Thank u sir..intresting....
On Jun 18, 2016 3:28 PM, "HAREESHKUMAR K Agasanapura" <harihusk...@gmail.com>
wrote:

> ಸೀನಿನ ಲೆಕ್ಕಾಚಾರ!
> *ಕೊಳ್ಳೇಗಾಲ ಶರ್ಮ*
>
>
> <https://4.bp.blogspot.com/-aKakPn9TVtA/V1cpkxVGmBI/AAAAAAAAe9Q/Zuet51XUyYw2CecmxqO8Ft_VdaG5l8KzgCLcB/s1600/sneezedynamics.jpg>
>
> ನಾನು ಸೀನಿದಾಗಲೆಲ್ಲ ಕೇಳುತ್ತಿದ್ದ ಮಾತು. “ಅಯ್ಯೋ. ಒಂಟಿ ಸೀನು ಸೀನಿಬಿಟ್ಟೆಯಲ್ಲೋ?
> ಇನ್ನೊಂದು ಸೀನು ಸೀನಿಬಿಡು.” ಇದು ಅಮ್ಮ ಸೀನಿನಿಂದ ನಾನು ಪಡುತ್ತಿದ್ದ ಅವಸ್ಥೆಯನ್ನು ಕಂಡು
> ತಮಾಷೆ ಮಾಡಲು ಹೇಳುತ್ತಿದ್ದಳೋ, ಅಥವಾ ಸೀನಿದ್ದರಿಂದಾದ ಮುಜುಗರ ಕಡಿಮೆಯಾಗುವಂತೆ ಸಮಾಧಾನ
> ಮಾಡಲು ಹೇಳುತ್ತಿದ್ದಳೋ ಗೊತ್ತಿಲ್ಲ. ಒಟ್ಟಾರೆ ಸೀನುವುದು ಎಂದರೆ ಕಸಿವಿಸಿಯ ವಿಷಯ
> ಎನ್ನುವುದಂತೂ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿ ಬಿಟ್ಟಿದೆ. ಅಮ್ಮ ಏನೋ ಇನ್ನೊಮ್ಮೆ
> ಸೀನು ಎಂದು ಬಿಡುತ್ತಿದ್ದಳು. ಆದರೆ ಹಾಗೆ ಬೇಕೆಂದ ಹಾಗೆ, ಬೇಕಾದಷ್ಟು ಬಾರಿ ಸೀನಲು ಆದೀತೇ?
> ಅದೇನು ನಮ್ಮ ಮಾತು ಕೇಳುವ ವಿದ್ಯಮಾನವೇ?
>
> ಹೀಗೆಂದು ನಾವು ನೀವು ಹೇಳಿಬಿಡಬಹುದು. ಆದರೆ ಅಮೆರಿಕದ ತಂತ್ರಜ್ಞಾನದ ಕಾಶಿ
> ಮಸ್ಯಾಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಭೌತವಿಜ್ಞಾನಿಯಾಗಿರುವ
> ಲಿಡಿಯಾ ಬೋರೊಯಿಬಾ ಹೀಗೆನ್ನುವುದಿಲ್ಲ. ಹಾಗಂತ ಆಕೆಗೆ ಸದಾ ಸೀನುವ ಖಾಯಿಲೆ ಇದೆ ಎನ್ನಬೇಡಿ.
> ಆಕೆ ಸೀನಿನ ಭೌತಶಾಸ್ತ್ರವನ್ನು ಲೆಕ್ಕ ಹಾಕುತ್ತಿರುವ ವಿಜ್ಞಾನಿ ಅಷ್ಟೆ. ಬೇಕೆಂದಾಗ ನಿಮಗೆ
> ಸೀನು ತರಿಸಿ, ನೀವು ಸೀನುವ ಸಂದರ್ಭದಲ್ಲಿ ನಡೆಯುವ ವಿದ್ಯಮಾನವನ್ನು ಕೂಲಂಕಷವಾಗಿ
> ಲೆಕ್ಕಾಚಾರ ಹಾಕುವ ಕೆಲಸದಲ್ಲಿ ಲಿಡಿಯಾ ನಿರತೆ. ಈಕೆಯ ಪ್ರಕಾರ ಸೀನುವ ಬಗ್ಗೆ ನಮಗೆ
> ಹೆಚ್ಚೇನೂ ತಿಳಿದಿಲ್ಲವಂತೆ.
