thats science

2017-06-01 18:04 GMT+05:30 DORA CARMINE D'SILVA <dsilvador...@gmail.com>:

> Vry nice article..good information...thank u sir...
> On Jun 1, 2017 5:39 PM, "HAREESHKUMAR K Agasanapura" <
> harihusk...@gmail.com> wrote:
>
>> http://m.prajavani.net/article/2017_06_01/495707
>>
>> *ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-–ಮಯ*
>>
>> 1 Jun, 2017
>>
>> ನಾಗೇಶ್ ಹೆಗಡೆ
>>
>>
>> <https://www.facebook.com/sharer/sharer.php?u=https%3A%2F%2Fgoo.gl%2FDNT76U>
>> <https://twitter.com/intent/tweet?text=%E0%B2%86%E0%B2%A7%E0%B3%81%E0%B2%A8%E0%B2%BF%E0%B2%95+%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8+%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%95%E0%B3%8D%E0%B2%B7%E0%B2%A3%E0%B2%B5%E0%B3%82+%E0%B2%97%E0%B3%8B-%E2%80%93%E0%B2%AE%E0%B2%AF+https%3A%2F%2Fgoo.gl%2FDNT76U>
>> <https://plus.google.com/share?url=https%3A%2F%2Fgoo.gl%2FDNT76U>
>> <http://www.pinterest.com/pin/find/?url=https%3A%2F%2Fgoo.gl%2FDNT76U>
>> <http://www.linkedin.com/shareArticle?mini=true&title=%E0%B2%86%E0%B2%A7%E0%B3%81%E0%B2%A8%E0%B2%BF%E0%B2%95+%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8+%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%95%E0%B3%8D%E0%B2%B7%E0%B2%A3%E0%B2%B5%E0%B3%82+%E0%B2%97%E0%B3%8B-%E2%80%93%E0%B2%AE%E0%B2%AF+&url=https%3A%2F%2Fgoo.gl%2FDNT76U>
>>
>> ವಧೆಗಾಗಿ ದನಕರುಗಳನ್ನು ಮಾರದಂತೆ ಪ್ರತಿಬಂಧಿಸುವ ‘ವಿಶೇಷ ಅಧಿಸೂಚನೆ’ಗೆ ಸಹಿ ಹಾಕಿದ
>> ಯಾರೂ ದನಕರುಗಳನ್ನು ಸಾಕಿರಲಿಕ್ಕಿಲ್ಲ. ಮೇವಿನ ಹಿಂಡಿ, ಹುಲ್ಲು ಅಥವಾ ದನಗಳ ಮಾರಾಟದ
>> ದಲ್ಲಾಳಿ ಆಗಿರಲಿಕ್ಕಿಲ್ಲ. ಗೋಮಾಂಸ ತಿನ್ನುವವರೂ ಅಲ್ಲ, ಮಾಂಸದ ರಫ್ತಿನ ವಹಿವಾಟಿನಲ್ಲಿ
>> ಭಾಗಿಗಳೂ ಆಗಿರಲಿಕ್ಕಿಲ್ಲ. ಸತ್ತ ದನದ ಚರ್ಮ ಸುಲಿಯುವ ಅಥವಾ ಚರ್ಮೋದ್ಯಮದ ಕಾರ್ಮಿಕರಂತೂ
>> ಅಲ್ಲ; ಪಶುವೈದ್ಯರೂ ಆಗಿರಲಿಕ್ಕಿಲ್ಲ, ಮನುಷ್ಯರ ವೈದ್ಯರೂ ಇರಲಿಕ್ಕಿಲ್ಲ. ಮೃಗಾಲಯದ
>> ವ್ಯವಸ್ಥಾಪಕರಂತೂ ಅಲ್ಲವೇ ಅಲ್ಲ. ಹೀಗೆ, ಪಶುಸಂಬಂಧಿ ವಹಿವಾಟುಗಳ ಯಾವ ತುಮುಲಗಳೂ ಅವರಿಗೆ
>> ನೇರ ತಟ್ಟುವ ಸಂಭವ ತೀರ ಕಡಿಮೆ. ಆದರೆ ಅವರು ದಿನವೂ ಬಳಸುವ ಅದೆಷ್ಟೊ ಜೈವಿಕ ಸರಕು ಮತ್ತು
>> ಸೇವೆಗಳಿಗಾಗಿ ದನಗಳನ್ನು ಅವಲಂಬಿಸಿದ್ದಾರೆ. ಹೇಗೆಂದು ನೋಡೋಣವೆ? ಆ ಅಧಿಸೂಚನೆಗೆ ಸಹಿ
>> ಹಾಕುವ ಮುನ್ನ ನಡೆದ ಸುದೀರ್ಘ ಚರ್ಚೆಯಲ್ಲಿ ಆಗಾಗ ಟೀ, ಕಾಫಿ, ಪೇಯದಲ್ಲಿ ಬಳಕೆಯಾದ
>> ಸಕ್ಕರೆಯಿಂದಲೇ ಆರಂಭಿಸೋಣ.
