vivarana chennagide.danyavadagalu

2016-01-18 13:54 GMT+05:30 paramanand galagali <
paramanandgalaga...@gmail.com>:

> danyavad
>
>
> On 1/18/16, shankar Chawoor <bhimashankarchaw...@gmail.com> wrote:
> > ಹೊಸ ಹೆಜ್ಜೆ
> > ಪರಿಶುದ್ಧತೆ, ತಾಳ್ಮೆ , ಸತತ ಪ್ರಯತ್ನ ಇವುಗಳನ್ನು ಹೊಂದಿರುವವರಿಗೆ ಯಾವುದೂ
> ಅಸಾಧ್ಯವಲ್ಲ
> >
> > ಜನಪದ ಒಗಟುಗಳು
> > ೧. “ ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ
> > ಮೈಯೊಳಗೆ ನವಗಾಯ ಒಂಬತ್ತು ತುಂಡ
> > ಒಯನೊಯ್ಯನೇ ಬಂದು ಹೆಗಲೇರಿಕೊಂಡ
> > ರಾಯರಾಯರಿಗೆಲ್ಲ ತಾನೇ ಪ್ರಚಂಡ ಉತ್ತರ: ಅಂಗಿ
> > ಮೊದಲನೆಯ ಒಗಟಿನ ಉತ್ತರ ಅಂಗಿ. ಅಂಗಿಯ ತೋಳುಗಳ ಭಾಗವನ್ನು ಕೈ ಎಂದಿದ್ದಾರೆ.ಅಂಗಿಯನ್ನು
> > ಕಾಲಿನ ಭಾಗಕ್ಕೆ ಹಾಗೂ ತಲೆಯ ಭಾಗಕ್ಕೆ ತೊಡುವುದಿಲ್ಲವಾದ್ದರಿಂದ "ಕಾಲಿಲ್ಲ" ಶಿರಹರಿದ"
> > ಪದವನ್ನು ಬಳಸಿದ್ದಾರೆ.ಬಟ್ಟೆಯ ಬೇರೆ ಬೇರೆ ಭಾಗ ಸೇರಿಸಿ ಹೊಲಿಗೆ ಹಾಕುವದನ್ನೇ 'ನವ ಗಾಯ
> '
> > ಎಂದಿದ್ದಾರೆ, .ಹಾಗೆಯೇ ರಾಜಮಹಾರಾಜರಿಗೆಲ್ಲರಿಗೂ ಉಡುಗೆಯಾಗಿರುವ ಅಂಗಿ ಪ್ರಚಂಡವಾಗಿದೆ.
> >
> > ೨. “ಅಂಗೈ ಕೊಟ್ಟರೆ ಮುಂಗೈಯ ನುಂಗುವುದು
> > ಸಿಂಗಳುಕನಲ್ಲ ಶಿವಬಲ್ಲ ಬೆಡಗೀನ
> > ಜಾಣೆ ಕನ್ನಡವ ತಿಳಿದ್ಹೇಳೆ" ಉತ್ತರ: ಕುಪ್ಪಸ
> > ಕುಪ್ಪಸವು ಅಂಗೈಯನ್ನು ತೂರಿಸಿಕೊಂಡು ಮುಂಗೈ ಮೂಲಕ ಶರೀರದಲ್ಲಿ ಕೂರುತ್ತದೆ. ಆದ್ದರಿಂದ
> ಇದು
> > ಸಿಂಗಳೀಕನಾಗದೆ ಕುಪ್ಪಸವಾಗಿದೆ.
> >
> > ೩. “ನೀರಲ್ಲೆ ಹುಟ್ಟೋದು ನೀರಲ್ಲೆ ಬೆಳಿಯೋದು
> > ನೀರು ತಾಕಿದರೆ ಮಟಮಾಯ ಕನ್ನಡದ
> > ಬೆಡಗೀನ ಜಾಣೆ ತಿಳಿದ್ಹೇಳೆ" ಉತ್ತರ: ಉಪ್ಪು
> > ಉಪ್ಪನ್ನು ನೀರಿನಿಂದಲೇ ತಯಾರಿಸುತ್ತಾರೆ.ನೀರಿನಲ್ಲಿ ಹುಟ್ಟಿದ ಉಪ್ಪು,ನೀರಲ್ಲಿ ಕರಗಿ
> > ಹೋಗುತ್ತದೆ.ಆದ್ದರಿಂದ ಈ ಒಗಟಿನ ಉತ್ತರ ಉಪ್ಪು.
