ಆತ್ಮೀಯರೆ,ಕನ್ನಡ ಭಾಷಾ ಕಲಿಕೆ ಹೇಗಿದ್ದರೆ ಸೂಕ್ತ ಎಂಬುದರ ಕುರಿತು ಶ್ರೀಯುತ ಹೊರೆಯಾಲ
ದೊರೆಸ್ವಾಮಿಯವರು ಬರೆದ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಕನ್ನಡ ಕಲಿಕೆ ವೈಜ್ಞಾನಿಕವಾಗಿರಲಿ
07 Jul 2016
ಹೊರೆಯಾಲ ದೊರೆಸ್ವಾಮಿ, ಮ್ಯೆಸೂರು
ಕನ್ನಡ ಭಾಷಾ ಕಲಿಕೆ ಪ್ರಸ್ತುತ ಬಹಳ ಅಸ್ತವ್ಯಸ್ತವಾಗುತ್ತಿದೆ. ಪ್ರಾಥಮಿಕ ಹ೦ತದಿ೦ದ ಹಿಡಿದು
ಕಾಲೇಜು ಮಟ್ಟದವರೆಗೆ ಭಾಷಾ ಕಲಿಕೆ ಬಹು ತೆಳುವಾಗಿರುವುದರಿ೦ದಲೇ ಕನ್ನಡ ಎಡವಟ್ಟಾಗುತ್ತಿದೆ.
ಪ್ರಾಚೀನ ಕಾಲದಿ೦ದ ಇ೦ದಿನವರೆಗೆ ಉಳಿದುಕೊ೦ಡು ಬ೦ದಿರುವ ಜಗತ್ತಿನ 26 ಭಾಷೆಗಳಲ್ಲಿ ಒ೦ದಾದ
ನಮ್ಮ ಕನ್ನಡಕ್ಕೆ ಇ೦ಥ ದುಗ೯ತಿ ಬರುತ್ತಿರುವುದು ನೋವಿನ ಸ೦ಗತಿ. ವಾಸ್ತವವಾಗಿ, ಕನ್ನಡ
ಭಾಷಾವಣ೯ಗಳ ಹುಟ್ಟು-ಉಚ್ಚಾರ ಮತ್ತು ಸ್ವರೂಪಗಳು ಸಹಜ ಪ್ರಕ್ರಿಯೆಯಿ೦ದ ಕೂಡಿರುವುದೇ ಆಗಿದೆ.
ಈ ಬಗ್ಗೆ ಭಾಷಾಶಾಸ್ತ್ರರ ಸಹಮತವೂ ಇದೆ. ಹೀಗೆ ಒ೦ದು ವ್ಯವಸ್ಥಿತ ರೂಪದಲ್ಲಿ ತಲತಲಾ೦ತರದಿ೦ದ
ಬೆಳೆದುಳಿದುಬ೦ದಿರುವ ಕನ್ನಡ ಭಾಷೆ ಕಲಿಯುವಿಕೆಯಲ್ಲಿರಬೇಕಾದ ಕ್ರಮವೆ೦ದರೆ, ಅಕ್ಷರ,
ಕಾಗುಣಿತ, ಒತ್ತಕ್ಷರ, ಪದ, ವಾಕ್ಯ, ವಾಕ್ಯವೃ೦ದ, ಪ್ರಬ೦ಧ ಈ ದಾರಿಯಲ್ಲಿರಬೇಕಾದುದು ಸಹಜವೇ
ಆಗಿದೆ. ಆದರೆ, ಈಗಾಗುತ್ತಿರುವುದೇನು? ನೋಡಿ-
   ಪ್ರಾಥಮಿಕ ಶಾಲೆಗಳಲ್ಲಿ (ಸಕಾ೯ರಿ ಹಾಗೂ ಖಾಸಗಿ) ಕನ್ನಡ ಭಾಷಾಕಲಿಕೆ ಈ ಕೆಲವಾರು
ವಷ೯ಗಳಿ೦ದ ವಿಚಿತ್ರವಾಗಿ ಕ೦ಡು ಬರುತ್ತಿದೆ. (1998 ರಿ೦ದ ಕಲಿ-ನಲಿ ಮತ್ತು ನಲಿ-ಕಲಿ ಎ೦ಬ
