿನಮರ=ಅಧೀಕರಣ (ಆಧಾರ/ಆಶ್ರಯ ಕೊಟ್ಟ ವಸ್ತು) > ಅಂದರೆ ಎಳನೀರಿಗೆ ತೆಂಗಿನ ಮರವೇ ಅಧೀಕರಣ (ಆಧಾರ) > ಆದ್ದರಿಂದ "ತೆಂಗಿನಮರದಲ್ಲಿ"ಅಧೀಕರಣಾರ್ಥಕಾರಕ. > *************************೮]ಸಂಬೋಧನಾ ವಿಭಕ್ತಿ :--ಆ ಏ ಇರಾ > ರೈತನು ಏನೆಂದು ಸಂಬೋಧನೆ ಮಾಡಿದ? > ಉತ್ತರ :-ಅಣ್ಣಗಳಿರಾ > ದೂರದಲ್ಲಿದ್ದವರನ್ನಾಗಲೀ,ಸಮೀಪದಲ್ಲಿದ್ದವರನ್ನಾಗಲೀ,ಕರೆಯುವಾಗ,ಪ್ರಾರ್ಥಿಸುವಾಗ, > [05/02, 10:22 p.m.] Y.M.VEERABHADRAIAH: ಬೇಡಿಕೊಳ್ಳುವಾಗ ಆ ಏ ಈ ಇರಾ ಎಂಬ > ಪ್ರತ್ಯಯಗಳನ್ನು ಬಳಸುತ್ತಾರೆ. > ಇಲ್ಲಿ ರೈತನು ಶರಣರುಗಳಿಗೆ ಅತ್ಯಂತ ಗೌರವದಿಂದ "ಅಣ್ಣಗಳಿರಾ "ಎಂದು > ಸಂಬೋಧಿಸಿದನು(ಕರೆಯುವಿಕೆ). > ಅಣ್ಣಗಳಿರಾ ಎಳನೀರನ್ನು ಕುಡಿಯಿರಿ ಎಂದು ಮರ್ಯಾದೆಯಿಂದ ಕರೆದನು ಆದ್ದರಿಂದ ಇದು > ಅಭೀಮುಖೀಕರಣ/ಕರೆಯುವಿಕೆ ಕಾರಕಾರ್ಥ. > ಪ್ರಯತ್ನ:- > ಇಂದ:ವೈ.ಎಂ.ವೀರಭದ್ರಯ್ಯ > ಕನ್ನಡ ಭಾಷಾ ಶಿಕ್ಷಕರು > ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌ.ಶಾ.ವಿ ) ಚನ್ನಗಿರಿ, ಚನ್ನಗಿರಿ ತಾಲ್ಲೂಕು, > ದಾವಣಗೆರೆ ಜಿಲ್ಲೆ. > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.