> >
> > ೪. “ಹಿತ್ಲಲ್ಲಿ ಹುಟ್ಟೋದು ಹೊತ್ತು ನೀರ ಹುಯ್ಯೋದು
> > ಅದು ಒಂದು ಗಿಡದ ಪರಿಕಾರ – ಎಲೆಬಾಲೆ
> > ಬಾಲೆ ನಮ್ಮರ್ಥ ಒಡೆದ್ಹೇಳೆ " ಉತ್ತರ : ಹಿತ್ಲವರೆ
> > ಅವರೆಯನ್ನು ಹಿತ್ತಲಿನಲ್ಲಿ ಬೆಳೆಸುತ್ತಾರೆ.ಹೊತ್ತು ಹೊತ್ತಿಗೆ ಇದಕ್ಕೆ ನೀರು ಹಾಕಿ
> > ಬೆಳೆಸುತ್ತಿದ್ದರು.ಆದ್ದರಿಂದ ಈ ಒಗಟಿನ ಉತ್ತರ ಹಿತ್ಲವರೆ.(ಇಲ್ಲಿ ಹೊತ್ತು ನೇರ
> ಹುಯ್ಯೋದು
> > ಎಂಬುದನ್ನು ನೀರನ್ನು ಹೊತ್ಕೊಂಡು ಹಾಕುತ್ತಾರೆ ಎಂದೂ ಅರ್ಥೈಸಬಹುದು)ಪರಿಕಾರ= ಪ್ರಕಾರ
> >
> > ೫. “ ಕೆಸರಲ್ಲಿ ಹುಟ್ಟೋದು ಕೆಸರಲ್ಲಿ ಬೆಳೆಯೋದು
> > ಅದು ಒಂದು ಗಿಡದ ಪರಿಕಾರ - ಎಲೆಬಾಲೆ
> > ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ತಾವರೆ ಬೇರು
> > ತಾವರೆಯು ಕೆಸರಿನಲ್ಲಿ ಹುಟ್ಟಿ ,ಕೆಸರಿನಲ್ಲಿ ಬೆಳೆಯುತ್ತದೆ. ಆದ್ದರಿಂದ ಈ ಒಗಟಿನ ಉತ್ತರ
> > ತಾವರೆ ಬೇರು.
> >
> > ೬. “ಬದಿಯಲ್ಲಿ ಹುಟ್ಟೋದು ಬದಿಯಲ್ಲಿ ಬೆಳೆಯೋದು
> > ಹೋಗೋರ ಮುಂಜೆರಗ ಹಿಡಿಯೋದು -ಎಲೆಬಾಲೆ
> > ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ಉತ್ತರಾಣಿ ಗಿಡ
> > ಉತ್ತರಾಣಿ ಗಿಡವು ದಾರಿಯ ಬದಿಯಲ್ಲಿ ಹುಟ್ಟುತ್ತದೆ.ಹಾದಿ ಬದಿಯಲ್ಲಿ ಹುಟ್ಟುವ ಇದು
> > ನಡೆದಾಡುವ ಹೆಂಗಸರ ಸೆರಗನ್ನು ಹಿಡಿಯುತ್ತದೆ.ಆದ್ದರಿಂದ ಈ ಒಗಟಿಗೆ ಉತ್ತರ ಉತ್ತರಾಣಿ
> ಗಿಡ.
> >
> > ೭. “ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು
> > ಉಳುವಾನ ಕಂಡು ನಗುವುದು - ಎಲೆಬಾಲೆ
> > ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ಗರಿಕೆ ಹುಲ್ಲು
> > ಹೊಲದ ಬದುಗಳಲ್ಲಿ ಹುಟ್ಟಿ ಬೆಳೆಯುವ ಗರಿಕೆ ಹುಲ್ಲು ರೈತರಿಗೆ ಹಲವು ಬಗೆಗಳಲ್ಲಿ
> > ಉಪಯುಕ್ತವಾದುದು. ಅದ್ದರಿಂದ ಈ ಒಗಟಿನ ಉತ್ತರ ಗರಿಕೆ ಹುಲ್ಲು.
