Sir,  is it applicable to Android mobile?
On May 20, 2016 10:50 AM, "Ashok" <ashok.i...@gmail.com> wrote:

> ತುಂಬಾ ಧನ್ಯವಾದಗಳು ಹರೀಶಕುಮಾರ ಸರ್ - ಜಿಂಪ್ ಎಂಬ ಫೋಟೊ ಎಡಿಟರ್ ಲೇಖನ್
> ಹಂಚಿಕೊಂಡಿದ್ದಕಾಗಿ.
>
> ಆತ್ಮೀಯ ಶಿಕ್ಷಕರೇ,
>                     ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಟೂಲ್ ಗಳನ್ನು ಬಳುಸುವದನ್ನು
> ನೊಡಿದ್ದೇವೆ. ಜಿಂಪ್ ಎಂಬ ಫೋಟೊ ಎಡಿಟರ್ ಟೂಲ್ (ಚಿತ್ರ ಸಂಪಾದಕ ತಂತ್ರಾಂಶ) ಬಳಸುವದರಿಂದ
> ಆಗುವ ಉಪಯೋಗಗಳ ಬಗ್ಗೆ ಕೆಳಗಿನ ಲೇಖನದಲ್ಲಿ ನೋಡಲಾಗಿದೆ . ಜಿಂಪ್ ಎಂಬ ಅಪ್ಲೀಕೆಶನ್ ಬಳಸಿ
> ಹೆಗೆ ಚಿತ್ರವನ್ನು ತಯಾರಿಸಬಹುದು/ಸಂಪಾದಿಸಬದು ಎಂಬುವದರ ಬಗ್ಗೆ ಸಂಪೂರ್ಣ ಮಾಹಿತಿ ಈ
> ಕೆಳಕಾಣಿಸಿದ ಕೋಯರ್ ಪುಟದ ಲಿಂಕನ್ನು ಒತ್ತುವ ಮೂಲಕ ನೋಡಬಹುದಾಗಿದೆ.
>
> http://karnatakaeducation.org.in/KOER/en/index.php/GIMP_manual
>
> http://karnatakaeducation.org.in/KOER/index.php/GIMP_ಕೈಪಿಡಿ
>
> ಈ ಮೂಲಕ ಎಲ್ಲಾ ಶಿಕ್ಷಕ ಮಿತ್ರರಲ್ಲಿ ಕೇಳಿಕೊಳ್ಳುವುದೇನೆಂದರೆ ಇತರೆ ಟೂಲ್‌ಗಳ ಬಗ್ಗೆ
> ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ.
>
> ಧನ್ಯವಾದಗಳು
> ಅಶೋಕ
> ಐ.ಟಿ.ಫಾರ್ ಚೇಂಜ್
> ಬೆಂಗಳೂರು.
>
>
> On Thursday 19 May 2016 07:21 PM, HAREESHKUMAR K Agasanapura wrote:
>
> ತಂತ್ರೋಪನಿಷತ್ತು
> ಜಿಂಪ್ ಎಂಬ ಫೋಟೊ ಎಡಿಟರ್
>
>     –ತಂತ್ರಜ್ಞಾನಿ
>          12 reads
>     Thu, 05/19/2016 - 01:00
>
> ಸಣ್ಣ ಮೊಬೈಲ್ ಫೋನ್ ಕೂಡಾ ಹತ್ತಾರು ಪಿಕ್ಸೆಲ್‌ಗಳ ಸಾಮರ್ಥ್ಯದ ಛಾಯಾಚಿತ್ರಗಳನ್ನು
> ತೆಗೆಯುವ ಕಾಲವಿದು. ದುಬಾರಿ ಮತ್ತು ಪ್ರತಿಷ್ಠಿತ ಬ್ರಾಂಡ್‌ಗಳ ಫೋನ್‌ಗಳಂತೂ ಒಂದು
> ಸಾಮಾನ್ಯ ಡಿಜಿಟಲ್ ಕ್ಯಾಮೆರಾಗಿಂತ ಉತ್ತಮ ಫೋಟೊ ಕ್ಲಿಕ್ಕಿಸುವ ಸಾಮರ್ಥ್ಯವಿರುವ
> ಕ್ಯಾಮೆರಾಗಳನ್ನು ಒದಗಿಸುತ್ತಿವೆ.
