ತುಂಬಾ ಧನ್ಯವಾದ ಗಳು ಉಪಯುಕ್ತ ಮಾಹಿತಿ ದೊರೆಯುವಂತೆ ಮಾಡಿದ್ದ ಕ್ಕೆ.
On 25 Feb 2017 4:33 am, "HAREESHKUMAR K Agasanapura" <harihusk...@gmail.com>
wrote:

> http://m.prajavani.net/article/2017_02_23/473614
>
> *ಸರ್ಜನರ, ದುರ್ಜನರ ಕೈಯಲ್ಲಿ ಸ್ಟೆಂಟ್*
>
> 23 Feb, 2017
>
> ನಾಗೇಶ್ ಹೆಗಡೆ
>
>
> <https://www.facebook.com/sharer/sharer.php?u=https%3A%2F%2Fgoo.gl%2FniQ5Go>
> <https://twitter.com/intent/tweet?text=%E0%B2%B8%E0%B2%B0%E0%B3%8D%E0%B2%9C%E0%B2%A8%E0%B2%B0%2C+%E0%B2%A6%E0%B3%81%E0%B2%B0%E0%B3%8D%E0%B2%9C%E0%B2%A8%E0%B2%B0+%E0%B2%95%E0%B3%88%E0%B2%AF%E0%B2%B2%E0%B3%8D%E0%B2%B2%E0%B2%BF+%E0%B2%B8%E0%B3%8D%E0%B2%9F%E0%B3%86%E0%B2%82%E0%B2%9F%E0%B3%8D+https%3A%2F%2Fgoo.gl%2FniQ5Go>
> <https://plus.google.com/share?url=https%3A%2F%2Fgoo.gl%2FniQ5Go>
> <http://www.pinterest.com/pin/find/?url=https%3A%2F%2Fgoo.gl%2FniQ5Go>
> <http://www.linkedin.com/shareArticle?mini=true&title=%E0%B2%B8%E0%B2%B0%E0%B3%8D%E0%B2%9C%E0%B2%A8%E0%B2%B0%2C+%E0%B2%A6%E0%B3%81%E0%B2%B0%E0%B3%8D%E0%B2%9C%E0%B2%A8%E0%B2%B0+%E0%B2%95%E0%B3%88%E0%B2%AF%E0%B2%B2%E0%B3%8D%E0%B2%B2%E0%B2%BF+%E0%B2%B8%E0%B3%8D%E0%B2%9F%E0%B3%86%E0%B2%82%E0%B2%9F%E0%B3%8D+&url=https%3A%2F%2Fgoo.gl%2FniQ5Go>
>
> ವಜ್ರಗಳ ರಾಜಧಾನಿ ಎನಿಸಿದ ಸೂರತ್ ನಗರದ ಒಂದು ಫ್ಯಾಕ್ಟರಿಯ ಹಿಂಬಾಗಿಲ ದೃಶ್ಯ: ವಜ್ರದ
> ಬೆಂಡೋಲೆಯನ್ನು ಇಡಬಹುದಾದ ಪುಟ್ಟ ಪುಟ್ಟ  ಡಬ್ಬಗಳ ಪ್ಯಾಕಿಂಗ್ ಕೆಲಸ ನಡೆಯುತ್ತಿರುತ್ತದೆ.
> ಇಬ್ಬರು ಗನ್‌ಮೆನ್ ಮತ್ತು ವಿಮಾ ಕಂಪನಿಯ ಇಬ್ಬರು ಅಧಿಕಾರಿಗಳ ಕಣ್ಗಾವಲಿನಲ್ಲಿ ಒಂದೊಂದೇ
> ಡಬ್ಬದ ತಪಶೀಲು ನಡೆಯುತ್ತದೆ. ಎಲ್ಲವೂ ಐರೋಪ್ಯ ಮಾನದಂಡದ ಪ್ರಕಾರ ಶ್ರೇಷ್ಠ ಗುಣಮಟ್ಟದ್ದೇ
> ಆಗಿರಬೇಕು.
>
> ತಪಾಸಣೆ ಮುಗಿದ ಮೇಲೆ ಚಿಕ್ಕ ಬ್ರೀಫ್‌ಕೇಸ್‌ನಲ್ಲಿ 12-12 ಡಬ್ಬಗಳನ್ನು ಜೋಡಿಸಲಾಗುತ್ತದೆ.