> >
> > ೮. “ಕಲ್ಲಲ್ ಕುಕ್ಕೂದಲ್ಲ ನೀರಲ್ ಸೆಳೆವುದಲ್ಲ
> > ಎಲ್ಲೆಲ್ಲೂ ಕಂಡ್ರೂ ಮಡಿವಸ್ತ್ರ - ಅಂಬಲ್ ಹಾಡು
> > ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಕೊಕ್ನ್ಹಕ್ಕಿ (ಕೊಕ್ಕನ್ ಹಕ್ಕಿ)
> > ಈ ಒಗಟಿನಲ್ಲಿ ಬಟ್ಟೆ ಒಗೆಯುವ ಪ್ರಕ್ರಿಯೆಯನ್ನು ಹೇಳುತ್ತಿದ್ದಾರೆ .ಬಟ್ಟೆಯನ್ನು
> > ಶುಭ್ರಗೊಳಿಸಲು ನಾವು ಕಲ್ಲಿನಲ್ಲಿ ಕುಕ್ಕುತ್ತೇವೆ. ಅನಂತರ ನೀರಿನಲ್ಲಿ ಸೆಳೆಯುತ್ತೇವೆ.
> > ಆದರೆ ಕೊಕ್ಕರೆ ಕಲ್ಲಲ್ಲಿ ಕುಕ್ಕದೆ,ನೀರಿನಲ್ಲಿ ಸೆಳೆಯದೆ ಮಡಿವಸ್ತ್ರದಂತೆ ಶುಭ್ರವಾಗಿ
> > ಕಾಣುತ್ತದೆ.ಕೊಕ್ಕರೆಯು ಹಿಂಡು ಹಿಂಡಾಗಿಯೇ ಇರುವುದರಿಂದ 'ಎಲ್ಲೆಲ್ಲೂ ಕಂಡ್ರೂ' ಪದವನ್ನು
> > ಬಳಸಿದ್ದಾರೆ.
> > ಕರಾವಳಿಯ ಕುಂದಾಪುರ ಭಾಗಗಳಲ್ಲಿ ಕೊಕ್ಕರೆಗೆ ಕೊಕ್ಹ್ನಕ್ಕಿ (ಕೊಕ್ಕನ್ ಹಕ್ಕಿ)ಎಂದೇ
> > ಕರೆಯುತ್ತಾರೆ.
> >
> > ೯. “ತಂದೀ ಮದಿಗ್ಹೋಪ್ದಲ್ಲ ತಾಯ್ಮನಿಗೆ ಹೋಪ್ದಲ್ಲ
> > ಮುಂದದು ಧಾರಿ ಮೂರುತಕ - ಅಂಬಲ್ ಹಾಡು
> > ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಸಂಪಿಗೆ ಹೂವು
> > ಸಂಪಿಗೆ ಎಂದರೆ ಇಲ್ಲಿ "ನಾಗ ಸಂಪಿಗೆ "ಎಂದು ಅರ್ಥೈಸಿಕೊಳ್ಳಬೇಕು. ಈ ನಾಗ ಸಂಪಿಗೆಯನ್ನು
> > ಶುಭಕಾರ್ಯಗಳಿಗೆ ಬಳಸುವುದಿಲ್ಲ. ಏಕೆಂದರೆ ಈ ಹೂವಿನ ಮಧ್ಯದಲ್ಲಿ ಹಾವಿನ ಹೆಡೆಯ ಆಕಾರದ
> ಎಸಳು
> > ಇರುತ್ತದೆ. ಆದ್ದರಿಂದ ಇದನ್ನು ತಂದೆ, ಮದುವೆಗೆ ಒಯ್ಯುವದಿಲ್ಲ &ತಾಯಿ ಮನೆಗೆ
> ಒಯ್ಯುವದಿಲ್ಲ
> > ಅಥವಾ ತಾಯಿ ಮನೆಗೆ ಆ ಹೂವನ್ನು ತೆಗೆದುಕೊಂಡು ಬರಲು ಒಪ್ಪುವುದಿಲ್ಲ .ಮುಂದದು ಧಾರಿ
> ಮೂರುತಕ
> > ಅಂದರೆ ಮೋಕ್ಷವನ್ನು ಪಡೆಯುವ ಶುಭ ಮಾರ್ಗಎಂದು ಅರ್ಥ. ಈ ಹೂವನ್ನು ಮೋಕ್ಷ ಮಾರ್ಗದಾತನಾದ
> > ಶಿವನ ಪೂಜೆಗೆ ಮಾತ್ರ ಬಳಸುವರು .(ಕೃಪೆ: ಕನ್ನಡ ಎಸ್.ಟಿ.ಎಫ್)
> >
