Sir good story, good moral also. Let us receive only good things in this
story. Thamk u sir.

2016-02-24 21:27 GMT+05:30 Harishchandra Prabhu <hari.panjikal...@gmail.com>
:

> ಸರ್  ಒಳ್ಳೆಯ  ಲೇಖನ
>
> ಹರಿಶ್ಚಂದ್ರ . ಪಿ.
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
> e-mail: hari.panjikal...@gmail.com
> blog:NammaBellare.blogspot.com
> school blog: gpucbellare.blogspot.com
> mobile: 9449592475
>
>
> 2016-02-23 20:55 GMT+05:30 Siddaramappa s m Sri <erenadud...@gmail.com>:
> > 08-Jan-2014
> > ದೇವರನ್ನು ಕಾಣುವ ಕಣ್ಣು
> > ಗುಣಮುಖ
> > 
> > ( ಇತ್ತೀಚೆಗೆ ಬಿಡುಗಡೆಯಾದ 'ಶುಭಸಂಕಲ್ಪ' ಪುಸ್ತಕದಿಂದ ಆಯ್ದ ಭಾಗ ಇದು. ಪ್ರಕಾಶಕರು:
> > ಅದ್ವೈತ)
> > ನಾವೆಲ್ಲಾ ದೇವರು ನಮಗೆ ಕಾಣಿಸಲಿ ಎಂದು ಹಂಬಲಿಸುತ್ತೇವೆ, ಆರಾಧಿಸುತ್ತೇವೆ ಮತ್ತೆ,
> ಮತ್ತೆ
> > ಪ್ರಾರ್ಥಿಸುತ್ತೇವೆ. ಆದರೆ ನಾವೆಲ್ಲಾ ನಿಜವಾಗಿ ದೇವರನ್ನು ಕೇಳಿಕೊಳ್ಳಬೇಕಾಗಿರುವುದು,
> > ಸರ್ವಾಂತರ್ಯಾಮಿಯಾಗಿರುವ, ಅಂದರೆ ನಮ್ಮ ಸುತ್ತಲೂ  ಇರುವ ದೇವರನ್ನು ಕಾಣುವ ಕಣ್ಣುಗಳನ್ನು
> > ದೇವರು ನಮಗೆ ದಯಪಾಲಿಸಲಿ ಎಂದು. ಹಾಗೆಯೇ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರೀತಿಗಾಗಿ
> > ಕಾತರಿಸಿ, ಹಂಬಲಿಸಿ, ಕನವರಿಸಿ ಪ್ರಾರ್ಥಿಸುವವರೇ. ಆದರೆ ನಾವೆಲ್ಲ ನಿಜವಾಗಿ ಕೇಳಿ
> > ಕೊಳ್ಳಬೇಕಿರುವುದು, ನಮ್ಮ ಸುತ್ತಲೂ  ಇರುವ ಪ್ರೀತಿಯನ್ನು ಗುರುತಿಸಿ, ಸ್ವೀಕರಿಸಿ,
> > ಗೌರವಿಸುವಂತೆ ಆಗುವ ನಮ್ಮ ಒಳ ಮನ ಪರಿವರ್ತನೆಯನ್ನು.
> > ಏನನ್ನೋ, ಯಾರನ್ನೋ ಪರಿವರ್ತಿಸಲು ಹೊರಡುವ ನಾವು, ಕೊನೆಗೆ ಪರಿವರ್ತಿಸಬೇಕಾಗಿದ್ದು
> > ನಮ್ಮನ್ನಲ್ಲವೇ, ನಮ್ಮ ಗ್ರಹಿಕೆಯ ಮಟ್ಟವನ್ನಲ್ಲವೇ? ಎಂಬ ಅರಿವನ್ನು ಮುಟ್ಟುತ್ತೇವೆ...
> ಹೀಗೆ
> > ಹೇಳುತ್ತಿರುವಾಗಲೇ ನನಗೊಂದು ಎಲ್ಲೋ ಕೇಳಿದ ಕತೆ ನೆನಪಾಗುತ್ತಿದೆ...
> > ~*~
> > ಅಂದು ಆ ದಂಪತಿಗಳ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ಸಮಾರಂಭ. ವಿಚ್ಛೇದನಗಳು
> > ಹೆಚ್ಚುತ್ತಿರುವ ಈ ದಿನಗಳಲ್ಲಿ ಆ ಸಮಾರಂಭಕ್ಕೆ ವಿಶೇಷ ಮಹತ್ವ ಬಂದಿತ್ತು. ಡ್ಯಾನ್ ಮತ್ತು
> > ರೋಸಿಯವರ ಆ ಸಮಾರಂಭಕ್ಕೆ ಇಡೀ ಊರಿಗೆಊರೇ ಬಂದು ಶುಭ ಹಾರೈಸಿತು. ತಮ್ಮ ಸೊಗಸಾದ
> ಗುಣವಂತಿಕೆ,
> > ನಯ ವಿನಯಗಳ ವರ್ತನೆಯಿಂದ ಡ್ಯಾನ್ ಮತ್ತು ರೋಸಿ ಇಡೀ ಊರಿನ ಪ್ರೀತಿಗೆ ಪಾತ್ರರಾಗಿದ್ದರು.