ವಿಧಾನಗಳು) ಕನ್ನಡ ಭಾಷೆಯನ್ನು ವಣ೯ಮಾಲೆಯ ಮೂಲಕ ಕಲಿಸುವ ಬದಲು ಅಕ್ಷರ-ಪದ ಆಧಾರಿತವಾಗಿ
ಕಲಿಸುವ ಪದ್ಧತಿ ಜಾರಿಯಲ್ಲಿದೆ. ಅ೦ದರೆ ಕೇವಲ ಅಕ್ಷರ ಆಧಾರಿತವಾಗಿ ಪದ ರಚಿಸುವುದು. ಉದಾ:-
ರ ಗ ಸ ದ ಅ ಎ೦ಬ ಅಕ್ಷರ ಘಟಕವನ್ನೇ ತೆಗೆದುಕೊಳ್ಳಿ. ರ ಒಳಗೊ೦ಡು ರಚನೆಯಾಗುವ ಪದಗಳು ಅರ,
ಸರ, ಗರ, ದರ, ರಸ ಹೀಗೆ ರಚನೆಯಾಗುವ ಪದಗಳ ಮೂಲಕ ಅಕ್ಷರ ಕಲಿಸಲು ಪ್ರಯತ್ನಿಸುವುದು. ಆದರೆ,
ತಮಿಳು, ಕನ್ನಡ ತೆಲುಗುಗಳ೦ಥ ದ್ರಾವಿಡ ಭಾಷೆಯನ್ನಾಗಲಿ ಅಥವಾ ಇ೦ಡೋ-ಆಯ೯ನ್ ಭಾಷಾ ವಗ೯ಕ್ಕೆ
ಸೇರಿದ ಸ೦ಸ್ಕೃತ ಹಾಗೂ ಅದರ ಜನ್ಯ ಭಾಷೆಗಳಾದ ಹಿ೦ದಿ, ಗುಜರಾತಿ, ಪ೦ಜಾಬಿಯೇ ಮೊದಲಾದ
ಭಾಷೆಗಳನ್ನಾಗಲಿ ಆ ರೀತಿ ಕಲಿಸಲು ಬರುವುದಿಲ್ಲ. ಭಾರತದಲ್ಲಿ ಈ ಎರಡು ಭಾಷಾ ಕುಟು೦ಬಗಳಿಗೆ
ಸೇರಿದ ಭಾಷೆಗಳೇ ಹೆಚ್ಚು ಚಾಲ್ತಿಯಲ್ಲಿರುವುದು.
  ಜಗತ್ತಿನಲ್ಲಿ ಪ್ರತಿಯೊ೦ದು ಭಾಷೆಗೂ ಅದರದ್ದೇ ಆದ ಜನ್ಯ ಗುಣಲಕ್ಷಣಗಳಿರುತ್ತವೆ. ವಿವಿಧ
ಮಾನವ ಜನಾ೦ಗ ವಾಸಿಸುವ ಪ್ರವೇಶ, ಪರಿಸರ ಹಾಗೂ ವ್ಯಕ್ತಿಯ ಶಾರೀರಿಕ ರಚನೆಗನುಗುಣವಾಗಿ ಆಯಾ
ಪ್ರದೇಶದ ಭಾಷೆಯು ರೂಪಿತಗೊಳ್ಳುತ್ತದೆ ಎ೦ಬುದು ಮಾನವಶಾಸ್ತ್ರ ಮತ್ತು ಭಾಷಾಶಾಸ್ತ್ರದ
ಅಧ್ಯಯನದಿ೦ದ ತಿಳಿದು ಬರುತ್ತದೆ. ಹಾಗೆಯೇ ದ್ರಾವಿಡ ಭಾಷೆಯಾದ ಕನ್ನಡವು ರೂಪಿತಗೊ೦ಡಿದೆ.
ಮತ್ತು ಕನ್ನಡ ಭಾಷಾ ಬೆಳವಣಿಗೆಯಲ್ಲಿ ಕ೦ಡು ಬರುವ ಸ೦ರಚನಾ ವಿಧಾನಗಳು ಈ ಭಾಷೆಗೊ೦ದು ಸ್ಪಷ್ಟ
ಆಕಾರವನ್ನು ನೀಡಿದೆ. ಕನ್ನಡ ಅಕ್ಷರ ಕಲಿಕೆ, ಪದರಚನೆ, ವಾಕ್ಯರಚನೆ, ಪ್ರಬ೦ಧ, ವ್ಯಾಕರಣ
ಮು೦ತಾದವುಗಳನ್ನು ಈ ದೃಷ್ಟಿಯಿ೦ದ ಅಭ್ಯಾಸಿಸಬೇಕಲ್ಲದೆ ಅನ್ಯತ್ರ ಅಲ್ಲ.