> > ೧೦. “ದರಿಯ ಮ್ಯಾಲ್ ಹುಟ್ಟುವುದು ದೊರಿಯಾಗಿ ಬೆಳೆವುದು
> > ಅರಮನೆಗುತ್ತರವ ಕೊಡುವುದು - ಅಂಬಲ್ ಹಾಡು
> > ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಹನಿಮರ (ತಾಳೆ ಮರ)
> > ತಾಳೆ ಮರವು ಸಾಮಾನ್ಯವಾಗಿ ಬೇಲಿ ಮೇಲೆ ಹುಟ್ಟುತ್ತದೆ .ನೇರವಾಗಿ(ತಲೆಎತ್ತಿ)ಎತ್ತರವಾಗಿ
> > ಬೆಳೆಯುವುದರಿಂದ ದೊರೆಯಂತೆ ಬೆಳೆಯುವುದು ಎಂದಿದ್ದಾರೆ.ತಾಳೆ ಮರದ ಗರಿಯನ್ನು
> ಅರಮನೆಗಳಲ್ಲಿ
> > ಪತ್ರವ್ಯವಹಾರಕ್ಕೆ ಬಳಸುತ್ತಾರೆ(ತಾಳೆಗರಿ).ಈ ಒಗಟಿನಲ್ಲಿ ದರಿ ಎಂದರೆ ಮಣ್ಣಿನಿಂದ
> > ನಿರ್ಮಿಸಿದ ಬೇಲಿ(ಕಾಪೌಂಡ್ ರೀತಿಯ ರಚನೆ) ಎಂದು ಅರ್ಥ.ಕುಂದಾಪುರ ಕನ್ನಡದಲ್ಲಿ ಬೇಲಿಗೆ
> ದರೆ
> > ಎಂದು ಕರೆಯುವುದು ರೂಢಿ. (ಉಚ್ಛಾರಣೆ-ಧರೆ>ದರೆ>ದರಿ)
> >
> > ೧೧. ಹಸಿಹಸಿಯ ಬೀಳೆ ಮಸಿಯ ಬಣ್ಣದ ಬೀಳೆ
> > ಬಿಸಿನೀರ ಹಾಕಿ ಸಲಗುವಿ - ಅಂಬಲ್ ಹಾಡು
> > ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ತಲೆಕೂದಲು
> > ತಲೆಕೂದಲು ಹಸಿಹಸಿಯಾಗಿರುವ(ಜೀವಂತವಾಗಿರುವ, ಕೂದಲು ಬೆಳೆಯುತ್ತಿರುವುದರಿಂದ)
> > ಕಪ್ಪು(ಮಸಿ)ಬಣ್ಣದ ಬಳ್ಳಿಯಂತಿರುತ್ತದೆ.ತಲೆಕೂದಲನ್ನು ಬಿಸಿನೀರು ಹಾಕಿ
> > ಸಲಹುತ್ತೇವೆ.(ಪೋಷಿಸುತ್ತೇವೆ) ಆದ್ದರಿಂದ ಈ ಒಗಟಿನ ಉತ್ತರ ತಲೆಕೂದಲು (ಬೀಳು=ಬಳ್ಳಿ
> ,ಲತೆ
> > )
> >
> > ೧೨. “ಬಗಲಲ್ಲಿ ಕುಕ್ಕುವುದು ಬಾಯಲ್ಲಿ ತಿಂಬೂದು
> > ನಂಗ್ಹೇಳಿ ಅರ್ತು ಈ ಹಾಡಿನ - ಹೇಳ್ದಿರೆ
> > ಕೈಗೆ ಹಲ್ ಮುರ್ದು ಕೊಡುವೆನು ಉತ್ತರ : ಬೀಸುಕಲ್ಲು
> > ಬೀಸುಕಲ್ಲಿನಲ್ಲಿ ಕಾಳುಗಳನ್ನು ನೆತ್ತಿಯ ಮ
> > On 13-Jan-2016 1:16 pm, "Mamata Bhagwat1" <mamatabhagw...@gmail.com>
> wrote:
> >
> >> Facebook ನಲ್ಲಿ ಕನ್ನಡ ಸಂಪದ ತಾಣದಿಂದ ಹಂಚಿಕೆಯಾದ ಶ್ರೀನಿವಾಸ ಹಾವನೂರ್ ಕುರಿತಾದ
> >> ಮಾಹಿತಿ.