> > ನಮ್ಮ ಮಕ್ಕಳು ಕೂಡ ಡ್ಯಾನ್ ಮತ್ತು ರೋಸಿಯರ ತರ ಬಾಳಬೇಕು ಎಂದು ಎಲ್ಲರಿಗೂ ಆಳದಲ್ಲಿ ಆಸೆ
> > ಹುಟ್ಟಿಸುವಷ್ಟು ಆದರ್ಶಪ್ರಾಯರಾಗಿದ್ದರು. ಆ ಪುಟ್ಟ ಪಟ್ಟಣದಲ್ಲಿ ಅವರನ್ನು ಅರಿಯದವರೇ
> > ಇಲ್ಲ. ಅವರ ದಾಂಪತ್ಯ ಯುವ ಜೋಡಿಗಳಿಗೆ ಆದರ್ಶಪ್ರಾಯವಾಗಿತ್ತು. ಎಷ್ಟೋ ಸಾರಿ ಏನು ಬಂತು,
> > ಪ್ರತಿ ಸಾರಿಯೂ... ಆ ಊರಿನ ಪಾದ್ರಿ ಚರ್ಚಿನಲ್ಲಿ ಮದುವೆಯನ್ನು ಮಾಡಿಸುವಾಗ, ಮದುವೆಯ
> > ಬಾಂಧವ್ಯ ಬೋಧಿಸುವಾಗ 'ಆದರ್ಶ ವಿವಾಹ'ಕ್ಕೆ ಡ್ಯಾನ್ ಮತ್ತು ರೋಸಿಯ ದಾಂಪತ್ಯದ ಉದಾಹರಣೆ
> > ಕೊಡುತ್ತಿದ್ದ.
> > ಹೀಗಿರುವ ಆದರ್ಶ ದಂಪತಿಗಳ ಇಪ್ಪತ್ತೈತೈದನೇ ವಿವಾಹ ವಾರ್ಷಿಕೋತ್ಸವದ ಆ ದಿನ ಇಡೀ ಊರೇ
> ನಲಿದು
> > ಸಂಭ್ರಮಿಸಿ, ದಂಪತಿಗಳಿಂದ ರಾತ್ರಿಯ ಔತಣ ಸ್ವೀಕರಿಸಿ, ಶುಭ ಹಾರೈಸಿ ಮನೆಗೆ ಮರಳಿದರು.
> > ಇದಾಗಿ ಮರುದಿನ, ಕಾಡ್ಗಿಚ್ಚಿನಂತೆ ಒಂದು ಸುದ್ದಿ ಹಬ್ಬಿತು. ರೋಸಿ ಡ್ಯಾನ್-ನಿಂದ
> ವಿಚ್ಛೇದನ
> > ಬಯಸಿ ಕೋರ್ಟಿನಲ್ಲಿ ದಾವೆ ಹೂಡಿದ್ದಳು! ಇಡೀ ಊರಿಗೆ ಹೃದಯಾಘಾತ! ಯಾರಿಗೂ ನಂಬಲು ಸಾಧ್ಯವೇ
> > ಆಗಲಿಲ್ಲ. ಯಾರಾದರೂ ಸೂರ್ಯ ಪಶ್ಚಿಮದಲ್ಲಿ ಹುಟ್ಟಿದನೆಂದರೆ ಸುಲಭವಾಗಿ ನಂಬುತ್ತಿದ್ದರೋ
> > ಏನೋ... ಆದರೆ ಆ ಊರಿನವರಿಗೆ ಆ ಸುದ್ದಿಯನ್ನು ನಂಬಲಾಗಲಿಲ್ಲ. ಆ ಊರಿನ ಕೋರ್ಟ್
> > ನ್ಯಾಯಾಧೀಶನಿಗೂ ಕೂಡ ಅರ್ಜಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ರೋಸಿಯನ್ನು ಪರಿಪರಿಯಾಗಿ
> > ಕೇಳಿಕೊಂಡರೂ ಕೇಳದೆ ಹಠ ಮಾಡಿ ರೋಸಿ ವಿಚ್ಛೇದನಕ್ಕೆ ಅರ್ಜಿ ಹಾಕೇ ಬಿಟ್ಟಳು,
> ವಿಚ್ಛೇದನಕ್ಕೆ
> > ಕಾರಣವನ್ನೂ ತಿಳಿಸದೆ. ದುರಂತವೆಂದರೆ ನೋಡಿ, ಹಿಂದಿನ ದಿನದ ಔತಣಕೂಟಕ್ಕೆ ಬಂದವರಲ್ಲಿ,
> ಶುಭ
> > ಹಾರೈಸಿದವರಲ್ಲಿ ನ್ಯಾಯಾಧೀಶನೂ ಇದ್ದ!