   ಪ್ರಕೃತ, ಕನ್ನಡ ಭಾಷಾ ಕಲಿಕೆಯತ್ತ ಗಮನ ಹರಿಸಿದಾಗ ಮೊದಲು ನಮ್ಮ ಗಮನ ಸೆಳೆಯುವುದು
ಕನ್ನಡ ಅಕ್ಷರಮಾಲೆ ಅಥವಾ ವಣ೯ಮಾಲೆ. ಇದರಲ್ಲಿ ಸ್ಥೂಲವಾಗಿ ನಾಲ್ಕು ವಿಭಾಗಗಳಿವೆ:-
ಸ್ವರಾಕ್ಷರÜ, ವಗೀ೯ಯ ವ್ಯ೦ಜನ. ಅವಗೀ೯ಯ ವ್ಯ೦ಜನ ಮತ್ತು ಅನುನಾಸಿಕ. ಸ್ವರಾಕ್ಷರಗಳು (ಮೂಲ
ಹತ್ತು ಅಕ್ಷರಗಳು ಮಾತ್ರ ಅ ಆ ಇ ಈ ಉ ಊ ಎ ಏ ಒ ಓ) ತಮ್ಮದೇ ಆದ ಉಚ್ಚಾರಣಾ
ಸ್ವಾತ೦ತ್ರ್ಯವನ್ನು ಹೊ೦ದಿವೆ. ಆದರೆ ವ್ಯ೦ಜನಾಕ್ಷರಗಳಿಗೆ ಆ ಸ್ವಾತ೦ತ್ರ್ಯವಿಲ್ಲ. ಸ್ವರದ
ನೆರವು ಬೇಕಾಗುವುದು. ಉದಾ:- ಕ್ + ಅ = ಕ, ಕ್ + ಆ =ಆ ಈ ರೀತಿ. ಹೀಗೆ ಕನ್ನಡ ವಣ೯ಮಾಲೆಯ
ರಚನಾ ಸ್ವರೂಪದಲ್ಲಿ ಅಕ್ಷರಗಳ ಕೂಡುವಿಕೆ ಅಥವಾ ಸ೦ಯುಕ್ತತೆ ಅನಿವಾಯ೯ವಾಗಿ ಕ೦ಡುಬರುತ್ತದೆ.
ಹಾಗಾಗಿ ಸ್ವರಾಕ್ಷರ ಆಧಾರಿತವಾದ ಕಾಗುಣಿತ ಪದ ರಚನೆಯಲ್ಲಿ ಪ್ರಮುಖ ಸ್ಥಾನವನ್ನು
ಪಡೆದುಕೊ೦ಡಿದೆ. ಈ ಸ೦ರಚನಾ ಸ್ವರೂಪವನ್ನು ನಾವೆ೦ದೂ ಕಡೆಗಣಿಸುವ೦ತಿಲ್ಲ. ತಾತ³ಯ೯ವೆ೦ದರೆ
ಕನ್ನಡ ಕಲಿಕೆಯಲ್ಲಿ ಕಾಗುಣಿತದ ಅವಶ್ಯಕತೆಯಿದೆ ಹಾಗೂ ಅದರ ಅಭ್ಯಾಸ ಅನಿವಾಯ೯. ಆದರೆ ಈಗ
ಕಲಿಸುತ್ತಿರುವ ವಿಧಾನದಲ್ಲಿ ಅದು ನಾಪತ್ತೆಯಾಗಿದೆ. ನಾದವಿಲ್ಲದ ಓಲಗದ೦ತೆ ಕನ್ನಡ ಕಲಿಕೆ
ಸೊರಗಿದೆ.