>
> ನಿಜ. ಮೂಗಿಗೆ ಒಂದಿಷ್ಟು ಕಿರಿಕಿರಿಯಾದಾಗ ಫಟಾರನೆ ಆಗುವ ಮಹಾಸ್ಫೋಟವೇ ಸೀನು.
> ಮೆಣಸಿನ ಪುಡಿ, ದೂಳಿನಂತಹ ಕಿರಿಕಿರಿಯುಂಟು ಮಾಡುವ ವಸ್ತುಗಳು ಮೂಗಿನೊಳಗೆ ಹೊಕ್ಕಾಗ
> ಅವನ್ನು ಹೊರದೂಡಲು ನಮಗೆ ಪ್ರಕೃತಿ ನೀಡಿರುವ ವರ ಇದು ಎನ್ನುತ್ತಾರೆ ಜೀವಿವಿಜ್ಞಾನಿಗಳು.
> ಸೀನಲು ಕಾರದ ಪುಡಿಯೋ, ನಶ್ಯವೋ ಇರಲೇ ಬೇಕೆಂದಿಲ್ಲ. ಉಸಿರಾಟದ ಅಂಗಗಳಿಗೆ ಸೂಕ್ಷ್ಮಾಣುಗಳು
> ಸೋಂಕಿ ಕಾಯಿಲೆಯಾದಾಗಲೂ ಸೀನು ಬರುವುದುಂಟು. ಸಾಮಾನ್ಯವಾಗಿ ನೆಗಡಿ, ಫ್ಲೂ, ಮುಂತಾದ
> ಸೋಂಕುಗಳಾದಾಗಲೂ ಸೀನುವುದು ಇದ್ದದ್ದೇ. ಸೀನಿನ ಹಾಗೆಯೇ ಕೆಮ್ಮೂ ಕೂಡ ಸ್ಫೋಟಕ ವಿದ್ಯಮಾನ.
> ಎರಡೂ ಸಂದರ್ಭಗಳಲ್ಲಿ ಬಲೂನು ಒಡೆದಂತೆ ಇದ್ದಕ್ಕಿದ್ದ ಹಾಗೆ ಗಾಳಿ ಎದೆಯೊತ್ತಿಕೊಂಡು ಬಂದು
> ಹೊರಗಡೆಗೆ ಸ್ಫೋಟಿಸುತ್ತದೆ. ಜೊತೆಗೆ ಮೂಗಿನಲ್ಲಿರುವ ಸಣ್ಣ ಕಣಗಳನ್ನೂ, ಹನಿಗಳನ್ನೂ ಹೊತ್ತು
> ಬರುತ್ತದೆ. ಇದುವೇ ಸೀನು. ಬಾಯಿಯಿಂದ ಬಂದಾಗ ಅದು ಕೆಮ್ಮು.