> > ಸರಿ, ಕುತೂಹಲ ತಾಳಲಾರದೆ ನ್ಯಾಯಾಧೀಶ ಅರ್ಜಿದಾರರನ್ನು ತಕ್ಷಣವೇ ವಿಚಾರಣೆಗೆ ಕರೆದ.
> > ವಿಚಾರಣೆಯ ದಿನ ಇಡೀ ಊರಿಗೆ ಊರೇ ಕೋರ್ಟ್-ನಲ್ಲಿ ನೆರೆದಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ!
> > ಎಲ್ಲರ ನಿರೀಕ್ಷೆಯಂತೆ, ನ್ಯಾಯಾಧೀಶ ರೋಸಿಯನ್ನು ವಿಚ್ಛೇದನಕ್ಕೆ ಕಾರಣವನ್ನು
> > ಕೇಳುವುದರೊಂದಿಗೆ ವಿಚಾರಣೆ ಆರಂಭಿಸಿದ. ರೋಸಿ ಸೌಮ್ಯ ಸ್ವಭಾವದ ಹೆಣ್ಣು ಮಗಳು,
> ನಲವತ್ತೈದರ
> > ಗಡಿ ದಾಟಿರುವ ಗ೦ಭೀರ ಸ್ವಭಾವದ ಹೆಣ್ಣುಮಗಳು. ಅಳತೆ ತಪ್ಪಿ ಮೀರಿ ವರ್ತಿಸಿದ್ದು ಯಾರೂ
> > ನೋಡಿಲ್ಲ ಮತ್ತು ಕೇಳಿಲ್ಲ. ಎಲ್ಲರಿಗೂ ಕುತೂಹಲ ರೋಸಿಯ ವಿಚ್ಛೇದನ ಅರ್ಜಿಗೆ
> > ಕಾರಣವೇನಿರಬಹುದೆಂದು?
> > ನ್ಯಾಯಾಧೀಶ ತಡಮಾಡದೆ ತನ್ನ ವಿಚಾರಣೆ ಶುರು ಮಾಡಿದ. "ಅಮ್ಮ ರೋಸಿ, ಮೊನ್ನೆ ತಾನೇ ನಿನ್ನ
> > ಮತ್ತು ಡ್ಯಾನಿಯ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ಸಮಾರಂಭ ನಡೆಯಿತು.
> ನಿನ್ನ
> > ಅರ್ಜಿಗೆ ಬಲವಾದ ಕಾರಣ ತಿಳಿಸದಿದ್ದರೆ ನಾವು ವಿಚಾರಣೆಯಲ್ಲಿ ಮುಂದುವರೆಯುವ ಹಾಗಿಲ್ಲ.
> > ದಯವಿಟ್ಟು ನೀನು ವಿಚ್ಛೇದನ ಬಯಸಲು ಕಾರಣವೇನು ಎಂದು ಈ ಕೋರ್ಟಿಗೆ ತಿಳಿಸು?"
> > ಕ್ಷಣ ಕಾಲ ಅಳುಕಿದ ರೋಸಿ, ಧೈರ್ಯವನ್ನು ಒಟ್ಟುಗೂಡಿಸಿಕೊಂಡು ತನ್ನ ಅಂತರಾಳದ ನೋವನ್ನು
> > ಹೇಳಿಕೊಂಡಳು, "ಸ್ವಾಮೀ, ನನ್ನ ಗಂಡ ಡ್ಯಾನಿ ಕೆಟ್ಟವನಲ್ಲ, ಒಂದು ದಿನವೂ
> ಕಡೆಗಣಿಸಿದವನಲ್ಲ.