>>
>> ಸಕ್ಕರೆ ಅಷ್ಟೊಂದು ಬೆಳ್ಳಗೆ ಕಾಣಲು ಕಾರಣವೇನು ಗೊತ್ತೆ? ಪ್ರಾಣಿಗಳ ಮೂಳೆಪುಡಿಯಿಂದ
>> ತಯಾರಿಸಿದ ಬೋನ್ ಚಾರ್ ಎಂಬ ಫಿಲ್ಟರ್ ಮೂಲಕ ಬೆಲ್ಲದ ಪಾಕವನ್ನು ಸೋಸುತ್ತಾರೆ. ಸಕ್ಕರೆ
>> ಖರೀದಿಸಲೆಂದು ನೀವು ಬಸ್ ಅಥವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಮೃತ ದನಗಳ ಮೇಲೆಯೇ
>> ಸವಾರಿ ಮಾಡುತ್ತಿದ್ದೀರೆಂದು ಹೇಳಬಹುದು. ಟಯರ್‌ಗಳಿಗೆ ಸ್ಟೀರಿಕ್ ಆಸಿಡ್ ಎಂಬ ಪ್ರಾಣಿಜನ್ಯ
>> ದ್ರವವನ್ನು ಸೇರಿಸದೆ ಇದ್ದರೆ ಅದು ಯಾವ ಕ್ಷಣದಲ್ಲಾದರೂ ಢಮ್ಮೆನ್ನಬಹುದು. ಬೆದರಿ ಬ್ರೇಕ್
>> ಹಾಕಲು ಹೊರಟಿರಾ? ಹೈಡ್ರಾಲಿಕ್ ಬ್ರೇಕಿಗೆ ಬಳಸಿದ ಎಣ್ಣೆಯೂ ದನದ ದೇಹದಿಂದ ತೆಗೆದಿದ್ದೇ
>> ಆಗಿರುತ್ತದೆ. ಬ್ರೇಕ್ ಮತ್ತು ಸ್ಟೀರಿಂಗ್ ಎಂದೂ ಮುರಿಯದ ಹಾಗೆ ವಿಶೇಷವಾಗಿ ತಯಾರಿಸಲಾದ
>> ಉಕ್ಕಿನ ಕಂಬಿಗೂ ಮೂಳೆ ಪುಡಿಯನ್ನು ಸೇರಿಸಿರುತ್ತಾರೆ.
>>
>> ನಿಮ್ಮದು ಭಾರೀ ದುಬಾರಿ ಕಾರ್ ಆಗಿದ್ದರೆ ಸೀಟಿನ ಲೆದರ್ ಹೊದಿಕೆಯಂತೂ ದನದ್ದೇ ಬಿಡಿ. ತೀರ
>> ಅನುಕೂಲಸ್ಥ ಧನಿಕರೂ ಆಢ್ಯ ಸ್ವಾಮೀಜಿಗಳೂ ಬಳಸುವ ಕಾರಿನಲ್ಲಿ ಅಂಥ ಐಷಾರಾಮಿ ಸೀಟುಗಳು
>> ಇರುತ್ತವೆ. ಲೆದರ್ ಆಗಿರಲಿ, ರೆಕ್ಸಿನ್ನಿನದ್ದೇ ಹೊದಿಕೆ ಆಗಿರಲಿ, ಅದರ ಪ್ರತಿಯೊಂದು
>> ಭಾಗವನ್ನೂ ಜೋಡಿಸಲು ಬಳಸಿದ ಅಂಟು ಕೂಡ ದನದ ಪ್ರೊಟೀನಿನಿಂದ ತಯಾರಿಸಿದ್ದೇ ಆಗಿರುತ್ತದೆ.
