⚜⚜⚜⚜⚜⚜⚜⚜
✍ " ಉಪದೇಶ " ‌                                           ‌    *ಯಾರಿಗೂ ಉಪದೇಶ
ಮಾಡಲು ಹೋಗಬೇಡಿ...ಕಾರಣ, ದಡ್ಡರು ಕೇಳುವುದಿಲ್ಲ, ಜಾಣರಿಗೆ ಅದರ ಅವಶ್ಯಕತೆಯೇ ಇಲ್ಲ*....
             ಹೆರಡೋಟಸ್.....

✍          "ಶಿಕ್ಷಕ"      ‌       ‌
*ವಿದ್ಯಾರ್ಥಿಗಳನ್ನು ಉತ್ಸಾಹಗೊಳಿಸದೆ ಕೇವಲ ಪಾಠ ಹೇಳುವ ಶಿಕ್ಷಕನು, ಕಬ್ಬಿಣವನ್ನು
ಕಾಯಿಸದೆಯೇ ಬಡಿಯುತ್ತಿದ್ದಾನೆ ಎಂದರ್ಥ*.....
       ಹೋರೆಸ್ ಮನ್.....

✍         "ನಾಲಿಗೆ"    ‌       ‌                          *ನಾಲಿಗೆಗೆ ಆದ ಗಾಯ
ಮಾಯಬಹುದು...ಆದರೆ ನಾಲಿಗೆಯಿಂದ ಆದ ಗಾಯ*...??!!!
              ಅನಾಮಿಕ...

✍          "ಸುಖ" ‌                         ‌‌ *ಸುಖವಾಗಿರುವುದರಲ್ಲಿ ಸುಖವಿಲ್ಲ.
ಸುಖವಾಗಿದ್ದೇನೆಂದು, ಸುಖವಾಗಿಲ್ಲದವರಿಗೆ ಹೇಳುವುದರಲ್ಲಿ ಹೆಚ್ಚು ಸುಖವಿದೆ*....
             ಬೀ-chi

✍         "ಹುಡುಕು"   ‌
*ಕಳೆದುಕೊಂಡಲ್ಲಿಯೇ ಹುಡುಕಬೇಡ. ಒಂದು ದೊರೆತಲ್ಲಿಯೇ ಇನ್ನೊಂದನ್ನು ಹುಡುಕು*....

✍            "ಕನಸು"      ‌              ‌                        *ಕನಸು
ಎಂದಿಗಾದರೂ ನಿಜವಾದುದುಂಟೆ ಎನ್ನುವವನು, ಎಂದೂ ಒಳ್ಳೆಯ ಕನಸನ್ನೇ ಕಂಡಿಲ್ಲ*....
                 ಕಲಾಂ...

✍         "ಕೂದಲು"       ‌         ‌                          ‌ *ಬಿಳಿ ಕೂದಲಿನ
ಬೆಲೆ ಏನೆಂಬುದನ್ನು ತಿಳಿಯಬೇಕಾದರೆ, ಬೋಳು ತಲೆಯವನನ್ನು ಕೇಳಿ ನೋಡು*....
   'ಸಮಸ್ತಂ ಸಮಾನ ಗೌರವಂ'

✍           "ಒಂದು"    ‌             ‌                                *ಕತ್ತೆ
ಇರುವ ಅಗಸ,ಅದನ್ನು ಕುದುರೆಯಂತೆ ಕಾಣುತ್ತಾನೆ. ಒಂದೇ ಮಗನಿರುವ ತಂದೆ ಅವನನ್ನು
ಕತ್ತೆಯನ್ನಾಗಿ ಮಾಡುತ್ತಾನೆ*....
                  ಪ್ರಾಣೇಶ್..

✍         "ದಣಿವು"         ‌         ‌
*ದಣಿವಿನಲ್ಲಿ ವಿಶ್ರಾಂತಿ ದೊರೆಯಬೇಕು. ವಿಶ್ರಾಂತಿಯಿಂದಲೇ ದಣಿವು ಆಗಬಾರದು*.....
                ಅನುಭವಿ..

✍          "ವಿವೇಕಿ"         ‌          ‌                          *ವಿವೇಕಿಯ
ನಾಲಿಗೆ ಅವನ ಹೃದಯದಲ್ಲಿರುತ್ತದೆ. ಅವಿವೇಕಿಯ ಹೃದಯ ಅವನ ನಾಲಿಗೆಯಲ್ಲಿರುತ್ತದೆ*.....
                ಲಿಂಕನ್..

✍          "ಹಾಳು"      ‌
‌                                        ‌   *ಹುಂಜ ಸುಮ್ಮನಿದ್ದು ಹೇಂಟೆ
ಕೂಗಾಡುವ ಮನೆ ಹಾಳಾಗಲು ಬಹು ದಿನಗಳು ಬೇಕಿಲ್ಲ*.....
                ಬೀ-chi

✍            "ಮೌನ"‌
‌                                         *ಕೊನೆಗೆ ನೆನಪಿನಲ್ಲುಳಿಯುವುದು,
ಶತ್ರುಗಳ ಮಾತಲ್ಲ, ಮಿತ್ರರ ಮೌನ ಮಾತ್ರ*......
             ಹೆರಡೋಟಸ್..