> > ಯಾವುದಕ್ಕೂ ಕೊರತೆ ಮಾಡಿದವನಲ್ಲ. ಆದರೆ ಅವನ ಒಂದು ದುರಭ್ಯಾಸ ನನ್ನನ್ನು ಈ ತೀರ್ಮಾನಕ್ಕೆ
> > ನೂಕಿದೆ." ವಿಚಾರಣೆಯನ್ನು ಕೇಳುತ್ತಿದ್ದವರಲ್ಲಿ ಡ್ಯಾನಿ, ಅವನ ಸಹೋದರರು, ಸ್ನೇಹಿತರು
> ಮತ್ತು
> > ಅವನ ವಯಸ್ಸಾದ ತಾಯಿ ಕೂಡ ಇದ್ದರು. ಎಲ್ಲರಿಗೂ ಅಚ್ಚರಿ, ಏನಿದ್ದೀತೂ  ಡ್ಯಾನಿಯ ದುರಭ್ಯಾಸ
> > ನಮಗೆ ಗೊತ್ತಿಲ್ಲದಿರುವುದು?! ಡ್ಯಾನಿ ತನ್ನ ಸಭ್ಯ ನಡುವಳಿಕೆಯಿಂದ ಇಡೀ ಊರಿಗೇ
> > ಪ್ರಸಿದ್ಧನಾಗಿದ್ದ.
> > ರೋಸಿ ಮುಂದುವರೆದು " ನಮಗೆ ಪ್ರತಿ ರಾತ್ರಿ ಊಟಕ್ಕೆ ಬ್ರೆಡ್ ಬಳಸುವುದು ಅಭ್ಯಾಸ. ನನ್ನ
> ಗಂಡ
> > ಪ್ರತಿ ಸಾರಿ ಬ್ರೆಡ್ ಕತ್ತರಿಸುವಾಗ ಕಂದಿದ, ಗಟ್ಟಿಯಾದ ಭಾಗವನ್ನು ನನಗೆ ಕೊಟ್ಟು,
> ಮೃದುವಾದ
> > ಬಿಳಿ ಭಾಗವನ್ನು ತಾನು ತಿನ್ನುತ್ತಿದ್ದ. ಒಂದು ದಿನವಲ್ಲ, ಎರಡು ದಿನವಲ್ಲ... ಸತತ
> > ಇಪ್ಪತ್ತೈತೈದು ವರ್ಷ ಈ ರೀತಿ ನನ್ನನ್ನು ನಡೆಸಿಕೊಂಡಿದ್ದಾನೆ... ಮುಂದಾದರೂ ಬದಲಾಗಬಹುದು
> > ಎಂಬ ಆಸೆಯಲ್ಲಿ ನಾನು ಸುಮ್ಮನಿದ್ದೆ... ಆದರೆ ಆ ಬದಲಾಗುವ ದಿನ ಬರಲೇ ಇಲ್ಲ.
> ಇಪ್ಪತ್ತೈತೈದನೇ
> > ವಿವಾಹ ವಾರ್ಷಿಕೋತ್ಸವದ ಸಂತೋಷದ ರಾತ್ರಿ ಕೂಡ ಈ ರೀತಿ ಮಾಡಿದಾಗ ನನಗೆ ತಡೆಯಲಾಗಲಿಲ್ಲ...
> > ಇನ್ನೆಷ್ಟು ದಿನ ಅಂತ ಈ ಅವಮಾನವನ್ನ, ಕೀಳು ನಡತೆಯನ್ನ ಸಹಿಸಲಿ... ನೀವೇ ಹೇಳಿ... ಸಾಕು
> > ಸಾಕಾಗಿದೆ ನನಗೆ ಈ ಬದುಕು" ಎಂದು ಹೇಳುತ್ತಾ... ಹೇಳುತ್ತಾ ರೋಸಿಯ ಕಣ್ಣಲ್ಲಿ
> > ಅಶ್ರುಧಾರೆಯಾಯಿತು, ಕುತೂಹಲದಿಂದ ಕೇಳುತ್ತಿದ್ದವರ ಕಣ್ಣಲ್ಲೂ... ಕೋರ್ಟ್-ನಲ್ಲಿ
> ಅಲ್ಲಲ್ಲಿ
> > ನಿಟ್ಟುಸಿರು... 'ಯಾವ ಹುತ್ತದಲ್ಲಿ ಯಾವ ಹಾವಿದೆಯೋ...' 'ಛೇ, ಡ್ಯಾನಿ ಈ ರೀತಿ
> ಮಾಡಿದನೇ?'
> > ಎಂಬ ಅಸಮಾಧಾನದ ನುಡಿ ಕೋರ್ಟಲ್ಲಿ. ಕೊನೆಗೆ ನ್ಯಾಯಾಧೀಶ ಡ್ಯಾನಿಯನ್ನು ಕಟಕಟೆಗೆ ಕರೆದ.
> > ಡ್ಯಾನಿ ಗಂಭೀರವಾಗಿ ಬಂದು ನಿಂತು ಕೋರ್ಟ್-ಗೆ ವಂದಿಸಿದ.