> ಬ್ರೀಫ್‌ಕೇಸ್ ಹಿಡಿದು ಸಾದಾ ಡ್ರೆಸ್‌ನ ಅಧಿಕಾರಿ ಆ ಕಚೇರಿಯ ಹೊರಗೆ ನಿಂತ ಸಾದಾ
> ಕಾರಿನಲ್ಲಿ  ವಿಮಾನ ನಿಲ್ದಾಣಕ್ಕೆ ಹೊರಡುತ್ತಾನೆ. ಗನ್ ಹಿಡಿದ ಭದ್ರತಾ ಅಧಿಕಾರಿಗಳು
> ಹಿಂಬಾಲಿಸುತ್ತಾರೆ.
>
> ಡಬ್ಬಗಳಲ್ಲಿ ಏನಿವೆ, ವಜ್ರಗಳೆ? ಅಲ್ಲ, ಅವು ಸ್ಟೆಂಟ್ (Stent) ಎಂಬ ವೈದ್ಯಕೀಯ ಸಾಧನಗಳು.
> ಅವು ನಮ್ಮ ಬಾಲ್ ಪಾಯಿಂಟ್ ಪೆನ್ ಒಳಗಿನ ರೀಫಿಲ್ ಕೊಳವೆಗೆ ಸಿಕ್ಕಿಸುವಂಥ ಸ್ಪ್ರಿಂಗನ್ನು
> ಹೋಲುತ್ತವೆ. ಆದರೆ ಅದಕ್ಕಿಂತ ಚಿಕ್ಕದು, ಅದಕ್ಕಿಂತ ಮಿದು. ಒಂದು ಬೆಂಕಿಕಡ್ಡಿಯನ್ನು
> ನಾಲ್ಕಾಗಿ ಸೀಳಿದರೆ ಕಾಣುವಷ್ಟು ಸಪೂರ. ಆದರೆ ಸ್ಪ್ರಿಂಗ್ ಅಲ್ಲ, ಜಗ್ಗಿದರೆ ಹಿಗ್ಗಬಲ್ಲ
> ಜಾಳಿಗೆ. ಅದರೊಳಗೆ ಇಡೀ ಬೆಂಕಿಕಡ್ಡಿಯನ್ನು ತೂರಿಸಬಹುದು.
>
> ಒಂದು ಜಾಳಿಗೆಯ ಬೆಲೆ ಒಂದೂವರೆ ಲಕ್ಷ ರೂಪಾಯಿ. ಒಂದು ಬ್ರೀಫ್‌ಕೇಸಿನಲ್ಲಿ ಐದು ಕೋಟಿ
> ರೂಪಾಯಿ ಮೌಲ್ಯದ ಸ್ಟೆಂಟ್‌ಗಳನ್ನು ಸಾಗಿಸಬಹುದು. ವೈದ್ಯಕೀಯ ತಂತ್ರಜ್ಞಾನದ ಪವಾಡವೇ
> ಇದರಲ್ಲಿದೆ. ಜೇಡನ ಬಲೆಯ ಸಪೂರ ಎಳೆಯ ಗಾತ್ರದ ಉಕ್ಕು, ನಿಕ್ಕೆಲ್, ಟೈಟಾನಿಯಂ ಮಿಶ್ರಲೋಹದ
> ತಂತಿಯ ತುಂಡುಗಳನ್ನು ನೂರಾರು ಕುಣಿಕೆಗಳ ಮೂಲಕ ಜಾಳಿಗೆಯಂತೆ ಹೆಣೆದಿರುತ್ತಾರೆ.
>
> ಒಮ್ಮೆ ಹಿಗ್ಗಿಸಿದರೆ ಅದು ಸುಲಭಕ್ಕೆ ಕುಗ್ಗುವುದಿಲ್ಲ. ಮತ್ತೆ ಅದರಲ್ಲೂ ವೈವಿಧ್ಯಗಳಿವೆ:
> ಪಾಲಿಯೆಸ್ಟರ್ ಸ್ಟೆಂಟ್, ಔಷಧವನ್ನು ಜಿನುಗಿಸಬಲ್ಲ ಸ್ಟೆಂಟ್, ಸ್ಮರಣಶಕ್ತಿಯುಳ್ಳ ಸ್ಟೆಂಟ್
> ಇವೆ. ರಕ್ತದಲ್ಲಿ ತಾನಾಗಿ ಕ್ರಮೇಣ ಕರಗಿ ಕಣ್ಮರೆಯಾಗಬಲ್ಲ ಜೈವಿಕ ಸ್ಟೆಂಟ್ ಇದೆ.