✍         "ಸ್ಪಷ್ಟ"‌
     *ನೀರಿನಲ್ಲಿ ಮುಖವು ಅಸ್ಪಷ್ಟವಾಗಿ ಕಂಡರೂ, ಸರಾಯಿಯಲ್ಲಿ ಹೃದಯವು ಸ್ಪಷ್ಟವಾಗಿ
ಕಾಣುತ್ತದೆ*......
                ಅ.ನ.ಕೃ..

✍.          "ಖಾಲಿ"      ‌    ‌         ‌                              *ಬಹು
ಮಾತನಾಡುವವನು, ಬರಿಗೈಲೆ ಉಣ್ಣಿಸುತ್ತಾನೆ*......
              ಕೌಟಿಲ್ಯ..

✍             "ಹೆಣ್ಣು".
*ತಾನು ಸೊಸೆಯಾಗಿದ್ದಾಗ ಅತ್ತೆಯನ್ನು ಸಹಿಸದ, ತಾನು ಅತ್ತೆಯಾದಾಗ ಸೊಸೆಯನ್ನು
ಸಹಿಸಿಕೊಳ್ಳಲಾಗದವಳೇ ಹೆಣ್ಣು*....
                 ಜಿ..ಎಸ್..ಎಸ್..

✍          "ಪ್ರೇಮ"                                   *‌ಪ್ರೇಮಕ್ಕೆ  ಕಲಹವೇ
ಆಹಾರ. ಹೆಚ್ಚಾದರೆ ಅಜೀರ್ಣದಿಂದ ಸಾಯುತ್ತದೆ, ಕಡಿಮೆಯಾದರೆ ಹಸಿವಿನಿಂದ
ಸಾಯುತ್ತದೆ*........
           'ಶೇಕ್ಸ್ ಪಿಯರ್'

✍         "ಜಾಣತನ" ‌                    ‌       *ಜಾಣತನವನ್ನು
ಬಚ್ಚಿಟ್ಟುಕೊಳ್ಳುವುದೇ, ಜಾಣತನದ ಮೊದಲ ಜಾಣತನ*.....
          'ಟಿ.ಪಿ.ಕೈಲಾಸಂ'..

✍.        "ಸಾಮ್ಯತೆ"  ‌                                 *ಮಲತಾಯಿ ಇರುವ
ಮನೆಯಲ್ಲಿ, ಹೆತ್ತ ತಂದೆ ಮಲತಂದೆಯಾಗಲು ಬಹು ಸಮಯ ಬೇಕಿಲ್ಲ*.....
                'ಡಿ.ವಿ.ಜಿ'...

✍          "ಪುರುಷ"    ‌                                ‌   *ಹೆಣ್ಣನ್ನು
ತೆಗಳುವವನಿಗೆ, ಹೆಣ್ಣಿನ ಹೃದಯದ ಪರಿಚಯ ಸಾಕಷ್ಟು ಆಗಿಲ್ಲ. ಹೊಗಳುವವನಿಗೆ ಎಷ್ಟೂ
ಆಗಿಲ್ಲ*.....
            ಅ.ನ.ಕೃ...

✍              "ಕುಮಾರಿ" ‌                                 *ಮದುವೆಯಾಗದ ಹೆಣ್ಣು
ಕಳ್ಳ ಮಾಲು ಇದ್ದಂತೆ. ಅದನ್ನು ಬೇಗ ಸಾಗಿಸಿದಷ್ಟು ಹೆಚ್ಚು ಲಾಭ*.......
              ಪಿ.ಲಂಕೇಶ್...

✍            "ಸುಖ"‌                                      ‌  ‌‌‌
*ಮದುವೆಯಾದವರಲ್ಲಿ ಕೂಡ ಕೆಲವರು ಸುಖವಾಗಿದ್ದಾರೆ.ಆದರೆ ಅವರ ಸುಖಕ್ಕೆ ಕಾರಣ
ಮದುವೆಯಲ್ಲ*......
             ಅನುಭವಿ..

✍          'ಬುದ್ಧಿವಂತಿಕೆ'‌                 ‌
*ಶತ್ರುವಿನಿಂದಲೂ ಬುದ್ಧಿ ಕಲಿ, ಮಿತ್ರನಿಗೂ ಹೇಳಲು ಹೋಗಬೇಡ*....
           'ಅಣ್ಣಾ ಅಜಾರೆ'...

✍              "ಶ್ರಮ"                                 *ಎಲ್ಲವನ್ನು ಮಾಡುವವನು
ಾನೇ ಎನ್ನುವಂತೆ ದುಡಿ, ಎಲ್ಲವನ್ನು ಕೊಡುವವನು ದೇವನೇ ಎನ್ನುವಂತೆ ನುಡಿ*......
           "ಸಾಯಿ ಬಾಬಾ"

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAM0vjV1%2B5r2m0y3NBAMnbvCJjX0kZDgdxq5KduWNxFH%3DFUWCFw%40mail.gmail.com.
For more options, visit https://groups.google.com/d/optout.

Reply via email to