> > "ಡ್ಯಾನಿ ಈ ಆಪಾದನೆಯ ಬಗ್ಗೆ ನೀನು ಹೇಳುವುದೇನಾದರೂ ಇದೆಯೇ?" ಎಂದ ನ್ಯಾಯಾಧೀಶನ
> ಧ್ವನಿಯಲ್ಲಿ
> > ಬೇಡ ಬೇಡವೆಂದರೂ ಡ್ಯಾನಿಯ ಕುರಿತು ಕೊಂಚ ಅಸಹನೆ, ಅಸಮಾಧಾನವಿತ್ತು.
> > "ನ್ಯಾಯಾಧೀಶರೆ! ಈ ಆಪಾದನೆಗೆ ನಾನು ಉತ್ತರಿಸುವುದಿಲ್ಲ, ನನ್ನ ತಾಯಿ ಬಂದು
> > ಉತ್ತರಿಸಲಿದ್ದಾಳೆ!" ಎಂದ ಡ್ಯಾನಿಯ ಧ್ವನಿಯಲ್ಲಿ ಕಿಂಚಿತ್ತೂ ಅಪರಾಧಿ ಭಾವವಿರಲಿಲ್ಲ.
> > ಅದನ್ನು ಕಂಡು ನೆರೆದಿದ್ದ ಜನರಲ್ಲಿ ಆಕ್ರೋಶ ಮತ್ತು ಆಶ್ಚರ್ಯ ಒಟ್ಟಿಗೆ ಆಯಿತು.
> > ಡ್ಯಾನಿಯ ವಯಸ್ಸಾದ ತಾಯಿ ಕಟಕಟೆಯಲ್ಲಿ ಬಂದು ನಿಂತಳು. ಎಲ್ಲರಿಗೂ ಕುತೂಹಲ. ಏನೋ ಅಪರೂಪದ
> > ಡ್ಯಾನಿಯ ಗುಟ್ಟನ್ನು ಹೇಳುವಳೋ ಎಂದು. ಅತ್ತೆ ಎಂದಾದರೂ ಸೊಸೆಯ ಪರವಾಗಿ ಮಾತಾಡಲು
> ಸಾಧ್ಯವೇ?!
> > ಎಂಬ ಆತಂಕ ಬೇರೆ.
> > "ಸ್ವಾಮೀ! ಡ್ಯಾನಿ ನನ್ನ ಹಿರಿಯ ಮಗ. ಅವನು ಸೇರಿ ನಾಲ್ಕು ಜನ ಮಕ್ಕಳು ನನಗೆ. ಚಿಕ್ಕ
> > ವಯಸ್ಸಿನಿಂದ ಅವನಿಗೆ ಬ್ರೆಡ್ ಅಂದರೆ ವಿಶೇಷ ಇಷ್ಟ ಮತ್ತು ಪ್ರೀತಿ... ಅದರಲ್ಲೂ ಕೆಂಚಗೆ
> > ಕಂದಿದ, ಗಟ್ಟಿಯಾದ ಬ್ರೆಡ್-ನ ಭಾಗವೆಂದರೆ ಪ್ರಾಣ. ಅವನಿಗೆ ಆ ಗಟ್ಟಿಯಾದ ಬ್ರೆಡ್ ಭಾಗ
> ಎಷ್ಟು
> > ಇಷ್ಟವೆಂದರೆ... ಅವನು ತನ್ನ ತಮ್ಮ, ತಂಗಿ, ತಂದೆ ಹೋಗಲಿ ಹೆತ್ತ ತಾಯಿಯಾದ ನನಗೆ ಕೂಡ
> > ಕೊಡುತ್ತಿರಲಿಲ್ಲ... ಹಂಚಿಕೊಳ್ಳುತ್ತಿರಲಿಲ್ಲ. ಏನೋ ವಿಚಿತ್ರ ಸ್ವಭಾವವೆಂದು ನಾವೇ
> > ಹೊಂದಿಕೊಂಡಿದ್ದೆವು. ಆದರೆ ಮದುವೆಯಾದ ಮೇಲೆ ರೋಸಿಯ ಮೇಲೆ ಏನು ಒಲವು ಮೂಡಿತೋ, ಎಷ್ಟು
> > ಪ್ರೀತಿ ಹುಟ್ಟಿತೋ... ತನ್ನ ಪ್ರೀತಿಯ ತಿನಿಸನ್ನ ಅವಳಿಗೆ ಕೊಡಲು ಶುರುಮಾಡಿದ... ಇದನ್ನು
> > ನೋಡಿ ಕೆಲ ದಿನ ನಾವೆಲ್ಲಾ ನಕ್ಕಿದ್ದೂ ಇದೆ... ತನಗೆ ಪ್ರಾಣಕ್ಕೆ ಪ್ರಿಯವಾದ ತಿನಿಸನ್ನು
> > ಅವನು ಅವಳಿಗೆ ಪ್ರೀತಿಯಿಂದ ಅರ್ಪಿಸುತ್ತಿದ್ದರೆ... ನೋಡಿ ಅವಳಿಗೆ ಅದರ ಪರಿವೇ ಇಲ್ಲ...