>> ಸ್ಟೀರಿಂಗ್ ಚಕ್ರ ನಿಮ್ಮ ಮುಷ್ಟಿಯಿಂದ ಜಾರದಂತೆ ಗಪ್ಪಾಗಿ ಕೂರಲೂ ಅದೇ ಅಂಟನ್ನು
>> ಬಳಸಿರುತ್ತಾರೆ. ದುಬಾರಿ ಕಾರುಗಳಲ್ಲಿ ಅಗ್ನಿಶಾಮಕ ಪುಟ್ಟ ಸಿಲಿಂಡರನ್ನು ಜೋಡಿಸಿರುತ್ತಾರೆ.
>> ಅದನ್ನು ಅಮುಕಿದರೆ ಹೊರಬರುವ ನೊರೆಯಲ್ಲಿ ದನದ ರಕ್ತದಿಂದಲೇ ತೆಗೆದ ಬೆಂಕಿನಿರೋಧಕ ರಸಾಯನ
>> ಇರುತ್ತದೆ. ತೀರ ಚಳಿ ಬಿದ್ದಾಗ ಕಾರಿನ ಎಂಜಿನ್ ಸಲೀಸಾಗಿ ಚಾಲೂ ಆಗುವಂತೆ ಇಂಧನಕ್ಕೆ
>> ಹೆಪ್ಪುನಿರೋಧಕವಾಗಿ ಬಳಸುವ ಗ್ಲಿಸರೀನ್ ಎಂಬ ವಸ್ತು ದನಗಳ ಶರೀರದಿಂದಲೇ ಬಂದಿರುತ್ತದೆ.
>> ಪೇಂಟ್‌ನ ಹೊಳಪನ್ನು ಹೆಚ್ಚಿಸಲೆಂದು ಕೂಡ ಗ್ಲಿಸರೀನ್ ಹಚ್ಚಿರುತ್ತಾರೆ. ಕಾರುಗಳು ಸಲೀಸಾಗಿ
>> ಚಲಿಸಲೆಂದು ರಸ್ತೆಗೆ ಡಾಂಬರು ಹಾಕಿರುತ್ತಾರಲ್ಲ, ಅದು ಅತ್ತಿತ್ತ ಕಿತ್ತು ಹೋಗದಂತೆ ಅದಕ್ಕೂ
>> ದನಗಳ ಕೊಬ್ಬನ್ನೇ ಸೇರಿಸಿರುತ್ತಾರೆ. ರಸ್ತೆ ನಿರ್ಮಾಣಕ್ಕೆ ಮೊದಲು ಬಂಡೆಗಳನ್ನು ಸ್ಫೋಟಿಸಲು
>> ಜಿಲೆಟಿನ್ ಕಡ್ಡಿಗಳನ್ನು ಬಳಸುತ್ತಾರೆ. ಅದರಲ್ಲಿ ಗ್ಲಿಸರೀನ್ ಇಲ್ಲದಿದ್ದರೆ ಸ್ಫೋಟವೇ
>> ಆಗುವುದಿಲ್ಲ. ಹೀಗೆ ರಸ್ತೆ, ರಸ್ತೆಯ ಮೇಲಿನ ಚಕ್ರ, ಚಕ್ರವನ್ನು ನಿಯಂತ್ರಿಸುವ ಬ್ರೇಕ್,
>> ಬ್ರೇಕನ್ನು ಆಗಾಗ ಒತ್ತುವ ನಿಮ್ಮ ಕಾಲಿನ ಪಾದರಕ್ಷೆ, ಡ್ರೈವರ್ ಸೀಟಿನ ಮೆತ್ತೆ ಎಲ್ಲವೂ
>> ಗೋ-ಮಯ.