>
> ಹೀಗೆ ತೆಗೆದ ಫೋಟೊಗಳನ್ನು ಫೋನ್‌ನಲ್ಲೇ ಅಲ್ಪ ಸ್ವಲ್ಪ ಸುಧಾರಿಸಿ ಸಾಮಾಜಿಕ
> ಜಾಲತಾಣಗಳಿಗೆ ತಳ್ಳಿಬಿಡುವುದು ಸದ್ಯದ ಪರಿಪಾಠ. ವಾಸ್ತವದಲ್ಲಿ ಯಾವುದೇ ವೃತ್ತಿಪರರ
> ಛಾಯಾಚಿತ್ರಗಳನ್ನು ಇಷ್ಟೊಂದು ಲಘುವಾಗಿ ಪರಿಗಣಿಸುವುದಿಲ್ಲ.
>
> ಬಹಳ ಉತ್ಸಾಹದಲ್ಲಿ ಡಿಎಸ್ಎಲ್‌ಆರ್ ಅಥವಾ ಅದರ ಸಾಮರ್ಥ್ಯವನ್ನು ಹೋಲುವ ಡಿಜಿಟಲ್
> ಕ್ಯಾಮೆರಾ ಹೊಂದಿರುವವರೂ ಫೋಟೊಗಳ ಸಂಪಾದನೆಗೆ ಬೇಕಿರುವ ಸಾಫ್ಟ್‌ವೇರ್ ಎಂದರೆ ಅಡೋಬಿ
> ಕಂಪೆನಿಯ ‘ಫೋಟೊಶಾಪ್’ ಎಂದು ಭಾವಿಸಿರುತ್ತಾರೆ. ಆದರೆ ಇದು ಅಷ್ಟರ ಮಟ್ಟಿಗೆ
> ನಿಜವಲ್ಲ.
>
> ಕೆಲವು ವಿಚಾರಗಳಲ್ಲಿ ಅಡೋಬಿ ಕಂಪೆನಿಯ ದುಬಾರಿಯಾದ ಫೋಟೊಶಾಪ್ ತಂತ್ರಾಂಶಕ್ಕಿಂತಲೂ
> ಹೆಚ್ಚಿನ ಪಟ್ಟು ಅನುಕೂಲವಿರುವ, ಉಚಿತವಾಗಿ ದೊರೆಯುವ, ಯಾವುದೇ ಲೈಸೆನ್ಸ್
> ಅಗತ್ಯವಿಲ್ಲದ ತಂತ್ರಾಂಶವೊಂದಿದೆ. ಇದರ ಹೆಸರು ಜಿಂಪ್ ಅಥವಾ GIMP. ಗ್ನೂ ಇಮೇಜ್
> ಮ್ಯಾನಿಪುಲೇಶನ್ ಪ್ರೋಗ್ರಾಮ್ ಎಂಬ ಇದು ಛಾಯಾಚಿತ್ರಗಳ ಸಂಪಾದನೆಯ ಮಟ್ಟಿಗೆ
> ಅತ್ಯುತ್ತಮವಾದ ತಂತ್ರಾಂಶ.
>
> ಇದು ವಿಂಡೋಸ್, ಲೀನಕ್ಸ್ ಮತ್ತು ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಬಹಳ ಚೆನ್ನಾಗಿ ಕೆಲಸ
> ಮಾಡುತ್ತದೆ. ವೃತ್ತಿಪರ ಛಾಯಾಚಿತ್ರ ಸಂಪಾದನಾ ತಂತ್ರಾಂಶವೊಂದು ನೀಡುವ ಎಲ್ಲಾ
> ಸವಲತ್ತುಗಳನ್ನು, ಪೈಥನ್ ಸ್ಕ್ರಿಪ್ಟ್‌ನಂಥ ವಿಚಾರಗಳಿಗೆ ಬಂದರೆ ವೃತ್ತಿಪರ
> ತಂತ್ರಾಂಶಗಳಿಗಿಂತ ಹೆಚ್ಚಿನ ಅನುಕೂಲವನ್ನೂ ಇದು ಕಲ್ಪಿಸಿಕೊಡುತ್ತದೆ.