> > ಅದನ್ನು ಅವಮಾನ, ಹಿಂಸೆ ಎಂದು ಭಾವಿಸಿದ್ದಾಳೆ! ಒಂದು ಚಿಕ್ಕ ಮಾತುಕತೆಯಲ್ಲಿ
> > ಬಗೆಹರಿಯಬಹುದಾಗಿದ್ದ ಈ ಸಮಸ್ಯೆ ಈ ಹಂತಕ್ಕೆ ತಲುಪಿದೆ... ಇನ್ನು ಹೇಳುವುದಕ್ಕೆ ಏನೂ
> ಇಲ್ಲ
> > ಸ್ವಾಮೀ..." ಹೀಗೆ ಹೇಳಿ ಅವನ ತಾಯಿ ಅಪಾರ್ಥದಿಂದ ಮುರಿಯಬಹುದಾಗಿದ್ದ ತನ್ನ ಮಗನ
> ಮದುವೆಯನ್ನು
> > ಉಳಿಸಿದಳು. ಅಷ್ಟೊಂದು ಪ್ರೀತಿಯ ಕ್ರಿಯೆಯನ್ನ ಅವಮಾನವೆಂದು ತಿಳಿದೆನಲ್ಲ ಎಂದು
> ರೋಸಿಯಲ್ಲಿ
> > ಪಶ್ಚಾತ್ತಾಪವಾಯಿತು ಮತ್ತು ಅವರ ದಾಂಪತ್ಯ ಮತ್ತಷ್ಟು ಗಟ್ಟಿಯಾಯಿತು.
> > *
> > ಈ ಕತೆ ನೆನಪಾದಾಗಲೆಲ್ಲಾ, ನಾನು ದೇವರನ್ನು ಕೇಳಿಕೊಳ್ಳುವುದಿಷ್ಟೆ... 'ಭಗವಂತ!
> > ಅಪಾರ್ಥಗಳಿಂದ ನನ್ನನ್ನು ದೂರವಿಡು... ಅಪಾರ್ಥವಾದಾಗಲೆಲ್ಲ ಒಂದು ಚಿಕ್ಕ ಮಾತುಕತೆಗೆ
> ನನ್ನ
> > ನೆನಪಿಸು, ಪ್ರೇರೇಪಿಸು.... ನನ್ನ ಸುತ್ತಲೂ  ತುಂಬಿರುವ ಪ್ರೀತಿಯನ್ನು ಗುರುತಿಸುವ
> ಮನಸ್ಸು
> > ಕೊಡು!
> > 
> > 
> > 
> > 5
> > ಅನಿಲ ತಾಳಿಕೋಟಿ January 09, 2014 at 7:01pm
> > ಮುಸುಕಿದ ಮಬ್ಬಿನ ತೆರೆ ಸರಿಸಿ ಎಳೆ ಕಿರಣಗಳಲ್ಲಿ ತೊಯ್ಯಿಸುವ ಲೇಖನ...
> > Swarna January 09, 2014 at 7:44pm
> > ನಮ್ಮ ಸುತ್ತಲೂ  ಇರುವ ಪ್ರೀತಿಯನ್ನು ಗುರುತಿಸಿ, ಸ್ವೀಕರಿಸಿ, ಗೌರವಿಸುವಂತೆ ಆಗುವ
> ನಮ್ಮ ಒಳ
> > ಮನ ಪರಿವರ್ತನೆಯನ್ನು.ತುಂಬಾ ಚೆನ್ನಾಗಿದೆ.
> > ನಂದಗೋಪಾಲ್ January 09, 2014 at 8:48pm
> > ಇಪ್ಪತೈದು ವರ್ಷ ಗಂಡ ಹೆಂಡಿರಾಗಿ ಸಹಬಾಳ್ವೆ ನಡೆಸಿ ಆದರ್ಶ ದಂಪತಿಗಳೆಂದು ಪ್ರಖ್ಯಾತರು.
