Plz dont send old messages  repeatedly ., stop it.. Use stf group for
discussing for study materials & to solving difficult  questions ..
On Apr 18, 2017 9:58 AM, "Harikrishna Holla" <harikrishnaho...@gmail.com>
wrote:

>             ಈ ಬಾರಿ ನಾವು ಗಣಿತ ಶಿಕ್ಷಕರೆಲ್ಲರೂ ಸೋಲು ಅನುಭವಿಸುತ್ತಿದ್ದೇವೆ. ಮೊದಲು
> ವಿದ್ಯಾರ್ಥಿಗಳನ್ನು ಚೆನ್ನಾಗಿ ತರಬೇತಿಗೊಳಿಸಿದ್ದೆವು. ಆದರೆ, ಪ್ರಶ್ನೆಗಳು ನಾವು
> ನಿರೀಕ್ಷಿಸಿದ ರೀತಿಯಲ್ಲಿ ಬಾರದೇ ಇದ್ದುದರಿಂದ ನಾವು ಸೋತೆವು. ನಂತರ ತಪ್ಪುಗಳಿರುವ
> ಪ್ರಶ್ನೆಗಳಿಗೆ ಉಚಿತ ಅಂಕ ಕೊಡಿಸಲು ಪ್ರಯತ್ನಿಸಿದೆವು. ಆ ಪ್ರಯತ್ನದಲ್ಲಿಯೂ ಸೋತೆವು. ಹೀಗೆ
> ನಮ್ಮ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತಿವೆ. ಬಹುಶಃ ನಾವು ಸರಿಯಾದ ದಿಕ್ಕಿನಲ್ಲಿ
> ಪ್ರಯತ್ನಿಸುತ್ತಿಲ್ಲ ಅನ್ನಿಸುತ್ತಿದೆ. ಕೆಲವು ಪತ್ರಿಕೆಗಳಲ್ಲಿ ವರದಿಯಾದಂತೆ 'ಹೊರಗಡೆ
> ಬಿಗಿ ಭದ್ರತೆ ಇಟ್ಟುಕೊಂಡು ಒಳಗಡೆ ಪಾಸಿಂಗ್ ಪ್ಯಾಕೇಜ್' ಮಾಡಿಸಬೇಕಿತ್ತೇನೋ ಅನ್ಸುತ್ತೆ.
> ಅದೇ ಸುಲಭ ನೋಡಿ. ಒಂದು ದಿನ ಕಷ್ಟಪಟ್ಟರಾಯಿತು ಅಲ್ವಾ?
>              ವಿದ್ಯಾರ್ಥಿಗಳಿಗೆ ಮೊದಲೇ ಗಣಿತ ಕಷ್ಟ. ಅದರಲ್ಲೂ ಸಿಲೆಬಸ್ ತುಂಬಾ ಜಾಸ್ತಿ
> ಇದೆ. ಪಠ್ಯದಲ್ಲಿಯೇ ಸಾವಿರಾರು ಕ್ಲಿಷ್ಟ ಸಮಸ್ಯೆಗಳಿವೆ. ಅವುಗಳನ್ನೇ ವಿದ್ಯಾರ್ಥಿಗಳಿಗೆ
> ಬಿಡಿಸಲು ಬಾರದೇ ಇರುವಾಗ, ಪಠ್ಯದಲ್ಲಿ ಇಲ್ಲದ ರೀತಿಯ ಪ್ರಶ್ನೆಗಳನ್ನು ಕೇಳಿದರೆ ಅವರು ಹೇಗೆ
> ತಾನೆ ಬಿಡಿಸಿಯಾರು? ಈ ಸಲದ ಪ್ರಶ್ನೆಪತ್ರಿಕೆಯಲ್ಲಿರುವ ಎಷ್ಟು ಪ್ರಶ್ನೆಗಳು ಪಠ್ಯದಲ್ಲಿ
> ಇವೆ? ಪಠ್ಯದಲ್ಲಿ ಇರುವ ಪ್ರಶ್ನೆಗಳೇ ಅಲ್ಲದಿದ್ದರೆ ಹೋಗಲಿ , ಕನಿಷ್ಟ ಪಠ್ಯದಲ್ಲಿ ಇರುವ
> ಮಾದರಿಯಲ್ಲಾದರೂ ಎಷ್ಟು ಪ್ರಶ್ನೆಗಳು ಇವೆ? ಈ ಬಗ್ಗೆ ಪ್ರಶ್ನೆಪತ್ರಿಕೆ ವಿಶ್ಲೇಷಣೆ
> ಮಾಡಬೇಕು. ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನೇ ಕೇಳುವುದಾದಲ್ಲಿ ಆ ಪಠ್ಯಪುಸ್ತಕ ಯಾಕೆ?