> >>
> >> ಕನ್ನಡದ ಪ್ರಸಿದ್ಧ ವಿದ್ವಾಂಸ ಮತ್ತು ಸಂಶೋಧಕರಾದ ದಿವಂಗತ ಶ್ರೀನಿವಾಸ ಹಾವನೂರ್ ಅವರು
> >> ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ 1929ರ ಜನವರಿ 12ರಂದು ಜನಿಸಿದರು.
> >>
> >> ಹಾವೇರಿ, ಧಾರವಾಡ, ಸಾಂಗ್ಲಿಯಲ್ಲಿ ಶಿಕ್ಷಣ ಮುಗಿಸಿ ಕೆಲವು ಕಾಲ ಮಾರಾಟ ತೆರಿಗೆ ವಿಭಾಗದ
> >> ಅಧಿಕಾರಿಗಳಾಗಿದ್ದ ಶ್ರೀನಿವಾಸ ಹಾವನೂರರು ನಂತರ ಮುಂಬೈನ ಬಾಬಾ ಆಟೋಮಿಕ್ ರಿಸರ್ಚ್
> >> ಸೆಂಟರ್
> >> ನಲ್ಲಿ ಗ್ರಂಥಪಾಲಕರಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದರು.  ಕನ್ನಡ ಎಂ. ಎ ಮತ್ತು
> >> ಪಿ.ಎಚ್.ಡಿ ಪಡೆದ ಅವರು ಕೆಲವು  ವರ್ಷಗಳ ಕಾಲ  ಮುಂಬೈ ವಿಶ್ವ ವಿದ್ಯಾಲಯದ ಕನ್ನಡ
> ವಿಭಾಗದ
> >> ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.  ನಂತರದ ಮೂರು ವರ್ಷಗಳಲ್ಲಿ  ಮಂಗಳೂರಿನ ಬಾಸಿಲ್
> >> ಮಿಷನ್ನಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನಲ್ಲಿ  ಕನ್ನಡ ನಿಘಂಟನ್ನು ಕನ್ನಡಕ್ಕೆ
> >> ಸಂಪಾದಿಸಿ ಕೊಟ್ಟ ರೆವರಂಡ್ ಕಿಟ್ಟೆಲ್ ಮುಂತಾದ ಮಹನೀಯರ ಕುರಿತು ವ್ಯಾಪಕ ಸಂಶೋಧನೆ
> >> ನಡೆಸಿದರು,  ನಿವೃತ್ತಿಯ ನಂತರ ತಮ್ಮನ್ನು ಸಂಶೋಧನಾ ಬರವಣಿಗೆಗಳಲ್ಲಿ ತೊಡಗಿಸಿಕೊಂಡರು.
> >>
> >> ಕನ್ನಡ ಸಾಹಿತ್ಯ ಚರಿತ್ರೆಯ ಅರುಣೋದಯ ಕಾಲಘಟ್ಟವನ್ನು ಹೊಸ ದೃಷ್ಟಿಕೋನದಿಂದ
> >> ನೋಡುವುದಕ್ಕೆ,
> >> ಆಮೂಲಾಗ್ರವಾಗಿ ಸಂಶೋಧಿಸಿ ಅಗತ್ಯವಾದ ಆಧಾರಗಳನ್ನು ಒದಗಿಸುವುದಕ್ಕೆ ಮತ್ತು ಹೆಚ್ಚಿನ
> >> ಆಧಾರಗಳು ಬೇಕೆನಿಸಿದಾಗ ಅವುಗಳ ಬೆನ್ನುಹತ್ತಿ ದೇಶ ವಿದೇಶಗಳಿಗೆ ಸಂಚರಿಸುವುದಕ್ಕೆ ಡಾ.
> >> ಶ್ರೀನಿವಾಸ ಹಾವನೂರರಿಗೆ ಸಾಧ್ಯವಾದುದು ಅವರ ಅಸಾಧಾರಣ ತಾಳ್ಮೆ, ಚಿಕಿತ್ಸಕ ದೃಷ್ಟಿಕೋನ.