> > ತನಗೆ  ಕೊಡುವ ಕಂದಿದ ಗಟ್ಟಿಯಾದ ಬ್ರಡ್ ಇಷ್ತವಿಲ್ಲ ಎಂದು ಹೆಂಡತಿ ಹೇಳಿಲ್ಲ! ಖೈದಿಯಾದರೂ
> > ಧೈರ್ಯಮಾಡಿ ಹೇಳಿರುತ್ತಿದ್ದ. ಪಾಪ ಹೆಂಡತಿಗೆ ಗಂಡ ಎಲ್ಲಿ ನೊಂದುಕೊಳ್ಳುತ್ತಾನೆ ಎಂಬ
> > ಸಂಕೋಚವೋ ಭಯವೋ?.  ತನಗೆ ಇಷ್ಟವಾದದ್ದು ಅವಳಿಗೂಇಷ್ಟ ಎಂದು ಇಪ್ಪತೈದು ವರ್ಷ ನಂಬಿದ್ದಾನೆ
> > ಪೆದ್ದ ಗಂಡ.ಆದರೆ ಇದು ವಿವಾಹದ ರಜಿತ ಮಹೋತ್ಸವದ ಮಾರನೇ ದಿನ ಸ್ಪೋಟಗೊಂಡು ವಿಚ್ಛೇದನ ಹಂತ
> > ತಲಿಪಿತು ಎಂದರೆ ನಂಬೋದು ಹೇಗೆ ಸ್ವಾಮಿ? ಒಂದೇ ದಿನ ಕುರಿಯಂತೆ ಇದ್ದ ಹೆಂಡತಿ ಹೆಬ್ಬುಲಿ
> > ಆದಳೆ? ಅಸಹಜ ಅತಾರ್ಕಿಕ ಅಲ್ಲವೇ? ಅಲ್ಲ ಎನ್ನುವುದಾದರೆ  ಇದು ಯಾವ ದೇಶದ ಯಾವ ಭಾಷೆಯೆ
> ಕತೆ
> > ನೆನಪಿಸಿಕೊಂಡು ಹೇಳಲು ಪ್ರಯತ್ನಿಸಿ.
> > ಗುಣಮುಖ January 09, 2014 at 9:31pm
> > ಒಳ್ಳೆ ಪ್ರಶ್ನೆ ನಂದಗೋಪಾಲ್! ಉತ್ತರಕ್ಕೆ ಉಳಿದ ಶುಭಸಂಕಲ್ಪದ ಕತೆ ಓದುವುದು
> ಒಳ್ಳೆಯದು...
> > ಆಸಕ್ತಿಕರವೆಂದರೆ ಈ ಪ್ರಶ್ನೆಗೆ ಇನ್ನೊಂದು ಕತೆಯಿದೆ -
> > hema January 10, 2014 at 12:06pm
> > ನಂದಗೊಪಾಲ್ರವರೆ : ಕತೆಯನ್ನು ಓದಿದಾಗ ಅಪಾರ್ಥವೆಂಬುದು ಹೇಗೆ ಒಂದು ಸುಂದರ
> > ಸಂಸಾರವನ್ನು,ಸಂಬಂಧವನ್ನು ಮುರಿದುಹಾಕುತ್ತದೆ ಎನ್ನುವ ತಾತ್ಪರ್ಯ ನಿಚ್ಚಳವಾಗುತ್ತದೆ
> > .ಹೆಸರುಗಳನ್ನು ಗಮನಿಸಿದರೆ ಈ ಕತೆ ಯಾವುದೋ ಪಾಶ್ಚಾತ್ಯ ದೇಶದಲ್ಲಿ
> > ನಡೆದಿರಬಹುದಾದಂತಿದೆ.ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ವ್ಯತಿಯ ಅಭಿವ್ಯಕ್ತಿ
> > ಸ್ವಾತಂತ್ರ್ಯಕ್ಕೆ ಸಾಕಷ್ಟು ಮಹತ್ವವಿದೆ. ಆದರೆ ಭಾರತದಂತಹ ದೇಶಗಳಲ್ಲಿ , ಬಹುತೇಕ
> > ದಾಂಪತ್ಯಗಳಲ್ಲಿ ಹೆಂಡತಿ -Repression ನಂತಹ ಪರಿಸ್ತಿತಿಯಿಂದ ನರಳುತ್ತಿರುತ್ತಾಳೆ.