>>
>> ಚರ್ಮದ ಸೋಫಾ ಮೇಲೆ ಕೂರುವ ಬದಲು ಸಾದಾ ಕುರ್ಚಿಯ ಮೇಲೆ ಕೂರಲು ಹೊರಟರೆ ಅಲ್ಲೂ ನೀವು
>> ದನಕ್ಕೆ ಅಂಟಿಕೊಳ್ಳುತ್ತೀರಿ. ಏಕೆಂದರೆ ಕುರ್ಚಿಗೆ ಬಳಸಿದ ಕಟ್ಟಿಗೆಪುಡಿಯ ಹಲಗೆಯ ಮೇಲೆ
>> ಹೊಳಪಿನ ಪ್ಲೈವುಡ್ ಹಾಳೆಯನ್ನು ಅಂಟಿಸಿರುತ್ತಾರಲ್ಲ, ಅಲ್ಲಿ ದನಗಳ ರಕ್ತದ ಒಣಪುಡಿಯ
>> ಗೋಂದನ್ನೇ ಬಳಸಿರುತ್ತಾರೆ. ಕುರ್ಚಿ ಬೇಡ, ನೆಲಕ್ಕೆ ಕೂತೇ ಊಟ ಮಾಡುತ್ತೇನೆಂದರೆ ಆಹಾರ
>> ಉತ್ಪಾದನೆಗೆ ಬಳಸಿದ ಬಹುಪಾಲು ರಸಗೊಬ್ಬರದಲ್ಲಿ ದನದ ರಕ್ತದ ಪುಡಿಯನ್ನು ಸಾರಜನಕ
>> ಸಂವರ್ಧನೆಗೆಂದು ಸೇರಿಸಿರುತ್ತಾರೆ. ಇನ್ನು ಕ್ಯಾಲ್ಸಿಯಂ ಮತ್ತು ರಂಜಕದಂಥ ಸಸ್ಯ ಪೋಷಕ
>> ದ್ರವ್ಯಗಳನ್ನು ದನದ ಮೂಳೆಪುಡಿಯಿಂದ ಸಂಗ್ರಹಿಸಲಾಗುತ್ತದೆ.  ಕೃಷಿ ಕೆಲಸದಲ್ಲಿ ದುಡಿಮೆ
>> ಮಾಡುವ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದರೆ ಸರ್ಕಾರ ಉಚಿತವಾಗಿ ಆಕೆಗೆ ವಿತರಿಸುವ ಐರನ್
>> ಮಾತ್ರೆಗಳಲ್ಲೂ ದನದ ರಕ್ತದಿಂದ ತೆಗೆದ ಕಬ್ಬಿಣದ ಅಂಶವೇ ಇರುತ್ತದೆ.
>>
>> ದನಗಳೆಂದರೆ ಕೇಳಿದ್ದನ್ನು ಕೊಡುವ ಕಾಮಧೇನು. ವೈದ್ಯಕೀಯ ರಂಗಕ್ಕೆ ಬಂದರೆ ದನದ ದೇಹದ
>> ಮೂಗಿನ ತುದಿಯಿಂದ ಹಿಡಿದು ಬಾಲದವರೆಗಿನ ಭಾಗಗಳಿಂದ ಪಡೆದ ಅಸಂಖ್ಯ ಔಷಧ ದ್ರವ್ಯಗಳನ್ನು
>> ಪಟ್ಟಿ ಮಾಡಬಹುದು. ದನದ ಮೂಗಿನ ಹೊರಳೆಗಳ ನಡುವಣ ಮೃದ್ವಸ್ಥಿಯಿಂದ ತೆಗೆದ ‘ಕೊಂಡ್ರಾಯ್ಟಿನ್’
>> ಎಂಬ ವಸ್ತುವನ್ನು (ಗ್ಲೂಕೊಸಮೈನ್) ಎಲ್ಲ ಬಗೆಯ ಕೀಲುನೋವುಗಳಿಗೂ ಔಷಧವಾಗಿ ಬಳಸುತ್ತಾರೆ.
>> ದನದ ಶ್ವಾಸನಾಳ ಮತ್ತು ಶ್ವಾಸಕೋಶದ ಒಳಪೊರೆಯಿಂದ ತೆಗೆದ ಹೆಪಾರಿನ್ ಎಂಬ ಔಷಧ ದ್ರವ್ಯವನ್ನು
>> ಶಸ್ತ್ರಚಿಕಿತ್ಸೆಗೆ ಮೊದಲು ರೋಗಿಯ ರಕ್ತಕ್ಕೆ ಸೇರಿಸುತ್ತಾರೆ. ಆಗ ರಕ್ತ
>> ಹೆಪ್ಪುಗಟ್ಟುವುದಿಲ್ಲ (ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕಂಡುಬರುವ ಇಂಬಳಗಳು ಕಚ್ಚಿದಾಗ ಇದೇ
>> ಹೆಪಾರಿನ್ ನಮ್ಮ ರಕ್ತನಾಳಕ್ಕೆ ಸೇರುತ್ತದೆ. ಇಂಬಳವನ್ನು ಕಿತ್ತು ತೆಗೆದ ನಂತರವೂ ರಕ್ತ
>> ಹೆಪ್ಪುಗಟ್ಟದೆ ಹರಿಯುತ್ತಲೇ ಇರುತ್ತದೆ. ಇಂಬಳದ ಕಡಿತ ಮಾರಕವೇನಲ್ಲ; ಆದರೆ ಝೆಕ್ ದೇಶದ
>> ನರ್ಸ್ ಒಬ್ಬಳು ಬೇಕೆಂತಲೇ ಜಾಸ್ತಿ ಹೆಪಾರಿನ್ ಚುಚ್ಚಿ ಏಳು ರೋಗಿಗಳ ಕೊಲೆ ಮಾಡಿದ್ದಳು;
>> ಇನ್ನೂ ಹತ್ತು ಮಂದಿಗೆ ಚುಚ್ಚುವ ಮೊದಲೇ ಸಿಕ್ಕಿಬಿದ್ದಳು).