>
> ಕೆಮ್ಮು ಮತ್ತು ಸೀನಿನ ಬಗ್ಗೆ ವೈದ್ಯರಿಗೆ ಬಲು ಕಾಳಜಿ. ಏಕೆಂದರೆ ಹಲವು ರೋಗಗಳು
> ಹರಡುವುದಕ್ಕೆ ಇವು ಮುಖ್ಯ ಕಾರಣವೆಂದು ಅವರು ನಂಬಿಕೆ. ಸೀನಿದಾಗ ಗಾಳಿಯ ಜೊತೆ ಹೊರಬೀಳುವ
> ಸಣ್ಣ ಹನಿಗಳು ರೋಗಾಣುಗಳನ್ನು ಹೊತ್ತೊಯ್ಯುತ್ತವೆ. ಗಾಳಿಯಲ್ಲಿ ಹರಡುತ್ತವೆ. ಜೊತೆಗೇ
> ಹನಿಗಳು ಸೂಕ್ಷ್ಮವಾಗಿದ್ದಷ್ಟೂ ಹೆಚ್ಚೆಚ್ಚು ದೂರಕ್ಕೆ ಪಸರಿಸುತ್ತವೆ ಎನ್ನುವುದು ವೈದ್ಯರ
> ನಂಬಿಕೆ. ಆದ್ದರಿಂದಲೇ ನೆಗಡಿಯಾದವರ ಬಳಿ ಹೋಗಬೇಡಿ ಎನ್ನುವ ಸಲಹೆ. ಸಮೀಪ ಹೋಗಬೇಡಿ ಎಂದರೆ
> ಎಷ್ಟು ಸಮೀಪ? ಕೋಣೆಯ ಈ ತುದಿಯಲ್ಲಿ ಕುಳಿತುಕೊಂಡು ಆ ತುದಿಯಲ್ಲಿರುವ ಕೆಮ್ಮಿನ ರೋಗಿಯನ್ನು
> ಮಾತನಾಡಿಸಿದರೆ ಕ್ಷೇಮವಿರಬಹುದೇ? ಅಥವಾ ಇನ್ನೂ ಹತ್ತಿರ ಹೋದರೆ ತೊಂದರೆಯಿಲ್ಲವೇ? ಈ
> ಪ್ರಶ್ನೆಗಳಿಗೆ ಬಹುಶಃ ವೈದ್ಯರೂ ಉತ್ತರ ಹೇಳರು. ಲಿಡಿಯಾಳ ಸಂಶೋಧನೆಯ ಗಮನವೆಲ್ಲವೂ ಇಂತಹ
> ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರತ್ತ ಎಂದರೆ ತಪ್ಪೇನಿಲ್ಲ.
>
> ಲಿಡಿಯಾ ಪ್ರಕಾರ ಸೀನು ಮತ್ತು ಕೆಮ್ಮು ದ್ರವಚಲನೆಯ ವಿದ್ಯಮಾನಗಳು. ಅರ್ಥಾತ್, ದ್ರವ
> ಪದಾರ್ಥಗಳು ಗಾಳಿಯಲ್ಲಿ ಚಲಿಸುವ ಘಟನೆಗಳು. ಚಿಲುಮೆಯಿಂದ ಚಿಮ್ಮುವ ನೀರಿನ ಹನಿಗಳು
> ಚಲಿಸುವಂತೆಯೇ ಇಲ್ಲಿಯೂ ಹನಿಗಳು ಚಲಿಸುತ್ತವೆ. ಆದ್ದರಿಂದ ಈ ಹನಿಗಳ ಚಲನೆಗೂ ಸೀನುವಾಗ
> ಉಂಟಾಗುವ ಸ್ಫೋಟ (ಗಾಳಿಯ ಒತ್ತಡ) ದ ಬಲ ಹಾಗೂ ಉಸಿರಿನಲ್ಲಿರುವ ದ್ರವದ ಪ್ರಮಾಣಕ್ಕೂ
> ಸಂಬಂಧವಿರಬೇಕು. ಇದನ್ನು ಅಧ್ಯಯನ ಮಾಡಿದರೆ ಬಹುಶಃ ಸೀನಿದಾಗ ಹನಿಗಳೆಷ್ಟು ದೂರ
> ಹಾರಿಯಾವೆಂದು ಊಹಿಸಬಹುದು? ಅದಕ್ಕೆ ತಕ್ಕಂತೆ ರೋಗಿಗಳಿಂದ ದೂರವಿರಲೂ ಪ್ರಯತ್ನಸಿಬಹುದು.