>
> ನಿಮ್ಮ ರಕ್ತದಲ್ಲಿ ಕೊಲೆಸ್ಟೆರಾಲ್ ಜಾಸ್ತಿ ಇದ್ದರೆ, ಹೃದಯದ ಸ್ನಾಯುಗಳ ಮಧ್ಯೆ ಸಾಗುವ
> ಆರ್ಟರಿ (ಅಪಧಮನಿ) ಎಂಬ ಶುದ್ಧ ರಕ್ತನಾಳದಲ್ಲಿ ಅದು ಗರಣೆಗಟ್ಟಿ ಕೂರಬಹುದು. ರಕ್ತ ಸಲೀಸಾಗಿ
> ಹೃದಯಕ್ಕೆ ಹೋಗಲಾರದು. ಹೃದಯ ಬಡಿತ ಆಗಾಗ ತಾಳ ತಪ್ಪುತ್ತಿರಬಹುದು. ಸುಸ್ತು, ಕಣ್ಣುಮಂಜು,
> ಎದೆನೋವು ಬರುತ್ತಿರಬಹುದು. ನಾಳ ಪೂರ್ತಿ ಕಟ್ಟಿಕೊಂಡಾಗ ಹಠಾತ್ ಹಾರ್ಟ್‌ಫೇಲ್ ಆಗಬಹುದು,
> ಇಲ್ಲವೆ ಲಕ್ವ ಹೊಡೆಯಬಹುದು.
>
> ಕೊಲೆಪಾತಕ ಕೊಲೆಸ್ಟೆರಾಲನ್ನು ಕರಗಿಸಬಲ್ಲ ಔಷಧಗಳೂ ಕೆಲಸ ಮಾಡದಿದ್ದರೆ ಡಾಕ್ಟರರು
> ಆಂಜಿಯೊಪ್ಲಾಸ್ಟಿ ಮಾಡುತ್ತಾರೆ. ಅಂದರೆ, ಕಾಲಿನ ಅಥವಾ ತೋಳಿನ ರಕ್ತನಾಳದೊಳಕ್ಕೆ ಸಪೂರ
> ಕೊಳವೆಯನ್ನು ತೂರಿಸಿ ತಳ್ಳುತ್ತಾರೆ. ಅದು ಹೃದಯದ ಬಳಿಯ ಆರ್ಟರಿಯಲ್ಲಿ ಕಿಲುಬುಗಟ್ಟಿದ
> ಜಾಗಕ್ಕೆ ಬಂದಾಗ, ಕೊಳವೆಯ ತುದಿಯನ್ನು ಬಲೂನಿನಂತೆ ಉಬ್ಬಿಸಬಹುದು.
>
> ಆರ್ಟರಿಯಲ್ಲಿ ಗಂಟಾಗಿ ನಿಂತಿದ್ದ ಜಿಡ್ಡು ಅತ್ತಿತ್ತ ಚದುರುತ್ತದೆ. ರಕ್ತಸಂಚಾರ
> ಸುಗಮವಾಗುತ್ತದೆ. ಆದರೆ ಕೆಲವು ದಿನಗಳ ಬಳಿಕ ಮತ್ತೆ ಅಲ್ಲಿ ಜಿಡ್ಡುಗಟ್ಟಬಹುದು. ಕೊಳವೆಯ
> ತುದಿಯಲ್ಲಿ ಸ್ಟೆಂಟ್ ಜಾಳಿಗೆಯನ್ನು ಸಿಕ್ಕಿಸಿದ್ದರೆ ಅದರ ಕತೆಯೇ ಬೇರೆ. ಬಲೂನಿನಂತೆ
> ಕೊಳವೆತುದಿ ಉಬ್ಬಿದಾಗ ಸ್ಟೆಂಟ್ ಅರಳುತ್ತದೆ. ಅಲ್ಲೇ ಆರ್ಟರಿಯ ಭಿತ್ತಿಯನ್ನು ಅಗಲಿಸಿ
> ಹಿಡಿದು ಹಾಗೇ ನಿಂತಿರುತ್ತದೆ. ರಕ್ತಸಂಚಾರ ಸಲೀಸು. ಇಡೀ ಚಿಕಿತ್ಸೆಯೂ ಸಲೀಸು. ಸರ್ಜರಿ
> ಬೇಡ, ರಕ್ತದಾನಿಗಳ ಮರ್ಜಿ ಬೇಡ, ಆಸ್ಪತ್ರೆಯಲ್ಲಿ ದೀರ್ಘಾವಧಿ ವಾಸ ಬೇಡ.