>>
>> ಭಾರತದಲ್ಲಿ ಆರು ಕೋಟಿಗೂ ಹೆಚ್ಚಿನ ಸಕ್ಕರೆ ರೋಗಿಗಳಿದ್ದು ಇದನ್ನು ಮಧುಮೇಹಿಗಳ
>> ಸಂತೆಯೆಂದೇ ವರ್ಣಿಸಲಾಗುತ್ತಿದೆ. ಇವರು ಔಷಧ ರೂಪದಲ್ಲಿ ದನಗಳ ಮೇದೋಜೀರಕ ಗ್ರಂಥಿಗಳಿಂದ
>> ತೆಗೆದ ಇನ್ಸೂಲಿನನ್ನೇ ಬಳಸುತ್ತಾರೆ. ರಕ್ತದ ಒತ್ತಡ ತೀರ ಕಡಿಮೆ ಆದರೆ ಅದನ್ನು
>> ಹೆಚ್ಚಿಸಲೆಂದು ದನದ ಆಡ್ರಿನಾಲಿನ್ ಗ್ರಂಥಿಯಿಂದ ತೆಗೆದ ಎಪಿನಾಫ್ರಿನ್ ಎಂಬ ಔಷಧವನ್ನೇ
>> ಡಾಕ್ಟರ್‌ಗಳು ಶಿಫಾರಸು ಮಾಡುತ್ತಾರೆ. ಹೃದ್ರೋಗದ ಶಸ್ತ್ರಚಿಕಿತ್ಸೆಯ ಸಮಯದಲ್ಲೂ ಇದು
>> ಜೀವರಕ್ಷಕ ಔಷಧವಾಗಿ ಬಳಕೆಯಾಗುತ್ತದೆ. ದನಗಳ ಯಕೃತ್ತಿನಿಂದ ತೆಗೆದ ‘ಲಿವರ್
>> ಎಕ್ಸ್‌ಟ್ರ್ಯಾಕ್ಟ್’ ಎಂಬ ದ್ರವ್ಯವನ್ನು  ಬಿ-12 ಜೀವಸತ್ವ ಕೊರತೆ ಇದ್ದವರಿಗೆ
>> ಕೊಡಲಾಗುತ್ತದೆ. ಮಿದುಳಿಗೆ ಏಟು ಬಿದ್ದಾಗ ತಲೆ ಬರುಡೆಯ ಚಿಕಿತ್ಸೆ ಮಾಡಿ ಕೆಲವು ಭಾಗಗಳನ್ನು
>> ತೆಗೆಯಬೇಕಾಗಿ ಬಂದರೆ, ಆ ಖಾಲಿ ಸ್ಥಳದಲ್ಲಿ ದನದ ಮಿದುಳಿನ ನಾರಿನಂಥ ಕವಚದಿಂದ ತಯಾರಿಸಿದ
>> ಡ್ಯೂರಾ ಮೇಟರ್ ಎಂಬ ವಸ್ತುವನ್ನು ತುರುಕಿ ಹೊಲಿಗೆ ಹಾಕುತ್ತಾರೆ.  ಗರ್ಭಿಣಿಗೆ ಪ್ರಸವದ
>> ಸಂದರ್ಭದಲ್ಲಿ ತೊಂದರೆ ಎದುರಾಯಿತೆ? ಹುಟ್ಟಿದ ಶಿಶುವಿಗೆ ತಾಯಿಯ ಹಾಲೇ ಜೀರ್ಣ
>> ಆಗುತ್ತಿಲ್ಲವೆ? ಹಿರಿಯರ ರಕ್ತ ನಾಳದಲ್ಲಿ ಗಂಟು ಕಂಡುಬಂತೆ? ಹೊಟ್ಟೆ ತಳಮಳ
>> ಎನ್ನುತ್ತಿದೆಯೆ? ಆಸ್ತಮಾ ಸಮಸ್ಯೆ ಎದುರಾಯಿತೆ? ಎಲ್ಲಕ್ಕೂ ಸ್ಟೀರಾಯ್ಡ್ ಕೊಡಿ; ಎಲ್ಲಕ್ಕೂ
>> ಗೋವಿನ ದೇಹದ ಗಣಿಗಾರಿಕೆ ಮಾಡಿ.