>
> ನಿಜ. ಇದು ದ್ರವಚಲನೆಯ ವಿದ್ಯಮಾನ. ಆದರೆ ಇಲ್ಲಿರುವ ದ್ರವದ ಹನಿಗಳು ಮಳೆಯ ಹನಿಗಳಂತೆಯೋ,
> ಚಿಲುಮೆಯಿಂದ ಸಿಂಪರಿಸುವ ಹನಿಗಳಂತೆಯೇ ಏಕರೂಪದವಲ್ಲ. ನೀರಿನಂತಹ ಉಗುಳು, ಅಂಟಿನಂತಹ ಸಿಂಬಳ
> ಮತ್ತು ಗಾಳಿ ಇವೆಲ್ಲವೂ ಕೂಡಿ ಉಂಟಾದ ವಿಶಿಷ್ಟ ದ್ರವ. ಈ ದ್ರವದ ಚಲನೆಯ ವೈಶಿಷ್ಟ್ಯವೇನೆಂದು
> ತಿಳಿದಲ್ಲಿ ಅವು ಚಲಿಸುವ ದಿಕ್ಕು, ದೂರವನ್ನೆಲ್ಲ ಊಹಿಸಬಹುದು. ಹೀಗೆಂದು ಆಲೋಚಿಸಿರುವ
> ಲಿಡಿಯಾ ಬೇಕೆಂದಾಗ ಸೀನುವಂತೆ ಮಾಡಿ ಸೀನಿನ ವೀಡಿಯೊ ಚಿತ್ರಣ ತೆಗೆಯುತ್ತಾರೆ. ಪ್ರತಿ
> ಸೆಕೆಂಡಿಗೆ ನೂರಕ್ಕೂ ಹೆಚ್ಚು ಚಿತ್ರ ತೆಗೆಯುವ ತೀವ್ರಗತಿಯ ಛಾಯಾಗ್ರಹಣ ತಂತ್ರವನ್ನು ಈಕೆ
> ಬಳಸುತ್ತಾರೆ. ಹೀಗೆ ದೊರೆತ ವೀಡಿಯೋ ಚಿತ್ರದಲ್ಲಿ ಸೀನಿದಾಗ ಉಂಟಾಗುವ ಕಣಗಳು ಹೇಗೆ
> ಹರಡಿಕೊಳ್ಳುತ್ತವೆ ಎನ್ನುವುದನ್ನು ಗಮನಿಸಿ, ಅದಕ್ಕಾಗಿ ಒಂದು ಗಣೀತೀಯ ಮಾದರಿ (ಸೂತ್ರ)
> ವನ್ನು ರೂಪಿಸಿದ್ದಾರೆ. ಈ ಮಾದರಿ ಸೀನಿದಾಗ ಬಾಯಿಯಿಂದ ಹೊರಬಂದ ಹನಿಗಳು ಎತ್ತ ಮತ್ತು ಹೇಗೆ
> ಪಸರಿಸುತ್ತವೆ ಎಂದು ಲೆಕ್ಕ ಹಾಕಬಲ್ಲವು. ಸೀನಿನ ಸ್ಪಷ್ಟ ಚಿತ್ರವನ್ನು ತೋರಬಲ್ಲವು.