> ನಾವು ಅಧ್ಯಾಪಕರು ಯಾವ ಪುಸ್ತಕದ ಆಧಾರದಮೇಲೆ ಪಾಠ ಮಾಡಬೇಕು? ಪರೀಕ್ಷೆಗೆ ಕೆಲವು
> ದಿನಗಳಿರುವಾಗ ಬೋರ್ಡಿನವರು ಒಂದು ಮಾದರಿ ಪ್ರಶ್ನೆಪತ್ರಿಕೆಯನ್ನು ತಮ್ಮ ವೆಬ್ ಸೈಟಿನಲ್ಲಿ
> ಪ್ರಕಟಿಸಿದರು. ಈಗ ಪಬ್ಲಿಕ್ ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆ ಅವರು ಪ್ರಕಟಿಸಿದ
> ಮಾದರಿ ಪ್ರಶ್ನೆ ಪತ್ರಿಕೆಯಂತೆಯೇ ಇದೆಯೇ? ಈ ಬಗ್ಗೆ ಚರ್ಚೆಯಾಗಬೇಕು.
>
>              ಪರೀಕ್ಷೆ ಅಂದ್ರೇನು? ನಾವು ಹೇಳಿಕೊಟ್ಟಿರುವುದನ್ನು ವಿದ್ಯಾರ್ಥಿಗಳು
> ಸರಿಯಾಗಿ ಕಲಿತಿದ್ದಾರೋ? ಇಲ್ಲವೋ? ಎಂಬುದನ್ನು ದೃಢಪಡಿಸಿಕೊಳ್ಳುವುದು ತಾನೇ? ಹಾಗಿರುವಾಗ
> ನಾವು ಹೇಳಿಕೊಟ್ಟಿರದ , ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿದರೆ ಅದು ಪರೀಕ್ಷೆ
> ಹೇಗಾಗುತ್ತದೆ? ಅದಕ್ಕೆ ಅವರು 'ಎಪ್ಲಿಕೇಶನ್ ಕೊಶ್ಚನ್' ಅಂತೆಲ್ಲ ಹೇಳ್ತಾರೆ. ಈ
> ಎಪ್ಲಿಕೇಶನ್ ಪಿಯುಸಿನಲ್ಲಿ ಅಥವಾ ಅದಕ್ಕಿಂತ ಮೇಲಿನ ತರಗತಿಗಳಲ್ಲಿ ಇದೆಯಾ? ಅಲ್ಲಿ
> ಯಾಕಿಲ್ಲ? ಇಲ್ಲಿ ಮಾತ್ರ ನಮ್ಮ ಜೀವ ತಿನ್ನುವುದು ಯಾಕೆ? ಸ್ಕೂಟರ್ ರೈಡಿಂಗ್ ಹೇಳಿಕೊಟ್ಟು
> ಟೆಸ್ಟಿಂಗ್ ದಿನ 'ಎಪ್ಲಿಕೇಶನ್' ಅಂತ ಕಾರ್ ಡ್ರೈವ್ ಮಾಡಿ ತೋರಿಸಲು ಹೇಳಿದರೆ ಹೇಗೆ ಸ್ವಾಮೀ?
>
> Harikrishna Holla G,
> Brahmavara.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to