>>
>> ದನಗಳ ತಾಜಾ ಚರ್ಮವನ್ನು ಯಂತ್ರಗಳ ಮೂಲಕ ಹಿಂಡಿದರೆ ಅದರಿಂದ ಕೊಲಾಜೆನ್ ಎಂಬ ಅಂಟು ಪದಾರ್ಥ
>> ಸ್ರವಿಸುತ್ತದೆ. ಸ್ನಾಯು ಮತ್ತು ಮೂಳೆಗಳನ್ನು ಬಂಧಿಸುವ ಅಂಗಾಂಶದಿಂದಲೂ ಕೊಲಾಜೆನ್
>> ಪಡೆಯಬಹುದು. ಅದು ಅನೇಕ ವಿಧಗಳಲ್ಲಿ ನಿತ್ಯವೂ ಬಳಕೆಯಾಗುತ್ತಿದೆ. ಹಿರಿಯ ನಾಗರಿಕರಿಗೆ
>> ಮೂತ್ರ ನಿಯಂತ್ರಣ ಸಮಸ್ಯೆ ಎದುರಾದರೆ ಇದನ್ನೇ ಚುಚ್ಚುಮದ್ದಿನ ರೂಪದಲ್ಲಿ ರಕ್ತಕ್ಕೆ
>> ಸೇರಿಸುತ್ತಾರೆ. ಆಸ್ಪತ್ರೆಗಳಲ್ಲಿ ದಿನವೂ ಬಳಕೆಯಾಗುವ ಬ್ಯಾಂಡೇಜ್ ಪಟ್ಟಿಗೆ ಕೊಲಾಜೆನ್
>> ಲೇಪನ ಇರುತ್ತದೆ. ಗಾಯ ಒಣಗಿದ ನಂತರವೂ ಉಳಿಯುವ ಕಲೆಯನ್ನು ಹೋಗಲಾಡಿಸಲು ಸುರೂಪ ಚಿಕಿತ್ಸಕರು
>> ಇದನ್ನೇ ಬಳಸುತ್ತಾರೆ. ಇಳಿವಯಸ್ಸಿನ ಸಿನಿಮಾ ಕಲಾವಿದರ ಮುಖದ ಸುಕ್ಕುಗಳನ್ನು
>> ನಿವಾರಿಸುವಲ್ಲಿ ಕೊಲಾಜೆನ್ ಪಾತ್ರ ತುಂಬ ಮಹತ್ವದ್ದಾಗಿದೆ. ಕಣ್ಣಿನ ಪೊರೆಯ ನಿವಾರಣೆಗೂ ಇದು
>> ಬೇಕು. ಅನೇಕ ಬಗೆಯ ಸೌಂದರ್ಯ ಪ್ರಸಾಧನಗಳಲ್ಲಿ, ಮುಲಾಮಿನಲ್ಲಿ ಮತ್ತು ನೋವು ನಿವಾರಕ
>> ತೈಲಗಳಲ್ಲಿ ಕೊಲಾಜೆನ್ ಇದ್ದೇ ಇರುತ್ತದೆ.