>
> ಆದರೆ ಸ್ಟೆಂಟ್ ತುಂಬಾ ದುಬಾರಿಯಾಗಿತ್ತು. ಆರೇಳು ಸಾವಿರ ಮೌಲ್ಯದ ಸ್ಟೆಂಟ್ ಒಂದೂವರೆ ಎರಡು
> ಲಕ್ಷ ರೂಪಾಯಿವರೆಗೆ ಬೆಲೆ ಹಿಗ್ಗಿಸಿಕೊಂಡೇ ರೋಗಿಯ ಆರ್ಟರಿಯೊಳಕ್ಕೆ ಹಿಗ್ಗಿ
> ಕೂರುತ್ತಿತ್ತು. ಬೆಲೆಯನ್ನು ನಿಯಂತ್ರಣದಲ್ಲಿ ಇಡಬೇಕಿದ್ದ ‘ಜೀವ ಉಳಿಸುವ ಔಷಧಗಳ ರಾಷ್ಟ್ರೀಯ
> ಪಟ್ಟಿ’ಯಲ್ಲಿ ಇದುವರೆಗೆ ಔಷಧಗಳ ಹೆಸರುಗಳು ಮಾತ್ರ ಇದ್ದವು. ಸ್ಟೆಂಟ್ ಎಂಬುದು ಔಷಧ
> ಅಲ್ಲವಲ್ಲ? ಕಳೆದ ಫೆಬ್ರುವರಿ 14ರಂದು ಸರ್ಕಾರ ಸ್ಟೆಂಟ್‌ಗಳ ಬೆಲೆಯ ಮೇಲೆ ಲಗಾಮು
> ಹಾಕುವುದಾಗಿ ಘೋಷಿಸಿತು.
>
> ಮರುದಿನವೇ ಪ್ರಧಾನಿ ಮೋದಿಯವರು ಉತ್ತರ ಪ್ರದೇಶದ ಚುನಾವಣಾ ರ‍್ಯಾಲಿಯೊಂದರಲ್ಲಿ ಎತ್ತರದ
> ದನಿಯಲ್ಲಿ ‘ಈ ಸ್ಟೆಂಟ್ ಏನಿದೆ, ಅದನ್ನು ಸರ್ಕಾರದ ಔಷಧ ನಿಯಂತ್ರಣ ಇಲಾಖೆಯೊಳಗೆ
> ತೂರಿಸಿಬಿಟ್ಟೆವು. ಅದರ ಬೆಲೆ 45 ಸಾವಿರ ರೂಪಾಯಿ ಇದ್ದುದು ಇನ್ನು ಮೇಲೆ ಅದನ್ನು ಕೇವಲ
> ಎಂಟು ಸಾವಿರ ರೂಪಾಯಿಗೆ ಮಾರಾಟ ಮಾಡಬೇಕಾಗುತ್ತದೆ. ಕಡುಬಡವರಿಗೂ ಅದು ನೆರವಿಗೆ ಬರುತ್ತದೆ’
> ಎಂದು ಹೇಳಿದರು. ಮೊದಲೇ ಲೆಕ್ಕ ಹಾಕಿಟ್ಟಂತೆ ‘ಪ್ರೇಮಿಗಳ ದಿನ’ದಂದೇ ಬೆಲೆ ಬಿಗಿತವನ್ನು
> ಘೋಷಿಸಿ, ಅತ್ತ ಔಷಧ ಸಚಿವ ಅನಂತಕುಮಾರ್ ಕೂಡ ‘ಇದೊಂದು ಹೃದಯ ತುಂಬಿದ ನಿರ್ಣಯ’ ಎಂದರು.
>
> ಸಹಜವಾಗಿ ಲಾಭಕೋರ ಖಾಸಗಿ ಆಸ್ಪತ್ರೆಗಳಿಗೆ ಗಂಟಲು ಕಟ್ಟಿದಂತಾಯಿತು. ಕೋರ್ಟಿನಿಂದ
> ತಡೆಯಾಜ್ಞೆ ತರುವ ಹಾಗೂ ಇಲ್ಲ. ಔಷಧಗಳಾಗಿದ್ದರೆ ಕತೆ ಬೇರೆ ಇರುತ್ತಿತ್ತು. ಕಳೆದ ವರ್ಷ 344
> ಬಗೆಯ ಅಕ್ರಮ ಕಾಂಬಿನೇಶನ್ ಔಷಧಗಳಿಗೆ ಸರ್ಕಾರ ನಿಷೇಧ ಹಾಕಿದಾಗ ಎಲ್ಲ ಕಂಪನಿಗಳೂ ಒಂದಾಗಿ
> ತಡೆಯಾಜ್ಞೆ ತಂದು ಕೂತಿವೆ. ಇಲ್ಲಿ ಹಾಗಲ್ಲ. ಸರ್ಕಾರ ನಿಷೇಧ ಹಾಕಲಿಲ್ಲ. ಮೂಲ ಬೆಲೆಯ ಮೇಲಿನ
> ಲಾಭಕ್ಕೆ ಖೋತಾ ಇಲ್ಲ.