> >> ಅವರದು ದಣಿವರಿಯದ ದುಡಿಮೆ ಹಾಗೂ ಬತ್ತದ ಜ್ಞಾನದಾಹ ಎಂದು ಕನ್ನಡ ವಿದ್ವಾಂಸರ ಲೋಕದಲ್ಲಿ
> >> ಪ್ರಖ್ಯಾತರು.
> >>
> >> ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊಟ್ಟಮೊದಲ ಬಾರಿಗೆ ಸಮಗ್ರವಾಗಿ ರೂಪಿಸಿದ ರಂ.ಶ್ರೀ.
> >> ಮುಗಳಿ ಅವರ ಮಾರ್ಗದರ್ಶನದಲ್ಲಿ ಹಾವನೂರರು ಸಲ್ಲಿಸಿದ ಪ್ರೌಢ ಪ್ರಬಂಧ ‘ಹೊಸಗನ್ನಡ
> >> ಅರುಣೋದಯ’.  ಅದು  ಎಲ್ಲ ಕಾಲದ ಸಾಹಿತ್ಯ ವ್ಯಾಸಂಗಿಗಳಿಗೆ ಮಹತ್ವದ ಆಕರ ಗ್ರಂಥ.
> >> ‘ಹೊಸಗನ್ನಡ
> >> ಅರುಣೋದಯ’ದ ಪಿಎಚ್‌ಡಿ ಪ್ರಬಂಧದ ಮೌಲ್ಯಮಾಪನ ನಡೆಸಿದ ಹಿರಿಯ ವಿದ್ವಾಂಸ ಡಾ.
> >> ಹಾ.ಮಾ.ನಾಯಕರು
> >> ಸಂದರ್ಶನವನ್ನು ಮಾಡದೆಯೇ ಪಿಎಚ್‌ಡಿ ನೀಡಬಹುದೆಂದು ಶಿಫಾರಸು ಮಾಡಿದ್ದರೆಂಬುದು ಹಾವನೂರರ
> >> ಸಂಶೋಧನಾ ವಿದ್ವತ್ತಿಗೆ ಸಾಕ್ಷಿ. 19ನೇ ಶತಮಾನದಲ್ಲಿ ಕಂಡ ಹೊಸಗನ್ನಡ ಸಾಹಿತ್ಯದ
> ಅರುಣೋದಯ
> >> ಕಾಲದ ಸಾಧನೆ, ಸಿದ್ಧಿ ಮತ್ತು ಲೋಪದೋಷಗಳನ್ನು ಅಭಿವ್ಯಕ್ತಿಸುವ ಈ ಕೃತಿಯ ಮೂಲಕ
> >> ದೊಡ್ಡದೊಂದು
> >> ನಿಧಿಯ ಬಾಗಿಲನ್ನು ಸಾಹಿತ್ಯಾಭ್ಯಾಸಿಗಳಿಗೆ ಹಾವನೂರರು ತೆರೆದಿಟ್ಟರು.
> >>
> >> ಹಾವನೂರರು ‘ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ’, ‘ಗೋವಿಂದ ಪೈ ವಾಙ್ಮಯ ಸಮೀಕ್ಷೆ’,
> >> ‘ಶ್ರೀವಾದಿರಾಜರ ತೀರ್ಥಪ್ರಬಂಧ’, ‘ಪ್ರೇಕ್ಷಣೀಯ ಕರ್ನಾಟಕ’, ‘ಗಳಗನಾಥ ಮಾಸ್ತರರು’,
> >> ‘ಒಂದಿಷ್ಟು ಲಘು, ಒಂದಿಷ್ಟು ಗಂಭೀರ’, ‘ಪಾ.ವೆಂ ಆಚಾರ್ಯರ ಸಮಗ್ರ ಕೃತಿಗಳ ಸಂಪಾದನೆ’.
> >> ‘ಹಟ್ಟಿಯಂಗಡಿ ನಾರಾಯಣರಾಯರ ಸಾಹಿತ್ಯವಾಚಿಕೆ’, ‘ಎಪಿಗ್ರಾಫಿಕಲ್ ಸ್ಟಡೀಸ್’, ‘ಮ.ಪ್ರ.
> >> ಪೂಜಾರರ ಹಳಗನ್ನಡ ಕವಿ ಕಾವ್ಯ ಮಹೋನ್ನತಿ’ ಮೊದಲಾಗಿ 60ಕ್ಕೂ ಹೆಚ್ಚು ಮೌಲಿಕ ಕೃತಿಗಳ
> >> ಲೇಖಕರು.