>>
>> ದನದ ಕೊಬ್ಬನ್ನು ಬಿಸಿನೀರಲ್ಲಿ ಕುದಿಸಿ ಸ್ಟೀರಿಕ್ ಆಸಿಡ್ ಪಡೆಯಬಹುದು. ಇದಂತೂ ಎಲ್ಲ
>> ಸಾಬೂನು, ಶೇವಿಂಗ್ ಕ್ರೀಮು, ಟೂಥ್‌ಪೇಸ್ಟ್, ಪರಿಮಳ ದ್ರವ್ಯ, ಮಕ್ಕಳ ಕ್ರೆಯಾನ್ (ಬಣ್ಣದ
>> ಕಡ್ಡಿ), ಮೋಂಬತ್ತಿ, ಕಾಡಿಗೆ ಎಲ್ಲದರಲ್ಲೂ ಇದನ್ನು ಕಾಣಬಹುದು. ಜೆಟ್ ವಿಮಾನಗಳ ಎಲ್ಲ
>> ಬಿಡಿಭಾಗಗಳೂ ಅಚ್ಚುಕಟ್ಟಾಗಿ ಸದಾ ಕಾಲ ಕೆಲಸ ಮಾಡುವಂತೆ ದನದ ಮೂಳೆ ಮತ್ತು ಕೊಬ್ಬಿನಿಂದ
>> ತೆಗೆದ ಟ್ಯಾಲೊ ಎಂಬ ತೈಲವನ್ನೇ ಕೀಲೆಣ್ಣೆಯಾಗಿ ಬಳಸಲಾಗುತ್ತದೆ. ಮೂಳೆ, ಕೊಂಬು, ಗೊರಸು
>> ಇತ್ಯಾದಿ ಬಿಡಿಭಾಗಗಳಿಂದ ತೆಗೆದ ಇದೇ ಟ್ಯಾಲೊವನ್ನು ಶುದ್ಧೀಕರಿಸಿ ಖಾದ್ಯತೈಲಗಳಲ್ಲೂ
>> ಕದ್ದುಮುಚ್ಚಿ ಕಲಬೆರಕೆ ಮಾಡುವವರಿದ್ದಾರೆ. ಗೊತ್ತೇ ಆಗುವುದಿಲ್ಲ. ಬೇಕರಿ ಖಾದ್ಯಗಳಲ್ಲಿ,
>> ಕ್ಯಾಂಡಿಗಳಲ್ಲಿ, ಚಾಕೊಲೇಟ್‌ಗಳಲ್ಲಿ ಟ್ಯಾಲೊ ಇರುತ್ತದೆ.
>>
>> ಚರ್ಮದ ಕಡೆ ಮತ್ತೊಮ್ಮೆ ಬರೋಣ. ಕ್ರಿಕೆಟ್ ಚೆಂಡು, ಫುಟ್‌ಬಾಲ್, ವಾಲಿಬಾಲ್, ಬಾಸ್ಕೆಟ್
>> ಬಾಲ್, ಬೇಸ್‌ಬಾಲ್ ಮುಂತಾದ ಅನೇಕ ಬಗೆಯ ಕ್ರೀಡಾ ಸಾಧನಗಳು, ಕೈಗವಸು, ಕಾಲ್ಗವಚ ಎಲ್ಲಕ್ಕೂ
>> ದನದ ಚರ್ಮವೇ ಬಳಕೆಯಾಗುತ್ತದೆ. ದನದ ಕರುಳನ್ನು ಸೀಳಿ, ಸಂಸ್ಕರಿಸಿದ ದಾರಗಳೇ ಟೆನಿಸ್ ಮತ್ತು
>> ಬ್ಯಾಡ್ಮಿಂಟನ್ ರ್‌್ಯಾಕೆಟ್‌ಗಳಲ್ಲಿ ಬಳಕೆಯಾಗುತ್ತವೆ. ಇದೇನು ದನದ ಕತೆ ಹೀಗೆ ಚ್ಯೂಯಿಂಗ್
>> ಗಮ್ ಥರಾ ಎಳೆದಷ್ಟೂ ಬರುತ್ತದಲ್ಲ? ಹೌದ್ರೀ, ಚ್ಯೂಯಿಂಗ್ ಗಮ್ ಕೂಡ ದನದ ಗೊರಸು,
>> ಕೊಂಬುಗಳಿಂದಲೇ ತೆಗೆದ ಜಿಲೆಟಿನ್ ಎಂಬ ಪದಾರ್ಥದಿಂದ ತಯಾರಾಗಿರುತ್ತದೆ.