>
> ಸೀನು ಎಂದರೆ ಒಂದು ಮಹಾಸ್ಫೋಟವಷ್ಟೆ. ಎದೆಯೊಳಗಿನ ಗಾಳಿಯ ಒತ್ತಡ ಇದ್ದಕ್ಕಿದ್ದ ಹಾಗೆ
> ಹೆಚ್ಚಿ, ಥಟ್ಟನೆ ಬಾಯಿ-ಮೂಗಿನಿಂದ ಹೊರ ಚಿಮ್ಮುತ್ತದೆ. ಹೀಗೆ ಒತ್ತಡ ಹೆಚ್ಚಾಗುವಂತೆ ಮಾಡುವ
> ದೇಹದ ಕ್ರಿಯೆಗಳ ಕಥೆಯೇ ಬೇರೆ. ಅದು ಇಲ್ಲಿ ಬೇಡ. ಆದರೆ ಸ್ಫೋಟಗೊಂಡು ಹೊರ ಬಂದ ಸೀನಿನ ಗಾಳಿ
> ಮೊದಲಿಗೆ ದುಂಡಗಿನ ಬಲೂನಿನಂತೆಯೇ ಇರುತ್ತದೆ. ಕ್ರಮೇಣ ಸುತ್ತಲಿನ ಗಾಳಿಯ ಒತ್ತಡಕ್ಕೆ
> ಅನುಗುಣವಾಗಿ ದೊಡ್ಡದಾಗುತ್ತದೆ. ಹಾಗೆಯೇ ಸುತ್ತಲಿನ ಗಾಳಿಯನ್ನು ಒಳಗೆ ಸೆಳೆದುಕೊಂಡು
> ಒಡೆಯುತ್ತದೆ. ಹಲವು ಬಲೂನುಗಳಾಗುತ್ತದೆ.
>
> ಈ ಹಿಂದೆಯೂ ಇಂತಹ ಚಿತ್ರಗಳನ್ನು ತೆಗೆಯಲಾಗಿತ್ತು. ಆದರೆ ಹನಿಗಳ ಚಲನೆಯನ್ನು ಲಿಡಿಯಾ
> ಮಾಡಿರುವಂತೆ ಕೂಲಂಕಷವಾಗಿ ಮಾಡಿರಲಿಲ್ಲ. ಬಾಯಿ-ಮೂಗಿನಿಂದ ಹೊರ ಬಂದ ಹನಿಗಳು ಬಿಡಿ,
> ಬಿಡಿಯಾಗಿ ಹರಡಿಕೊಳ್ಳುತ್ತವೆಂದು ಇದುರವೆಗೂ ತಿಳಿಯಲಾಗಿತ್ತು. ಆದರೆ ಲಿಡಿಯಾ ತೆಗೆದಿರುವ
> ವೀಡಿಯೋಗಳು ತಿಳಿಸುವುದೇ ಬೇರೆ. ಎಲ್ಲ ಹನಿಗಳೂ ಬಿಡಿಯಾಗಿರುವುದಿಲ್ಲ. ಸಿಂಬಳದ ಅಂಟುತನ
> ಇದನ್ನು ತಡೆಗಟ್ಟುತ್ತದೆ. ಜೇಡರಬಲೆಯ ಮೇಲೆ ಹನಿಗಳು ಮುತ್ತುಗಳಂತೆ ಸಂಗ್ರಹವಾಗಿರುವುದನ್ನು
> ಕಂಡಿರುತ್ತೀರಲ್ಲ? ಇಲ್ಲಿಯೂ ಹಾಗೆಯೇ ಹನಿಗಳು ಸಿಂಬಳದ ಎಳೆಗಳ ಮೇಲೆ ಹರಡಿಕೊಂಡಿರುತ್ತವೆ.