  ಇನ್ನು ಕನ್ನಡ ಭಾಷಾ ಕಲಿಕೆಯಲ್ಲಿ ಒತ್ತಕ್ಷರದ ಸ್ಥಾನಮಾನ. ಒತ್ತಕ್ಷರವು ಸ೦ಸ್ಕೃತ ಜನ್ಯ
ಭಾಷೆಗಳು ಮತ್ತು ದ್ರಾವಿಡ ಭಾಷೆಗಳ ಇನ್ನೊ೦ದು ಪ್ರಧಾನ ಲಕ್ಷಣ. ವ್ಯ೦ಜನಾಕ್ಷರಗಳಿಗೆ
ವ್ಯ೦ಜ್ಯ ಸೂಚಕವಾದ ಧ್ವನಿಮಾಗಳು ಒತ್ತಕ್ಷರಗಳಾಗಿ ಬರುತ್ತವೆ ಮತ್ತು ಅಲ್ಪಪ್ರಾಣಗಳಿಗೆ
ಮಹಾಪ್ರಾಣ ಧ್ವನಿಮಾಗಳು ಒತ್ತಕ್ಷರಗಳಾಗಿರುತ್ತವೆ. ಉದಾ:- ಸಿದ್ಧ, ವಿಟ್ಠಲ ಇತ್ಯಾದಿ.
ಅಲ್ಪಪ್ರಾಣಗಳು ರೂಡ್ಹಿಗತವಾಗಿ ಒತ್ತಕ್ಷರಗಳಾಗಿ ಬರುವುದಿಲ್ಲ. ಜನಪದ ಭಾಷೆಯಲ್ಲಿ ಮಾತ್ರ
ಇವು ಕ೦ಡುಬರುತ್ತವೆ. ಉದಾ:- ಸಿದ್ದ, ಅಗ್ಗವಣಿ ಇತ್ಯಾದಿ. ಕನ್ನಡದಲ್ಲಿ ಬಳಕೆಯಲ್ಲಿರುವ
ಮಹಾಪ್ರಾಣಾಕ್ಷರಗಳು ಸ೦ಸ್ಕೃತದಿ೦ದ ಬ೦ದವೇ ಆಗಿವೆ.
   ಸ್ವರಾಕ್ಷರಗಳಿಗೆ ಯಾವುದೇ ಒತ್ತಕ್ಷರವಿರುವುದಿಲ್ಲ. ಪತ್ರಿಕೆಗಳ ಜಾಹಿರಾತುಗಳಲ್ಲಿ
ಆಗಾಗ್ಗೆ ಕಾಣಿಸಿಕೊಳ್ಳುವ ಆ್ಯಮ್, ಆ್ಯಪಲ್, ಅç ಇ೦ಥವು ತಪ್ಪು ಪದ ಪ್ರಯೋಗಗಳು. ಆದರೆ
ಒತ್ತಕ್ಷರವನ್ನು ಮರೆತು ಕೇವಲ ಅಕ್ಷರ-ಪದದ ಮೂಲಕ ಕನ್ನಡ ಕಲಿಸುವುದೆ೦ದರೆ ವಸ್ತೀ ಹಿಡಿದ
ತಮಟೆಯನ್ನು ಬಾರಿಸಿದ೦ತೆಯೇ ಸರಿ. ವಾಸ್ತವವಾಗಿ, ಈಗ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿರುವುದು
ಇ೦ಡೋ-ಯುರೋಪಿಯನ್‍ನ ಒ೦ದು ಉಪಭಾಷಾ ವಗ೯ವಾದ ಇ೦ಡೋ-ಜಮ೯ನಿಕ್ ಭಾಷಾ ಬಳಗದ ಇ೦ಗ್ಲಿಷಿನ ಅನುಕರಣ
ಮಾದರಿಯಲ್ಲಿ (ಆದರೆ, ಅಲ್ಲಿಯು ವಣ೯ಮಾಲೆಯ ಮುಖಾ೦ತರವೇ ಅಕ್ಷರ ಕಲಿಕೆ ಕ೦ಡುಬರುತ್ತದೆ.)
ಕಾಗುಣಿತವಾಗಲಿ, ಒತ್ತಕ್ಷರವಾಗಲಿ ಇಲ್ಲ. ಅಲ್ಲಿರುವುದು ಸ್ಪೆ ಲ್ಲಿ೦ಗ್ ಮಾತ್ರ.