>>
>> ಭಾರತೀಯ ಪುರಾಣಗಳ ಪ್ರಕಾರ ಹಿಂದೊಮ್ಮೆ ರಾಕ್ಷಸರು ಬಂದು ದೇವತೆಗಳನ್ನು ಹಿಗ್ಗಾ ಮುಗ್ಗಾ
>> ಬಡಿದರಂತೆ. ಸೋತು ಸುಣ್ಣವಾದ ಇಂದ್ರ ಆಗ ದಧೀಚಿ ಮಹರ್ಷಿಯ ಬಳಿ ಓಡಿ ಬಂದು ಸಹಾಯ
>> ಯಾಚಿಸಿದರಂತೆ. ಆ ಸನ್ಯಾಸಿ ಏನು ಕೊಟ್ಟಾನು? ತನ್ನ ಮೂಳೆಗಳಿಂದಲೇ ವಜ್ರಾಯುಧವನ್ನು
>> ಮಾಡಿಕೊಳ್ಳಿ ಎಂದು ಹೇಳಿ ಪ್ರಾಣ ಬಿಟ್ಟನಂತೆ. ಹಾಲು ಹೈನು ಸೇವಿಸಿದ್ದ ದಧೀಚಿಯ
>> ಮೂಳೆಗಳಿಂದಲೇ ರಾಕ್ಷಸರನ್ನು ಬಗ್ಗು ಬಡಿದು ದೇವತೆಗಳು ಗೆದ್ದರಂತೆ. ಇಂದಿನ ಇಡೀ ಮನುಕುಲವೇ
>> ದನದ ಮೂಳೆ ಮಜ್ಜೆಗಳಿಂದ ತಯಾರಾದ ಸರಕು ಸಾಮಗ್ರಿಗಳ ಮೇಲೆ ನಿಂತಂತಿದೆ.
>>
>> ವಧೆ ಮಾಡದೇ, ಮುದಿ ಗೋವು ತಾನಾಗಿ ಪ್ರಾಣ ಬಿಟ್ಟ ನಂತರವೂ ಇವನ್ನೆಲ್ಲ ಪಡೆಯಲು ಸಾಧ್ಯವಿದೆ
>> ಎಂದು ಕೆಲವರು ವಾದಿಸಬಹುದು. ಆದರೆ ಚದುರಿದಂತೆ ಯಾವು ಯಾವುದೋ ಊರುಗಳಲ್ಲಿ ಪ್ರಾಣ ಬಿಡುವ
>> ದನಗಳಿಂದ ಇವನ್ನೆಲ್ಲ ಸಂಗ್ರಹಿಸಲು ಸಾಧ್ಯವಿಲ್ಲ. ಒಂದೇ ಸ್ಥಳದಲ್ಲಿ ದಿನವೂ ಸಾವಿರಾರು ದನಗಳ
>> ಬಿಡಿಭಾಗಗಳು ಸಿಗುವ ಸ್ಥಳಗಳಲ್ಲಿ ಟನ್‌ಗಟ್ಟಲೆ ರಕ್ತವನ್ನು ಸ್ವಯಂಚಾಲಿತ ಬಕೆಟ್‌ಗಳಲ್ಲಿ
>> ಸಂಗ್ರಹಿಸಿ, (ಹಾಲನ್ನು ಪುಡಿ ಮಾಡುವ ವಿಧಾನದಲ್ಲೇ) ಕೆಂಪಗೆ ಕಾದ ಗಾಣದ ಮೇಲೆ ಸಿಂಪಡಿಸಿ
>> ಪುಡಿಯನ್ನು ಡಬ್ಬಿಗಳಲ್ಲಿ ಪ್ಯಾಕ್ ಮಾಡುತ್ತಾರೆ. ವಧೆಗೆಂದು ಬಂದ ಪ್ರತಿ ದನದಿಂದಲೂ
>> ಹೆಚ್ಚೆಂದರೆ ಅರ್ಧ ಭಾಗ ಮಾತ್ರ ಆಹಾರಕ್ಕೆ ಬಳಕೆಯಾಗುತ್ತದೆ. ಇನ್ನರ್ಧ ಭಾಗವನ್ನು ಬೇರೆ
>> ಬೇರೆ ರೂಪಗಳಲ್ಲಿ ನಾವೆಲ್ಲ ಪ್ರತಿ ದಿನವೂ ಬಳಸುತ್ತೇವೆ.
>>
>> ದನವೆಂಬ ಮೂಕ ಪ್ರಾಣಿಯನ್ನು ನಾವು ಇಷ್ಟೆಲ್ಲ ದೋಚುತ್ತಿದ್ದೇವೆಯೆ ಎಂದು ಕಣ್ಣೀರು
>> ಸುರಿಸಲು ಹೊರಟಿರೊ, ನಿಮಗೆ ಗ್ಲಿಸರೀನ್ ಬೇಕಾಗಬಹುದು. ಅದೂ ದನದ ದೇಹದಿಂದಲೇ ಬರುತ್ತದೆ
>>
>> Hareeshkumar K
>> GHS Huskuru
>> Malavalli TQ
>> Mandya Dt
>> 9880328224
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to