>
> ಇದರ ಪರಿಣಾಮ: ಸಣ್ಣ ಹನಿಗಳು ಕೂಡ ದೊಡ್ಡದಾಗಿ ಬೆಳೆಯಬಲ್ಲವು. ದೊಡ್ಡ ಹನಿಗಳು ಕೂಡ
> ಸಿಂಬಳದೆಳೆಯ ಆಸರೆಯಲ್ಲಿ ಬಲು ದೂರ ಚಲಿಸಬಲ್ಲುವು. ಕೈಯಳತೆಯ ದೂರದಲ್ಲಿದ್ದರೆ ಸೋಂಕು
> ತಗುಲುವುದಿಲ್ಲವೆನ್ನುವಂತಿಲ್ಲ ಎನ್ನುತ್ತಾರೆ ಲಿಡಿಯಾ. ಕೆಲವರು ಕೈ ಕುಲುಕದೆಯೇ ಕೈ ಜೋಡಿಸಿ
> ನಮಸ್ತೆ ಹೇಳುತ್ತಾರೆ. ಕೈ ಕುಲುಕಿದಾಗ ಬಲು ಸಮೀಪವಿರುತ್ತೇವೆಯಾದ್ದರಿಂದ ಸೋಂಕುಂಟಾಗುವ
> ಸಾಧ್ಯತೆ ಜಾಸ್ತಿ. ನಮಸ್ತೆ ಎಂದು ಕೈ ಜೋಡಿಸಿದರೆ ಹೀಗಾಗದು ಎನ್ನುವುದು ಇವರ ತರ್ಕ. ಫ್ಲೂ
> ಹಾಗೂ ಕಳೆದ ವರ್ಷ ಭಾರಿ ಸುದ್ದಿ ಮಾಡಿದ್ದ ಇಬೊಲಾ ವೈರಸ್ ಗಳು ಈ ತೆರನಾಗಿ ದೇಹ
> ಸಂಪರ್ಕದಿಂದಲೇ ದಾಟಿ ಬರುತ್ತವೆ. ಅಂತಹ ಸಂದರ್ಭದಲ್ಲಿ ‘ನಮಸ್ತೆ’ ನೆರವಾಗಬಹುದು. ಆದರೆ
> ನೆಗಡಿ ಹಾಗೂ ಹಂದಿಜ್ವರ ಅಥವಾ ಕೋಳಿಜ್ವರಗಳ ಸಂದರ್ಭದಲ್ಲಿ ಕೋಣೆಯಿಂದ ಹೊರ ಹೋದರೂ ಸೋಂಕು
> ಬೆಂಬತ್ತಿ ಬರಬಹುದು ಎನ್ನುತ್ತದೆ ಲಿಡಿಯಾ ರವರ ಸಂಶೋಧನೆಗಳು.
>
> ಇದರಿಂದೇನು ಪ್ರಯೋಜನ ಎನ್ನಬೇಡಿ. ಲಿಡಿಯಾರ ಸೂತ್ರಗಳಂತೆಯೇ ಎಲ್ಲ ಸೀನಿನ ಸಂದರ್ಭಗಳೂ
> ಇದ್ದಲ್ಲಿ, ಗಾಳಿಯಲ್ಲಿ ಹರಡುವ ರೋಗಗಳನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳುವುದು
> ಸುಲಭವಾದೀತು ಎನ್ನುವುದು ಲಿಡಿಯಾರ ತರ್ಕ. ಅದಕ್ಕೂ ಮುನ್ನ, ಹನಿಗಳಲ್ಲಿ ಎಷ್ಟು ರೋಗಾಣುಗಳು
> ಇರಬಹುದು? ಎಷ್ಟು ಹನಿಗಳಿಂದ ರೋಗಗಳುಂಟಾಗಬಹುದು? ಎಂತಹ ರೋಗಾಣುಗಳು ಹೀಗೆ ಹನಿಗಳ ಮೂಲಕ
> ಹರಡಬಲ್ಲವು? ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕು. ಅದುವರೆವಿಗೂ ಮೂಗಿಗೆ ಬಟ್ಟೆಯನ್ನೋ,
> ಕರ್ಚೀಫನ್ನೋ ಕಟ್ಟಿಕೊಂಡು, ನಮಸ್ತೆ ಹೇಳುತ್ತ ಎಚ್ಚರದಿಂದಿರಬೇಕಷ್ಟೆ.
>
> --
> Hareeshkumar K
> Govt High School
> Huskuru vi & po
> Malavalli Tq
> Mandya Dt
> mob. 9880328224
> e-mail harihusk...@gmail.com
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to