>
> ಹಾಗಾಗಿ ಸ್ಟೆಂಟ್ ಉತ್ಪಾದಿಸುವ ಕಂಪನಿಗಳು ಉಸಿರೆತ್ತುವಂತಿಲ್ಲ. ಆದರೆ ರೋಗಿಯ ಮಂಚದ ಬಳಿ
> ಸ್ಟೆಂಟ್  ಬೆಲೆ ಹಿಗ್ಗಾಮುಗ್ಗಾ ಏರುತ್ತಿತ್ತು. ಈಗ ಸ್ಟೆಂಟ್ ಬೆಲೆ ಹಠಾತ್ ಇಳಿದಾಗ
> ಡಾಕ್ಟರ್‌ಗಳ, ಆಡಳಿತವರ್ಗದ ಹೃದಯ ಬಡಿತ ಜೋರಾಗಿದೆ. ಸದ್ಯಕ್ಕೇನೋ ‘ಸ್ಟಾಕ್ ಇಲ್ಲ’ ಎಂದು
> ರೋಗಿಗಳನ್ನು ವಾರ್ಡ್‌ಗಳಲ್ಲಿ ಕೂರಿಸಿದ್ದಾರೆ. ವಾರ್ಡ್‌ಶುಲ್ಕದಲ್ಲೇ ಗಳಿಕೆ ಹೆಚ್ಚಿಸಬೇಕೆ
> ವಿನಾ ಬೇರೆ ಏನೂ ಸ್ಟಂಟ್ ಮಾಡುವ ಹಾಗಿಲ್ಲ.
>
> ಸ್ಟೆಂಟ್ ಬೆಲೆ ಏರುತ್ತಿರುವುದರ ವಿರುದ್ಧ  2012ರಲ್ಲೇ ದಿಲ್ಲಿಯ ವೀರೇಂದ್ರ ಸಾಂಗ್ವಾನ್
> ಎಂಬ ವಕೀಲ ಹೈಕೋರ್ಟ್‌ನಲ್ಲಿ ಜನಹಿತ ಮೊಕದ್ದಮೆ ದಾಖಲಿಸಿದ್ದರು. ಮೂಲ ಬೆಲೆಗಿಂತ ಶೇ
> 654ರಷ್ಟು ಹೆಚ್ಚಾಗಿರುವುದು, ಆಮದು ಮಾಡಿಕೊಂಡ ಐದು ಸಾವಿರ ರೂಪಾಯಿಗಳ ಸ್ಟೆಂಟ್ ಇಲ್ಲಿನ
> ಆಸ್ಪತ್ರೆಗಳಲ್ಲಿ 1.95 ಲಕ್ಷ ರೂಪಾಯಿಗಳಿಗೆ ಏರಿ ಕೂತಿರುವುದು ಇವೆಲ್ಲ ಗೊತ್ತಿದ್ದೂ
> ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಏನೂ ಮಾಡುತ್ತಿಲ್ಲವೇಕೆ ಎಂದು ಅವರು
> ಕೇಳಿದ್ದರು.
>
> ಇದಕ್ಕೂ ತುಂಬ ಹಿಂದೆ, 1990ರಲ್ಲಿ ಸ್ಟೆಂಟ್‌ಗಳ ಬಳಕೆ ಆರಂಭವಾದಾಗಲೇ ರಕ್ಷಣಾ ಸಂಶೋಧನ
> ಇಲಾಖೆಯ ನಿರ್ದೇಶಕರಾಗಿದ್ದ ಎಪಿಜೆ ಅಬ್ದುಲ್ ಕಲಾಂ ಮತ್ತು ಹೈದರಾಬಾದಿನ ನಿಝಾಂ ಆಸ್ಪತ್ರೆಯ
> ಮುಖ್ಯಸ್ಥ ಡಾ. ಸೋಮರಾಜು ಸೇರಿ ಕಡಿಮೆ ಬೆಲೆಯ ಸ್ಟೆಂಟ್‌ಗಳ ಉತ್ಪಾದನೆ ಆರಂಭಿಸಿದ್ದರು.