ಸ್ವರಸ೦ಜ್ಞೆಗಳಾಗಲಿ (ಕಾಗುಣಿತ), ವ್ಯ೦ಜನಾಕ್ಷರದ ಒತ್ತಕ್ಷರವಾಗಲಿ ಅಲ್ಲಿಲ್ಲ. ಅಕ್ಷರಗಳ
ಸಮಾನಾ೦ತರ ಜೋಡಣೆಯಾದ ಅ೦ದರೆ ಒ೦ದರ ಪಕ್ಕ ಒ೦ದು ಅಕ್ಷರವನ್ನು ಬರೆಯವುದರ ಮೂಲಕ
ಇ೦ಗಿಷ್‍ನಲ್ಲಿ ಪದ ನಿಮಾ೯ಣವಾಗುತ್ತದೆ. ಹಾಗಾಗಿ ಅಕ್ಷರ-ಪದ ಮೂಲಕವಾಗಿ ಭಾಷೆ ಕಲಿಸಲು ಅಲ್ಲಿ
ಸಾಧ್ಯವೇ ಹೊರತು ಕನ್ನಡದಲ್ಲಿ ಅಲ್ಲ. ಅಲ್ಲದೇ ಪದಗಳ ಉಚ್ಚಾರಣೆಯಲ್ಲೂ ವ್ಯತ್ಯಸ್ತವಿದೆ.
ಕನ್ನಡ ಪದರಚನೆ ಹಾಗೂ ಉಚ್ಚಾರಣೆಯಲ್ಲಿ ಸಾಮ್ಯತೆ ಕ೦ಡುಬರುವ ಹಾಗೆ ಇ೦ಗ್ಲಿಷಿನಲ್ಲಿಲ್ಲ.
    ಈ ರೀತಿ ಪ್ರತಿಯೊ೦ದು ಭಾಷೆಗೂ ತನ್ನದೇ ಆದ ಗುಣಲಕ್ಷಣಗಳಿರುತ್ತವೆ. ಅದಾವುದನ್ನು
ಪರಿಗಣಿಸದೆ ಕನ್ನಡವನ್ನು ಇ೦ಗ್ಲಿಷ್ ಭಾಷಾಮಾದರಿಯಲ್ಲಿ ಮಕ್ಕೀ ಕಾಮಕ್ಕಿ ಕಲಿಸುತ್ತಿರುವುದು
ಅಸಹಜ ಹಾಗೂ ಅವೈಜ್ಞಾನಿಕವಾದುದು. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಅಕ್ಷರಗಳನ್ನು ಮರಕ್ಕೆ
ನೇಣು ಹಾಕಿಕೊ೦ಡಿರುವ ಹೆಣಗಳ೦ತೆ ತೂಗುಹಾಕಿ ಭಾಷೆ ಕಲಿಸುತ್ತಿರುವುದು ಅದರ ಯೋಜಕರ
ದಡ್ಡತನವನ್ನೂ ಇಲ್ಲವೆ ಅವಿವೇಕದ ಸ೦ಶೋಧನೆಯನ್ನೂ ಪ್ರತಿನಿಧಿಸುತ್ತದಲ್ಲದೆ ಬೇರೇನೂ ಅಲ್ಲ.
ಕನ್ನಡ ಭಾಷಾ ಜಾಯಾಮಾನಕ್ಕೆ ಒಗ್ಗಿ ಬ೦ದಿರುವ ವಣ೯ಮಾಲೆ, ಕಾಗುಣಿತ, ಒತ್ತಕ್ಷರ,
ಸ೦ಯುಕ್ತಾಕ್ಷರಗಳ ಮೂಲಕವೇ ಭಾಷೆಯನ್ನು ಕಲಿಸುವುದು ಸಹಜವಾದುದು ಮತ್ತು ವೈಜ್ಞಾನಿಕವಾದುದು.
ಈ ಬಗ್ಗೆ ಭಾಷಾಶಾಸ್ತ್ರರು ತಮ್ಮ ಖಚಿತ ನಿಲುವನ್ನು ವ್ಯಕ್ತಪಡಿಸಬೇಕಿದೆ. ಪ್ರಾಥಮಿಕ
ಹ೦ತದಲ್ಲಿ ಕನ್ನಡ ಭಾಷೆಯನ್ನು ಸು#ಟವಾಗಿ ಮತ್ತು ಮನದಟ್ಟಾಗುವ೦ತೆ ಕಲಿಯಲು ಆಗ ಮಾತ್ರ
ಸಾಧ್ಯವಾಗುತ್ತದೆ. (ಲೇಖಕರು ಸಾಹಿತಿ)
http://epapervijayavani.in/article.php?articleid=VVANI_BEN_20160707_9_4&r=29738

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAHVpsL5msOLsnmce5FuiL6b0DW0bOb73kNrKH3pj2%3DMVELsv%2BQ%40mail.gmail.com.
For more options, visit https://groups.google.com/d/optout.

Reply via email to