> ಗಂಡನ
> > ಅಭಿಪ್ರಾಯ,ಅನಿಸಿಕೆಗಳು ತನ್ನವಲ್ಲದ್ದಿದ್ದರು ಅದನ್ನು ಹೇರಿಕೊಂಡು ಬಾಳಲೆಬೇಕಾದಂತ
> > ಅನಿವಾರ್ಯತೆ ಇರುತ್ತದೆ .ಗಂಡನ ಮನಸನ್ನು ನೋಯಿಸಬಾರದು ಎನ್ನುವ ಸಂಕೋಚಕ್ಕಿಂತ,ನೋಯಿಸಿದರೆ
> > ಗಂಡನ ಅಹಂಕಾರಕ್ಕೆ ಪೆಟ್ಟಾಗುತ್ತದೆ ಮತ್ತು ಅವನ ನಿರಾಕಾರಾಣೆಯ,ಕೋಪದ ಬೆಂಕಿ ಸುಡುತ್ತದೆ
> > ಎನ್ನುವ ಭಯ,ಜಿಗುಪ್ಸೆಗಳ ದಾಕ್ಷಿನ್ಯದಲ್ಲಿ ಸ್ವಂತ ಅಸ್ತಿತ್ವವೇ ಇಲ್ಲವೆಂಬಂತೆ
> > ಬಾಳಿಬಿಟ್ಟಿರುತ್ತಾಳೆ . ಕಾಲಾಂತರದಲ್ಲಿ ಗಂಡನ ತಾತ್ಸಾರ,ಅವಗಣನೆ,ಮತ್ತು ತಣ್ಣನೆಯ
> > ಕ್ರೌರ್ಯದೆದುರು ನಲುಗಿ ಅಭಿವ್ಯಕ್ತಿಸಲಾರದೆ ಶೇಕರಣೆಯಾದ ಇಷ್ಟಕಷ್ಟದ ಒತ್ತಡಗಳು , ಎಂದೋ
> > ಒಂದು ಸಂಧರ್ಭದಲ್ಲಿ ಈ ರೀತಿ ದಿಗ್ಗನೆ ಸ್ಪೋಟನೆಗೊಳ್ಳುತ್ತದೆ . ಬಹುಶ ಈ ಕತೆಯಲ್ಲಿ
> ,ತನಗೆ
> > ಇಷ್ಟವಾದದ್ದು ಅವಳಿಗೂಇಷ್ಟ ಎಂದು ಇಪ್ಪತೈದು ವರ್ಷ ಗಂಡ ನಂಬಿರುತ್ತಾನೆ . ಆದರೆ
> > ಸಂಕೋಚದಿಂದಲೋ, ಪ್ರೀತಿಯಿಂದಲೋ ತನಗಿಷ್ಟ ಇಲ್ಲ ಎಂದು ಹೇಳಿಕೊಳ್ಳದೆ , ಇವತ್ತಲ್ಲ ನಾಳೆ
> > ಅವನಾಗೇ ಅರ್ಥಮಾಡಿಕೊಳ್ಳುತ್ತಾನೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದ ಹೆಂಡತಿಗೆ , ಗಂಡ
> > ಕಡೆಗಣಿಸಿದನು ಎನ್ನುವ ಅವಮಾನ, ಅಹಂಕಾರಕ್ಕೆ ಪೆಟ್ಟುಕೊಟ್ಟು ಆ ರೀತಿ
> > ಪ್ರೇರೇಪಿಸಿರುತ್ತದೆ.comminication ಗ್ಯಾಪ್ ಮತ್ತು ಅಪಾರ್ಥದದಿಂದಾಗುವ ದುರಂತವನ್ನು
> ಕತೆ
> > ಸಾರುತ್ತದೆ .
> > ಸೌಜನ್ಯ :WWW.chukubhuku.com
> >
> > --
> > *For doubts on Ubuntu and other public software, visit
> >
> http://karnatakaeducation.org.in/KOER/en/index.php/Frequently_Asked_Questions
> >
> > **Are you using pirated software? Use Sarvajanika Tantramsha, see
> > http://karnatakaeducation.org.in/KOER/en/index.php/Public_Software
> ಸಾರ್ವಜನಿಕ
> > ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> > ***If a teacher wants to join STF-read
> >
> http://karnatakaeducation.org.in/KOER/en/index.php/Become_a_STF_groups_member
> > ---
> > You received this message because you are subscribed to the Google Groups
> > "SocialScience STF" group.
> > To unsubscribe from this group and stop receiving emails from it, send an
> > email to socialsciencestf+unsubscr...@googlegroups.com.
> > To post to this group, send email to socialsciencestf@googlegroups.com.
> > Visit this group at https://groups.google.com/group/socialsciencestf.
> > To view this discussion on the web visit
> >
> https://groups.google.com/d/msgid/socialsciencestf/CAJCvfyWq3eEvmjef1XDk_qWNmqnOJ4Zhip%3DcLN%3DN8MnLfPTHNg%40mail.gmail.com
> .
> > For more options, visit https://groups.google.com/d/optout.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CABtYOUUhjRfcosd57Lrt9XwD56vT3WxgGNs3PHfgUXzDWeyyQg%40mail.gmail.com
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAGnQrNr86m0Z%3D%3DWaG5SuNom%2BgFpwBVbxD6zQgS2JRxpB_OCK5w%40mail.gmail.com.
For more options, visit https://groups.google.com/d/optout.

Reply via email to