> ‘ಕೆ.ಆರ್ (ಕಲಾಂ-ರಾಜು) ಸ್ಟೆಂಟ್’ ಹೆಸರಿನ ಏಳು ಸಾವಿರ ರೂಪಾಯಿಗಳ ಜಾಳಿಗೆಗಳಿಂದ
> ಡಾಕ್ಟರ್‌ಗಳಿಗೆ ಏನೂ ಗಿಟ್ಟುತ್ತಿರಲಿಲ್ಲ. ಅದೇ ವೇಳೆಗೆ ಇನ್ನೂ ಸುಧಾರಿತ, ಔಷಧ ಕಕ್ಕಬಲ್ಲ
> ಹೊಸ ಸ್ಟೆಂಟ್‌ಗಳೂ ಬಂದಿದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲೂ ಕೆ.ಆರ್. ಸ್ಟೆಂಟ್ ಮೂಲೆ
> ಸೇರಿದವು.
>
> 2015ರಲ್ಲಿ ಕಲಾಂ ನಿಧನಕ್ಕೆ ಮಾತಿನಲ್ಲೇ ಕಣ್ಣೀರು ಹರಿಸುವ ಬದಲು ಸುಧಾರಿತ ಸ್ಟೆಂಟ್‌ಗಳ
> ಉತ್ಪಾದನೆಗೆ ಸರ್ಕಾರ ಆದ್ಯತೆ ಕೊಡಲಿ ಎಂಬ ಒತ್ತಾಯ ಬಂದಿತ್ತು. ಆಗ ನಿಜಕ್ಕೂ ಲಕ್ಷ್ಯ
> ವಹಿಸಿದ್ದಿದ್ದರೆ ಈಗ ಬೆಲೆ ಕುಸಿತದಿಂದ ಸ್ಟೆಂಟ್‌ಗಳ ಅಭಾವ ತಲೆದೋರುತ್ತಿರಲಿಲ್ಲ.
>
> ಸ್ಟೆಂಟ್ ಸುತ್ತ ನೇಯ್ದುಕೊಂಡ ಲಾಭಕೋರ ಜಾಳಿಗೆ ಇಡೀ ಜಗತ್ತಿಗೆ ವ್ಯಾಪಿಸಿದೆ. ಅಮೆರಿಕದ
> ಮೇರಿಲ್ಯಾಂಡ್‌ನ ಆಸ್ಪತ್ರೆಯ ಮುಖ್ಯಸ್ಥ  ಡಾ. ಮಾರ್ಕ್ ಮೇಯ್ಡಿ ಎಂಬಾತ 585 ಹೃದ್ರೋಗಿಗಳಿಗೆ
> ಅನಗತ್ಯವಾಗಿ ಸ್ಟೆಂಟ್ ತೂರಿಸಿ ಕಂಪನಿಯೊಂದರಿಂದ ಶಾಭಾಸ್ ಮತ್ತು ಭಕ್ಷೀಸು ಪಡೆದಿದ್ದು
> ದಾಖಲಾಗಿದೆ. ಅಲ್ಲೇನು ಬಿಡಿ, ವೈದ್ಯಕೀಯ ವೆಚ್ಚವೆಲ್ಲ ವಿಮಾ ಕಂಪನಿಗಳ, ಸರ್ಕಾರಿ ಇಲಾಖೆಯ
> ತಲೆಗೆ ಸುತ್ತಿಕೊಳ್ಳುತ್ತದೆ. ಆದರೂ ಅಲ್ಲಿ 56 ವಯಸ್ಸಿನ ರೋಗಿಯೊಬ್ಬ ಪದೇ ಪದೇ ಡಾಕ್ಟರ್
> ಬಳಿಗೆ ಹೋಗಿ ತನ್ನ ಹೃದಯದ ಆರ್ಟರಿಗಳಿಗೆ ದಾಖಲೆಯ 67 ಸ್ಟೆಂಟ್‌ಗಳನ್ನು
> ಹಾಕಿಸಿಕೊಂಡಿದ್ದಾನೆ.
>
> ಅವರಿಬ್ಬರ ಹೃದಯ ವೈಶಾಲ್ಯ ಮೆಚ್ಚಿಕೊಳ್ಳುವಂಥದ್ದೇ ಹೌದಾದರೂ ‘ಸರ್ಕಾರಿ ವೆಚ್ಚ ಎಂದಮೇಲೆ
> ಹೇಳೋರು ಕೇಳೋರು ಯಾರೂ ಇಲ್ಲವೆ?’ ಎಂದು ಆ ಡಾಕ್ಟರ್‌ಗೆ ಸಾರ್ವಜನಿಕ ಛೀಮಾರಿ ಬಿದ್ದಿದೆ.