>
> ಇದರಲ್ಲಿರುವ ಒಂದೇ ಒಂದು ಕೊರತೆಯೆಂದರೆ ಪತ್ರಿಕೆ, ಪುಸ್ತಕಗಳಲ್ಲಿ ಛಾಯಾಚಿತ್ರಗಳನ್ನು
> ಮುದ್ರಿಸುವುದಕ್ಕೆ ಬಳಸುವು ‘ಸಿಎಂವೈಕೆ’ ಮಾದರಿಯ ಚಿತ್ರಗಳನ್ನು ಸೃಷ್ಟಿಸುವುದಕ್ಕೆ
> ಬೇಕಿರುವ ಸವಲತ್ತು ಇಲ್ಲ. ಆದರೆ ಇದಕ್ಕೆ ಸಂಬಂಧಿಸಿದ ಪ್ಲಗ್‌ಇನ್ ಅಥವಾ ಹೆಚ್ಚುವರಿ
> ತಂತ್ರಾಂಶಗಳು ದೊರೆಯುತ್ತವೆ. ಅವುಗಳನ್ನು ಬಳಸಿಕೊಂಡರೆ ಈ ಕೊರತೆ
> ನೀಗಿಸಿಕೊಳ್ಳಬಹುದು.
>
> ಫೋಟೊಶಾಪ್ ಮತ್ತು ಆ ಮಾದರಿಯ ತಂತ್ರಾಂಶಗಳನ್ನು ಬಳಸುತ್ತಿದ್ದವರಿಗೆ ಇದನ್ನು
> ಬಳಸುವುದಕ್ಕೆ ಆರಂಭದಲ್ಲಿ ಸ್ವಲ್ಪ ಕಿರಿಕಿರಿಯಾಗುತ್ತದೆ. ಇದು ಸಹಜವೂ ಹೌದು.
> ಏಕೆಂದರೆ ಈ ತಂತ್ರಾಂಶದ ಯೂಸರ್ ಇಂಟರ್‌ಫೇಸ್ ಸ್ವಲ್ಪ ಭಿನ್ನವಾಗಿದೆ.
>
> ಇದನ್ನು ತಂತ್ರಾಂಶ ರೂಪಿಸುವವರು ಉದ್ದೇಶ ಪೂರ್ವಕವಾಗಿ ಮಾಡಿದ್ದೇನೂ ಅಲ್ಲ.
> ಪ್ರತಿಯೊಂದು ವಿನ್ಯಾಸವೂ ಪೇಟೆಂಟ್ ಆಗಿರುವುದರಿಂದ ಅದಕ್ಕಿಂತ ಭಿನ್ನವಾಗಿರುವುದನ್ನು
> ಮಾಡಲೇಬೇಕಾದ ಅನಿವಾರ್ಯತೆ ಮುಕ್ತ ತಂತ್ರಾಂಶ ರೂಪಿಸುವವರ ಮೇಲೆ ಇರುತ್ತದೆ. ಬಳಸುತ್ತಾ
> ಹೋದಂತೆ ಈ ತೊಂದರೆಯನ್ನೂ ನಿವಾರಿಸಿಕೊಳ್ಳಬಹುದು.
>
> ಇದನ್ನು ಕಲಿಯುವುದಕ್ಕೆ ಬೇಕಿರುವ ಸಾಕಷ್ಟು ವಿಡಿಯೊ ಪಾಠಗಳು ಮತ್ತು ಬಹಳ ವಿವರ
> ಟ್ಯುಟೋರಿಯಲ್ ಕೂಡಾ ಜಿಂಪ್ ತಾಣದಲ್ಲೇ ಲಭ್ಯ. ಸಾಲದ್ದಕ್ಕೆ ಇದನ್ನು ಸುಧಾರಿಸುವ
> ಸಮುದಾಯವೂ ಬಹಳ ದೊಡ್ಡದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಬಳಸುವ ನೀವು ಪೈರಸಿ
> ಮಾಡಿದ್ದೇನೆಂಬ ಪಾಪಪ್ರಜ್ಞೆಯಿಂದ ನರಳುವ ಅಗತ್ಯವಿಲ್ಲ. ಈ ತಂತ್ರಾಂಶ ಡೌನ್‌ಲೋಡ್
> ಮಾಡಿಕೊಳ್ಳಲು ಈ ಕೊಂಡಿ ಬಳಸಿ: https://goo.gl/H5M1OX
>
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to