> >>
> >> ‘ಭೈರಪ್ಪನವರ ಕಾದಂ ಕಥನಗಳು’ ಹೊಸ ರೀತಿಯ ಬರವಣಿಗೆ. 40 ವರ್ಷಗಳಿಂದ ಕಿಟೆಲರ ಜೀವನ,
> >> ಸಾಧನೆಯ ಬಗ್ಗೆ ಬರೆಯುತ್ತ ಬಂದವರು ಅವರು. ಕಿಟೆಲ್ ಕುರಿತ ಕೃತಿ ಜರ್ಮನ್ ಭಾಷೆಯಲ್ಲಿಯೂ
> >> ಪ್ರಕಟವಾಗಿದೆ. ಹಾವನೂರರು ಬಾಸೆಲ್ ಮಿಷನ್‌ನಲ್ಲಿ ಹುದುಗಿದ್ದ ಕನ್ನಡ ಸಂಬಂಧಿ ಆಕರ
> >> ಸಾಮಗ್ರಿಯ ಅಧ್ಯಯನಕ್ಕಾಗಿ ನಾಲ್ಕು ಸಲ ಇಂಗ್ಲೆಂಡ್ ಮತ್ತು ಬಾಸೆಲ್‌ಗೆ ಭೇಟಿ
> ನೀಡಿದ್ದರು.
> >>
> >> ಹಾವನೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ಸಂಶೋಧನೆಗಾಗಿ ಕಂಪ್ಯೂಟರ್‌ ಅನ್ನು
> >> ಬಳಸಿದವರಲ್ಲಿ ಮೊದಲಿಗರು, ‘ಮುದ್ದಣನ ಶಬ್ದ ಪ್ರತಿಭೆ’ ಅವರ ಮಾರ್ಗದರ್ಶನದಲ್ಲಿ
> >> ರೂಪುಗೊಂಡಿದ್ದ ಸಂಶೋಧನಾ ಪ್ರಬಂಧ. ಎರಡು ಇತಿಹಾಸ ಸಮ್ಮೇಳನಗಳಿಗೆ ಅಧ್ಯಕ್ಷರಾಗಿದ್ದರು.
> >> ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ
> >> ಗೌರವಗಳಿಗೆ ಭಾಜನರಾಗಿದ್ದರು.  ವಿದ್ವತ್ತಿಗೆ ಸಂಬಂಧಿಸಿದಂತೆ ಎಲ್ಲ ವಯೋಮಾನದ
> >> ಲೇಖಕರೊಂದಿಗೆ
> >> ಆಪ್ತ ಸಂಬಂಧ ಇಟ್ಟುಕೊಂಡಿದ್ದರು.
> >>
> >> ಹದಿನಾಲ್ಕು ವಿವಿಧ ಪ್ರಕಾರಗಳಿಗೆ ಅವರ ಬರಹಗಳು ವಿಸ್ತರಿಸಿವೆ.  ಸಣ್ಣ ಕತೆಗಳು, ಇತಿಹಾಸ
> >> ಸಂಶೋಧನೆ, ಸಾಮಾಜಿಕ ವಿಷಯಗಳು, ಕಾದಂ ಕಥನಗಳು, ಲಲಿತ ಪ್ರಬಂಧಗಳು, ಸಾಹಿತ್ಯಕ
> >> ವಿಶ್ಲೇಷಣೆ,
> >> ಕಂಪ್ಯೂಟರ್ ಕನ್ನಡ, ಸಂಶೋಧನಾ ಪ್ರಕ್ರಿಯೆ, ಪತ್ರಿಕೋದ್ಯಮ, ಗಣ್ಯವ್ಯಕ್ತಿಗಳು, ಧಾರ್ಮಿಕ
> >> ಹಾಗೂ ದಾಸ ಸಾಹಿತ್ಯ, ಕ್ರೈಸ್ತಸಾಹಿತ್ಯ, ಪುಸ್ತಕೋದ್ಯಮ, ಇಂಗ್ಲಿಷ್ ಬರಹಗಳು- ಹೀಗೆ
> ವಿಷಯ
> >> ವೈವಿಧ್ಯ ವಿಸ್ತಾರದ ಆಡುಂಬೊಲ ಅವರದು. ನಿಸ್ಸಂದೇಹವಾಗಿ ಹಾವನೂರರು ಕನ್ನಡದ ಅಪರೂಪದ
> >> ಸವ್ಯಸಾಚಿಗಳಾಗಿ ದೃಗ್ಗೋಚರವಾಗುತ್ತಾರೆ. 2010 ವರ್ಷದ ಏಪ್ರಿಲ್ ಮಾಸದಲ್ಲಿ ಶ್ರೀನಿವಾಸ
> >> ಹಾವನೂರರು ನಿಧನರಾದರು.  ಅವರು ತಮ್ಮ ಕಾರ್ಯದಿಂದ ಅಮರರು.  ಈ ಮಹಾನ್ ಚೇತನಕ್ಕೆ ನಮ್ಮ
> >> ನಮನಗಳು.