> ಇತ್ತ ಪಾಕಿಸ್ತಾನದಲ್ಲಿ ಕಳೆದ ತಿಂಗಳು ಇದೇ ದಿನಗಳಲ್ಲಿ ಸ್ಟೆಂಟ್ ಕುರಿತ ಹಗರಣವೊಂದು
> ಬಯಲಿಗೆ ಬಂದಿದೆ. ಅಲ್ಲಿನ ಪಂಜಾಬ್ ಪ್ರಾಂತದಲ್ಲಿ ಡಾಕ್ಟರ್ ಮತ್ತು ದಲ್ಲಾಳಿಗಳು ಸೇರಿ
> ಅಮೆರಿಕದ ವಂಚಕರಿಗಿಂತ ಎರಡು ಹೆಜ್ಜೆ ಮುಂದೆ ಹೋಗಿ, ರೋಗಿಗಳಿಗೆ ಅನಗತ್ಯ ನಕಲಿ
> ಸ್ಟೆಂಟ್‌ಗಳನ್ನು ನುಗ್ಗಿಸುತ್ತಾರೆ, ಸ್ಟೆಂಟ್ ಹಾಕದೇ ಎರಡು ಲಕ್ಷ ರೂಪಾಯಿ ಪೀಕಿಸಿದ್ದೂ
> ಗಲಾಟೆಯಾಗಿದೆ.
>
> ಜರ್ಮನಿ, ಅಮೆರಿಕ, ಜಪಾನ್ ದೇಶಗಳಿಂದ ಸ್ಟೆಂಟ್‌ಗಳನ್ನು ಆಮದು ಮಾಡಿಕೊಳ್ಳುವ 55 ದಲ್ಲಾಳಿ
> ಕಂಪನಿಗಳ ನೋಂದಣಿ ಆಗಿದೆಯಾದರೂ ಯಾವ ಆಸ್ಪತ್ರೆಗೂ ಅಲ್ಲಿಂದ ಸ್ಟೆಂಟ್ ಪೂರೈಕೆ ಆಗುತ್ತಿಲ್ಲ
> ಎಂಬುದು ಪತ್ತೆಯಾಗಿದೆ. ಹಾಗಿದ್ದರೆ ಯಾವ ಫಾರಿನ್ ಕಂಪನಿಗಳಿಂದ ಸ್ಟೆಂಟ್‌ಗಳು ಬರುತ್ತಿವೆ?
>
> ಸೂರತ್ ನಗರದ ಸ್ಟೆಂಟ್ ಉತ್ಪಾದನಾ ಘಟಕದ ಬಗ್ಗೆ ಆರಂಭದಲ್ಲಿ ಹೇಳಿದ್ದು ಪೂರ್ತಿ
> ಕಟ್ಟುಕತೆಯೇನಲ್ಲ. ವಜ್ರದ ಕೆತ್ತನೆಗೆ ಬಳಸುವ ಲೇಸರ್ ತಂತ್ರಜ್ಞಾನ ಅಲ್ಲಿ ಸ್ಟೆಂಟ್‌ಗಳ
> ಉತ್ಪಾದನೆಗೂ ಬಳಕೆಯಾಗುತ್ತಿದೆ. ಭಾರತದಲ್ಲಿ ಸ್ಟೆಂಟ್ ಉತ್ಪಾದನೆ ಮಾಡುವ ಹನ್ನೊಂದು
> ಕಂಪನಿಗಳ ಪೈಕಿ ಒಂಬತ್ತು ಕಂಪನಿಗಳು ಸೂರತ್ ಮತ್ತು ಸಮೀಪದ ವಾಪಿಯಲ್ಲಿವೆ. ಒಟ್ಟಿಗೆ ಅವು
> ವರ್ಷಕ್ಕೆ ₹ 2500 ಕೋಟಿ ಮೌಲ್ಯದ ಸ್ಟೆಂಟ್‌ಗಳನ್ನು ಉತ್ಪಾದಿಸುತ್ತಿವೆ.
>
> ಕೆಲವುಗಳ ಗುಣಮಟ್ಟವೂ ಚೆನ್ನಾಗಿದೆ. ‘ನಾನಂತೂ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ
> ಮಾನ್ಯತೆ ಪಡೆದ ಸ್ಥಳೀಯ ಸ್ಟೆಂಟ್‌ಗಳನ್ನೇ ಬಳಸುತ್ತೇನೆ’ ಎನ್ನುತ್ತಾರೆ, ದಾಖಲೆ
> ಸಂಖ್ಯೆಯಲ್ಲಿ ಹೃದಯ ಚಿಕಿತ್ಸೆ ನಡೆಸಿ ಭಾರತದ ಸರ್ವೋಚ್ಚ ವೈದ್ಯಪ್ರಶಸ್ತಿ ಮತ್ತು ಪದ್ಮಶ್ರೀ
> ಪಡೆದ ಅಹ್ಮದಾಬಾದ್‌ನ ಹೃದ್ರೋಗ ತಜ್ಞ ಡಾ. ತೇಜಸ್ ಪಟೇಲ್.