> >>
> >> ಆಧಾರ: ಪ್ರಜಾವಾಣಿಯಲ್ಲಿ ಪ್ರಕಟವಾದ  ಲಕ್ಷ್ಮಣ ಕೊಡಸೆ ಅವರ ಲೇಖನ
> >>
> >> ಕೃಪೆ... ಕನ್ನಡ ಸಂಪದ
> >>
> >> --
> >> *For doubts on Ubuntu and other public software, visit
> >>
> http://karnatakaeducation.org.in/KOER/en/index.php/Frequently_Asked_Questions
> >>
> >> **Are you using pirated software? Use Sarvajanika Tantramsha, see
> >> http://karnatakaeducation.org.in/KOER/en/index.php/Public_Software
> >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> >> ***If a teacher wants to join STF-read
> >>
> http://karnatakaeducation.org.in/KOER/en/index.php/Become_a_STF_groups_member
> >> ---
> >> You received this message because you are subscribed to the Google
> Groups
> >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> >> To unsubscribe from this group and stop receiving emails from it, send
> an
> >> email to kannadastf+unsubscr...@googlegroups.com.
> >> To post to this group, send email to kannadastf@googlegroups.com.
> >> Visit this group at https://groups.google.com/group/kannadastf.
> >> To view this discussion on the web, visit
> >>
> https://groups.google.com/d/msgid/kannadastf/CAHVpsL6qSOyzKoEx31zFNbzEO8ncQiLukLi9gvT2g_%2BYtwvqkg%40mail.gmail.com
> >> <
> https://groups.google.com/d/msgid/kannadastf/CAHVpsL6qSOyzKoEx31zFNbzEO8ncQiLukLi9gvT2g_%2BYtwvqkg%40mail.gmail.com?utm_medium=email&utm_source=footer
> >
> >> .
> >> For more options, visit https://groups.google.com/d/optout.
> >>
> >
> > --
> > *For doubts on Ubuntu and other public software, visit
> >
> http://karnatakaeducation.org.in/KOER/en/index.php/Frequently_Asked_Questions
> >
> > **Are you using pirated software? Use Sarvajanika Tantramsha, see
> > http://karnatakaeducation.org.in/KOER/en/index.php/Public_Software
> ಸಾರ್ವಜನಿಕ
> >  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> > ***If a teacher wants to join STF-read
> >
> http://karnatakaeducation.org.in/KOER/en/index.php/Become_a_STF_groups_member
> > ---
> > You received this message because you are subscribed to the Google Groups
> > "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
> > To unsubscribe from this group and stop receiving emails from it, send an
> > email to kannadastf+unsubscr...@googlegroups.com.
> > To post to this group, send an email to kannadastf@googlegroups.com.
> > Visit this group at https://groups.google.com/group/kannadastf.
> > To view this discussion on the web, visit
> >
> https://groups.google.com/d/msgid/kannadastf/CAM8GxfZA%3D7-3zFuNJ7bSNz%2B_VrLXue3LEqn%2BTsJLb0TPx7aWhQ%40mail.gmail.com
> .
> > For more options, visit https://groups.google.com/d/optout.
> >
>
>
> --
> paramanand galagali
>                  asst teacher
> g h s kankanawadi
> tq raibag 591220
> mobil no 9986475696
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send an email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAPW75S%2BHAHbhwSgraYz6TP74Bc1TNCjUVUkCjMVQHWT2xf%2B%3Dyg%40mail.gmail.com
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAKkB3FoPbgFnB6RUqx6TOo7L%2BFTLstByLXh7Pm-Sd%3D3EaeZEbg%40mail.gmail.com.
For more options, visit https://groups.google.com/d/optout.

Reply via email to