>
> ಈಗೀಗ ರಕ್ತನಾಳವನ್ನಷ್ಟೇ ಅಲ್ಲ, ಅನ್ನನಾಳ, ದೊಡ್ಡಕರುಳು, ಪಿತ್ತಜನಕಾಂಗ,
> ಶ್ವಾಸನಾಳಗಳನ್ನು ಹಿಗ್ಗಿಸಲಿಕ್ಕೂ ವಿವಿಧ ಗಾತ್ರದ ಸ್ಟೆಂಟ್‌ಗಳ ಬಳಕೆಯಾಗುತ್ತಿದೆ. ಹೃದಯದ
> ಕವಾಟದಿಂದ ಹಿಡಿದು ಮಂಡಿಚಿಪ್ಪು, ಒಸಡು, ಯಕೃತ್ತು, ಧ್ವನಿಪೆಟ್ಟಿಗೆ, ಹೀಗೆ ಜೀವಂತ
> ವ್ಯಕ್ತಿಯ ಅಂಗಾಂಗಗಳಲ್ಲಿ ಕೃತಕ ಬಿಡಿಭಾಗಗಳು ದಾಂಗುಡಿ ಇಡುತ್ತ ಹೋದಂತೆ ವೈದ್ಯಲೋಕದ
> ಗಲ್ಲಾಪೆಟ್ಟಿಗೆಯ ಗಾತ್ರವೂ ಹೆಚ್ಚುತ್ತ ಹೋಗುತ್ತಿದೆ.
>
> ಇತ್ತ ನಮ್ಮ ದೇಶದಲ್ಲಿ ಆಗಲೇ ನಾಲ್ಕೂವರೆ ಕೋಟಿ ಹೃದ್ರೋಗಿಗಳಿದ್ದಾರೆಂದು ಅಂದಾಜು
> ಮಾಡಲಾಗಿದ್ದು ಹೊಸ ರೋಗಿಗಳ ಸಂಖ್ಯೆ ನಮ್ಮ ಜಿಡಿಪಿಗಿಂತ ನಾಲ್ಕು ಪಟ್ಟು ಹೆಚ್ಚಿನ ವೇಗದಲ್ಲಿ
> ಏರುತ್ತಿದೆ. ಪ್ರತಿ 33  ಸೆಕೆಂಡಿಗೆ ಒಂದೊಂದು ಸಾವು ಸಂಭವಿಸುತ್ತಿದೆ. ಇನ್ನೂ ಆತಂಕದ
> ಸಂಗತಿ ಏನೆಂದರೆ ಎಳೆ ವಯಸ್ಸಿನವರೂ ಹೃದ್ರೋಗಕ್ಕೆ ಬಲಿಯಾಗುತ್ತಿದ್ದಾರೆ.
>
> ಸಕ್ಕರೆ, ಗಿಣ್ಣಬೆಣ್ಣೆ, ಮೊಟ್ಟೆ, ಉಪ್ಪು ಮತ್ತು ಮೈದಾ ಈ ‘ಐದು ಬಿಳಿವಿಷ’ಗಳ
> ಉತ್ಪಾದನೆಯಲ್ಲಿ ಕ್ರಾಂತಿಯಾಗುತ್ತಿದೆ. ಅವನ್ನೆಲ್ಲ ಹೇರಳ ಬಳಸುವ ಬೇಕರಿಗಳ ಸಂಖ್ಯೆ
> ಬೀದಿಬೀದಿಯಲ್ಲಿ ಹೆಚ್ಚುತ್ತಿದೆ. ಸ್ಟೆಂಟ್‌ಗಳ ಬೆಲೆ ಏರದಂತೆ ಅದೆಷ್ಟೇ ಬಿಗಿಬಂಧನ
> ಹಾಕಿದ್ದರೂ ಆಹಾರದ  ಗುಣಮಟ್ಟ ನಿಯಂತ್ರಣವೂ ಸಡಿಲ, ನಾಲಗೆಯ ಚಪಲವೂ ಸಡಿಲವಿದ್ದರೆ ಎದೆಯ
> ಕದತಟ್ಟಿ ಕಾಯಿಲೆ ನುಗ್ಗುತ್ತದೆ.
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/formsd1Iv5fotalJsERorsuN5v5yHG
> uKrmpFXStxBwQSYXNbzI/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to